For Quick Alerts
  ALLOW NOTIFICATIONS  
  For Daily Alerts

  ಚಾರ್ಲಿ ಪಾತ್ರದಲ್ಲಿ ನಟಿ ಅಮೃತಾ ರಾಮಮೂರ್ತಿ ಪುಟ್ಟ ಮಗು!

  By ಪ್ರಿಯಾ ದೊರೆ
  |

  ಅಮೃತಾ ರಾಮಮೂರ್ತಿ ಕನ್ನಡ ಕಿರುತೆರೆ ಹಾಗೂ ಸಿನಿಮಾ ರಂಗದಲ್ಲಿ ಸಕ್ರಿಯರಾಗಿದ್ದ ನಟಿ. ಸದ್ಯ ಮನೆ, ಮಗು ಹಾಗೂ ಸೋಶಿಯಲ್ ಮೀಡಿಯಾಗಷ್ಟೇ ಮೀಸಲಾಗಿದ್ದಾರೆ. ಮುಂದೆ ಮತ್ತೆ ಬಣ್ಣದ ಲೋಕಕ್ಕೆ ಬರುತ್ತಾರೆ ಎಂಬ ಭರವಸೆಯಲ್ಲಿ ಅಭಿಮಾನಿಗಳಿದ್ದು, ಇದೀಗ ಅಮೃತಾ ರಾಮಮೂರ್ತಿ ಮಾಡಿರುವ ರೀಲ್ ಸಖತ್‌ ವೈರಲ್ ಆಗಿದೆ.

  ಅಮೃತಾ ರಾಮಮೂರ್ತಿ ಅವರಿಗೆ ಕುಲವಧು ಸೀರಿಯಲ್ ಖ್ಯಾತಿಯನ್ನು ತಂದುಕೊಟ್ಟಿತ್ತು. ಇದಲ್ಲದೇ 'ಮಿಸ್ಟರ್‌ ಆಂಡ್‌ ಮಿಸ್ಸಸ್ ರಂಗೇಗೌಡ' ಧಾರಾವಾಹಿಯಲ್ಲಿ ನಟಿಸಿದ್ದ ಇವರು ರಾಘವೇಂದ್ರ ಜೊತೆಗೆ ತೆರೆ ಹಂಚಿಕೊಂಡಿದ್ದರು. ಆಗಲೇ ಇವರಿಬ್ಬರ ನಡುವೆ ಪ್ರೀತಿ ಮೊಳಕೆ ಹೊಡೆದು ಮುಂದೆ ವೈವಾಹಿಕ ಜೀವನಕ್ಕೂ ಕಾಲಿಟ್ಟರು.

  ವೀಳ್ಯದೆಲೆ, ಬನಾನ, ನವಿಲು: ಅಬ್ಬಬ್ಬಾ ಶಾಲಿನಿ ಬಳಿ ಇರುವ ಬ್ಲೌಸ್ ಒಂದೊಂದ್ ಅಲ್ಲ..!ವೀಳ್ಯದೆಲೆ, ಬನಾನ, ನವಿಲು: ಅಬ್ಬಬ್ಬಾ ಶಾಲಿನಿ ಬಳಿ ಇರುವ ಬ್ಲೌಸ್ ಒಂದೊಂದ್ ಅಲ್ಲ..!

  ರಾಘವೇಂದ್ರ ಕೂಡ ಕಿರುತೆರೆ ನಟರಾಗಿದ್ದು, ಇಬ್ಬರಿಗೂ ಈಗ ಮುದ್ದಾದ ಹೆಣ್ಣು ಮಗುವಿದೆ. ಈ ಮಗುವಿಗೆ ಪುನೀತ್‌ ರಾಜ್‌ ಕುಮಾರ್‌ ಮಗಳ ಹೆಸರನ್ನೇ ಇಟ್ಟಿರುವುದು ವಿಶೇಷ. ಇದೀಗ ರೀಲ್ಸ್ ಮಾಡಿರುವ ಈ ಜೋಡಿ ಇವರ ಮಗಳನ್ನೇ ಚಾರ್ಲಿ ಮಾಡಿದ್ದಾರೆ.

  ಒಟ್ಟಿಗೆ ನಟನೆ ಶುರು ಮಾಡಿದ ಜೋಡಿ!

  ಅಮೃತಾ ರಾಮಮೂರ್ತಿ ಹಾಗೂ ರಾಘವೇಂದ್ರ ಒಟ್ಟಿಗೆ ನಟನೆಯನ್ನು ಆರಂಭಿಸಿದರು. 'ಮಿಸ್ಟರ್ ಆಂಡ್ ಮಿಸ್ಸಸ್ ರಂಗೇಗೌಡ'ಎಂಬ ಧಾರಾವಾಹಿಯಲ್ಲಿ ಇಬ್ಬರೂ ಪತಿ-ಪತ್ನಿ ಪಾತ್ರವನ್ನು ನಿರ್ವಹಿಸಿದ್ದರು. ಇಲ್ಲಿಂದ ಕಿರುತೆರೆ ಜರ್ನಿ ಜೊತೆಗೆ ವೈಯಕ್ತಿಕ ಜರ್ನಿಯನ್ನು ಶುರು ಮಾಡಿದ ಜೋಡಿ ಇವರದು. ಕಿರುತೆರೆಯಲ್ಲೇ ಇಬ್ಬರೂ ಪರಿಚಿತರಾಗಿ, ಪ್ರೀತಿಸಿ ನಿಜ ಜೀವನದಲ್ಲೂ ದಂಪತಿಗಳಾದರು. ಅಮೃತಾ ರಾಮಮೂರ್ತಿ ಅವರಿಗೆ 'ಕುಲವಧು' ಸೀರಿಯಲ್ ದೊಡ್ಡ ಪ್ರಮಾಣದಲ್ಲಿ ಜನಪ್ರಿಯತೆಯನ್ನು ತಂದುಕೊಟ್ಟಿತು. ಇನ್ನು ಅಮೃತಾ ಅವರು, 'ಕಸ್ತೂರಿ ನಿವಾಸ' ಧಾರವಾಹಿಯಲ್ಲೂ ನಟಿಸಿದ್ದರು. ಬಳಿಕ 'ಮನಸಾರೆ' ಧಾರಾವಾಹಿಯಿಂದ ಹೊರಬಂದ ಅಮೃತಾ ಅವರು ಸದ್ಯ ದೊಡ್ಡ ಬ್ರೇಕ್‌ ತೆಗೆದುಕೊಂಡಿದ್ದಾರೆ.

  ಕಿರುತೆರೆಯಲ್ಲಿ ಸಕ್ರಿಯರಾಗಿರುವ ರಾಘವೇಂದ್ರ!

  ಅಮೃತಾ ಹಾಗೂ ರಾಘವೇಂದ್ರ 2019ರಲ್ಲಿ ಮದುವೆಯಾದರು. ಅಮೃತಾ ಸೀರಿಯಲ್‌ನಿಂದ ದೂರ ಉಳಿದಿದ್ದು, ರಾಘವೇಂದ್ರ ಅವರು ಇನ್ನೂ ಕಿರುತೆರೆಯಲ್ಲಿ ಸಕ್ರಿಯರಾಗಿದ್ದಾರೆ. 'ನಮ್ಮನೆ ಯುವರಾಣಿ' ಧಾರಾವಾಹಿ ರಾಘವೇಂದ್ರಗೆ ಹೆಸರು ತಂದುಕೊಟ್ಟ ಸೀರಿಯಲ್.‌ 'ನಮ್ಮನೆ ಯುವರಾಣಿ' ಧಾರಾವಾಹಿಯಲ್ಲಿ ಸಾಕೇತ್ ಪಾತ್ರದಲ್ಲಿ ರಾಘವೇಂದ್ರ ಕಾಣಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ರಾಘು ಅವರು 'ಜೀವನ ಚೈತ್ರ', 'ದೇವಯಾನಿ' ಧಾರಾವಾಹಿಗಳಲ್ಲೂ ನಟಿಸಿದ್ದಾರೆ.

  ಈ ಜೋಡಿ ಅಪ್ಪು ಅಭಿಮಾನಿ!

  ಈ ಜೋಡಿ ಪುನೀತ್‌ ರಾಜ್‌ ಕುಮಾರ್‌ ಅವರ ಕಟ್ಟಾ ಅಭಿಮಾನಿ. ಕಳೆದ ವರ್ಷ ಅಮೃತಾ ರಾಮಮೂರ್ತಿ ಅವರು ತಮ್ಮ ಕನಸಿನಂತೆ ಶಾಸ್ತ್ರೋಕ್ತವಾಗಿ ಸೀಮಂತ ಮಾಡಿಕೊಂಡಿದ್ದರು. ಇದರ ಫೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಅಮೃತಾ ಸೀಮಂತಾ ಸಮಾರಂಭಕ್ಕೆ ಕಿರುತೆರೆಯ ಕಲಾವಿದರು ಕೂಡ ಭಾಗಿಯಾಗಿದ್ದರು. ಕಳೆದ ವರ್ಷ ಹೆಣ್ಣು ಮಗುವಿಗೆ ಜನ್ಮ ನೀಡಿದರು. ಬಳಿಕ ಪುನೀತ್‌ ರಾಜ್‌ ಕುಮಾರ್‌ ಅಭಿಮಾನಿಯಾಗಿರುವ ಕಾರಣ ಅವರ ಮೊದಲ ಮಗಳ ಹೆಸರನ್ನೇ ತಮ್ಮ ಮಗುವಿಗೂ ಇಟ್ಟಿದ್ದಾರೆ. ಧೃತಿ ಎಂದು ಮಗಳಿಗೆ ನಾಮಕರಣ ಮಾಡಿದ್ದಾರೆ.

  ಮಗಳನ್ನು ಚಾರ್ಲಿ ಮಾಡಿದ ದಂಪತಿ!

  ಅಮೃತಾ ರಾಮಮೂರ್ತಿ ಸದಾ ಇನ್‌ಸ್ಟಾಗ್ರಾಂನಲ್ಲಿ ಆಕ್ಟಿವ್‌ ಆಗಿರುತ್ತಾರೆ. ಯಾವಾಗಲೂ ಯಾವುದಾದರೂ ಒಂದು ರೀಲ್‌ಗಳನ್ನು ಮಾಡುತ್ತಿರುತ್ತಾರೆ. ಅಮೃತಾ ಅವರ ಜೊತೆ ಅವರ ಪತಿ ರಾಘವೇಂದ್ರ ಅವರು ಕೂಡ ರೀಲ್ಸ್ ಮಾಡುತ್ತಿರುತ್ತಾರೆ. ಇದೀಗ '777 ಚಾರ್ಲಿ' ಸಿನಿಮಾ ನೋಡಿದ ಈ ಜೋಡಿ, ಇದರಲ್ಲಿನ ಸೀನ್‌ ಒಂದನ್ನು ರೀಲ್‌ ಮಾಡಿದ್ದಾರೆ. ಅದೇನೆಂದರೆ, ರಕ್ಷಿತ್ ಶೆಟ್ಟಿ ನಾಯಿಯನ್ನು ಪಾರ್ಕ್‌ ನಲ್ಲಿ ಬಿಟ್ಟು ಬಂದಾಗ ಪುಟ್ಟ ಹುಡುಗಿ ಅದನ್ನು ಸ್ಕೂಲ್‌ ಬ್ಯಾಗ್‌ ನಲ್ಲಿ ತಂದ ಸೀನ್.‌ ಅಮೃತಾ ಪುಟ್ಟ ಹುಡುಗಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರೆ, ರಕ್ಷಿತ್‌ ಪಾತ್ರದಲ್ಲಿ ರಾಘವೇಂದ್ರ ಹಾಗೂ ಚಾರ್ಲಿ ಪಾತ್ರದಲ್ಲಿ ಮಗಳು ಧೃತಿ ಕಾಣಿಸಿಕೊಂಡಿದ್ದಾರೆ.

  English summary
  Actress Amrutha Rammoorthy Recreat 777 Charlie Video With Her New Born Baby,

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X