»   » ಸ್ಟಾರ್ ಸಿಂಗರ್ ನಲ್ಲಿ ನಟಿ ರಾಗಿಣಿ ಶೇಕ್ ಡಾನ್ಸ್

ಸ್ಟಾರ್ ಸಿಂಗರ್ ನಲ್ಲಿ ನಟಿ ರಾಗಿಣಿ ಶೇಕ್ ಡಾನ್ಸ್

Posted By:
Subscribe to Filmibeat Kannada

ಸಂಜೆಯ ಆಯಾಸ ನೀಗಿಸುವ ಸಂಗೀತ ಕಾರ್ಯಕ್ರಮ ಮನಸ್ಸಿಗೆ ಮುದನೀಡುತ್ತದೆ. ಹಾಗೆಯೇ ಇಂತಹ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರಗನ್ನು ನೀಡುವವರು ವಿಶೇಷ ಅತಿಥಿಗಳು. ಹಾಗಾದ್ರೆ ಇದು ಯಾವ ಕಾರ್ಯಕ್ರಮ? ಯಾರ ಬಗ್ಗೆ ಹೇಳ್ತಾ ಇದ್ದೀವಿ ಅನ್ನೋ ಕುತೂಹಲ ಅಲ್ವಾ?

ಅದೇ ಸುವರ್ಣ ವಾಹಿನಿಯ ವಾರಾಂತ್ಯದ ರಿಯಾಲಿಟಿ ಶೋ ಸ್ಟಾರ್ ಸಿಂಗರ್. ಈ ಬಾರಿ ಕನ್ನಡದ ಸ್ಟಾರ್ ಐ.ಪಿ.ಎಸ್ ರಾಗಿಣಿ ವಾರದ ವಿಶೇಷ ಅತಿಥಿಯಾಗಿ ಆಗಮಿಸಿ ಸ್ಟಾರ್ ಸಿಂಗರ್ ಸ್ಪರ್ಧಿಗಳಿಗೆ ಶುಭ ಹಾರೈಸಿ, ತಮ್ಮ ಪ್ರೋತ್ಸಾಹದ ಮಾತುಗಳಿಂದ ಗಾಯಕರನ್ನು ಹುರಿದುಂಬಿಸಲಿದ್ದಾರೆ. [ಸ್ಟಾರ್ ಸಿಂಗರ್ ಕಾರ್ಯಕ್ರಮದಲ್ಲಿ ಅಣ್ಣಾವ್ರ ವಿಶೇಷ]

ಹಾಗೆಯೇ ಇಂಪಾದ ಗಾನದೊಂದಿಗೆ ಸೊಂಪಾದ ನೃತ್ಯದ ಸಮ್ಮಿಲನ ಎಷ್ಟೊಂದು ಸುಂದರವಲ್ಲವೇ. ಹಾಗಾಗಿ ಈ ವಾರದ ಸಂಚಿಕೆಯಲ್ಲಿ ವಿಶೇಷವಾಗಿ ನಮ್ಮ ಗಾಯಕರ ಹಾಡಿಗೆ ತಕ್ಕಂತಹ ನೃತ್ಯ ಕೂಡಾ ಇದೆ. ಅದರಲ್ಲಿ ಶ್ಯಾಡೋ ಡಾನ್ಸ್ ಮತ್ತಷ್ಟು ವಿಶೇಷ.

ಒಬ್ಬೊಬ್ಬ ಗಾಯಕರು ಒಂದೊಂದು ಕಥೆ

ಈ ವಾರದ ಸಂಚಿಕೆ ಕಥೆ ಆಧಾರಿತ. ಒಬ್ಬೊಬ್ಬ ಗಾಯಕರು ಒಂದೊಂದು ಕಥೆ ಹೇಳುತ್ತಾ ನೋಡುಗರನ್ನು ಬೇರೆ ಬೇರೆ ಲೋಕಕ್ಕೆ ಕೊಂಡೊಯ್ಯುತ್ತಾರೆಂಬುದು ಮಾತ್ರ ಸತ್ಯ!

ತುಪ್ಪ ಬೇಕಾ ತುಪ್ಪ ಎಂಬ ಹಾಡಿಗೆ ಹೆಜ್ಜೆ

ಕನ್ನಡದ ಚಿತ್ರ ತಾರೆ ರಾಗಿಣಿ ಅವರೂ ತುಪ್ಪ ಬೇಕಾ ತುಪ್ಪ ಎಂಬ ಹಾಡಿಗೆ ಹೆಜ್ಜೆ ಹಾಕಲಿದ್ದಾರೆ. ಕಾರ್ಯಕ್ರಮದ ತೀರ್ಪುಗಾರ ವಿಜಯ್ ಪ್ರಕಾಶ್ ಗಾನಸುಧೆ ಕೂಡಾ ಹರಿಸಲಿದ್ದಾರೆ.

ವಿಕ್ರಮ ಮತ್ತು ಬೇತಾಳ ವೇಷದಲ್ಲಿ ನಿರೂಪಕರು

ಈ ವಾರದ ಸಂಚಿಕೆಯಲ್ಲಿ ನಮ್ಮ ನಿರೂಪಕರು ವಿಕ್ರಮ ಮತ್ತು ಬೇತಾಳ ವೇಷ ಧರಿಸಿ ಕಥೆ ಹೇಳಿ ಕೇಳಲಿದ್ದಾರೆ. ನಿರಂಜನ್ ದೇಶಪಾಂಡೆ ಬೇತಾಳನಾಗಿ, ಕಾವ್ಯಾ ಶಾಸ್ತ್ರಿ ವಿಕ್ರಮಾದಿತ್ಯನಾಗಿ ಕಾರ್ಯಕ್ರಮ ನಿರೂಪಿಸಲಿದ್ದಾರೆ.

ಏಪ್ರಿಲ್ 20 ರ ಭಾನುವಾರ ರಾತ್ರಿ 9ಕ್ಕೆ ಡೋಂಟ್ ಮಿಸ್

ಸ್ಟಾರ್ ಸಿಂಗರ್ ಟಾಪ್ 5 ಸ್ಪರ್ಧಿಗಳಲ್ಲಿ ಯಾರು ಈ ಸಂಚಿಕೆಯಿಂದ ಹೊರ ನಡೆಯಬಹುದು? ಎಂಬುದನ್ನು ಇದೇ ಏಪ್ರಿಲ್ 20 ರ ಭಾನುವಾರ ರಾತ್ರಿ 9:00 ಗಂಟೆಗೆ ಪ್ರಸಾರವಾಗುವ ಸ್ಟಾರ್ ಸಿಂಗರ್ ಸಂಚಿಕೆಯನ್ನು ಕಾದು ನೋಡಬೇಕು.

ಈ ಹಿಂದೆ ಶ್ರೀಮುರಳಿ ಶೋಗೆ ಆಗಮಿಸಿದ್ದರು

ಸೈಲೆಂಟ್ ಸ್ಟಾರ್ ಶ್ರೀಮುರಳಿ ಅವರು ಈ ಹಿಂದೆ ಶೋಗೆ ಆಗಮಿಸಿ ಡಾ.ರಾಜ್ ಕುಮಾರ್ ಅವರೊಂದಿಗಿನ ಒಡನಾಟವನ್ನು ವೀಕ್ಷಕರೊಂದಿಗೆ ಹಂಚಿಕೊಂಡಿದ್ದರು.

English summary
Suvarna Channel popular music reality show Idea Star Singer will launch Star Singer Ragini Special Episode. The show will telecast on April 20 th 2014 9Pm. "Tuppa Beka Tuppa.." Ragini shake her legs in the show.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada