»   » 'ಬಿಗ್ ಬಾಸ್' ಬಗ್ಗೆ ಮೌನ ಮುರಿದ ನವರಸನಾಯಕ

'ಬಿಗ್ ಬಾಸ್' ಬಗ್ಗೆ ಮೌನ ಮುರಿದ ನವರಸನಾಯಕ

Posted By:
Subscribe to Filmibeat Kannada

ಕನ್ನಡದ ಒನ್ ಅಂಡ್ ಓನ್ಲಿ ರಿಯಾಲಿಟಿ ಶೋ ಎಂಬ ಅಗ್ಗಳಿಕೆಗೆ ಪಾತ್ರವಾಗಿರುವ 'ಬಿಗ್ ಬಾಸ್' ಸೀಸನ್ 2ಗೆ ವೇದಿಕೆ ಸಿದ್ಧವಾಗಿದೆ. ಈ ಬಾರಿಯೂ ಕಿಚ್ಚ ಸುದೀಪ್ ಈ ಕಾರ್ಯಕ್ರಮವನ್ನು ನಿರೂಪಿಸುತ್ತಿದ್ದು ಸುವರ್ಣ ವಾಹಿನಿಯಲ್ಲಿ ಮೂಡಿಬರಲಿರುವ ಶೋವನ್ನು ಕುತೂಹಲದಿಂದ ನಿರೀಕ್ಷಿಸುವಂತಾಗಿದೆ.

ಈ ಬಾರಿ ಬಿಗ್ ಬಾಸ್ ಮನೆಯಲ್ಲಿ ಯಾರೆಲ್ಲಾ ಸ್ಪರ್ಧಿಗಳಿರುತ್ತಾರೆ ಎಂಬ ಬಗ್ಗೆ ಒಂದಷ್ಟು ಸೆಲೆಬ್ರಿಟಿಗಳ ಹೆಸರುಗಳು ಕೇಳಿಬಂದಿದ್ದವು. ಬಿಗ್ ಬಾಸ್ ಸ್ಪರ್ಧಿಗಳ ಸಂಭವನೀಯ ಪಟ್ಟಿಯಲ್ಲಿ ಪ್ರಮುಖವಾಗಿ ಕೇಳಿಬಂದಿದ್ದ ಹೆಸರು ನವರಸನಾಯಕ ಜಗ್ಗೇಶ್. [ರಮ್ಯಾ ಅಭಿಮಾನಿಗಳಿಗೆ ಜಗ್ಗೇಶ್ ಟ್ವೀಟ್ ಏಟು]

Navarasa Nayaka Jaggesh

ಈ ಬಗ್ಗೆ ಪ್ರತಿಕ್ರಿಯಿಸಿರುವ ಜಗ್ಗೇಶ್ ಅವರು, "ವಾಡಿಕೆಯಂತೆ ಪತ್ರಿಕೆ ಓದುವಾಗ ನಾನು ಬಿಗ್ ಬಾಸ್ ನಲ್ಲಿ ಎಂದು ಇತ್ತು. ನಾನು ಭಾವನಾಜೀವಿ...ಸಾರ್ವಜನಿಕವಾಗಿ ನನ್ನ ಏಕಾಂತ ಹಂಚಿಕೊಳ್ಳುವುದಿಲ್ಲ.. ನಾನು ಮಾರಟಕ್ಕಿಲ್ಲ!" ಎಂದಿದ್ದಾರೆ.

ಜಗ್ಗೇಶ್ ಅವರು ಹೀಗೆ ಹೇಳಿದ್ದೇ ತಡ ಅವರ ಟ್ವಿಟ್ಟರ್ ಪೇಜ್ ನಲ್ಲಿ ಬಿಸಿಬಿಸಿ ಚರ್ಚೆಯೂ ಶುರುವಾಗಿದೆ. "ಹಣ ಮತ್ತು ಹೆಸರಿನ ಹಿಂದೆ ಬಿದ್ದವನಲ್ಲ ನಾನು. ಸತ್ತ ಮೇಲೂ ನಮ್ಮ ಹೆಸರು ಉಳಿಯುವಂತಿರಬೇಕು. ಸತ್ತ ಮೇಲೆ ಬದುಕಬೇಕು ಎಂದು ಅಣ್ಣಾವ್ರು ಹೇಳಿದ್ದರು. ಅವರ ಮಾತಿನಂತೆ ನಡೆಯುತ್ತಿದ್ದೇನೆ ಎಂದಿದ್ದಾರೆ ಜಗ್ಗೇಶ್.

ಇದೇ ಸಂದರ್ಭದಲ್ಲಿ ಕೊಂಚ ವೇದಾಂತಕ್ಕೆ ಹೊರಳಿರುವ ಜಗ್ಗೇಶ್ ಅವರು, "ದುಡ್ಡು ಪಾಯಿಖಾನೆ ತನಕ, ಕೀರ್ತಿ ಕೊನೆಯತನಕ" ಎಂದಿದ್ದಾರೆ. ಅಲ್ಲಿಗೆ ಜಗ್ಗೇಶ್ ಅವರು ರಿಯಾಲಿಟಿ ಶೋಗೆ ಅಡಿಯಿಡಲಿದ್ದಾರೆ ಎಂಬ ಸುದ್ದಿ 'ಮಠ' ಸೇರಿದಂತಾಗಿದೆ.

ಅಂದಹಾಗೆ ಈ ಹಿಂದೊಮ್ಮೆ ಜಗ್ಗೇಶ್ ಅವರು ಸುವರ್ಣ ವಾಹಿನಿಯಲ್ಲಿ ಮೂಡಿಬರುತ್ತಿದ್ದ ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಗೆದ್ದ ಹಣವನ್ನು ಅವರು ಶಿಕ್ಷಣ ಸಂಸ್ಥೆಯೊಂದಕ್ಕೆ ದೇಣಿಗೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು. (ಒನ್ಇಂಡಿಯಾ ಕನ್ನಡ)

Vadikeyante patrike oduvaga nanu "big boss" nalli yandu ettu, am bhavanajevi sarvajanikavagi nanna yekanta hanchikolluvudilla,me nt fr sale!
— jaggesh (@jaggesh2) May 21, 2014

Am different am nt behind money nor fame:)am behind name which sud restore after my death:) coz am dr rajs anuyayi: he told satmel badukipa,
— jaggesh (@jaggesh2) May 21, 2014

Duddu payikane tanaka kerti konetanaka:)
— jaggesh (@jaggesh2) May 21, 2014

English summary
Actor Jaggesh finally breaks silence on Kannada reality show Bigg Boss 2. He clarifies that, he is not participating in the show. I'm different I'm not behind money nor fame:) I'm behind name which sud restore after my death said the actor.
Please Wait while comments are loading...