»   »  'ಅನುಭವ' ಚಿತ್ರದಿಂದ ಕಾಶೀನಾಥ್ ಅವರಿಗಾದ 'ಅನುಭವ' ಎಂತಹದ್ದು ಅಂತೀರಾ?

'ಅನುಭವ' ಚಿತ್ರದಿಂದ ಕಾಶೀನಾಥ್ ಅವರಿಗಾದ 'ಅನುಭವ' ಎಂತಹದ್ದು ಅಂತೀರಾ?

Posted By:
Subscribe to Filmibeat Kannada

ಕನ್ನಡ ಚಿತ್ರರಂಗದಲ್ಲಿದ್ದ ನೀತಿ, ನಿಯಮಗಳನ್ನ ಬ್ರೇಕ್ ಮಾಡಿ ಹೊಸ ಟ್ರೆಂಡ್ ಹುಟ್ಟುಹಾಕಿದ ನಿರ್ದೇಶಕ ಕಮ್ ನಟ ಕಾಶೀನಾಥ್.

ಕಾಶೀನಾಥ್ ಅಂದ್ರೆ ಥಟ್ ಅಂತ ನೆನಪಾಗುವುದು 'ಅನುಭವ' ಚಿತ್ರ. ಮಡಿವಂತಿಕೆ, ಶಾಸ್ತ್ರ, ಸಂಪ್ರಾದಯ ಅಂತಿದ್ದ ಕಾಲದಲ್ಲಿ ಹಸಿಬಿಸಿ ಸಂಭಾಷಣೆ ಮತ್ತು ದೃಶ್ಯಗಳ ಮೂಲಕ ಸ್ಯಾಂಡಲ್ ವುವ್ ನಲ್ಲಿ ಹೊಸ ಅಲೆಯನ್ನ ಸೃಷ್ಟಿಸಿದ್ದರು.

ಅಭಿನಯ, ಉಮಾಶ್ರೀ, ಹಾಗೂ ಸ್ವತಃ ಕಾಶೀನಾಥ್ ಅವರೇ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದ 'ಅನುಭವ' ಕಾಶೀನಾಥ್ ಅವರ ವೃತ್ತಿ ಬದುಕಿನಲ್ಲಿ ಬಹುದೊಡ್ಡ ಯಶಸ್ಸು. ಈ ಚಿತ್ರದ ಅನುಭವದ ಬಗ್ಗೆ ನಟ ಕಾಶೀನಾಥ್ ಅವರು 'ವೀಕೆಂಡ್ ವಿತ್ ರಮೇಶ್'ನಲ್ಲಿ ಹಂಚಿಕೊಂಡಿದ್ದಾರೆ. ಮುಂದೆ ಓದಿ...........

ತುಂಬಾ ನಷ್ಟದಲ್ಲಿದ್ದಾಗ ಮಾಡಿದ ಚಿತ್ರ 'ಅನುಭವ'

ಕಾಶೀನಾಥ್ ಅವರು 'ಅನುಭವ' ಸಿನಿಮಾ ಮಾಡಿದಾಗ ತುಂಬಾ ಕಷ್ಟದಲ್ಲಿದ್ದರು. ಬಾಂಬೆಯಿಂದ ಆಗ ತಾನೆ ಬೆಂಗಳೂರಿಗೆ ಬಂದಿದ್ದರು. ಆ ಕಾಲದಲ್ಲಿ 14 ಲಕ್ಷ ಕಳೆದುಕೊಂಡಿದ್ದರು. ಮೂರು ವರ್ಷ ಕೆಲಸವಿರಲಿಲ್ಲ. ಸೋಲಿನ ಜೊತೆ ಅವಮಾನ ಕೂಡ ಎದುರಾಗಿದ್ದ ಸಮಯವದು. ಆಗ ಮಾಡಿದ ಚಿತ್ರವೇ 'ಅನುಭವ'

ನೈಜ ಘಟನೆಗಳ ಚಿತ್ರಣವೇ 'ಅನುಭವ'

''ಅನುಭವ' ಚಿತ್ರದಲ್ಲಿ ಇದ್ದ ಅಂಶಗಳು, ಘಟನೆಗಳು ಯಾವುದು ಕಾಲ್ಪನಿಕವಲ್ಲ. ಅದು ಕಣ್ಣೆದುರು ನೋಡಿದ ಘಟನೆಗಳು. ಏನೂ ಅರಿಯದ ಹುಡುಗಿ ಮತ್ತು ಅತಿಯಾದ ಉತ್ಸಾಹದ ಹುಡುಗನ ಜೊತೆ ಮದುವೆ ಮಾಡಿದಾಗ ಆಗುವ ಪ್ರಸಂಗಗಳೇ 'ಅನುಭವ'ವಾಯಿತು''.

ಸೆನ್ಸಾರ್ ನಲ್ಲೂ ಸಿಕ್ಕಿಹಾಕಿಕೊಂಡಿದ್ದರಂತೆ!

''ಚಿತ್ರವನ್ನ ನೋಡಿದ ಸೆನ್ಸಾರ್ ಮಂಡಳಿ ಅಧಿಕಾರಿ ನನ್ನ ಮೇಲೆ ಕೋಪಗೊಂಡಿದ್ದರು. ಅಂದು ವಯಸ್ಸಾದ ಮುದುಕನೊಬ್ಬ ಅಧಿಕಾರಿಯಾಗಿದ್ದ. ಚಿತ್ರದ ಸನ್ನಿವೇಶವೊಂದರಲ್ಲಿ ಅವರನ್ನೇ ಹೋಲುವ ಪಾತ್ರವೊಂದಿತ್ತು. ಅದು ಮುಜುಗರ ತರುವಂತಹ ದೃಶ್ಯ. ಇದನ್ನ ನೋಡಿ ತಾನೇ ಮಾಡಿದ ಘಟನೆ ಎಂಬಂತೆ ಸಿಕ್ಕಾಪಟ್ಟೆ ಮುನಿಸಿಕೊಂಡಿದ್ದ.

ಕಲಾವಿದರ ಆಯ್ಕೆ ಬಹಳ ಕಷ್ಟವಾಗಿತ್ತು

''ಆಗ ನಮ್ಮ ಮನೆ ಎದುರುಗಡೆ ಒಂದು ಕೆಲಸದ ಹುಡುಗಿಯನ್ನ ನೋಡಿದ್ದೆ. ಪೆದ್ದು ಪೆದ್ದು ಆಗಿ ಆಡ್ತಿದ್ದಳು. ಹುಡುಗರ ಜೊತೆ ಜಗಳ ಆಡ್ತಿದ್ದಳು, ಹೊಡೆದಾಡುತ್ತಿದ್ದಳು. ಅದೇ ರೀತಿ ಇರ್ಬೇಕು ಅಂತ ಹುಡುಕಿದೆ. ಆಗಲೇ ಸಿಕ್ಕಿದ್ದು ನಟಿ ಅಭಿನಯ.

ಮಡಿವಂತಿಕೆಗಳನ್ನ ಧಿಕ್ಕರಿಸುವಂತಹ ಸಿನಿಮಾ

''ನನಗೆ ಗೊತ್ತಿತ್ತು ಇದು ಮಡಿವಂತಿಕೆಗಳನ್ನ ಧಿಕ್ಕರಿಸುವಂತಹ ಸಿನಿಮಾ. ಆದ್ರೆ, ಅಲ್ಲೊಂದು ಪಾಠವಿತ್ತು. ಏನೂ ಗೊತ್ತಿಲ್ಲದೇ ಹುಡುಗಿಗೆ ಮದುವೆ ಮಾಡ್ಬೇಡಿ. ನಾಯಕ ಬೇರೆಯವರ ಜೊತೆ ಅಫೇರ್ ಇಟ್ಕೊಳ್ತಾನೆ. ಆಮೇಲೆ ಬದಲಾಗ್ತಾನೆ. ಇದೆಲ್ಲ ಕೆಲವರಿಗೆ ಕೋಪ ತರಿಸಿತ್ತು. ಯಾಕಂದ್ರೆ, ಅವರು ಮಾಡಿರುವ ಘಟನೆಗಳು ತೆರೆ ಮೇಲೆ ಕಾಣ್ತಿತ್ತು''- ಕಾಶೀನಾಥ್

English summary
Kannada Director And Actor Kashinath Speak About Anubhava Movie in Weekend With Ramesh-3

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada