For Quick Alerts
  ALLOW NOTIFICATIONS  
  For Daily Alerts

  Rap ಸಾಂಗ್ ಹಾಡಿ ಸಖತ್ 'ಕಿಕ್' ಕೊಡ್ತಾರೆ ಪುನೀತ್

  By Suneetha
  |

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಬರೀ ನಟನೆಯಲ್ಲಿ ಮಾತ್ರವಲ್ಲದೇ, ಗಾಯನದ ಮೂಲಕ ಕೂಡ ಸಾಕಷ್ಟು ಗುರುತಿಸಿಕೊಂಡಿದ್ದಾರೆ. ಇತ್ತೀಚಿನ ಎಲ್ಲಾ ಚಿತ್ರಗಳಲ್ಲಿನ ಹಾಡುಗಳಲ್ಲೂ ಪುನೀತ್ ರಾಜ್ ಕುಮಾರ್ ಅವರ ಪವರ್ ಫುಲ್ ವಾಯ್ಸ್ ಇದ್ದೇ ಇರುತ್ತೆ.

  ಇದೀಗ ಪುನೀತ್ ಅವರು ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ. Rap ಕಿಂಗ್ ಚಂದನ್ ಶೆಟ್ಟಿ ಅವರ ಜೊತೆ ನಟ ಪುನೀತ್ ರಾಜ್ ಕುಮಾರ್ ಅವರು ಕೈ ಜೋಡಿಸಿದ್ದು, ಮೊಟ್ಟ ಮೊದಲ ಬಾರಿಗೆ ಪುನೀತ್ ಅವರು ಕಿರುತೆರೆಯಲ್ಲೂ ಹಾಡಿದ್ದಾರೆ.['ಟಕರ್ ಟಕರ್ ಟಂವ್ ಟಂವ್' ಅಂತಾವ್ರೆ ಪವರ್ ಸ್ಟಾರ್ ಪುನೀತ್]

  ಉದಯ ಟಿವಿಯಲ್ಲಿ ಮೂಡಿಬರುತ್ತಿರುವ 'ಕಿಕ್' ಎಂಬ ಡ್ಯಾನ್ಸ್ ರಿಯಾಲಿಟಿ ಶೋಗಾಗಿ ಪುನೀತ್ ಅವರು ಒಂದು ಹಾಡನ್ನು ಹಾಡಿದ್ದಾರೆ. ಈ ಅದ್ಧೂರಿ ರಿಯಾಲಿಟಿ ಶೋನಲ್ಲಿ ಮಹಾ ಗುರುವಾಗಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಕಾಣಿಸಿಕೊಂಡಿದ್ದು, ನಟಿ ರಚಿತಾ ರಾಮ್ ಹಾಗೂ ನೃತ್ಯ ನಿರ್ದೇಶಕ ಎ.ಹರ್ಷ ಅವರು ತೀರ್ಪುಗಾರರಾಗಿದ್ದಾರೆ.

  ಅಂದಹಾಗೆ ಮೊದಲ ಬಾರಿಗೆ ಪುನೀತ್ ಅವರು Rap ಹಾಡಿಗೆ ಧ್ವನಿ ನೀಡಿದ್ದು, Rap ಕಿಂಗ್ ಚಂದನ್ ಶೆಟ್ಟಿ ಹಾಡನ್ನು ರಚಿಸಿ, ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.[ಕಾಜಲ್-ಅಪ್ಪು ಹಾಡಿರುವ ರೋಮ್ಯಾಂಟಿಕ್ ಡ್ಯಾನ್ಸ್ ವಿಡಿಯೋ ನಿಮಗಾಗಿ]

  Actor Puneeth Rajkumar's Rap song for dance reality show 'Kick'

  ಸದ್ಯ ಮೈಸೂರಿನಲ್ಲಿ 'ರಾಜಕುಮಾರ' ಚಿತ್ರದ ಶೂಟಿಂಗ್ ನಲ್ಲಿದ್ದ ನಟ ಪುನೀತ್ ಅವರು ಬಿಡುವು ಮಾಡಿಕೊಂಡು ಹಾಡಿನ ರೆಕಾರ್ಡಿಂಗ್ ಮುಗಿಸಿಕೊಟ್ಟಿದ್ದಾರೆ.[ವಿಡಿಯೋ: ಕನ್ನಡದ ರ‍್ಯಾಪ್ ಕಿಂಗ್ ಜೊತೆ ಐಂದ್ರಿತಾ 'ಸೌಂದರ್ಯ ಸಮರ']

  "ಕೈಕಾಲು ನಿಂತ ಕಡೆ ನಿಲ್ಲೋದಿಲ್ಲ..ಸ್ಟೆಪ್ ಹಾಕದಿದ್ರೆ ನಮಗೆ ನೆಮ್ಮದಿ ಇಲ್ಲ" ಎಂಬ ಸಾಹಿತ್ಯ ಇರುವ ಈ ಹಾಡನ್ನು ಪುನೀತ್ ಅವರು ಹಾಡಿದ್ದು, ಈ ವಾರದ 'ಕಿಕ್' ರಿಯಾಲಿಟಿ ಶೋ ಕಾರ್ಯಕ್ರಮದಲ್ಲಿ ಈ ಹಾಡು ಮೂಡಿಬರಲಿದೆ.

  English summary
  Kannada Actor Puneeth Rajkumar first time sung a song for the small screen. The track is for the Udaya TV reality dance show 'Kick' that has Shivarajkumar, Harsha and Rachita Ram as its judges. Music composed by Chandan Shetty, who has also written its lyrics.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X