»   » 'ಪುಟ್ಟಣ್ಣ ಕಣಗಾಲ್' ಬಳಿ ಅಸಿಸ್ಟಂಟ್ ಆಗಲು ಕಾಶೀನಾಥ್ ನಿರಾಕರಿಸಿದ್ದೇಕೆ?

'ಪುಟ್ಟಣ್ಣ ಕಣಗಾಲ್' ಬಳಿ ಅಸಿಸ್ಟಂಟ್ ಆಗಲು ಕಾಶೀನಾಥ್ ನಿರಾಕರಿಸಿದ್ದೇಕೆ?

Posted By:
Subscribe to Filmibeat Kannada

ಕಾಶೀನಾಥ್.....ಕನ್ನಡದ ಚಿತ್ರರಂಗದ ದಿಕ್ಕು ಬದಲಾಯಿಸಿದ ಸ್ಟಾರ್ ನಿರ್ದೇಶಕ. ಒಬ್ಬ ನಾಯಕ ಹೀಗೇ ಇರ್ಬೇಕು ಎಂಬ ಸಂಪ್ರದಾಯವನ್ನ ಮುರಿದು ಹಾಕಿ ಹೊಸ ಭರವಸೆ ಮೂಡಿಸಿದ ರೀಯಲ್ ಹೀರೋ.

ಕಾಶೀನಾಥ್ ಅವರಿಗೆ ಹಲವು ಜನ ಶಿಷ್ಯರಿದ್ದಾರೆ. ರಿಯಲ್ ಸ್ಟಾರ್ ಉಪೇಂದ್ರ ಕಾಶೀನಾಥ್ ಅವರ ಗರಡಿಯಿಂದ ಬೆಳೆದ ಪ್ರತಿಭೆ. ಅವರಷ್ಟೇ ಅಲ್ಲದೇ ಬ್ಯಾಂಕ್ ಜನಾರ್ಧನ್, ಮುರುಳಿ ಮೋಹನ್, ನಟಿ ಅಭಿನಯ, ವಿ.ಮನೋಹರ್, ಅಂತಹ ಪ್ರತಿಭೆಗಳು ಗುರುತಿಸಿಕೊಂಡಿದ್ದು ಕಾಶೀನಾಥ್ ಅವರ ಚಿತ್ರಗಳ ಮೂಲಕ.[ಶಿಷ್ಯ ಉಪೇಂದ್ರ ಆಡಿದ ಮಾತಿಗೆ ಕಣ್ಣೀರಿಟ್ಟ ಗುರು ಕಾಶೀನಾಥ್! ]

ಹೀಗೆ, ಇಂಡಸ್ಟ್ರಿಯಲ್ಲಿ ಅನೇಕರಿಗೆ ಜೀವನ ರೂಪಿಸಿಕೊಳ್ಳಲು ಅವಕಾಶ ಮಾಡಿಕೊಟ್ಟ ಕಾಶೀನಾಥ್ ಅವರಿಗೆ ಗಾಡ್ ಫಾದರ್ ಇಲ್ಲ. ಯಾರ ಬಳಿಯೂ ಕೆಲಸ ಮಾಡಿಲ್ಲ. ಅಂದಿನ ಚಿತ್ರಬ್ರಹ್ಮ ಪುಟ್ಟಣ್ಣ ಕಣಗಾಲ್ ಬಳಿ ಕೆಲಸ ಮಾಡಲು ಅವಕಾಶ ಸಿಕ್ಕರೂ, ನಿರಾಕರಿಸಿ ಸ್ವಂತಂತ್ರವಾಗಿ ಬೆಳದವರು.

ಅಷ್ಟಕ್ಕೂ, ಪುಟ್ಟಣ್ಣ ಕಣಗಾಲ್ ಬಳಿ ಅಸಿಸ್ಟಂಟ್ ಆಗಿ ಸೇರಲು ಹಿಂದೇಟು ಹಾಕಿದ್ಯಾಕೆ ಅಂತ? ಮುಂದೆ ಓದಿ.....

ಕಾಶೀನಾಥ್ ಯಾರ ಬಳಿಯೂ ಅಸಿಸ್ಟಂಟ್ ಆಗಲಿಲ್ಲ!

ಒಂದು ಸಿನಿಮಾ ಮಾಡಬೇಕಾದ್ರೆ, ಅನುಭವಕ್ಕಾಗಿ ಹಿರಿಯ ನಿರ್ದೇಶಕರ ಬಳಿ ಅಸಿಸ್ಟಂಟ್ ಆಗಿ ಕೆಲಸ ಮಾಡುವ ಸಂಪ್ರದಾಯ ಆಗಿನಿಂದಲೂ ನಡೆದುಕೊಂಡು ಬಂದಿದೆ. ಆದ್ರೆ, ಈ ವಿಚಾರದಲ್ಲಿ ಕಾಶೀನಾಥ್ ಅವರು ವಿಶೇಷ ಹಾಗೂ ವಿಭಿನ್ನ. ಯಾಕಂದ್ರೆ, ಕಾಶೀನಾಥ್ ಯಾರ ಬಳಿಯೂ ಅಸಿಸ್ಟಂಟ್ ಆಗಿ ಕೆಲಸ ಮಾಡಿಲ್ಲ.['ವೀಕೆಂಡ್ ವಿತ್ ರಮೇಶ್' ಸಾಧಕರ ಸೀಟಿನಲ್ಲಿ 'ಮನ್ಮಥ ರಾಜ' ಕಾಶೀನಾಥ್]

ಕಾಶೀನಾಥ್ ಅವರಿಗೆ ಸ್ವಾಭಿಮಾನ ಹೆಚ್ಚಿದೆ

ಅಂದ್ಹಾಗೆ, ಕಾಶೀನಾಥ್ ಅವರಿಗೆ ಸ್ವಾಭಿಮಾನ ಹೆಚ್ಚಿತ್ತು. ಯಾರ ಬಳಿಯೂ ಕೆಲಸ ಮಾಡುವ ಯೋಚನೆ ಮಾಡಿಲ್ಲ. ಮಾಡಬೇಕು ಎನಿಸಿದರೂ ಅದರಿಂದ ಸ್ವಾಭಿಮಾನಕ್ಕೆ ಧಕ್ಕೆ ಆಗುವುದೆಂಬ ಆತಂಕ ಅವರಿಗಿತ್ತು.[ಕಾಶಿನಾಥ್ ಗೆ ಮಾಧುರಿ ದೀಕ್ಷಿತ್ ಕೊಟ್ಟ ಹೊಸ ಅನುಭವ]

ಪುಟ್ಟಣ್ಣ ಬಳಿ ಅಸಿಸ್ಟಂಟ್ ಆಗಲು ಅವಕಾಶವಿತ್ತಂತೆ!

ಹಿರಿಯ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರ ಬಳಿ ಅಸಿಸ್ಟಂಟ್ ಆಗಿ ಕೆಲಸ ಮಾಡಬೇಕು ಎಂದು ಅಂದುಕೊಂಡಿದ್ದರಂತೆ. ಆದ್ರೆ, ಅವರಲ್ಲಿದ್ದ ಸ್ವಾಭಿಮಾನದಿಂದ ಬೇಡವೆಂದು ಸುಮ್ಮನಾದರಂತೆ. ಅದಕ್ಕೊಂದು ಬಲವಾದ ಕಾರಣ ಕೂಡ ಇದೆ. ಮುಂದೆ ಓದಿ.....[ಟ್ವಿಟ್ಟರ್ ನಲ್ಲಿ 'ಅನುಭವ' ಹಂಚಿಕೊಂಡ ಕಾಶಿನಾಥ್]

ಪುಟ್ಟಣ್ಣ ಬಳಿ ಅಸಿಸ್ಟಂಟ್ ಆಗದಿರಲು ಕಾರಣವೇನು?

ಕಾಶೀನಾಥ್ ಅವರಿಗೆ ಯಾರೋ ಒಬ್ಬರು ಹೇಳಿದ್ದರಂತೆ '' ಪುಟ್ಟಣ್ಣ ಅವರು ಅಸಿಟ್ಟಂಟ್ ಗಳಿಗೆ ಕೆನ್ನೆ ಮೇಲೆ ಹೊಡಿತಾರೆ ಅಂತ''. ಮೊದಲೇ ಕಾಶೀನಾಥ್ ಅವರು ಸ್ವಾಭಿಮಾನಿ. ಹೀಗಾಗಿ ಸಾಧ್ಯವಿಲ್ಲ ಎಂದು ಹೋಗಲಿಲ್ವಂತೆ.

ಗುರುವಿಲ್ಲದೆ ಗುರಿ ಮುಟ್ಟಿದ ಕಾಶೀನಾಥ್!

ಯಾರ ಬಳಿಯೂ ಹೊಡೆಸಿಕೊಳ್ಳಲು ಇಷ್ಟವಿರಲಿಲ್ಲ. ಸೋ, ತಮ್ಮಲ್ಲಿ ತಾವೇ ಕಲಿಯುವುದಕ್ಕೆ ನಿರ್ಧಾರ ಮಾಡಿದರಂತೆ. ಹೀಗಾಗಿ, ಸ್ವಂತಂತ್ರವಾಗಿ ನಿರ್ದೇಶನ ಮಾಡಿ, ಯಶಸ್ಸು ಕಂಡರಂತೆ. ಹೀಗೆ, ನೋಡಿದರೇ, ಇಂಡಸ್ಟ್ರಿಯಲ್ಲಿ ಅದೇಷ್ಟೋ ಜನ ಕಾಶೀನಾಥ್ ಅವರ ಶಿಷ್ಯರಿದ್ದಾರೆ. ಆದ್ರೆ, ಕಾಶೀನಾಥ್ ಅವರಿಗೆ ಇಂಡಸ್ಟ್ರಿಯಲ್ಲಿ ಗಾಡ್ ಫಾದರ್ ಇಲ್ಲ.[ಬುಡಕಟ್ಟಿನವರ ನಡುಕಟ್ಟು ಬಲು ಚೆಂದ, ಕಾಶೀನಾಥ್]

English summary
Kannada Actor kashinath speaks about his starting days in Weekend With Ramesh-3

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada