»   » 'ವೀಕೆಂಡ್ ವಿತ್ ರಮೇಶ್-3' ಮೊಟ್ಟಮೊದಲ ಅತಿಥಿ ಯಾರು?

'ವೀಕೆಂಡ್ ವಿತ್ ರಮೇಶ್-3' ಮೊಟ್ಟಮೊದಲ ಅತಿಥಿ ಯಾರು?

Posted By:
Subscribe to Filmibeat Kannada

ನಟ, ನಿರ್ದೇಶಕ ರಮೇಶ್ ಅರವಿಂದ್ ನಡೆಸಿಕೊಡುವ ಟಾಕ್ ಶೋ 'ವೀಕೆಂಡ್ ವಿಥ್ ರಮೇಶ್' ಕಾರ್ಯಕ್ರಮ ಇದೇ ಮಾರ್ಚ್ 25 ರಿಂದ ಶುರುವಾಗುತ್ತಿದೆ.

ದೊಡ್ಡ ದೊಡ್ಡ ಸಿನಿಮಾ ಕಲಾವಿದರನ್ನ ಸೇರಿದಂತೆ ಹಲವು ಸಾಧಕರ ಪರಿಚಯ ಮಾಡಿಕೊಟ್ಟಿದ್ದ ಈ ವಿಶೇಷ ಕಾರ್ಯಕ್ರಮದಲ್ಲಿ ಈ ಬಾರಿ ಯಾವೆಲ್ಲಾ ಸಾಧಕರು ಭಾಗಿಯಾಗುತ್ತಾರೆ ಎಂಬುದು ಕುತೂಹಲ ಸಾಮಾನ್ಯವಾಗಿದೆ.[ಮತ್ತೆ 'ವೀಕೆಂಡ್' ಜೊತೆ ನಿಮ್ಮನೆಗೆ ಬರ್ತಿದ್ದಾರೆ ರಮೇಶ್]

ಸದ್ಯಕ್ಕೆ, ಮೂರನೇ ಅವೃತ್ತಿಯ ಮೊದಲ ಅತಿಥಿ ಯಾರು ಎಂಬ ಕುತೂಹಲಕ್ಕೆ ಬ್ರೇಕ್ ಬಿದ್ದಿದೆ. ಹೌದು, 'ವೀಕೆಂಡ್ ವಿಥ್ ರಮೇಶ್ ಸೀಸನ್ 3'ರ ಮೊದಲ ಅತಿಥಿಯಾಗಿ ಬಹುಭಾಷ ನಟರೊಬ್ಬರು ಭಾಗಿಯಾಗುತ್ತಿದ್ದಾರಂತೆ. ಯಾರದು? ಮುಂದೆ ಓದಿ....

ಮೊದಲ ಅತಿಥಿ 'ಪ್ರಕಾಶ್ ರೈ'

ಮುಂದಿನ ವಾರ ದಿಂದ ಆರಂಭವಾಗಲಿರುವ 'ವೀಕೆಂಡ್ ವಿಥ್ ರಮೇಶ್ ಸೀಸನ್-3'ಯ ಮೊದಲ ಅತಿಥಿಯಾಗಿ ಬಹುಭಾಷ ನಟ ಪ್ರಕಾಶ್ ರೈ ಭಾಗವಹಿಸಿಲಿದ್ದಾರಂತೆ.

'ವೀಕೆಂಡ್ ಟೆಂಟ್'ನಲ್ಲಿ ರೈ ಜೀವನ ಕಥೆ

ಈ ಮೂಲಕ ಕನ್ನಡ, ತೆಲುಗು, ತಮಿಳು, ಹಿಂದಿ, ಹೀಗೆ ಭಾರತೀಯ ಸಿನಿಮಾ ರಂಗದ ವಿವಿಧ ಭಾಷೆಗಳಲ್ಲಿ ಖ್ಯಾತ ನಟನಾಗಿ ಗುರುತಿಸಿಕೊಂಡಿರುವ ಪ್ರಕಾಶ್ ರೈ ಅವರ ಗೊತ್ತಿಲ್ಲದ ಅನೇಕ ಸಂಗತಿಗಳು ಜನರಿಗೆ ಪರಿಚಯವಾಗಲಿದೆ.

ಎರಡನೇ ಅತಿಥಿ 'ಜಗ್ಗೇಶ್'

ಇನ್ನೂ 'ಸೀಸನ್-3' ಯಲ್ಲಿ ಎರಡನೇ ಅತಿಥಿಯಾಗಿ ನವರಸ ನಾಯಕ ಜಗ್ಗೇಶ್ ಭಾಗವಹಿಸಿಲಿದ್ದಾರಂತೆ. ಕಳೆದ ಎರಡು ಸೀಸನ್ ನಲ್ಲೂ ಕಾಣಿಸಿಕೊಳ್ಳದ ಜಗ್ಗೇಶ್, ಈ ಬಾರಿ ಅತಿಥಿಯಾಗಿದ್ದಾರೆ ಎನ್ನಲಾಗಿದೆ.

ಪ್ರೇಕ್ಷಕರಿಗೆ ಸಕತ್ ಇಷ್ಟವಾದ ಟಾಕ್ ಶೋ!

ಅಂದ್ಹಾಗೆ, 'ವೀಕೆಂಡ್ ವಿಥ್ ರಮೇಶ್' ಕಾರ್ಯಕ್ರಮ ಕಿರುತೆರೆಯಲ್ಲಿ ಹೆಚ್ಚು ಜನಪ್ರಿಯ ಹೊಂದಿದೆ. ಅತಿಥಿಗಳ ಬದುಕಿನ ಕಥೆ, ಯಾರಿಗೂ ಗೊತ್ತಿಲ್ಲದ ಸತ್ಯಗಳು ಜನರ ಮುಂದೆ ಇಡುವಂತಹ ವಿಶೇಷ ಕಾರ್ಯಕ್ರಮ. ರಮೇಶ್ ಅರವಿಂದ್ ಈ ಕಾರ್ಯಕ್ರಮವನ್ನ ಅದ್ಭುತವಾಗಿ ನಿರೂಪಣೆ ಮಾಡಿ, ಗಮನ ಸೆಳೆದಿದ್ದಾರೆ.

ಮಾರ್ಚ್ 25 ರಿಂದ ಆರಂಭ

ಇದೇ ಮಾರ್ಚ್ 25 ರಿಂದ ಶನಿವಾರ ಮತ್ತು ಭಾನುವಾರ ರಾತ್ರಿ 9 ಗಂಟೆಗೆ ಜೀ ಕನ್ನಡದಲ್ಲಿ 'ವೀಕೆಂಡ್ ವಿಥ್ ರಮೇಶ್' ಪ್ರಸಾರವಾಗಲಿದೆ.

English summary
Ramesh Aravind is all set to host Weekend with Ramesh for the Third season. The show, will be aired Starting from 25th March 9:00 PM on Zee Kannada during weekends. Actor Prakash rai will be the first guest of new season.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada