For Quick Alerts
  ALLOW NOTIFICATIONS  
  For Daily Alerts

  ಬಿಗ್‌ಬಾಸ್ ಖ್ಯಾತಿಯ ಚೈತ್ರಾ ನಿಜ ಜೀವನದಲ್ಲಿ ಯಶಸ್ವಿ ಉದ್ಯಮಿ ಎಂಬುದು ಗೊತ್ತೆ?

  By ಪೂರ್ವ
  |

  ಚೈತ್ರಾ ವಾಸುದೇವನ್ ಹೆಸರು ಕೇಳಿದ ತಕ್ಷಣ ಅವರು ತಮಿಳಿಯನ್ ಎಂದು ಅನಿಸಬಹುದು, ಆದರೆ ಚೈತ್ರಾ ಪಕ್ಕಾ ಕುಂದಾಪುರದ ಹುಡುಗಿ. ಹೆಸರಿನ ಸಮಸ್ಯೆ ಬಂದಿದ್ದು ಪಾಸ್‌ಪೋರ್ಟ್‌ನಿಂದ. ಪಾಸ್‌ಪೋರ್ಟ್ ಮಾಡಿಸುವ ವೇಳೆ ಅವರ ತಂದೆ ಹೆಸರು ವಾಸುದೇವ ಅನ್ನೋದನ್ನು ವಾಸುದೇವನ್ ಅಂತ ತಪ್ಪಾಗಿ ಬರೆಯಲಾಗಿ, ಅದೇ ತಪ್ಪು ಈಗ ಮುಂದುವರೆದಿದೆ ಎನ್ನುತ್ತಾರೆ ಚೈತ್ರಾ. ಬಿಗ್ ಬಾಸ್ ನಂತರದಲ್ಲಿ ಚೈತ್ರಾ ಹಲವಾರು ಕಾರ್ಯಕ್ರಮಗಳಿಗೆ ನಿರೂಪಣೆ ಮಾಡುತ್ತಿದ್ದಾರೆ, ಕಾರ್ಯಕ್ರಮಗಳಿಗೆ ಅತಿಥಿಯಾಗಿ ತೆರಳುತ್ತಿದ್ದಾರೆ. ಅವರ ಕುಟುಂಬ, ಗಂಡ, ಕೆಲಸದ ಬಗ್ಗೆ ಇಲ್ಲಿದೆ ಹಲವು ವಿಚಾರಗಳು.

  ನಿರೂಪಣೆ ಮಾಡುತ್ತಲೇ ಚೈತ್ರಾ ಈವೆಂಟ್ ಮ್ಯಾನೇಜ್‌ಮೆಂಟ್ ಕಂಪನಿ ತೆರೆದರು. ಈವೆಂಟ್ ಫ್ಯಾಕ್ಟರ್ ಹೆಸರಿನಲ್ಲಿ ಈಗಾಗಲೇ ಸಾವಿರಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ಮಾಡಿದ್ದಾರೆ. ಐಷಾರಾಮಿ ಜನರಿಗೆ ಮಾತ್ರ ಅಂದುಕೊಳ್ಳಬೇಡಿ, ನಿಮ್ಮ ಬಜೆಟ್ ಹೇಳಿದರೆ, ಅದಕ್ಕೆ ತಕ್ಕಂತೆ ಕೆಲಸ ಮಾಡಿಕೊಡುತ್ತಾರೆ ಚೈತ್ರಾ. ನಟಿ ಚೈತ್ರಾ ತಂದೆ ವಾಸುದೇವನ್ ಹೋಟೆಲ್ ಉದ್ಯಮಿ. ಅವರ ಮಾವ ಮತ್ತು ಅತ್ತೆ ಒಂದು ಶಾಲೆಯನ್ನು ನಡೆಸುತ್ತಾರೆ. ಗಂಡ ಸತ್ಯ ಇವೆಂಟ್ ಮ್ಯಾನೇಜ್‌ಮೆಂಟ್‌ ಮಾಡುತ್ತಿದ್ದಾರೆ. ಒಂದು ಖಾಸಗಿ ಸಮಾರಂಭದಲ್ಲಿ ಸತ್ಯ ಮತ್ತು ಚೈತ್ರಾ ಭೇಟಿಯಾಗಿದ್ದರು. ಸತ್ಯ ಅವರು ಚೈತ್ರಾರನ್ನು ನೋಡಿ ಇಷ್ಟಪಟ್ಟು, ಚೈತ್ರಾ ತಂದೆಯ ಬಳಿ ನಿಮ್ಮ ಮಗಳನ್ನು ಮದುವೆ ಮಾಡಿಕೊಳ್ಳುತ್ತೇನೆ, ಒಪ್ಪಿಗೆ ಇದೆಯಾ? ಎಂದು ಕೇಳಿದ್ದರಂತೆ. ಆಗ ಈ ಎರಡು ಕುಟುಂಬದವರು ಒಪ್ಪಿ 2017ರಲ್ಲಿ ನವೆಂಬರ್ ತಿಂಗಳಲ್ಲಿ ಚೈತ್ರಾ-ಸತ್ಯ ಕಲ್ಯಾಣ ಮಾಡಿಸಿದ್ದಾರೆ. ಈ ಜೋಡಿ ಈಗ ಇವೆಂಟ್ ಮ್ಯಾನೇಜ್‌ಮೆಂಟ್ ಕಂಪನಿ ನಡೆಸುತ್ತಿದೆ. ಚೈತ್ರಾರ ಫೋಟೋಶೂಟ್, ಕಾರ್ಯಕ್ರಮಗಳಿಗೆ ನಿರೂಪಣೆ ಮಾಡುವುದು, ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುವುದು ಮುಂತಾದ ವಿಚಾರಗಳಿಗೆ ಸತ್ಯ ಮತ್ತು ಅವರ ಮನೆಯವರು ತುಂಬ ಒಳ್ಳೆಯ ಪ್ರೋತ್ಸಾಹ ನೀಡುತ್ತಾರಂತೆ.

  ಇವೆಂಟ್ ಮ್ಯಾನೇಜ್‌ಮೆಂಟ್ ಕಂಪನಿ ನಡೆಸುತ್ತಿರುವುದರ ಮೂಲಕ ಚೈತ್ರಾ ಎಷ್ಟೋ ಜನ ಮಹಿಳೆಯರಿಗೆ ಕೆಲಸ ನೀಡುತ್ತಿದ್ದಾರೆ. ಈಗಲೂ ಕೂಡ ಗೃಹಿಣಿಯರಿಗೆ ಉದ್ಯೋಗ ನೀಡಲು ರೆಡಿಯಿದ್ದಾರಂತೆ. ಏಕೆಂದರೆ ಪಿಯುಸಿ ನಂತರ ಅವರು ಶಿಕ್ಷಣಕ್ಕೆ ಹೊರತಾಗಿ ತಂದೆಯ ಬಳಿ ಹಣವನ್ನು ಪಡೆದಿಲ್ಲ. ಸ್ವಾವಲಂಭಿಯಾಗಿ ಬದುಕಿರುವ ಚೈತ್ರಾ ಸ್ವಂತ ದುಡಿಮೆಯಿಂದ ಜಾಗ್ವಾರ್ ಕಾರ್ ಕೂಡ ಖರೀದಿ ಮಾಡಿದ್ದಾರೆ.

  ಮೊದಲಿನಿಂದಲೂ ಚೈತ್ರಾ ಸ್ವಾವಲಂಬಿಯಾಗಿ ಬೆಳೆಯಬೇಕು ಎಂದು ಕನಸು ಕಂಡಿದ್ದರು. ಡಿಗ್ರಿ ಮುಗಿದ 1 ವರ್ಷದ ನಂತರದಲ್ಲಿ ಚೈತ್ರಾ ಮನೆಯವರ ಆಸೆ ಮೇರೆಗೆ ಮದುವೆಯಾಗಿದ್ದಾರೆ. ಈ ಜೋಡಿ ಈಗ ತುಂಬ ಖುಷಿಯಾಗಿದೆ. ಹಲವಾರು ಖಾಸಗಿ ಕಾರ್ಯಕ್ರಮಗಳಿಗೆ ಚೈತ್ರಾ ನಿರೂಪಣೆ ಮಾಡುತ್ತಿದ್ದಾರೆ. ಅವರು ಬಿಗ್ ಬಾಸ್ ಮನೆಗೆ ಎಂಟ್ರಿ ನೀಡುವ ವೇಳೆಯಲ್ಲಿ ಎನ್‌ಆರ್‌ಐ ವೆಡ್ಡಿಂಗ್ ಪ್ರಾಜೆಕ್ಟ್ ಒಪ್ಪಿಕೊಂಡಿದ್ದರು. ಆಸ್ಟ್ರೇಲಿಯಾದ ಹುಡುಗ, ಕ್ಯಾಲಿಫೋರ್ನಿಯಾ ಹುಡುಗಿ ಮದುವೆಯನ್ನು ಪಂಜಾಬಿ-ತಮಿಳು ಸಂಪ್ರದಾಯದ ರೀತಿಯಲ್ಲಿ ಮಾಡಬೇಕಾಗಿತ್ತು. ದುಬೈನಲ್ಲಿ ಒಂದು ಶೋ ನಿರೂಪಣೆ ಮಾಡಿದ್ದಾರೆ. ಫಿಲ್ಮ್‌ಫೇರ್ ಮತ್ತು ಮಿರ್ಚಿ ಮ್ಯೂಸಿಕ್ ಶೋನಲ್ಲಿ ನಿರೂಪಣೆ ಮಾಡುವ ಅವಕಾಶ ದಕ್ಕಿಸಿಕೊಂಡಿದ್ದಾರೆ ಚೈತ್ರಾ.

  Actress Chaitra Vasudevan Life Style

  ಹಲವಾರು ದೊಡ್ಡ ದೊಡ್ಡ ಬ್ರ್ಯಾಂಡ್‌ಗಳ ಜಾಹೀರಾತು ಚೈತ್ರಾರನ್ನು ಅರಸಿ ಬರುತ್ತಿದೆ. ನಿರೂಪಕರು ಸ್ವಲ್ಪ ದಿನಗಳ ನಂತರ ಸಿನಿಮಾಕ್ಕೆ ಹೋಗ್ತಾರೆ, ಅದರಂತೆ ಚೈತ್ರಾ ಅವರು ಕೂಡ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಾರೆ ಎಂಬ ಪ್ರಶ್ನೆಯನ್ನು ಅವರಿಗೆ ಪದೇ ಪದೇ ಕೇಳಲಾಗುತ್ತಿದೆಯಂತೆ. ಹೀಗಾಗಿ ಅವರು ಮುಂದಿನ ದಿನಗಳಲ್ಲಿ ಸಿನಿಮಾಗಳನ್ನು ಒಪ್ಪಿಕೊಳ್ಳಲಿದ್ದಾರೆ. ಎರಡು ಆಲ್ಬಂ ಹಾಡುಗಳಿಗೆ ಚೈತ್ರಾ ನಟಿಸಲು ಆಫರ್ ಬಂದಿದೆ. ಒಳ್ಳೆಯ ತಂಡ ಈ ಆಫರ್‌ನ್ನು ಚೈತ್ರಾರಿಗೆ ನೀಡಲಾಗಿದೆಯಂತೆ. ಆದರೆ ಚೈತ್ರಾ ಇನ್ನು ಈ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಏಕೆಂದರೆ ನಿರೂಪಣೆಗೆ ಹೆಚ್ಚಿನ ಪ್ರಾಶಸ್ತ್ಯ ಕೊಡುತ್ತಿದ್ದಾರೆ. ನಿರೂಪಣೆಯಲ್ಲಿ ತುಂಬ ದೊಡ್ಡಮಟ್ಟದಲ್ಲಿ ಯಶಸ್ಸು ಗಳಿಸಬೇಕೆಂಬ ಆಸೆ ಚೈತ್ರಾರಿಗಿದೆ.

  English summary
  Actress Chaitra Vasudevan life style, hear is more details about her acting career and personal life.
  Thursday, April 21, 2022, 9:28
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X