For Quick Alerts
  ALLOW NOTIFICATIONS  
  For Daily Alerts

  ಒಂದ್ಕಡೆ ಪವರ್ ಸ್ಟಾರ್, ಮತ್ತೊಂದೆಡೆ ಗೋಲ್ಡನ್ ಸ್ಟಾರ್: ಫುಲ್ ಧಮಾಕ.!

  By Bharath Kumar
  |

  ಮನರಂಜನೆಗಾಗಿ ಮುಂದಿನ ವಾರ ವೀಕೆಂಡ್ ಪ್ಲಾನ್ ಏನಾದರೂ ಹಾಕಿಕೊಂಡಿದ್ದರೇ, ಬಹುಶಃ ಕ್ಯಾನ್ಸಲ್ ಮಾಡುವುದು ಒಳ್ಳೆಯದು. ಯಾಕಂದ್ರೆ, ಮುಂದಿನ ವಾರ ಮನೆಯಲ್ಲಿಯೇ ನಿಮಗೆ ಭರಪೂರ ಮನರಂಜನೆ ಸಿಗಲಿದೆ. ಅದು ಒಬ್ಬರಲ್ಲ, ಇಬ್ಬರು ಸ್ಟಾರ್ ನಟರಿಂದ.

  ಮುಂದಿನ ವಾರ ಕಿರುತೆರೆಯಲ್ಲಿ ಕನ್ನಡದ ಸ್ಟಾರ್ ಗಳದ್ದೇ ಹವಾ, ಅಬ್ಬರ. ಬಹುಶಃ ಬೇರೆ ಯಾವುದೇ ಕಾರ್ಯಕ್ರಮ, ಸುದ್ದಿಗಳು, ಸಿನಿಮಾಗಳು ಟಿವಿಯಲ್ಲಿ ಪ್ರಸಾರ ಮಾಡಿದ್ರು ಅದನ್ನ ನೋಡುವುದಕ್ಕೆ ವೀಕ್ಷಕರೇ ಇರಲ್ಲ ಅನ್ಸುತ್ತೆ. ಯಾಕಂದ್ರೆ, ಒಂದ್ಕಡೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಇದ್ರೆ, ಮತ್ತೊಂದೆಡೆ ಗೋಲ್ಡನ್ ಸ್ಟಾರ್ ಗಣೇಶ್ ಬರ್ತಾರೆ.

  ಹೀಗೆ ಒಂದೇ ದಿನ, ಒಂದೇ ಸಮಯದಲ್ಲಿ ಇಬ್ಬಿಬ್ಬರು ಸ್ಟಾರ್ ಗಳ ಮನೆಗೆ ಬಂದ್ರೆ ಹೇಗಿರುತ್ತೆ ಅಲ್ವಾ...! ಮುಂದೆ ಓದಿ....

  ಮಜಾ ಟಾಕೀಸ್ ನಲ್ಲಿ ಪುನೀತ್.!

  ಮಜಾ ಟಾಕೀಸ್ ನಲ್ಲಿ ಪುನೀತ್.!

  ಮುಂದಿನ ವಾರ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ 'ಮಜಾ ಟಾಕೀಸ್' ಕಾರ್ಯಕ್ರಮದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅತಿಥಿ ಆಗಿ ಆಗಮಿಸಲಿದ್ದಾರೆ. ಮತ್ತೆ ಗಣೇಶ್....?

  ವೀಕೆಂಡ್ ಸಾಧಕರ ಸೀಟಿನಲ್ಲಿ ಗಣೇಶ್

  ವೀಕೆಂಡ್ ಸಾಧಕರ ಸೀಟಿನಲ್ಲಿ ಗಣೇಶ್

  ಮತ್ತೊಂದೆಡೆ ಜೀ-ಕನ್ನಡದಲ್ಲಿ ಪ್ರಸಾರವಾಗುವ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಮುಂದಿನ ವಾರ ಗೋಲ್ಡನ್ ಸ್ಟಾರ್ ಗಣೇಶ್ ಅತಿಥಿ ಆಗಿದ್ದಾರೆ.

  'ಅಪ್ಪು' ಎಪಿಸೋಡ್ ರೆಕಾರ್ಡ್ ಆಗಿದೆ

  'ಅಪ್ಪು' ಎಪಿಸೋಡ್ ರೆಕಾರ್ಡ್ ಆಗಿದೆ

  ಪುನೀತ್ ರಾಜ್ ಕುಮಾರ್ 'ಮಜಾ ಟಾಕೀಸ್' ಗೆ ಬಂದಿರುವ ಎಪಿಸೋಡ್ ತಿಂಗಳುಗಳ ಹಿಂದೆಯೇ ರೆಕಾರ್ಡ್ ಮಾಡಲಾಗಿದೆ. ಆದ್ರೆ, 250ನೇ ಎಪಿಸೋಡ್ ಗೆ ಟೆಲಿಕಾಸ್ಟ್ ಮಾಡಬೇಕೆಂದು ಇನ್ನು ಪ್ರಸಾರ ಮಾಡಿರಲಿಲ್ಲ.

  'ಅಪ್ಪು' ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದ ಕ್ಷಣ ಬಂದೇ ಬಿಡ್ತು!

  250 ನೇ ಎಪಿಸೋಡ್ ಗೆ ಅಪ್ಪು

  250 ನೇ ಎಪಿಸೋಡ್ ಗೆ ಅಪ್ಪು

  'ಮಜಾ ಟಾಕೀಸ್' ನ 250 ನೇ ಎಪಿಸೋಡ್ ನಲ್ಲಿ ಅಪ್ಪು ಎಂಟ್ರಿ ಕೊಟ್ಟಿದ್ದು, ಜುಲೈ 1 ಮತ್ತು 2ನೇ ತಾರೀಖು ಈ ಕಾರ್ಯಕ್ರಮ ಪ್ರಸಾರವಾಗಲಿದೆ.

  'ಮಜಾ ಟಾಕೀಸ್' ಪುನೀತ್ ಎಪಿಸೋಡ್ ಇನ್ನೂ ಪ್ರಸಾರವಾಗಿಲ್ಲ ಏಕೆ? ಕಾರಣ ಇಲ್ಲಿದೆ..

  'ವೀಕೆಂಡ್' ಕೊನೆಯ ಎಪಿಸೋಡ್ ಗೆ ಗಣೇಶ್

  'ವೀಕೆಂಡ್' ಕೊನೆಯ ಎಪಿಸೋಡ್ ಗೆ ಗಣೇಶ್

  'ವೀಕೆಂಡ್ ವಿತ್ ರಮೇಶ್' ಮೂರನೇ ಆವೃತ್ತಿಯ ಕೊನೆ ಅತಿಥಿಯಾಗಿ ಗಣೇಶ್ ಸಾಧಕರ ಕುರ್ಚಿಯಲ್ಲಿ ಕೂರಲಿದ್ದಾರಂತೆ. ಜೀ-ಕನ್ನಡದ ಮೂಲಗಳ ಪ್ರಕಾರ ಜುಲೈ 1 ಮತ್ತು 2ರಂದು 'ವೀಕೆಂಡ್ ವಿತ್ ರಮೇಶ್ ಸೀಸನ್-3' ಅಂತ್ಯವಾಗಲಿದೆ. ಗಣೇಶ್ ಅವರ ಎಪಿಸೋಡ್ ಕೊನೆಯ ಸಂಚಿಕೆಯಾಗಲಿದೆಯಂತೆ.

  ಗಣೇಶ್ ಸಂಚಿಕೆ ಇನ್ನು ರೆಕಾರ್ಡ್ ಆಗಿಲ್ಲ!

  ಗಣೇಶ್ ಸಂಚಿಕೆ ಇನ್ನು ರೆಕಾರ್ಡ್ ಆಗಿಲ್ಲ!

  ಈ ವಾರ ವೀಕೆಂಡ್ ಸಾಧಕರ ಕುರ್ಚಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಗಮಿಸಲಿದ್ದು, ಈಗಾಗಲೇ ಕಾರ್ಯಕ್ರಮ ರೆಕಾರ್ಡ್ ಕೂಡ ಆಗಿದೆ. ಈ ವಾರ ಅಂದ್ರೆ ಜೂನ್ 24 ಮತ್ತು 25 ರಂದು ಸಿಎಂ ಎಪಿಸೋಡ್ ಪ್ರಸಾರವಾಗಲಿದೆ.

  ಬ್ರೇಕಿಂಗ್ ನ್ಯೂಸ್: ಸಾಧಕರ ಸೀಟ್ ಮೇಲೆ ಕುಳಿತ ಮುಖ್ಯಮಂತ್ರಿ ಸಿದ್ದರಾಮಯ್ಯ

  ಮುಂದಿನ ವಾರ ಫುಲ್ ಧಮಾಕ

  ಮುಂದಿನ ವಾರ ಫುಲ್ ಧಮಾಕ

  ಹೀಗೆ, ಮುಂದಿನ ವಾರ ಪವರ್ ಸ್ಟಾರ್ ಮತ್ತು ಗೋಲ್ಡನ್ ಸ್ಟಾರ್ ಇಬ್ಬರು ಕಿರುತೆರೆಯಲ್ಲಿ ಮಿಂಚಲಿದ್ದಾರೆ. ಈ ಮೂಲಕ ಮುಂದಿನ ವಾರ ಫುಲ್ ಮನರಂಜನೆ ಪಕ್ಕಾ.

  English summary
  Kannada Actor Ganesh has taken part in 'Weekend With Ramesh 3' on July 1st and 2nd. Same Day Kannada Actor Puneeth Rajkumar Also Participated in 'Majaa Talkies.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X