For Quick Alerts
  ALLOW NOTIFICATIONS  
  For Daily Alerts

  'ರಜನಿಕಾಂತ್ ಜತೆ ದ್ವೀಪದಲ್ಲಿ ಏಕಾಂತದಲ್ಲಿರಲು ಬಯಸುವೆ'

  By Srinath
  |

  'ಮರ್ಡರ್' ಖ್ಯಾತಿಯ ನಟಿ ಮಲ್ಲಿಕಾ ಶೆರಾವತ್ 'ದಿ ಬ್ಯಾಚಲರೇಟ್ ಇಂಡಿಯಾ ಮೇರೆ ಖಯಾಲೋಂಕಿ ಮಲ್ಲಿಕಾ' ರಿಯಾಲ್ಟಿ ಷೋಗಾಗಿ ಹಲವಾರು ಸಾಹಸ/ಗಿಮಕ್ ಗಳನ್ನು ಮಾಡುತ್ತಿದ್ದಾರೆ.

  Life OK ಚಾನೆಲಿನಲ್ಲಿ ಅಕ್ಟೋಬರ್ 7ರಿಂದ ಪ್ರಸಾರವಾಗುತ್ತಿರುವ The Bachelorette India - Mere Khayalon ki Mallika ರಿಯಾಲ್ಟಿ ಷೋ ಪ್ರೊಮೋ ಧಾವಂತದಲ್ಲಿರುವ ಅವಿವಾಹಿತೆ ಮಲ್ಲಿಯನ್ನು 'ದ್ವೀಪ ಪ್ರದೇಶದಲ್ಲಿ ಏಕಾಂತದಲ್ಲಿರುವಾಗ ನಿನ್ನ ಕಾಂತ ಯಾರಾಗಿರಬೇಕೆಂದು ಬಯಸುವೆ?' ಎಂದು ಕೇಳಿದ್ದಕ್ಕೆ 'ಸೂಪರ್ ಸ್ಟಾರ್ ರಜನಿಕಾಂತ್' ಎಂದು ಪಟ್ಟನೆ ಉತ್ತರಿಸಿದ್ದಾಳೆ.

  'ಅದ್ಯಾಕಮ್ಮಿ ಮಲ್ಲಿ ಹಂಗೇಳ್ತೀಯಾ?' ಎಂದು ಮತ್ತಷ್ಟು ಕೆದಕಿದ್ದಕ್ಕೆ 'ರಜನಿ ಇದ್ದ ಕಡೆ ಜೀವನ ಬೋರ್ ಎಂಬ ಮಾತೇ ಇಲ್ಲ! ಆತನೊಟ್ಟಿಗೆ ಇದ್ದರೆ ಒಂದೊಂದು ಕ್ಷಣವೂ ರಸವತ್ತಾಗಿರುತ್ತದೆ. ಆತ ಹಾಗೆ ನೋಡಿಕೊಳ್ಳುತ್ತಾನೆ ಎಂಬ ವಿಶ್ವಾಸ ನನ್ನದು. ಮತ್ತೂ ಹೇಳಬೇಕು ಅಂದರೆ ಅಕಸ್ಮಾತ್ ನಾನು ಎಲ್ಲಾದರೂ ಹೋಗಬೇಕು ಅಂದರೆ ಆತ ನನಗೆ ಇಡೀ ದ್ವೀಪವನ್ನು ಸುತ್ತಿಸುತ್ತಾರೆ' ಎಂದು ಹುಬ್ಬೆಗರಿಸಿದ್ದಾಳೆ.

  ವಿಶ್ವಮಟ್ಟದಲ್ಲಿ ಸುಪ್ರಸಿದ್ಧಿಯಾಗಿರುವ The Bachelor ಷೋನ ದೇಶೀಯ ಅವತರಣಿಕೆಯಾಗಿರುವ 'ದಿ ಬ್ಯಾಚಲರೇಟ್ ಇಂಡಿಯಾ ಮೇರೆ ಕಯಾಲೋಂಕಿ ಮಲ್ಲಿಕಾ' ಮೂಲಕ ಮೋಹಕ ನಟಿ ಮಲ್ಲಿಕಾ ಶೆರಾವತ್ ತನ್ನ ಬಾಳ ಸಂಗಾತಿಯನ್ನು ಆರಿಸಿಕೊಳ್ಳುವ ತವಕದಲ್ಲಿದ್ದಾರೆ.

  'ಅಮ್ಮಿ, ನಿನಗೆ ಅಮಿತಾಭ್ ಇಷ್ಟವೋ ಅಥವಾ ನಾಸೀರುದ್ದೀನ್ ಷಾ ಇಷ್ಟವೋ?' ಎಂದೂ ಕೇಳಲಾಗಿ ನಟಿ ಮಲ್ಲಿಕಾ ಇಬ್ಬರ ಬಗ್ಗೆಯೂ ಸಮಾನ ದೃಷ್ಟಿಕೋನವಿದೆ ಎಂದು ಉಲಿದಿದ್ದಾಳೆ. ಬಾಲಿವುಡ್ ಮೇರುಪರ್ವತ ಅಮಿತಾಭ್ ಬಗ್ಗೆ ನನಗೆ ಅಪಾರ ಗೌರವಾದರಗಳಿವೆ. ಇನ್ನು ನಾಸೀರುದ್ದೀನ್ ಷಾರನ್ನು ನಿಜಕ್ಕೂ ಪ್ರೀತಿಸುವೆ. 'ಡರ್ಟಿ ಪಾಲಿಟಿಕ್ಸ್' ಸಿನಿಮಾದಲ್ಲಿ ಆತನೊಂದಿಗೆ ನಟಿಸುತ್ತಿದ್ದೇನೆ' ಎಂದು 'ಪ್ಯಾರ್ ಕೆ ಸೈಡ್ ಎಫೆಕ್ಟ್ಸ್' ಹೀರೋಯಿನ್ ಹೇಳಿಕೊಂಡಿದ್ದಾಳೆ.

  English summary
  If Mallika Sherawat was ever stranded on an isolated island, guess whose company she would want? Superstar Rajinikanth! She confessed this in a web exclusive video to promote her ongoing reality show "The Bachelorette India - Mere Khayalon Ki Mallika", which airs on Life OK.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X