Just In
Don't Miss!
- Sports
SMAT: ಮೊದಲ ಕ್ವಾ.ಫೈನಲ್ನಲ್ಲಿ ಕರ್ನಾಟಕ್ಕೆ ಪಂಜಾಬ್ ಎದುರಾಳಿ
- News
Mood Of The Nation ಸಮೀಕ್ಷೆ: ಕೋವಿಡ್ ನಿರ್ವಹಣೆ ವಿಚಾರದಲ್ಲಿ ಮೋದಿ ಸರ್ಕಾರಕ್ಕೆ ಜೈ ಎಂದ ಜನ
- Finance
ಸ್ಟ್ಯಾಂಡರ್ಡ್ ಚಾರ್ಟರ್ಡ್ ಬ್ಯಾಂಕ್- ಇಂಡಿಯಾಗೆ RBIನಿಂದ 2 ಕೋಟಿ ರು. ದಂಡ
- Lifestyle
ಗಣರಾಜ್ಯೋತ್ಸವ 2021: ಇಲ್ಲಿದೆ ಶುಭಾಶಯಗಳು, ಕೋಟ್ಸ್, ವಾಟ್ಸಾಪ್ ಸ್ಟೇಟಸ್
- Automobiles
ಬಿಡುಗಡೆಗೆ ಸಜ್ಜಾದ ಹೊಸ ಡುಕಾಟಿ ಸ್ಕ್ರ್ಯಾಂಬ್ಲರ್ ಬೈಕುಗಳು
- Education
BMRCL Recruitment 2021: ಸೀನಿಯರ್ ಅರ್ಬನ್ ಮತ್ತು ಟ್ರಾನ್ಸ್ ಪೋರ್ಟ್ ಪ್ಲಾನರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ದರ್ಶನ್ ಮತ್ತು ರಾಗಿಣಿ ಒಟ್ಟಿಗೆ ಸಿನಿಮಾ ಮಾಡೋದು ಯಾವಾಗ?

ನಟ ದರ್ಶನ್ ಮತ್ತು ರಾಗಿಣಿ ಒಟ್ಟಿಗೆ ಸಿನಿಮಾ ಮಾಡಬೇಕು ಎನ್ನುವುದು ಅಭಿಮಾನಿಗಳ ಬಹುದಿನದ ಕನಸು. ಆದರೆ ಇದುವರೆಗೆ ಇವರಿಬ್ಬರ ಜೋಡಿ ಒಟ್ಟಿಗೆ ಸಿನಿಮಾ ಮಾಡಿಲ್ಲ. ರಾಗಿಣಿ ಕೂಡ ಶಿವರಾಜ್ ಕುಮಾರ್, ಸುದೀಪ್, ದುನಿಯಾ ವಿಜಯ್ ಸೇರಿದಂತೆ ಸಾಕಷ್ಟು ಸ್ಟಾರ್ ನಟರ ಜೊತೆಗೆ ತೆರೆ ಹಂಚಿಕೊಂಡಿದ್ದಾರೆ. ಆದರೆ ದರ್ಶನ್ ಜೊತೆಗೆ ಮಾತ್ರ ರಾಗಿಣಿ ಕಾಣಿಸಿಕೊಂಡಿಲ್ಲ.
ದರ್ಶನ್ ಮತ್ತು ರಾಗಿಣಿ ಕಾಂಬಿನೇಶನ್ ಸಿನಿಮಾ ಯಾವಾಗ ಎನ್ನುವ ಪ್ರಶ್ನೆ ಉತ್ತರ ಸದ್ಯಕ್ಕೆ ತಿಳಿಯದೆ ಇದ್ದರೂ ದರ್ಶನ್ ಜೊತೆಗೆ ಸಿನಿಮಾ ಮಾಡಲು ರಾಗಿಣಿ ಎಷ್ಟು ಉತ್ಸುಕರಾಗಿದ್ದಾರೆ ಎನ್ನುವುದು ತಿಳಿದಿದೆ. ಹೌದು, ಇತ್ತೀಚಿಗಷ್ಟೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ನಂ 1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮಕ್ಕೆ ನಟಿ ರಾಗಿಣಿ ದ್ವಿವೇದಿ ಮತ್ತು ರಕ್ಷಿತಾ ಆಗಮಿಸಿದ್ದರು. ಈ ವೇಳೆ ಶಿವಣ್ಣನ ಪ್ರಶ್ನೆಯೊಂದಕ್ಕೆ ರಾಗಿಣಿ ಈ ರೀತಿ ಉತ್ತರ ನೀಡಿದ್ದಾರೆ.
''ಒಂದೇ ಟೈಂ ನಲ್ಲಿ ದರ್ಶನ್, ಪುನೀತ್, ಯಶ್ ಮೂರು ಹೀರೋ ಗಳ ಸಿನಿಮಾಗೆ ಡೇಟ್ ಕ್ಲಶ್ ಆಗುತ್ತಿದೆ ಅಂದರೆ ಯಾವ ಒಬ್ಬ ಹೀರೋವನ್ನು ಆಯ್ಕೆ ಮಾಡಿಕೊಳ್ಳುತ್ತಿರಾ.? ಎಂದು ಶಿವರಾಜ್ ಕುಮಾರ್ ಪ್ರಶ್ನೆ ಮಾಡಿದರು. ಆಗ ರಾಗಿಣಿ ಹಿಂದು ಮುಂದು ನೋಡದೆ ಪಟ್ ಅಂತ ದರ್ಶನ್ ಹೆಸರನ್ನ ತೆಗೆದುಕೊಂಡರು.
ಡೇಟ್ ಕ್ಲಶ್ ಏನೇ ಸಮಸ್ಯೆ ಇದ್ದರು ರಾಗಿಣಿ ದರ್ಶನ್ ಜೊತೆಗೆ ಸಿನಿಮಾ ಮಾಡುತ್ತಾರೆ. ಆದರೆ ಸದ್ಯದ ವರೆಗೆ ಒಂದು ಒಳ್ಳೆಯ ಅವಕಾಶ ಬಂದಿಲ್ಲ. ಹಾಗೆ ಇಬ್ಬರಿಗೆ ಹೋಲುವ ಒಂದು ಕಥೆ ಬಂದರೆ ರಾಗಿಣಿ ದರ್ಶನ್ ಜೊತೆಗೆ ಸಿನಿಮಾ ಮಾಡುವುದು ಪಕ್ಕಾ.