India
  For Quick Alerts
  ALLOW NOTIFICATIONS  
  For Daily Alerts

  ಮೊದಲ ಮಗುವಿನ ನಿರೀಕ್ಷೆಯಲ್ಲಿ ನಟಿ ಮಾನಸ ಜೋಷಿ!

  By ಪ್ರಿಯಾ ದೊರೆ
  |

  ಸೂಕ್ಷ್ಮ ಪಾತ್ರಗಳನ್ನು ಮಾಡುವ ನಟಿ ಮಾನಸ ಜೋಷಿ ಅವರು ಕಿರುತೆರೆ ಹಾಗೂ ಸಿನಿಮಾಗಳಲ್ಲಿ ನಟಿಸುತ್ತಾರೆ. 'ಬಹುಪರಾಕ್' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ಮಾನಸ ಜೋಷಿ ಅವರು ಈಗ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

  ಕಥಕ್ ಡ್ಯಾನ್ಸರ್ ಆಗಿರುವ ಮಾನಸ ಜೋಷಿ ಇತ್ತೀಚೆಗಷ್ಟೇ ಡ್ಯಾನ್ಸ್‌ ಶಾಲೆಯನ್ನು ತೆರೆದಿದ್ದಾರೆ. ವಿದೇಶದಲ್ಲಿ ನೆಲೆಸಿರುವವರಿಗೆ ಆನ್‌ ಲೈನ್‌ ಕ್ಲಾಸ್‌ ತೆಗೆದುಕೊಳ್ಳುತ್ತಾಳೆ. ಧಾರಾವಾಹಿ ಲೋಕದಲ್ಲಿ ಹೆಚ್ಚಾಗಿ ದೇವಿ ಪಾತ್ರದಲ್ಲಿ ಮಾನಸ ಜೋಷಿ ಕಾಣಿಸಿಕೊಂಡಿದ್ದಾರೆ.

  ಗಂಡು ಮಗುವಿಗೆ ಜನ್ಮ ನೀಡಿದ ಕಿರುತೆರೆ ನಟಿ ಅಮೃತಾ ನಾಯ್ಡು!ಗಂಡು ಮಗುವಿಗೆ ಜನ್ಮ ನೀಡಿದ ಕಿರುತೆರೆ ನಟಿ ಅಮೃತಾ ನಾಯ್ಡು!

  ರಂಗಭೂಮಿಯಲ್ಲಿ ಸಕ್ರಿಯರಾಗಿರುವ ಮಾನಸ ಜೋಷಿ ಮುಂಬೈನಲ್ಲಿ ಅನುಪಮ್ ಖೇರ್ ಅವರ ಆಕ್ಟರ್ ಪ್ರಿಪೇರ್ಸ್ ನಿಂದ ಡಿಪ್ಲೊಮಾ ಪಡೆದಿದ್ದಾರೆ. ರಂಗಭೂಮಿಯಲ್ಲಿ ಮೊದಲು ಗುರುತಿಸಿಕೊಂಡು ಬಳಿಕ ಸಿನಿಮಾ ರಂಗಕ್ಕೆ ಎಂಟ್ರಿಕೊಟ್ಟರು.

  ಕಿರುತೆರೆ To ಬಾಲಿವುಡ್: ಮಂಗಳ ಗೌರಿ ಮದುವೆ ಖ್ಯಾತಿಯ ಕೃತಿ ಬೆಟ್ಟದ್ ಜರ್ನಿಯೇ ರೋಚಕ! ಕಿರುತೆರೆ To ಬಾಲಿವುಡ್: ಮಂಗಳ ಗೌರಿ ಮದುವೆ ಖ್ಯಾತಿಯ ಕೃತಿ ಬೆಟ್ಟದ್ ಜರ್ನಿಯೇ ರೋಚಕ!

  ಬಹುಮುಖ ಪ್ರತಿಭೆ ಮಾನಸ!

  ಕಥಕ್ ಡ್ಯಾನ್ಸರ್ ಆಗಿರುವ ಇವರು ಸ್ಕೂಲ್ ಹಾಗೂ ಕಾಲೇಜ್‌ನಲ್ಲಿರುವಾಗಲೇ ತುಂಬಾ ಆಕ್ಟಿವ್‌ ಆಗಿದ್ದರು. ಸ್ಪೋರ್ಟ್ ಅನ್ನು ಇಷ್ಟಪಡುತ್ತಿದ್ದ ಮಾನಸ ಜೋಷಿ ವಾಲಿಬಾಲ್, ಬಾಸ್ಕೆಟ್ ಬಾಲ್ ಸೇರಿದಂತೆ ಹಲವು ಕ್ರೀಡೆಗಳಲ್ಲಿ ಸಕ್ರಿಯರಾಗಿದ್ದರು. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದ ಬಳಿಕ ಮುಂಬೈನಲ್ಲಿ ಆಕ್ಟಿಂಗ್‌ನಲ್ಲಿ ಡಿಪ್ಲೊಮಾ ಪಡೆದರು. ಎಲೆಕ್ಟ್ರಾನಿಕ್ಸ್ ಮೀಡಿಯಾದಲ್ಲಿ ಮಾಸ್ಟರ್ಸ್ ಮಾಡಿದ್ದು, ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಚಿನ್ನದ ಪದಕವನ್ನು ಪಡೆದಿದ್ದಾರೆ. ರಂಗಭೂಮಿ, ಕಿರುತೆರೆ ಹಾಗೂ ಸಿನಿ ಕ್ಷೇತ್ರದಲ್ಲಿ ಮಾನಸ ಸಕ್ರಿಯರಾಗಿದ್ದು, ಪ್ರತಿಭಾವಂತ ನಟಿ.

  ದೇವಿ ಪಾತ್ರಗಳ ಮೂಲಕ ಖ್ಯಾತಿ!

  ಮಾನಸ ಜೋಷಿ ಕನ್ನಡ ಸಿನಿ ಪ್ರೇಕ್ಷಕರಿಗೆ ಪರಿಚಯವಾಗಿದ್ದೇ 'ಬಹುಪರಾಕ್' ಚಿತ್ರದ ಮೂಲಕ. ಇನ್ನು ಕಿರುತೆರೆಯಲ್ಲಿ ಹೆಚ್ಚಾಗಿ ದೇವಿ ಪಾತ್ರಗಳಲ್ಲೇ ನಟಿಸಿರುವ ಮಾನಸ ಜೋಷಿ, ಶ್ರೀ, ಮಹಾದೇವಿ ಸೇರಿದಂತೆ ಹಲವು ಸೀರಿಯಲ್‌ಗಳಲ್ಲಿ ನಟಿಸಿದ್ದಾರೆ. ಹೆಚ್ಚು ದೇವಿ ಪಾತ್ರಗಳಲ್ಲೇ ಕಾಣಿಸಿಕೊಂಡಿದ್ದು, ಇತರೆ ಪಾತ್ರಗಳಲ್ಲಿ ನಟಿಸುವ ಇಂಗಿತವನ್ನು ಕೂಡ ವ್ಯಕ್ತಪಡಿಸಿದ್ದಾರೆ. ಇನ್ನು ಮಾನಸ ಜೋಷಿ ಅವರು 'ಮಂಗಳ ಗೌರಿ ಮದುವೆ' ಧಾರಾವಾಹಿಯಲ್ಲಿ ಖಳನಾಯಕಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

  ಕಲಾತ್ಮಕ ಸಿನಿಮಾಗಳಲ್ಲಿ ಮಿಂಚಿದ ನಟಿ!

  ಮಾನಸ ಜೋಷಿ ಅವರು ಹೆಚ್ಚು ಕಲಾತ್ಮಕ ಚಿತ್ರಗಳಲ್ಲಿ ನಟಿಸಿದ್ದು, 'ಲಾಸ್ಟ್ ಬಸ್', 'ಕಿರಗೂರಿನ ಗಯ್ಯಾಳಿಗಳು', 'ಯಶೋಗಾಥೆ', 'ದೇವರ ನಾಡಲ್ಲಿ', 'ಹಜ್ಜ್' ಸಿನಿಮಾಗಳಲ್ಲಿ ನಟಿಸಿದ್ದಾರೆ. ಮಾನಸ ಜೋಷಿಗೆ ಅವಕಾಶ ಸಿಕ್ಕರೆ ಕಮರ್ಷಿಯಲ್ ಚಿತ್ರಗಳಲ್ಲಿಯೂ ನಾಯಕಿಯಾಗಿ ನಟಿಸಲು ಆಸೆಯನ್ನು ಹೊಂದಿದ್ದಾರೆ. ಮುಂದಿನ ದಿನಗಳಲ್ಲಾದರೂ ಮಾನಸ ಜೋಷಿ ಅವರ ಆಸೆ ನೆರವೇರುತ್ತದೆಯಾ ನೋಡಬೇಕಿದೆ. ಸಿನಿ ಜರ್ನಿಯಲ್ಲಿ ಸಾಕಷ್ಟು ಪ್ರಯೋಗಗಳನ್ನು ಮಾಡುತ್ತಾ ಮುಂದೆ ಸಾಗಿದ್ದಾರೆ.

  ಮೊದಲ ಮಗುವಿನ ನಿರೀಕ್ಷೆಯಲ್ಲಿ ಮಾನಸ ಜೋಷಿ!

  ಕಥಕ್ ಡ್ಯಾನ್ಸರ್ ಆಗಿರುವ ಮಾನಸ ಸಿನಿಮಾಗಳಿಗೆ ಕೊರಿಯೋಗ್ರಫಿ ಕೂಡ ಮಾಡಿದ್ದಾರೆ. ಈಗಾಗಲೇ ಸುಮಾರ 500ಕ್ಕೂ ಹೆಚ್ಚು ಕಡೆ ಹಾಗೂ ಹೆಸರಾಂತ ವೇದಿಕೆಗಳಲ್ಲಿ ನೃತ್ಯ ಪ್ರದರ್ಶನ ನೀಡಿದ್ದಾರೆ. ಇದಲ್ಲದೇ ಐದು ವರ್ಷ ಕರ್ನಾಟಕ‌ ಶಾಸ್ತ್ರೀಯ ಸಂಗೀತವನ್ನೂ ಅಭ್ಯಾಸ ಮಾಡಿದ್ದಾರೆ. ಕಥಕ್ ಸ್ಟುಡಿಯೋ ಎಂಬ ಸಂಸ್ಥೆಯನ್ನು ಹುಟ್ಟುಹಾಕಿದ್ದಾರೆ. ಸದ್ಯ ತಾವು ಗರ್ಭಿಣಿಯಾಗಿದ್ದು, ಈ ಸಂತಸವನ್ನು ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್‌ ಮಾಡಿದ್ದಾರೆ. ತಮ್ಮ ಬೇಬಿ ಬಂಪ್ ಫೋಟೊ ಜೊತೆಗೆ ಸಂತಸವನ್ನು ಹಂಚಿಕೊಂಡಿದ್ದಾರೆ.

  English summary
  Actress Manasa Joshi Is Pregnant, She Share Good News In Social Media, Know More
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X