For Quick Alerts
  ALLOW NOTIFICATIONS  
  For Daily Alerts

  ಯೂಟ್ಯೂಬ್ ಚಾನೆಲ್ ಆರಂಭಿಸಿದ ಕಿರುತೆರೆ ನಟಿ ಮೇಘಶ್ರೀ ಗೌಡ

  By ಪ್ರಿಯಾ ದೊರೆ
  |

  ಸಕ್ಕರೆ ನಾಡು ಮಂಡ್ಯದ ಸುಂದರಿ ಮೇಘಶ್ರೀ ಗೌಡ ಕಿರುತೆರೆಗೆ ಹೊಸ ನಟಿಯೇನು ಅಲ್ಲ. ಸಾಕಷ್ಟು ಧಾರಾವಾಹಿಗಳಿಗೆ ಬಣ್ಣ ಹಚ್ಚಿದ್ದಾರೆ. ಹೆಚ್ಚು ವಿಲನ್ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

  ಸತ್ಯ ಧಾರಾವಾಹಿಯಲ್ಲಿ ನಿಶಾ ಪಾತ್ರದಲ್ಲಿ ಗೆಸ್ಟ್ ರೋಲ್ ಮಾಡಿದ್ದರು. ಸುಹಾಸ್ ಸಹೋದರಿ ಪಾತ್ರದಲ್ಲಿ ಕಾಣಿಸಿಕೊಂಡ ಇವರು, ಕಾರ್ತಿಕ್ ನನ್ನು ಮದುವೆಯಾಗುವ ಆಸೆಯನ್ನು ಹೊಂದಿರುತ್ತಾರೆ. ಆದರೆ ಕಾರ್ತಿಕ್ ಸತ್ಯ ಮದುವೆಯಾದ ಕಾರಣ ನಿಶಾ ಸೀರಿಯಲ್ ನಿಂದ ಕಣ್ಮರೆಯಾಗಿದ್ದಾರೆ.

  ಮಂಡ್ಯದ ಬೆಡಗಿ ಮೇಘಶ್ರೀ ಅವರು ಸದಾ ಇನ್ ಸ್ಟಾಗ್ರಾಂನಲ್ಲಿ ಆಕ್ಟೀವ್ ಆಗಿರುತ್ತಾರೆ. ಫೋಟೋಶೂಟ್‌ಗಳನ್ನು ಮಾಡಿಸಿ ಅಪ್ ಲೋಡ್ ಮಾಡುತ್ತಿರುತ್ತಾರೆ. ಇದೀಗ ಅವರು ಯೂಟ್ಯೂಬ್ ಚಾನೆಲ್ ಅನ್ನು ಕೂಡ ತೆರೆದಿದ್ದಾರೆ.

  ಕಿರುತರೆಯಲ್ಲಿ ಸಕ್ರಿಯ

  ಕಿರುತರೆಯಲ್ಲಿ ಸಕ್ರಿಯ

  ಬಾಲ ನಟಿಯಾಗಿ ಮಕ್ಕಳ ಡಂಗುರ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ಇವರು ಬಣ್ಣದ ಲೋಕಕ್ಕೆ ಹೊಸಬರೇನಲ್ಲ. ಮೇಘಶ್ರೀ ಅವರು ಚರಣದಾಸಿ ಧಾರಾವಾಹಿಯಲ್ಲಿ ನಾಯಕಿ ದೀಪಾಳ ಅಕ್ಕನ ಪಾತ್ರದಲ್ಲಿ ಅಭಿನಯಿಸಿದ್ದರು. ಈ ಧಾರಾವಾಹಿಯ ಮೂಲಕ ಕಿರುತರೆಗೆ ಎಂಟ್ರಿ ಕೊಟ್ಟಿದ್ದರು. ಬಳಿಕ ಮೇಘಶ್ರೀ ಮಯೂರಿ ಧಾರಾವಾಹಿಯಲ್ಲಿ ಚಾರುಲತಾ ಎಂಬ ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದರಲ್ಲೂ ಸೈ ಎನಿಸಿಕೊಂಡಿದ್ದರು. ನಂತರ ಪದ್ಮಾವತಿ ಧಾರಾವಾಹಿಯಲ್ಲಿ ನಾಯಕ ಸಾಮ್ರಾಟ್ ಅಕ್ಕನಾಗಿ ನಟಿಸಿದ್ದರು. ಇದಾದ ಬಳಿ ಬ್ರೇಕ್ ತೆಗೆದುಕೊಂಡಿದ್ದ ಅವರು ಸತ್ಯ ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದರು.

  ವಿಲನ್ ಪಾತ್ರ ಇಷ್ಟವಂತೆ

  ವಿಲನ್ ಪಾತ್ರ ಇಷ್ಟವಂತೆ

  ಮಧುಬಾಲಾ, ಗುಂಡ್ಯಾನ ಹೆಂಡ್ತಿ, ಮೈನಾ, ದೇವತೆ, ಅವನು ಮತ್ತು ಶ್ರಾವಣಿ, ಜಸ್ಟ್ ಮಾತ್ ಮಾತಲ್ಲಿ, ಜೀವನ ಚೈತ್ರ ಧಾರಾವಾಹಿಗಳಲ್ಲಿ ನಟಿಸಿರುವ ಮೇಘಶ್ರೀ ಅವರು ಹೆಚ್ಚು ಬಣ್ಣ ಹಚ್ಚಿದ್ದು ವಿಲನ್ ಪಾತ್ರಕ್ಕೆ. ಇದು ಮೇಘಶ್ರೀ ಅವರಿಗೂ ಇಷ್ಟವಂತೆ. ಎಲ್ಲಾ ಧಾರಾವಾಹಿಗಳಲ್ಲೂ ನೆಗೆಟಿವ್ ರೋಲ್ ನಲ್ಲೇ ಕಾಣಿಸಿಕೊಂಡ ಮೇಘಶ್ರೀ ಅವರು ಪದ್ಮಾವತಿ ಧಾರಾವಾಹಿಯಲ್ಲಿ ಪಾಸಿಟಿವ್ ರೋಲ್ ನಲ್ಲಿ ನಟಿಸಿದ್ದರು. ಧಾರಾವಾಹಿ ಹಾಗೂ ಸಿನಿಮಾ ಎರಡರಲ್ಲಿಯೂ ಅಭಿನಯ ಮಾಡುತ್ತಾ ಬರುತ್ತಿರುವ ಮೇಘಶ್ರೀ ಪಾತ್ರಗಳ ನಿರೀಕ್ಷೆಯಲ್ಲಿದ್ದಾರೆ.

  ನಾಯಕಿಯಾಗಿಯೂ ನಟನೆ

  ನಾಯಕಿಯಾಗಿಯೂ ನಟನೆ

  ನಟಿ ಮೇಘಶ್ರೀ 'ಬ್ಯೂಟಿಫುಲ್ ಮನಸ್ಸುಗಳು' ಹಾಗೂ 'ಮುಗುಳು ನಗೆ' ಸಿನಿಮಾದ ಮೂಲಕ ಕನ್ನಡ ಸಿನಿಪ್ರಿಯರಿಗೆ ಚಿರಪರಿಚಿತರು. ಈಗಾಗಲೇ ಕನ್ನಡದಲ್ಲಿ ಹತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿರುವ ಮೇಘಶ್ರೀ ಕಿರುತೆರೆಯಲ್ಲಿ ಸೂಪರ್ ಸ್ಟಾರ್ ಆಗಿ ಮಿಂಚುತ್ತಿದ್ದಾರೆ. 'ಸ್ಟೇಟ್ ಮೆಂಟ್' ಎನ್ನುವ ಚಿತ್ರದಲ್ಲಿ ಸ್ಪೆಷಲ್ ಸಾಂಗ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಕಡ್ಡಿಪುಡಿ ಸಿನಿಮಾದಲ್ಲಿ ಶಿವರಾಜ್ ಕುಮಾರ್ ತಂಗಿಯಾಗಿ ಮಿಂಚಿದ್ದಾರೆ. ಮುಗುಳುನಗೆಯಲ್ಲಿ ಗಣೇಶ್ ತಂಗಿಯಾಗಿ ನಟಿಸಿದ್ದಾರೆ. ಸಂತು ಸ್ಟ್ರೈಟ್ ಫಾರ್ವರ್ಡ್ ನಲ್ಲಿ ರಾಧಿಕಾ ಪಂಡಿತ್ ಸ್ನೇಹಿತೆಯಾಗಿ ಕಾಣಿಸಿಕೊಂಡಿದ್ದರು. ಪಂಟ್ರು ಸಿನಿಮಾದಲ್ಲಿ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. ಮೂಕಜೀವ ಎನ್ನುವ ಕಲಾತ್ಮಕ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ. ಮುಗಿಲ್ ಪೇಟೆ ಚಿತ್ರದಲ್ಲಿ ಮನೋರಂಜನ್ ರವಿಚಂದ್ರನ್ ಜೊತೆಗೆ ತೆರೆ ಹಂಚಿಕೊಂಡಿದ್ದಾರೆ.

  ತಮ್ಮದೇ ಯೂಟ್ಯೂಬ್ ಚಾನೆಲ್

  ತಮ್ಮದೇ ಯೂಟ್ಯೂಬ್ ಚಾನೆಲ್

  ಇನ್ನು ಮೇಘಶ್ರೀ ಅವರು ಕಿರುತೆರೆ ಹಾಗೂ ಹಿರಿತೆರೆಯಲ್ಲಿ ಸಕ್ರಿಯರಾಗಿದ್ದರೂ, ಇದರ ಜೊತೆಗೆ ಸೋಶಿಯಲ್ ಮೀಡಿಯಾದಲ್ಲೂ ಆಕ್ಟಿವ್ ಆಗಿರುತ್ತಾರೆ. ಸಾಕಷ್ಟು ಫೋಟೋಶೂಟ್ ಗಳನ್ನು ಮಾಡಿಸುತ್ತಿರುತ್ತಾರೆ. ಇನ್ನು ಕಳೆದ ಎರಡು ತಿಂಗಳ ಹಿಂದೆ ಯೂಟ್ಯೂಬ್ ಚಾನೆಲ್ ಅನ್ನು ಕೂಡ ತೆರೆದಿದ್ದಾರೆ. ಇದರಲ್ಲಿ ಮೇಕಪ್, ಶಾಪಿಂಗ್, ಫೊಟೋಶೂಟ್, ಹೇರ್ ಕಟ್ ಸೇರಿದಂತೆ ಹಲವು ವಿಚಾರಗಳ ಬಗ್ಗೆ ವೀಡಿಯೋ ಮಾಡಿ ಶೇರ್ ಮಾಡಿದ್ದಾರೆ. ಇನ್ನು ಮೇಘಶ್ರೀ ಅವರು ಉತ್ತಮ ಪಾತ್ರಗಳ ನಿರೀಕ್ಷೆಯಲ್ಲಿದ್ದಾರೆ.

  English summary
  Actress Meghashree serial journey and her youtube channel. Here is more details
  Friday, November 4, 2022, 18:44
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X