India
  For Quick Alerts
  ALLOW NOTIFICATIONS  
  For Daily Alerts

  ನಟ ರೋಹಿತ್ ಸೇಠಿಯಾ ವಿರುದ್ಧ ಹಲ್ಲೆ, ಕೊಲೆ ಬೆದರಿಕೆ, ಅಕ್ರಮ ಸಂಬಂಧದ ಆರೋಪ

  |

  ಹಿಂದಿ ಟಿವಿ ಲೋಕದ ಜನಪ್ರಿಯ ನಟ ರೋಹಿತ್ ಸೇಠಿಯಾ ವಿರುದ್ಧ ಹಲ್ಲೆ ಹಾಗೂ ಕೊಲೆ ಬೆದರಿಕೆ ಆರೋಪ ಕೇಳಿ ಬಂದಿದೆ.

  ಜನಪ್ರಿಯ 'ಯೇ ರಿಶ್ತಾ ಕ್ಯಾ ಕೆಹಲಾತಾ ಹೈ' ಧಾರಾವಾಹಿಯಲ್ಲಿ ನಟಿಸುತ್ತಿರುವ ನಟ ರೋಹಿತ್ ಸೇಠಿಯಾ ಅದೇ ಧಾರಾವಾಹಿಯಲ್ಲಿ ನಟಿಸುತ್ತಿರುವ ನಿಶಾ ರಾವಲ್ ಅವರೊಟ್ಟಿಗೆ ಅಕ್ರಮ ಸಂಬಂಧದಲ್ಲಿದ್ದಾರೆಂದು ಸ್ವತಃ ನಟಿಯ ಪತಿಯೇ ಆರೋಪ ಮಾಡಿದ್ದು, ರೋಹಿತ್ ವಿರುದ್ಧವೂ ದೂರು ನೀಡಿದ್ದಾರೆ.

  ಈ ಬಗ್ಗೆ ಇಂದು ಸುದ್ದಿಗೋಷ್ಠಿ ನಡೆಸಿದ ನಟಿ ನಿಶಾ ರಾವಲ್ ಪತಿ ಕರಣ್ ಮೆಹ್ರಾ, ''ನನ್ನ ಸ್ವಂತದ ಮನೆಯಲ್ಲಿ ನನ್ನ ಪತ್ನಿ ನಿಶಾ ಬೇರೆಯವನೊಬ್ಬನೊಟ್ಟಿಗೆ ಎಂಜಾಯ್ ಮಾಡುತ್ತಿದ್ದಾಳೆ. ನನ್ನ ಮನೆಯೊಳಕ್ಕೆ ನನ್ನನ್ನು ಪ್ರವೇಶಿಸಲು ಸಹ ಬಿಡುತ್ತಿಲ್ಲ'' ಎಂದಿದ್ದಾರೆ.

  ನಿಶಾ ತಾನು 'ಸಿಂಗಲ್ ಮದರ್' ಎಂದು ಫೋಸು ನೀಡುತ್ತಿದ್ದಾರೆ ಆದರೆ ಆಕೆ ನನ್ನ 4 ಬಿಎಚ್‌ಕೆ ಐಶಾರಾಮಿ ಮನೆಯಲ್ಲಿ ವಾಸವಿದ್ದಾರೆ. ಕಾರು, ಲ್ಯಾಪ್‌ಟಾಪ್, ಟಿವಿ, ನನ್ನ ದಾಖಲೆಗಳು ನನ್ನಗೆ ಸೇರಿದ ಎಲ್ಲವೂ ಆ ಮನೆಯಲ್ಲಿದೆ ಅದನ್ನೆಲ್ಲ ಆಕೆ ಎಂಜಾಯ್ ಮಾಡುತ್ತಿದ್ದಾಳೆ ಆದರೆ ಹೊರ ಜಗತ್ತಿಗೆ ತಾನೇ ಕಷ್ಟಪಡುತ್ತಿರುವುದಾಗಿ ಫೋಸು ನೀಡುತ್ತಿದ್ದಾಳೆ ಎಂದಿದ್ದಾರೆ.

  ನನ್ನ ಮನೆಗೆ ನನಗೇ ಪ್ರವೇಶ ನಿರಾಕರಿಸುತ್ತಿದ್ದಾರೆ. ಕೇವಲ ಐದು ಜೊತೆ ಬಟ್ಟೆ ನೀಡಿ ನನ್ನನ್ನು ಮನೆಯಿಂದ ಹೊರಗೆ ಹಾಕಿದರು. ಕಳೆದ ಐದು ತಿಂಗಳಿಂದ ನಾನು ಸಿಕ್ಕ ಸಿಕ್ಕ ಕಡೆ ಅಲೆದಾಡುತ್ತಿದ್ದೇನೆ'' ಎಂದಿದ್ದಾರೆ.

  ''ಮೇ ತಿಂಗಳಲ್ಲಿ ನಿಶಾ ರಾವಲ್, ರೋಹಿತ್ ಸೇಠಿಯಾ ಹಾಗೂ ಲಕ್ಷ್ಮಿ ರಾವತ್ ಸೇರಿ ನನ್ನ ಮೇಲೆ ಸುಳ್ಳು ಕೇಸು ಹೊರಿಸಿದರು. ನಾನು ಕೋವಿಡ್‌ನಿಂದ ಗುಣಮುಖನಾಗುತ್ತಿದ್ದೆ ಆ ಸಮಯದಲ್ಲಿ ನನ್ನನ್ನು ಮನೆಯಿಂದ ಬಲವಂತವಾಗಿ ಹೊರಗೆ ಹಾಕಿದರು. ರೋಹಿತ್ ಸೇಠಿಯಾ ನನ್ನ ಮೇಲೆ ಹಲ್ಲೆ ಮಾಡಿದ ಆ ಘಟನೆಯನ್ನು ಲಕ್ಷ್ಮಿ ರಾವತ್ ರೆಕಾರ್ಡ್ ಮಾಡಿಕೊಂಡಳು, ಆದರೆ ನಾನು ತಿರುಗಿ ಹಲ್ಲೆ ಮಾಡಲಿಲ್ಲ. ಆದರೆ ಅವರು ಆ ವಿಡಿಯೋವನ್ನು ರಿಲೀಸ್ ಮಾಡಲಿಲ್ಲ'' ಎಂದಿದ್ದಾರೆ.

  ''ಅದೇ ದಿನ ರಾತ್ರಿ ನಿಶಾ ರಾವಲ್ ಹಾಗೂ ರೋಹಿತ್ ಸೇಠಿಯಾ ನನ್ನನ್ನು ಹಾಗೂ ನನ್ನ ಕುಟುಂಬವನ್ನು ಗುಂಡಿಟ್ಟು ಕೊಂದುಬಿಡುವುದಾಗಿ ಬೆದರಿಕೆ ಸಹ ಹಾಕಿದರು. ಆ ನಂತರವು ಹಲವು ಬಾರಿ ಕರೆ ಮಾಡಿ ನನಗೆ ಬೆದರಿಕೆ ಹಾಕಲಾಯಿತು. ಹಲವು ಬೆದರಿಕೆ ಕರೆಗಳು ಸಹ ಬಂದವು ಎಂದಿದ್ದಾರೆ.

  ತಮ್ಮ ಪತ್ನಿ ಹಾಗೂ ರೋಹಿತ್ ಸೇಠಿಯಾ ಅಕ್ರಮ ಸಂಬಂಧ ಹೊಂದಿದ್ದಾರೆ ಎಂದಿರುವ ಕರಣ್, ನನ್ನ ಬಳಿ ಇದಕ್ಕೆ ಸೂಕ್ತ ಸಾಕ್ಷ್ಯಗಳಿರಲಿಲ್ಲವಾದ್ದರಿಂದ ಈ ಬಗ್ಗೆ ನಾನು ಇಷ್ಟು ದಿನ ಮಾತನಾಡಿರಲಿಲ್ಲ. ಆದರೆ ಈಗ ನನಗೆ ಸರಿಯಾದ ಸಾಕ್ಷಿ ಸಿಕ್ಕಿದೆ ಅದನ್ನು ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿದ್ದೇನೆ ಎಂದಿದ್ದಾರೆ.

  English summary
  Actress Nisha Rawal's husband Karan allegations against actor Rohit Sethia. Karan said Rohit had extra maritial affair with his wife Nisha.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X