Don't Miss!
- News
Aero India 2023: 'ಇಂಡಿಯಾ ಪೆವಿಲಿಯನ್' ಮಧ್ಯದಲ್ಲಿ ಭಾರತದ ಈ ಪ್ರತಿಷ್ಠಿತ ವಿಮಾನ ಪ್ರದರ್ಶನ- ವಿನ್ಯಾಸ, ತೂಕ, ಮಾಹಿತಿ
- Sports
Ranji Trophy 2023: ಕ್ವಾರ್ಟರ್ ಫೈನಲ್ನಲ್ಲಿ ಉತ್ತರಾಖಂಡ ವಿರುದ್ಧ ಗೆಲುವಿನತ್ತ ದಾಪುಗಾಲಿಟ್ಟ ಕರ್ನಾಟಕ
- Automobiles
ಭಾರತದಲ್ಲಿ ಮಾರುತಿ ಜಿಮ್ನಿ ಎಸ್ಯುವಿಗೆ ಭಾರೀ ಡಿಮ್ಯಾಂಡ್: ಪ್ರತಿಸ್ಪರ್ಧಿಗಳಿಗೆ ಹೆಚ್ಚಿದ ಆತಂಕ
- Lifestyle
ಪುರುಷರಿಗಿಂತ ಮಹಿಳೆಯರಿಗೆ ತೂಕ ಇಳಿಕೆ ತುಂಬಾ ಕಷ್ಟ, ಏಕೆ?
- Finance
ಉದ್ಯೋಗಿಗಳಿಗೆ ಟೊಯೋಟಾ ಗ್ಲಾನ್ಜಾ ಗಿಫ್ಟ್ ನೀಡಿದ ರಮೇಶ್ ಮರಂದ್ ಯಾರು?
- Technology
ಮಾರುಕಟ್ಟೆಗೆ ಎಂಟ್ರಿ ಕೊಟ್ಟ ವಾಯರ್ಲೆಸ್ ಚಾರ್ಜಿಂಗ್ ಬೆಂಬಲಿಸುವ ಸ್ಮಾರ್ಟ್ವಾಚ್!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಭೂಮಿ ಶೆಟ್ಟಿ ಈಗ ಏನು ಮಾಡುತ್ತಿದ್ದಾರೆ ಗೊತ್ತಾ?
ಕರಾವಳಿ ಬೆಡಗಿ ಭೂಮಿಕಾ ಶೆಟ್ಟಿ ಸೈಲೆಂಟ್ ಆಗಿ ಇದ್ದುಕೊಂಡೆ ಕಿರುತೆರೆಯಿಂದ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟವರು. ಕನ್ನಡದಲ್ಲಿ ಕೆಲ ವರ್ಷಗಳ ಹಿಂದೆ ಪ್ರಸಾರಗೊಂಡ ಕಿನ್ನರಿ ಎಂಬ ಧಾರಾವಾಹಿ ಮೂಲಕ ನಟಿ ಭೂಮಿಕಾ ಶೆಟ್ಟಿ ಕಿರುತೆರೆಗೆ ಪಾದಾರ್ಪಣೆ ಮಾಡಿದರು.
ಕಿನ್ನರಿ ಧಾರಾವಾಹಿ ಬಳಿಕ ಭೂಮಿಕಾ ಅವರು ಬೇರೆ ದೊಡ್ಡ ಸೀರಿಯಲ್ ಗಳಲ್ಲಿ ಕಾಣಿಸಿಕೊಳ್ಳಲಿಲ್ಲ. ಬದಲಿಗೆ ಪ್ರಯೋಗ ಮಾಡಿದರು. ಆಂಕರಿಂಗ್ ಮಾಡುವ ಮೂಲಕ ತಮ್ಮನ್ನು ತಾವು ನಟನೆಯಿಂದ ಹೊರಗೂ ನೋಡಲು ಯತ್ನಿಸಿದರು.
ಬಿಗ್ ಬಾಸ್ ನಲ್ಲಿ ಎಲ್ಲರ ಜೊತೆ ಎದುರಾಳಿ ಆಗಿ ಹೋರಾಡಿದರು. ಕೊನೆಯವರೆಗೂ ಟಫ್ ಫೈಟ್ ಕೊಟ್ಟರು. ಈಗ ಫಿಟ್ನೆಸ್ ಕಡೆಗೆ ಹೆಚ್ಚು ಗಮನ ಹರಿಸಿದ್ದು, ತೆರೆ ಮೇಲೆ ಖಡಕ್ ಲುಕ್ ನಲ್ಲಿ ಕಾಣಿಸಿಕೊಳ್ಳುತ್ತಾರಾ ಎಂಬ ಅನುಮಾನ ಕಾಡಿದೆ.

ನಟನೆಯತ್ತ ಒಲವು
ಪರಿಸರ ಪ್ರೇಮಿಯಾದ ಭೂಮಿಕಾ ಶೆಟ್ಟಿ ಸಣ್ಣ ವಯಸ್ಸಿನಲ್ಲೇ ಭರತನಾಟ್ಯ ಮತ್ತು ಯಕ್ಷಗಾನದಲ್ಲಿ ಪರಿಣಿತಿ ಪಡೆದವರು. ಹಲವು ನೃತ್ಯ ಕಾರ್ಯಕ್ರಮಗಳನ್ನು ನೀಡಿರುವ ಭೂಮಿಕಾ ಶೆಟ್ಟಿ ಅವರಿಗೆ ಸ್ಟೇಜ್ ಫಿಯರ್ ಇಲ್ಲವಂತೆ. ಬೇಬಿ ಶೆಟ್ಟಿ ಮತ್ತು ಭಾಸ್ಕರ್ ಶೆಟ್ಟಿ ಭೂಮಿಕಾ ಶೆಟ್ಟಿ ಅವರ ಪೋಷಕರು. ಕುಂದಾಪುರದ ಈ ಬೆಡಗಿಗೆ ಮನೆಯಲ್ಲಿ ಓದಿನ ಕಡೆಗೆ ಹೆಚ್ಚು ಗಮನ ನೀಡಿ ಒಳ್ಳೆಯ ಉದ್ಯೋಗ ಪಡೆದು ನೆಲೆನಿಲ್ಲುವಂತೆ ಆಗಾಗ ಉಪದೇಶ ಕೊಡುತ್ತಿದ್ದರಂತೆ. ಇವರ ತಂದೆ ಧಾರವಾಡದಲ್ಲಿ ಹೋಟೆಲ್ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದರೆ, ಭೂಮಿಕಾ ಅವರಿಗೆ ನಟಿಯಾಗುವ ಆಸೆ ಇತ್ತಂತೆ.

ಧಾರಾವಾಹಿಗಳಲ್ಲಿ ನಟಿಸಿದ ಕಿನ್ನರಿ
ಮೆಕಾನಿಕಲ್ ಇಂಜಿನಿಯರಿಂಗ್ ಓದುವ ನೆಪದಲ್ಲಿ ಬೆಂಗಳೂರಿನಲ್ಲಿ ಬಂದು ನೆಲೆಸಿದರು. ತಾಯಿಯಿ ಬೆಂಬಲದೊಂದಿಗೆ ಕಲೆಯೊಂದಿಗೆ ನಂಟನ್ನು ಕಾಯ್ದುಕೊಂಡಿದ್ದ ಭೂಮಿಕಾ ಮೊದಲು ಒಂದು ಕಿರುತೆರೆ ಧಾರಾವಾಹಿಯಲ್ಲಿ ಅತಿಥಿ ಪಾತ್ರ ಮಾಡಿದ್ದರು. ನಂತರ ಬಂದ ಕಿನ್ನರಿ' ಆಡಿಷನ್ನಲ್ಲಿ ಆಯ್ಕೆಯಾದ ಇವರು ಮಣಿ' ಪಾತ್ರದ ಮೂಲಕ ಪ್ರೇಕ್ಷಕರ ಫೇವರೇಟ್ ನಟಿಯಾದರು. ಇವರ ಕಿರುತೆರೆಯಲ್ಲಿನ ನಟನೆ ಬಗ್ಗೆ ತಿಳಿದ ಕುಟುಂಬ ಇವರೊಂದಿಗೆ ಮುನಿಸಿಕೊಂಡಿದ್ದರಂತೆ. ಓದಿನ ಜೊತೆ ನಟನೆಯನ್ನು ತೂಗಿಸಿಕೊಂಡು ಹೋಗುವ ಭೂಮಿಕಾ ಒಂದು ತೆಲುಗು ಧಾರಾವಾಹಿಯಲ್ಲೂ ನಟಿಸಿದರು. ಆನಿಮೇಷನ್ ಕ್ಷೇತ್ರದಲ್ಲಿ ಪರಿಣಿತಿ ಹೊಂದಿರುವ ಇವರು ಸ್ಯಾಂಡಲ್ ವುಡ್ ನಲ್ಲೂ ಕಾಣಿಸಿಕೊಂಡಿದ್ದಾರೆ.

ನಿರೂಪಣೆಗೂ ಜೈ ಎಂದಿದ್ದ ಭೂಮಿ
ಯೋಗೇಶ್ ಅಭಿನಯದ ಲಂಬೋದರ' ಚಿತ್ರದ ಮೂಲಕ ಕಿರುತೆರೆಯ ಕಿನ್ನರಿ ಚಂದನವನ ಪ್ರವೇಶಿಸಿದರು. ಬಳಿಕ ಕೋವಿಡ್ ಸಂದರ್ಭದಲ್ಲಿ ಇಕ್ಕಟ್ ಎಂಬ ಚಿತ್ರದಲ್ಲಿ ನಟಿಸಿ ಸೈ ಎನಿಸಿಕೊಂಡರು. ಇದಕ್ಕೂ ಮೊದಲು ಕಿಚ್ಚ ಸುದೀಪ್ ನಿರೂಪಣೆಯ ಬಿಗ್ ಬಾಸ್ ಕನ್ನಡ 7 ಸೀಸನ್ ನಲ್ಲಿ 9ನೇ ಸ್ಪರ್ಧಿಯಾಗಿ ಭಾಗವಹಿಸಿದ್ದರು. ಇದರಲ್ಲಿ ಬರೋಬ್ಬರಿ 112 ದಿನಗಳ ಕಾಲ ಉಳಿದು ಎದುರಾಳಿಗಳಿಗೆ ಟಫ್ ಫೈಟ್ ಕೊಟ್ಟಿದ್ದರು. ಟಾಪ್ 5ರವರೆಗೂ ಬಂದಿದ್ದ ಭೂಮಿಕಾ ಶೆಟ್ಟಿ ಅವರು, ಬಳಿಕ ಮಜಾಭಾರತ ಎಂಬ ಕಾಮಿಡಿ ಶೋಗೆ ಕೆಲ ದಿನಗಳ ಕಾಲ ನಿರೂಪನೆಯನ್ನೂ ಮಾಡಿದರು.

ಮುಂದಿನ ಪ್ರಾಜೆಕ್ಟ್ ಯಾವುದಿರಬಹುದು..?
ಸದ್ಯ ಫಿಟ್ನೆಸ್ ಫ್ರೀಕ್ ಆಗಿರುವ ಭೂಮಿಕಾ ಶೆಟ್ಟಿ ಅವರು, ತಮ್ಮ ದೇಹವನ್ನು ದಂಡಿಸುತ್ತಿದ್ದಾರೆ. ಜಿಮ್ನ್ಯಾಸ್ಟಿಕ್, ಕಿಕ್ ಬಾಕ್ಸಿಂಗ್, ವೈಟ್ ಲಿಫ್ಟ್ ಸೇರಿದಂತೆ ಜಿಮ್ ನಲ್ಲಿ ಸಕತ್ ವರ್ಕೌಟ್ ಮಾಡುತ್ತಿದ್ದಾರೆ. ಅಲ್ಲದೇ, ಬೈಕ್ ರೈಡ್ ಕೂಡ ಮಾಡಿದ್ದು, ಇದು ಭೂಮಿಕಾ ಶೆಟ್ಟಿ ಅವರ ಮುಂದಿನ ಪ್ರಾಜೆಕ್ಟ್ ಗಾಗಿ ಮಾಡುತ್ತಿರುವ ವರ್ಕೌಟ್ ಇರಬಹುದಾ ಎಂದು ಅಭಿಮಾನಿಗಳು ಗೆಸ್ ಮಾಡಿದ್ದಾರೆ. ಆದರೆ ಈ ಬಗ್ಗೆ ಭೂಮಿಕಾ ಶೆಟ್ಟಿ ಅವರು ಯಾವ ಗುಟ್ಟನ್ನೂ ಬಿಟ್ಟುಕೊಟ್ಟಿಲ್ಲ.