For Quick Alerts
  ALLOW NOTIFICATIONS  
  For Daily Alerts

  'ಬಿಗ್ ಬಾಸ್ ಕನ್ನಡ-4': ತುಪ್ಪದ ಬೆಡಗಿ ರಾಗಿಣಿ ಕೊಟ್ಟ ಸ್ಪಷ್ಟನೆ ಏನು?

  By Harshitha
  |

  ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ 'ಬಿಗ್ ಬಾಸ್' ನಾಲ್ಕನೇ ಆವೃತ್ತಿ ಶುರು ಆಗಲು ಕೆಲವೇ ದಿನಗಳು ಬಾಕಿ ಉಳಿದಿವೆ.

  ಅಕ್ಟೋಬರ್ 9, 2016 ರಿಂದ ಕಲರ್ಸ್ ಕನ್ನಡ ವಾಹಿನಿಯಲ್ಲಿ 'ಬಿಗ್ ಬಾಸ್ ಕನ್ನಡ-4'ಗೆ ಅದ್ಧೂರಿ ಚಾಲನೆ ಸಿಗಲಿದೆ. ಕಾರ್ಯಕ್ರಮದಲ್ಲಿ ಯಾರ್ಯಾರು ಸ್ಪರ್ಧಿಗಳಾಗಿ ರೆಡ್ ಕಾರ್ಪೆಟ್ ತುಳಿದು 'ಬಿಗ್' ಮನೆ ಪ್ರವೇಶಿಸುತ್ತಾರೆ ಎಂಬ ಚರ್ಚೆ ಈಗಾಗಲೇ ಆರಂಭಗೊಂಡಿದೆ. [ಬಿಗ್ ಬಾಸ್ ಕನ್ನಡ 4: 5 ಮಂದಿ ಸ್ಪರ್ಧಿಗಳ ಹೆಸರು ಬಹಿರಂಗ!]

  'ಬಿಗ್ ಬಾಸ್ ಕನ್ನಡ-4' ಸ್ಪರ್ಧಿಗಳ ಪಟ್ಟಿಯಲ್ಲಿ ನಟಿ ರಾಗಿಣಿ ದ್ವಿವೇದಿ ಹೆಸರೂ ಕೂಡ ಕೇಳಿಬಂದಿತ್ತು. ಹಾಗಾದ್ರೆ, ತುಪ್ಪದ ಬೆಡಗಿ 'ಬಿಗ್' ಮನೆ ಗೃಹ ಪ್ರವೇಶ ಮಾಡುತ್ತಾರಾ? ಈ ಪ್ರಶ್ನೆಗೆ ಉತ್ತರ ಇಲ್ಲಿದೆ ಓದಿ....

  ಬಾಯ್ಬಿಟ್ಟಿದ್ದಾರೆ ನಟಿ ರಾಗಿಣಿ ದ್ವಿವೇದಿ.!

  ಬಾಯ್ಬಿಟ್ಟಿದ್ದಾರೆ ನಟಿ ರಾಗಿಣಿ ದ್ವಿವೇದಿ.!

  'ಬಿಗ್ ಬಾಸ್ ಕನ್ನಡ-4' ರಿಯಾಲಿಟಿ ಶೋನಲ್ಲಿ ''ನಾನು ಭಾಗವಹಿಸುತ್ತಿಲ್ಲ'' ಅಂತ ನಟಿ ರಾಗಿಣಿ ದ್ವಿವೇದಿ ಹೇಳಿಕೆ ನೀಡಿದ್ದಾರೆ. [ಓಹೋ....'ಬಿಗ್ ಬಾಸ್ ಕನ್ನಡ-4' ನಲ್ಲಿ 'ಇವರೆಲ್ಲಾ' ಇರ್ತಾರಂತೆ ಸ್ವಾಮಿ.!]

  ಕಾರಣ ಏನು?

  ಕಾರಣ ಏನು?

  ''ನಾನೀಗ ತುಂಬಿ ಬಿಜಿಯಾಗಿದ್ದೇನೆ. ನನ್ನ ಕೈಯಲ್ಲಿ ಸಾಕಷ್ಟು ಸಿನಿಮಾಗಳಿವೆ. ಹೀಗಾಗಿ, ಎಲ್ಲವನ್ನೂ ಬಿಟ್ಟು 'ಬಿಗ್ ಬಾಸ್ ಕನ್ನಡ-4'ನಲ್ಲಿ ಭಾಗವಹಿಸಲು ಸಾಧ್ಯವಿಲ್ಲ'' ಎಂದಿದ್ದಾರೆ ನಟಿ ರಾಗಿಣಿ ದ್ವಿವೇದಿ. ['ನಾವ್ ಹೋಗಲ್ಲ ಸ್ವಾಮಿ': 'ಬಿಗ್ ಬಾಸ್' ಮನೆಯ ರೂಲ್ಸ್ ಇರುವುದೇ ಹೀಗೆ.!]

  ರಾಗಿಣಿ ಕೈಯಲ್ಲಿ ಎಷ್ಟು ಸಿನಿಮಾಗಳಿವೆ?

  ರಾಗಿಣಿ ಕೈಯಲ್ಲಿ ಎಷ್ಟು ಸಿನಿಮಾಗಳಿವೆ?

  ನಿರ್ದೇಶಕ 'ಜೋಗಿ' ಪ್ರೇಮ್ ನಾಯಕರಾಗಿ ಅಭಿನಯಿಸುತ್ತಿರುವ 'ಗಾಂಧಿಗಿರಿ' ಚಿತ್ರದಲ್ಲಿ ನಾಯಕಿ ಆಗಿ ರಾಗಿಣಿ ನಟಿಸುತ್ತಿದ್ದಾರೆ. ಇದರ ಜೊತೆಗೆ ಇನ್ನೂ ಎರಡ್ಮೂರು ಚಿತ್ರಗಳು ರಾಗಿಣಿ ಕೈಯಲ್ಲಿವೆ.

  ಹಾಗಾದ್ರೆ, 'ಬಿಗ್' ಮನೆಗೆ ಹೋಗುವವರು ಯಾರು?

  ಹಾಗಾದ್ರೆ, 'ಬಿಗ್' ಮನೆಗೆ ಹೋಗುವವರು ಯಾರು?

  ಕಲರ್ಸ್ ಕನ್ನಡ ವಾಹಿನಿ ಮೂಲಗಳಿಂದ ಬಂದಿರುವ ಮಾಹಿತಿ ಪ್ರಕಾರ, ನಿರೂಪಕಿ/ನಟಿ ಶೀತಲ್ ಶೆಟ್ಟಿ, ಫೇಸ್ ಬುಕ್ ಸ್ಟಾರ್ ಕಿರಿಕ್ ಕೀರ್ತಿ, 'ಒಗ್ಗರಣೆ ಡಬ್ಬಿ' ಖ್ಯಾತಿಯ ಮುರಳಿ, ನಟ ನವೀನ್ ಕೃಷ್ಣ, ನಿರೂಪಕ ನಿರಂಜನ್ ಈ ಬಾರಿ 'ಬಿಗ್ ಬಾಸ್' ಕಾರ್ಯಕ್ರಮದಲ್ಲಿ ಸ್ಪರ್ಧಿಗಳಾಗುವ ಸಾಧ್ಯತೆ ಇದೆ.

  'ಇವರಿಗೆ' ಡಿಮ್ಯಾಂಡ್ ಇದೆ

  'ಇವರಿಗೆ' ಡಿಮ್ಯಾಂಡ್ ಇದೆ

  'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದಲ್ಲಿ 'ತಿಥಿ' ಚಿತ್ರ ಖ್ಯಾತಿಯ ಗಡ್ಡಪ್ಪ, ಹುಚ್ಚ ವೆಂಕಟ್ ಹಾಗೂ ತುಳು ಚಿತ್ರರಂಗದ ತಾರೆ ನವೀನ್ ಪಡೀಲ್ ಭಾಗವಹಿಸಬೇಕು ಎಂಬುದು ವೀಕ್ಷಕರ ಒತ್ತಾಯ.

  English summary
  Kannada Actress Ragini Dwivedi has clarified that she is not interested to take part in 'Bigg Boss Kannada-4' reality show.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X