For Quick Alerts
  ALLOW NOTIFICATIONS  
  For Daily Alerts

  'ಮುದ್ದುಮಣಿಗಳು' ಧಾರಾವಾಹಿಯ ದೃಷ್ಟಿ ಪಾತ್ರಕ್ಕೆ ಬಂದಿರುವ ಸೋನಿ ಯಾರು ಗೊತ್ತಾ..?

  By ಪ್ರಿಯಾ ದೊರೆ
  |

  ಸ್ಟಾರ್ ಸುವರ್ಣ ವಾಹಿನಿಯಲ್ಲಿ ಸೂಪರ್ ಹಿಟ್ ಆದಂತಹ ಧಾರಾವಾಹಿ 'ಮುದ್ದುಲಕ್ಷ್ಮಿ''. ಈ ಧಾರಾವಾಹಿಯ ಮುಂದುವರಿದ ಭಾಗವಾಗಿ ಮುದ್ದುಲಕ್ಷ್ಮಿಯ ಮುದ್ದುಮಣಿಗಳು' ಎಂದು ಪ್ರಸಾರವಾಗುತ್ತಿದೆ. 'ಮುದ್ದುಲಕ್ಷ್ಮಿ' ಧಾರಾವಾಹಿ 1191 ಎಪಿಸೋಡ್ ಗಳು ಪ್ರಸಾರವಾಗಿತ್ತು.

  ನಂತರ ಹೊಸ ಅಧ್ಯಾಯ ಆರಂಭವಾಗಿದ್ದು, ಕಳೆದ 7-8 ತಿಂಗಳಿಂದ ಮೂಡಿ ಬರುತ್ತಿದೆ. 'ಮುದ್ದುಮಣಿಗಳು' ಧಾರಾವಾಹಿಯೂ ಅದ್ಭುತವಾಗಿ ಮೂಡಿ ಬರುತ್ತಿದೆ. ಈ ಧಾರಾವಾಹಿಯಲ್ಲಿ ಇಷ್ಟು ದಿನಗಳ ಕಾಲ ದೃಷ್ಟಿ ಪಾತ್ರ ಮಾಡುತ್ತಿದ್ದ ನಟಿ ಈಗ ಬದಲಾಗಿದ್ದಾರೆ.

  ಅಪ್ಪ ಅಮ್ಮ ಮಾತನಾಡುವುದನ್ನು ಕದ್ದು ಕೇಳಿಸಿಕೊಂಡ ಆದಿ! ಮುಂದೇನು ಮಾಡುತ್ತಾನೆ?ಅಪ್ಪ ಅಮ್ಮ ಮಾತನಾಡುವುದನ್ನು ಕದ್ದು ಕೇಳಿಸಿಕೊಂಡ ಆದಿ! ಮುಂದೇನು ಮಾಡುತ್ತಾನೆ?

  ವೈಯಕ್ತಿಕ ಕಾರಣಗಳಿಂದ ಪಾತ್ರ ಬದಲಾಗಿದ್ದು, ಈ ಪಾತ್ರಕ್ಕೆ ಈಗ ಹೊಸ ನಟಿ ಬಂದಿದ್ದಾರೆ. ಆ ನಟಿ ಯಾರು..? ಈ ಮೊದಲು ಅವರು ಏನು ಮಾಡುತ್ತಿದ್ದರು ಎಂಬ ಎಲ್ಲಾ ವಿಚಾರಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ..

  ಬಿಗ್‌ಬಾಸ್ ಮನೆಗೆ ಸಮೀಕ್ಷಾ?

  ಬಿಗ್‌ಬಾಸ್ ಮನೆಗೆ ಸಮೀಕ್ಷಾ?

  'ಮುದ್ದುಮಣಿಗಳು' ಧಾರಾವಾಹಿಯ ಟಿಆರ್‌ಪಿ ರೇಟಿಂಗ್ ಚೆನ್ನಾಗಿದೆ. ಇದರಲ್ಲಿ ನಟಿ ಸಮೀಕ್ಷಾ ಅವರು ದೃಷ್ಟಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಆದರೆ ಇದೀಗ ವೈಯಕ್ತಿಕ ಕಾರಣಗಳಿಂದಾಗಿ ಅವರು ಧಾರಾವಾಹಿಯಿಂದ ಹೊರ ನಡೆದಿದ್ದಾರೆ. ಇನ್ನು ಸಮೀಕ್ಷಾ ಅವರು ಧಾರಾವಾಹಿ ಹಾಗೂ ಸಿನಿಮಾಗಳಲ್ಲಿ ನಟಿಸಿದ್ದಾರೆ. 'ಸುಬ್ಬಲಕ್ಷ್ಮಿ ಸಂಸಾರ' ಎಂಬ ಧಾರಾವಾಹಿಯಲ್ಲಿ ಶನಾಯಾ ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದಲ್ಲದೇ, 'ಮುರಳಿ ಮೀರಾ' ಸೀರಿಯಲ್ ನಲ್ಲೂ ಪಾಸಿಟಿವ್ ರೋಲ್‌ಗೆ ಬಣ್ಣ ಹಚ್ಚಿದ್ದರು. ಇನ್ನು 'ಮೂರು ಗಂಟು' ಎಂಬ ಧಾರಾವಾಹಿಯಲ್ಲಿ ಸಮೀಕ್ಷಾ ಡಬಲ್ ಆಕ್ಟಿಂಗ್ ಮಾಡಿದ್ದರು. ಇವುಗಳ ಜೊತೆಗೆ '93', 'ದಿ ಟೆರರಿಸ್ಟ್' ಎಂಬ ಸಿನಿಮಾಗಳಲ್ಲಿ ನಟಿಸಿದ್ದಾರೆ. ಸದ್ಯ ಬಿಗ್ ಬಾಸ್ ಸೀಸನ್ 9ರಲ್ಲಿ ಭಾಗವಹಿಸಲು ಧಾರಾವಾಹಿ ತೊರೆದಿದ್ದಾರೆ ಎನ್ನಲಾಗುತ್ತಿದೆ. ಆದರೆ ಸತ್ಯಾಸತ್ಯತೆ ಮುಂದಷ್ಟೇ ತಿಳಿದು ಬರಬೇಕಿದೆ.

  ಗಟ್ಟಿಮೇಳ: ಅಮ್ಮನ ಸಿಡಿ ಕೈಸೇರುವ ಮುನ್ನ ವಸಿಷ್ಠ ಕುಟುಂಬದಲ್ಲಿ ಮತ್ತೆ ಪ್ರಾಣಾಪಾಯವಾಗುತ್ತಾ..?ಗಟ್ಟಿಮೇಳ: ಅಮ್ಮನ ಸಿಡಿ ಕೈಸೇರುವ ಮುನ್ನ ವಸಿಷ್ಠ ಕುಟುಂಬದಲ್ಲಿ ಮತ್ತೆ ಪ್ರಾಣಾಪಾಯವಾಗುತ್ತಾ..?

  'ಮುದ್ದುಮಣಿಗಳು' ದೃಷ್ಟಿ ಪಾತ್ರ ಬದಲಾಯ್ತು

  'ಮುದ್ದುಮಣಿಗಳು' ದೃಷ್ಟಿ ಪಾತ್ರ ಬದಲಾಯ್ತು

  ಸಮೀಕ್ಷಾ 'ಮುದ್ದುಮಣಿಗಳು' ಧಾರಾವಾಹಿಯಿಂದ ಹೊರ ನಡೆದ ಕಾರಣ, ದೃಷ್ಟಿ ಪಾತ್ರಕ್ಕೆ ಹೊಸ ನಟಿ ಬಂದಿದ್ದಾರೆ. ಅವರ ಹೆಸರು ಸೋನಿ ಮುಲೇವಾ. ಈ ಹಿಂದೆ ಇವರು 'ಗಟ್ಟಿಮೇಳ' ಧಾರಾವಾಹಿಯಲ್ಲಿ ನಟಿಸಿದ್ದರು. 'ಗಟ್ಟಿಮೇಳ' ಧಾರಾವಾಹಿಯಲ್ಲಿ ನಾಯಕ ಪಾತ್ರ ವೇದಾಂತ್ ಅವರ ಹಳೆಯ ಲವರ್ ರೋಲ್‌ನಲ್ಲಿ ಕಾಣಿಸಿಕೊಂಡಿದ್ದರು. ಕೋಮಾದಿಂದ ಹೊರಬಂದ ಅಹಲ್ಯ ವೇದಾಂತ್‌ನನ್ನು ಹುಡುಕಿಕೊಂಡು ಬರುತ್ತಾರೆ. 'ಗಟ್ಟಿಮೇಳ'ದಲ್ಲಿ ಗೆಸ್ಟ್ ರೋಲ್ ಮಾಡಿದ್ದರು. ಆ ಬಳಿಕ ಎಲ್ಲೂ ಕಾಣಿಸಿಕೊಳ್ಳದ ಸೋನಿ, ಇದೀಗ ಮುದ್ದುಮಣಿಗಳು ಧಾರಾವಾಹಿಯಲ್ಲಿ ದೃಷ್ಟಿ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಇನ್ನು 'ಜೆರ್ಸಿ ನಂ.10' ಎಂಬ ಸಿನಿಮಾದಲ್ಲಿ ನಟಿಸಿದ್ದು, ನಟ ಚಂದನ್ ಆಚಾರ್ಯ ಅವರೊಂದಿಗೆ ತೆರೆ ಹಂಚಿಕೊಂಡಿದ್ದಾರೆ.

  ಮೂಲತಃ ರಾಜಸ್ಥಾನದ ಚೆಲುವೆ

  ಮೂಲತಃ ರಾಜಸ್ಥಾನದ ಚೆಲುವೆ

  ಇನ್ನು ಸೋನಿ ಮುಲೇವಾ ಅವರು ಮೂಲತಃ ರಾಜಸ್ಥಾನದವರು. ಆದರೆ ಅವರು ನೆಲೆಸಿರುವುದು ಮೈಸೂರಿನಲ್ಲಿ. 2000, ಜುಲೈ 14ರಂದು ಜನಿಸಿದ ಸೋನಿ ಅವರು ಮೈಸೂರಿನ ವಿಜಯ ವಿಠ್ಠಲ ಕಾಲೇಜ್‌ನಲ್ಲಿ ಡಿಗ್ರಿ ಮುಗಿಸಿದ್ದಾರೆ. ನಂತರ ನಟನಾ ಶಾಲೆಗೆ ಸೇರಿಕೊಂಡರು. ರಂಗಭೂಮಿಯಲ್ಲಿ ಸಕ್ರಿಯರಾಗಿರುವ ಸೋನಿ ಅವರ ಮೊದಲ ನಾಟಕ ವಿಲಿಯಂ ಶೇಕ್ಸ್ ಪಿಯರ್. ಇದರಲ್ಲಿ ಹರ್ಮಿಯ ಪಾತ್ರದಲ್ಲಿ ಅದ್ಭುತವಾಗಿ ನಟಿಸಿದ್ದರು. ಬಳಿಕ 'ಸೀತಾರಾಮ ಕಥಾ' ಎಂಬ ಸಂಸ್ಕೃತ ನಾಟಕದಲ್ಲಿ ಮೂರು ಪಾತ್ರಗಳಲ್ಲಿ ನಟಿಸಿದ್ದರು. ಅವದತಿಗೆ, ಕೌಸಲ್ಯೆ, ಸೂತ್ರದಾರ ಎಂಬ ಮೂರು ಪಾತ್ರಗಳನ್ನು ನಿರ್ವಹಿಸಿ ಖ್ಯಾತಿ ಗಳಿಸಿದ್ದರು. ಸೋನಿ ಅವರಿಗೆ ಒಬ್ಬ ತಮ್ಮ ಹಾಗೂ ತಂಗಿ ಇದ್ದಾರೆ. ಈವರ ಹೆಸರು ಆಕಾಶ್ ಮತ್ತು ಭೂಮಿಕಾ ಎಂದು ಹೇಳಲಾಗಿದೆ.

  ಮಾಡೆಲ್ ಆಗಿರುವ ಸೋನಿ

  ಮಾಡೆಲ್ ಆಗಿರುವ ಸೋನಿ

  ಇನ್ನು ಸೋನಿ ಮುಲೇವಾ ಅವರು ಮಾಡೆಲಿಂಗ್ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. ಈಗಾಗಲೇ ಹಲವು ಸ್ಫರ್ಧೆಗಳಲ್ಲಿ ಭಾಗವಹಿಸಿ, ಗೆದ್ದಿದ್ದಾರೆ. ಸೋನಿ ಅವರು ಸೌಂದರ್ಯ ಸ್ಫರ್ಧೆಗಳಲ್ಲಿ ಭಾಗವಹಿಸಿದ್ದು, ನಾಲ್ಕರಲ್ಲಿ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. 2017ರಲ್ಲಿ ಸೋನಿ ಅವರು ಮಿಸ್ ಟೀನ್ ಇಂಡಿಯಾ ಸ್ಫರ್ಧೆಯಲ್ಲಿ ಮೊದಲ ಬಾರಿಗೆ ಸ್ಫರ್ಧಿಸಿದ್ದರು. ಇದೇ ವರ್ಷ ಮಿಸ್ ಇಂಡಿಯಾ ಎಲೈಟ್ ಮಾಡೆಲ್ ಸ್ಫರ್ಧೆಯಲ್ಲಿ ಭಾಗವಹಿಸಿ ಮೊದಲ ಸಲ ಗೆದ್ದಿದರು. ಬಳಿಕ ಫೇಸ್ ಆಫ್ ಮೈಸೂರು, ಮಿಸ್ ಟೀನ್ ಇಂಟರ್ ನ್ಯಾಷನಲ್ ಸೌತ್ ಇಂಡಿಯಾ ಹಾಗೂ 2018ರಲ್ಲಿ ಗ್ಲೆನ್ ಆನನ್ ಸೂಪರ್ ಮಾಡೆಲ್ ಸ್ಫರ್ಧೆಯಲ್ಲಿ ಭಾಗವಹಿಸಿ ಕಿರೀಟವನ್ನು ತಮ್ಮದಾಗಿಸಿಕೊಂಡರು.

  English summary
  Actress Sameeksha replaced by actress Sony Mulewa in Muddumanigalu Kannada serial. muddumanigalu serial drushti character changed.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X