»   » ಕನ್ನಡ ಕಿರುತೆರೆಯಲ್ಲಿ 'ಸ್ವಾತಿ ಮುತ್ತು' ಬೆಡಗಿ ಮೀನಾ!

ಕನ್ನಡ ಕಿರುತೆರೆಯಲ್ಲಿ 'ಸ್ವಾತಿ ಮುತ್ತು' ಬೆಡಗಿ ಮೀನಾ!

Posted By:
Subscribe to Filmibeat Kannada

ಕ್ರೇಜಿ ಸ್ಟಾರ್ ರವಿಚಂದ್ರನ್ ಅಭಿನಯದ 'ಪುಟ್ನಂಜ' ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಹೊಸ ಸೆನ್ಸೇಷನ್ ಕ್ರಿಯೇಟ್ ಮಾಡಿದ ಬೆಡಗಿ ಮೀನಾ.

'ಚೆಲುವ', 'ಮೊಮ್ಮಗ', 'ಶ್ರೀ ಮಂಜುನಾಥ', 'ಸಿಂಹಾದ್ರಿಯ ಸಿಂಹ', 'ಗ್ರಾಮ ದೇವತೆ', 'ಸ್ವಾತಿ ಮುತ್ತು', 'ಮೈ ಆಟೋಗ್ರಾಫ್' ಸೇರಿದಂತೆ ಅನೇಕ ಕನ್ನಡ ಚಲನಚಿತ್ರಗಳಲ್ಲಿ ಸ್ಟಾರ್ ನಟರ ಜೊತೆ ನಟಿಸಿದ ಬಹುಭಾಷಾ ನಟಿ ಮೀನಾ ಇದೀಗ ಕನ್ನಡ ಕಿರುತೆರೆಗೆ ಕಾಲಿಟ್ಟಿದ್ದಾರೆ. [ಕನ್ನಡ ಕಿರುತೆರೆಯಲ್ಲಿ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ!]

ಹಾಗಂತ ನಟಿ ಮೀನಾ ಧಾರಾವಾಹಿಯಲ್ಲಿ ನಟಿಸುತ್ತಿಲ್ಲ. ಬದಲಾಗಿ, ರಿಯಾಲಿಟಿ ಶೋ ಒಂದರಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಿದ್ದಾರೆ. ಮುಂದೆ ಓದಿ....

ಯಾವುದು ಆ ರಿಯಾಲಿಟಿ ಶೋ?

ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ 'ಡ್ಯಾನ್ಸ್ ಡ್ಯಾನ್ಸ್' ರಿಯಾಲಿಟಿ ಶೋನಲ್ಲಿ ವಿಶೇಷ ಅತಿಥಿ ಆಗಿ ನಟಿ ಮೀನಾ ಭಾಗವಹಿಸಿದ್ದಾರೆ. [ಡ್ಯಾನ್ಸ್ ಶೋನ ಮಧ್ಯದಲ್ಲೇ ಖುಷ್ಬೂ ಎದ್ದು ಹೋಗಿದ್ದು ಯಾಕೆ]

ಮೀನಾ ಜೊತೆ ಸುಧಾರಾಣಿ ಕೂಡ ಇದ್ದಾರೆ

ನಟಿ ಮೀನಾ ಜೊತೆಗೆ ಕನ್ನಡ ಚಿತ್ರರಂಗದ ಜನಪ್ರಿಯ ನಾಯಕಿ ಸುಧಾರಾಣಿ ಕೂಡ ಈ ವಾರದ 'ದಿಗ್ಗಜರ ರೌಂಡ್'ನಲ್ಲಿ ಅತಿಥಿಯಾಗಿ 'ಡ್ಯಾನ್ಸ್ ಡ್ಯಾನ್ಸ್' ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ವಿಶೇಷ. [100 ಅಡಿ ಎತ್ತರದ ವೇದಿಕೆಯಲ್ಲಿ 'ಡ್ಯಾನ್ಸ್ ಡ್ಯಾನ್ಸ್' ಶೋ]

ರವಿಚಂದ್ರನ್ ರನ್ನ ನೆನೆದ ಮೀನಾ!

''ಕನ್ನಡಿಗರು ನನಗೆ ನೀಡಿದ ಪ್ರೋತ್ಸಾಹಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಕ್ರೇಜಿ ಸ್ಟಾರ್ ರವಿಚಂದ್ರನ್ ಜೊತೆ ಕೆಲಸ ಮಾಡಿರುವುದು ನನ್ನ ಹೆಮ್ಮೆ'' ಅಂತ 'ಡ್ಯಾನ್ಸ್ ಡ್ಯಾನ್ಸ್' ಕಾರ್ಯಕ್ರಮದಲ್ಲಿ ಹಳೇ ನೆನಪುಗಳಿಗೆ ಜಾರಿದ್ದಾರೆ ನಟಿ ಮೀನಾ.

ಡಾ.ರಾಜ್ ಕುಮಾರ್ ಅಂದ್ರೆ ಇಷ್ಟ!

ಕನ್ನಡದ ಹಲವು ಹಿಟ್ ಸಿನಿಮಾಗಳಲ್ಲಿ ಕಾಣಿಸಿಕೊಂಡಿರುವ ನಟಿ ಮೀನಾಗೆ ಡಾ.ರಾಜ್ ಕುಮಾರ್ ಅಂದ್ರೆ ಪಂಚಪ್ರಾಣವಂತೆ.

ಅರಳುವ ಹೂವುಗಳೇ ಆಲಿಸಿರಿ....

ಮಾತಿನ ಜೊತೆಗೆ 'ಡ್ಯಾನ್ಸ್ ಡ್ಯಾನ್ಸ್' ವೇದಿಕೆಯಲ್ಲಿ 'ಅರಳುವ ಹೂವುಗಳೇ...' ಹಾಡನ್ನೂ ಹಾಡಿದ್ದಾರೆ ನಟಿ ಮೀನಾ.

ಮೀನಾಗೆ ಸುಧಾರಾಣಿ ಡಬ್ಬಿಂಗ್!

ಕನ್ನಡದಲ್ಲಿ ನಟಿ ಮೀನಾ ರವರಿಗೆ ವಾಯ್ಸ್ ಡಬ್ ಮಾಡ್ತಾಯಿದ್ದದ್ದು ನಟಿ ಸುಧಾರಾಣಿ. ಈ ಬಗ್ಗೆ ಸುಧಾರಾಣಿ 'ಡ್ಯಾನ್ಸ್ ಡ್ಯಾನ್ಸ್' ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ.

ಈ ವಾರದ 'ಡ್ಯಾನ್ಸ್ ಡ್ಯಾನ್ಸ್' ವಿಶೇಷ

'ಡ್ಯಾನ್ಸ್ ಡ್ಯಾನ್ಸ್' ಕಾರ್ಯಕ್ರಮದಲ್ಲಿ ಈ ವಾರ 'ದಿಗ್ಗಜರ ವಿಶೇಷ'. ಡಾ.ರಾಜ್ ಕುಮಾರ್, ಡಾ.ವಿಷ್ಣುವರ್ಧನ್, ಶಂಕರ್ ನಾಗ್, ರವಿಚಂದ್ರನ್ ಹಾಡುಗಳಿಗೆ ಸ್ಪರ್ಧಿಗಳು ಡ್ಯಾನ್ಸ್ ಮಾಡಬೇಕು. ಇದಕ್ಕೆ ವಿಶೇಷ ನಿರ್ಣಾಯಕರಾಗಿ ಮೀನಾ ಮತ್ತು ಸುಧಾರಾಣಿ ಬಂದಿದ್ದಾರೆ.

ಕಾರ್ಯಕ್ರಮ ಪ್ರಸಾರ ಯಾವಾಗ?

'ಮೀನಾ ಮತ್ತು ಸುಧಾರಾಣಿ ಡ್ಯಾನ್ಸ್ ಡ್ಯಾನ್ಸ್ ವಿಶೇಷ' ಬುಧವಾರ (24/02/16) ರಿಂದ ಸುವರ್ಣ ವಾಹಿನಿಯಲ್ಲಿ ರಾತ್ರಿ 7.30ಕ್ಕೆ ಪ್ರಸಾರವಾಗಲಿದೆ.

English summary
Actress Meena and Sudharani has taken part in Kannada Entertainment Channel Suvarna's popular show 'Dance Dance' as special guest. The show will telecast on Wednesday, February 24th 7.30 pm.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada