»   » ಅದೇ ಪ್ರಶ್ನೆ, ಅದೇ ಉತ್ತರ, ಮತ್ತೆ ಸುದೀಪ್ ಹೆಸರು ತೆಗೆದ ರಾಗಿಣಿ

ಅದೇ ಪ್ರಶ್ನೆ, ಅದೇ ಉತ್ತರ, ಮತ್ತೆ ಸುದೀಪ್ ಹೆಸರು ತೆಗೆದ ರಾಗಿಣಿ

Posted By:
Subscribe to Filmibeat Kannada
ಕಿಚ್ಚ ಸುದೀಪ್ ರನ್ನು ಮದ್ವೆ ಆಗ್ತಾರಂತೆ ಈ ನಟಿ| Ragini dwivedi wants to marry kiccha sudeep ?

ಸಿನಿಮಾ ನಟಿಯರ ಮದುವೆ ಸುದ್ದಿ ಅಂದರೆ ಎಲ್ಲರ ಕಿವಿ ನೆಟ್ಟಗಾಗಿ ಬಿಡುತ್ತದೆ. ಅಂದಹಾಗೆ, ನಟಿ ಮೇಘನಾ ರಾಜ್ ಮದುವೆ ಹತ್ತಿರದಲ್ಲಿಯೇ ಇದೆ. ಆದರೆ ಇದೀಗ ಕನ್ನಡದ ಇನ್ನೊಬ್ಬ ನಟಿ ತಮ್ಮ ಮದುವೆ ಬಗ್ಗೆ ಮಾತನಾಡಿದ್ದಾರೆ. ಅದು ಬೇರೆ ಯಾರು ಅಲ್ಲ ನಟಿ ರಾಗಿಣಿ ದ್ವಿವೇದಿ.

ಗ್ಲಾಮರ್ ಕ್ವೀನ್ ರಾಗಿಣಿ ದ್ವಿವೇದಿ ಮದುವೆ ಬಗ್ಗೆ ಕುತೂಹಲ ಇದ್ದರೆ ಅವರ ಮಾತು ಒಮ್ಮೆ ಕೇಳಿ. ಯಾಕಂದ್ರೆ, ಈಗ ರಾಗಿಣಿ ತಮ್ಮ ಮದುವೆ ಬಗ್ಗೆ ಮಾತನಾಡಿದ್ದಾರೆ. ವಿಶೇಷ ಅಂದರೆ ರಾಗಿಣಿ ನಟ ಸುದೀಪ್ ಜೊತೆಗೆ ಮದುವೆಯಾಗಲು ಇಷ್ಟ ಪಡುತ್ತೇನೆ ಎಂದಿದ್ದಾರೆ.

ಕಿಚ್ಚ ಸುದೀಪ್ ನಟನೆ ಮತ್ತು ನಿರ್ದೇಶನದಲ್ಲಿ ಬಂದ 'ವೀರ ಮದಕರಿ' ಸಿನಿಮಾ ರಾಗಿಣಿಗೆ ಒಳ್ಳೆಯ ಹೆಸರು ತಂದು ಕೊಟ್ಟಿತ್ತು. ಆ ಬಳಿಕ ಸುದೀಪ್ ಅವರ 'ಕೆಂಪೇಗೌಡ' ಸಿನಿಮಾದಲ್ಲೂ ರಾಗಿಣಿ ನಟಿಸಿದ್ದರು. ತೆರೆ ಮೇಲೆ ಸುದೀಪ್ ಎತ್ತರಕ್ಕೆ ಸರಿದೂಗುವ ನಟಿ ಇವರಾಗಿದ್ದರು. ಆದರೆ ಈಗ ಈ ನಟಿ ಸುದೀಪ್ ಜೊತೆಗೆ ಮದುವೆ ಆಗುತ್ತೇನೆ ಎಂದಿದ್ದಾರೆ. ಏನಿದು ವಿಷ್ಯ ಎಂಬುದು ಮುಂದೆ ಓದಿ...

ನಂ 1 ಯಾರಿ ಕಾರ್ಯಕ್ರಮದಲ್ಲಿ

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರ ಆಗುವ 'ನಂ 1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮಕ್ಕೆ ನಟಿ ರಾಗಿಣಿ ದ್ವಿವೇದಿ ಮತ್ತು ರಕ್ಷಿತಾ ಬಂದಿದ್ದರು. ಈ ವೇಳೆ ಕಾರ್ಯಕ್ರಮದ Rapid ಫೈಯರ್ ರೌಂಡ್ ನಲ್ಲಿ ಶಿವಣ್ಣ ''ಸುದೀಪ್, ಯಶ್, ಲೂಸ್ ಮಾದ ಯೋಗಿ ಈ ಮೂವರಲ್ಲಿ ನೀವು ಯಾರನ್ನು ಮದುವೆಯಾಗಲು ಇಷ್ಟ ಪಡುತ್ತೀರಾ..? ಯಾರ ಜೊತೆ ಡೇಟಿಂಗ್ ಮಾಡುತ್ತೀರಾ ಮತ್ತು ಯಾರನ್ನು ಕೊಲೆ ಮಾಡುತ್ತೀರಾ? ಅಂತ ಪ್ರಶ್ನೆ ಕೇಳಿದರು.

ಸುದೀಪ್ ಜೊತೆ ಮದುವೆ

ಶಿವರಾಜ್ ಕುಮಾರ್ ಪ್ರಶ್ನೆಗೆ ಉತ್ತರಿಸಿದ ರಾಗಿಣಿ ''ನಾನು ಸುದೀಪ್ ಜೊತೆಗೆ ಮದುವೆ ಆಗುತ್ತೇನೆ ಅಂತ ಹೇಳಿದರು. ಅಂದಹಾಗೆ, ರಾಗಿಣಿ ದ್ವಿವೇದಿ ಈ ನಟನ ಹೆಸರನ್ನು ತೆಗೆದುಕೊಂಡಿದ್ದು ಕೇವಲ Rapid ಫೈಯರ್ ಆಟಕಷ್ಟೆ. ಸೀರಿಯಸ್ ಆಗಿ ಅಲ್ಲ.

ಯಶ್ ಜೊತೆಗೆ ಡೇಟಿಂಗ್

'ನೀವು ಯಾರ ಜೊತೆ ಡೇಟಿಂಗ್ ಮತ್ತು ಯಾರನ್ನು ಕೊಲೆ ಮಾಡುತ್ತೀರಾ' ಅಂತ ಶಿವಣ್ಣ ಕೇಳಿದಕ್ಕೆ ರಾಗಿಣಿ ''ನಟ ಯಶ್ ಜೊತೆ ಡೇಟಿಂಗ್ ಮತ್ತು ಲೂಸ್ ಮಾದ ಯೋಗಿ ಅವರನ್ನು ಕೊಲೆ ಮಾಡುತ್ತೇನೆ'' ಅಂತ ಹೇಳಿದರು. ಶಿವಣ್ಣ ಯಾಕೆ ಯೋಗಿ ಕೋಲೆ ಮಾಡುತ್ತಿರಾ ಎಂದು ತಮಾಷೆಗೆ ಕಾಲು ಏಳೆದರು.

ಅದೇ ಜೋಡಿ, ಅದೇ ಪ್ರಶ್ನೆ, ಅದೇ ಉತ್ತರ

ವಿಶೇಷ ಅಂದರೆ ಈ ಹಿಂದೆ ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರ ಆಗುತ್ತಿದ್ದ 'ಸೂಪರ್ ಟಾಕ್ ಟೈಂ' ಕಾರ್ಯಕ್ರಮಕ್ಕೆ ರಾಗಿಣಿ ಮತ್ತು ರಕ್ಷಿತಾ ಆಗಮಿಸಿದ್ದರು. ಆಗ ಸಹ ಇದೇ ಪ್ರಶ್ನೆಯನ್ನು ರಾಗಿಣಿಗೆ ಕೇಳಲಾಗಿತ್ತು. ಆಗ ಸಹ ರಾಗಿಣಿ ''ನಾನು ಸುದೀಪ್ ಜೊತೆಗೆ ಮದುವೆ, ಯಶ್ ಜೊತೆಗೆ ಡೇಟಿಂಗ್ ಮಾಡುತ್ತೇನೆ. ಯೋಗಿನ ಕೊಲೆ ಮಾಡುತ್ತೇನೆ'' ಎಂದಿದ್ದರು. ಈಗ 'ನಂ 1 ಯಾರಿ ವಿತ್ ಶಿವಣ್ಣ ಕಾರ್ಯಕ್ರಮದಲ್ಲಿಯೂ ಅದೇ ಪ್ರಶ್ನೆಗೆ ಅದೇ ಉತ್ತರವನ್ನು ರಾಗಿಣಿ ಹೇಳಿದರು.

ಹ್ಯಾಟ್ರಿಕ್ ಸಿನಿಮಾ ಮಾಡಬೇಕು

ನಟ ಸುದೀಪ್ ಮತ್ತು ರಾಗಿಣಿ ಅವರ ಜೋಡಿ ತೆರೆ ಮೇಲೆ ತುಂಬ ಮುದ್ದು ಮುದ್ದಾಗಿ ಕಾಣುತ್ತದೆ. ಅಂದಹಾಗೆ, ಈ ಹಿಂದೆ 'ಕೆಂಪೇಗೌಡ' ಮತ್ತು 'ವೀರಮದಕರಿ' ಸಿನಿಮಾ ಮಾಡಿದ್ದ ಈ ಜೋಡಿ ಮತ್ತೆ ಹ್ಯಾಟ್ರಿಕ್ ಸಿನಿಮಾಗಾಗಿ ಒಂದಾಗುತ್ತಾರ ಎನ್ನುವ ನಿರೀಕ್ಷೆ ಅಭಿಮಾನಿಗಳಲ್ಲಿ ಇದೆ. ಎರಡು ಸೂಪರ್ ಹಿಟ್ ಸಿನಿಮಾ ನೀಡಿದ್ದ ಈ ಜೋಡಿ ಮತ್ತೆ ಸಿನಿಮಾ ಮಾಡಬೇಕು ಎನ್ನುವುದು ಎಲ್ಲರ ಆಸೆ.

English summary
Kannada actress Ragini Dwivedi spoke about Sudeep in star suvarna channel's popular show 'No1 Yaari with Shivanna' program.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X