For Quick Alerts
  ALLOW NOTIFICATIONS  
  For Daily Alerts

  ಕೊರೊನಾ ಕೊಟ್ಟ ದೈಹಿಕ, ಮಾನಸಿಕ ಯಾತನೆ ಬಿಚ್ಚಿಟ್ಟ ನಟಿ ಶಾಲಿನಿ

  |

  ಪಾಪ ಪಾಂಡು ಧಾರಾವಾಹಿ ಮೂಲಕ ಮನೆ ಮಾತಾದ ನಟಿ ಶಾಲಿನಿಗೆ ಕೊರೊನಾ ಪಾಸಿಟಿವ್ ಆಗಿದೆ. ಕೊರೊನಾದಿಂದ ತಾವು ಅನುಭವಿಸಿದ ದೈಹಿಕ, ಮಾನಸಿಕ ಯಾತನೆಯ ಬಗ್ಗೆ ಶಾಲಿನಿ ಮಾತನಾಡಿದ್ದಾರೆ.

  ಶಾಲಿನಿಗೆ ಕಳೆದ ವಾರದ ಕೊರೊನಾ ಪಾಸಿಟಿವ್ ಆಗಿತ್ತು. ಟಿವಿ ಶೋಧ ಚಿತ್ರೀಕರಣದಲ್ಲಿದ್ದ ಶಾಲಿನಿ ವೈದ್ಯರ ಸಲಹೆಯಂತೆ ಮನೆಯಲ್ಲಿಯೇ ಐಸೋಲೇಷನ್‌ಗೆ ಒಳಗಾದರು. ಆದರೆ ಮನೆಯಲ್ಲಿ ಕೋವಿಡ್‌ನಿಂದ ಅವರು ಅನುಭವಿಸಿದ ಯಾತನೆ ಅಷ್ಟಿಷ್ಟಲ್ಲ.

  'ಮೊದಲಿಗೆ ನನಗೆ ಧ್ವನಿ ಕ್ಷೀಣಿಸಿತು, ದಿನದ 12 ಗಂಟೆ ಚಿತ್ರೀಕರಣದಲ್ಲಿ ತೊಡಗುವ ನನಗೆ ಇದು ಸಾಮಾನ್ಯ ಎನಿಸಿ ಸುಮ್ಮನಾದೆ. ಆ ನಂತರ ಮೂಗು, ಗಂಟಲು ನೋವು ಆರಂಭವಾಯಿತು. ಪರಿಚಯದ ವೈದ್ಯರ ಬಳಿ ಹೋಗಿ ಪರೀಕ್ಷೆಗೆ ಒಳಪಟ್ಟೆ, ಕೊರೊನಾ ಪಾಸಿಟಿವ್ ಆಗಿರುವುದು ಗೊತ್ತಾಯಿತು. ಕೂಡಲೇ ನನ್ನ ಮಗಳು ಹಾಗೂ ಪತಿಗೆ ಪರೀಕ್ಷೆ ಮಾಡಿಸಿದೆವು ಅವರಿಬ್ಬರಿಗೂ ನೆಗೆಟಿವ್ ಬಂತು. ಮಗಳನ್ನು ದೂರದ ಸಂಬಂಧಿಯ ಮನೆಗೆ ಕಳಿಸಿ, ಪತಿ ಮಾತ್ರ ಮನೆಯಲ್ಲಿಯೇ ಉಳಿದರು. ನಂತರ ಅವರಿಗೂ ಕೊರೊನಾ ಪಾಸಿಟಿವ್ ಆಯ್ತು' ಎಂದು ಮಾಹಿತಿ ನೀಡಿದ್ದಾರೆ ಶಾಲಿನಿ.

  'ತೀವ್ರ ಜ್ವರ, ಅಸಹನೀಯ ಮೈ-ಕೈ ನೋವು ಹಿಂಡಿ ಹಿಪ್ಪೆ ಮಾಡಿತು'

  'ತೀವ್ರ ಜ್ವರ, ಅಸಹನೀಯ ಮೈ-ಕೈ ನೋವು ಹಿಂಡಿ ಹಿಪ್ಪೆ ಮಾಡಿತು'

  ವೈದ್ಯರ ಸಲಹೆ ಮೇರೆಗೆ ನಾನು ಮನೆಯಲ್ಲಿಯೇ ಐಸೋಲೇಶನ್‌ಗೆ ಒಳಪಟ್ಟೆ. ಆದರೆ ಒಂದೇ ದಿನದಲ್ಲಿ ನನಗೆ ತೀವ್ರವಾದ ಜ್ವರ ಕಾಡಲು ಆರಂಭಿಸಿತು. ಕೆಲವು ದಿನ ರಾತ್ರಿ ಆದರೆ ತೀವ್ರ ಜ್ವರ ಬರಲು ಆರಂಭವಾಯಿತು. ತೀವ್ರವಾದ ಮೈ-ಕೈ ನೋವು ಆರಂಭವಾಯಿತು. ಹಲ್ಲುಜ್ಜಲು ಸಹ ನನ್ನಿಂದ ಆಗುತ್ತಿರಲಿಲ್ಲ ಅಷ್ಟೊಂದು ತೀವ್ರವಾದ ಮೈ-ಕೈ ನೋವು ಆಗಿತ್ತು ಎಂದಿದ್ದಾರೆ ಶಾಲಿನಿ.

  ನನಗೆ ಭ್ರಮೆಗಳು ಕಾಡಲು ಆರಂಭಿಸಿದ್ದವು: ಶಾಲಿನಿ

  ನನಗೆ ಭ್ರಮೆಗಳು ಕಾಡಲು ಆರಂಭಿಸಿದ್ದವು: ಶಾಲಿನಿ

  'ನಾನು ಎಂಟನೇ ತರಗತಿಯಲ್ಲಿದ್ದಾಗ ತೀವ್ರ ಅನಾರೋಗ್ಯಕ್ಕೆ ತುತ್ತಾಗಿ ಬದುಕಿ ಬಂದದ್ದೇ ಹೆಚ್ಚಾಗಿತ್ತು.ಅದೆಲ್ಲಾ ನೆನಪು ಬಂದು ಈ ಬಾರಿ ನಾನು ಬದುಕುವುದಿಲ್ಲ ಎನಿಸಲು ಆರಂಭಿಸಿತು. ಭ್ರಮೆಗಳು ಕಾಡಲು ಆರಂಭಿಸಿತು. ವಾಸ್ತವ ಪ್ರಜ್ಞೆಯನ್ನು ಕಳೆದುಕೊಂಡು ಬಿಟ್ಟಿದ್ದೆ. ವಿಪರೀತ ಅಳು ಬರುತ್ತಿತ್ತು. ವಿದೇಶದಲ್ಲಿರುವ ಸಹೋದರಿಗೆ ಕರೆ ಮಾಡಿ ವಿಪರೀತ ಅಳುತ್ತಿದ್ದೆ' ಎಂದು ತಾವು ಅನುಭವಿಸಿದ ಭಯಾನಕ ಮಾನಸಿಕ ಹಿಂಸೆ ಬಗ್ಗೆ ಹೇಳಿದ್ದಾರೆ ಶಾಲಿನಿ.

  ನೀರು ಕುಡಿದರೂ ವಾಂತಿಯಾಗುತ್ತಿತ್ತು: ಶಾಲಿನಿ

  ನೀರು ಕುಡಿದರೂ ವಾಂತಿಯಾಗುತ್ತಿತ್ತು: ಶಾಲಿನಿ

  'ನನಗೆ ಊಟ ಸೇರುತ್ತಿರಲಿಲ್ಲ. ನೀರು ಕುಡಿದರೂ ಸಹ ಕಸ ಗಂಟಲಿನ ಒಳಗೆ ಕಸ ಹೋದಂತೆ ಎನಿಸುತ್ತಿತ್ತು. ನೀರು ಕುಡಿದರೂ ವಾಂತಿಯಾಗಿಬಿಡುತ್ತಿತ್ತು. ಎದೆ ನೋವು ಆರಂಭವಾಗಿತ್ತು. ವೈದ್ಯರ ಸಲಹೆ ಮೇರೆಗೆ ಉಸಿರಾಟದ ವ್ಯಾಯಾಮ ಮಾಡಿದೆ ನಂತರ ತುಸು ಸಮಾಧಾನ ಎನಿಸಿತು. ಈ ಕೊರೊನಾ ನಿಮ್ಮ ದೇಹ ಆರೋಗ್ಯ ಮಾತ್ರವಲ್ಲ ಮಾನಸಿಕ ಆರೋಗ್ಯವನ್ನು ಸಹ ಹಾಳು ಮಾಡಿಬಿಡುತ್ತದೆ' ಎಂದಿದ್ದಾರೆ ಶಾಲಿನಿ.

  ಸೆಲೆಬ್ರಿಟಿಗಳು ಸತ್ಯ ಹೇಳಬೇಕು: ಶಾಲಿನಿ

  ಸೆಲೆಬ್ರಿಟಿಗಳು ಸತ್ಯ ಹೇಳಬೇಕು: ಶಾಲಿನಿ

  ಇದೀಗ ನಾನು ನಿಧಾನಕ್ಕೆ ಚೇತರಿಸಿಕೊಳ್ಳುತ್ತಿದ್ದೇನೆ. ನನಗೆ ಆಶ್ಚರ್ಯವಾಗುತ್ತದೆ ಹಲವು ಸೆಲೆಬ್ರಿಟಿಗಳು ಕೊರೊನಾ ಸೋಂಕಿಗೆ ತುತ್ತಾದ ಬಗ್ಗೆ, ಕೋವಿಡ್ ಕಾಲವನ್ನು ಎಂಜಾಯ್ ಮಾಡುತ್ತಿದ್ದೇವೆಂದು ವರ್ಣರಂಜಿತವಾಗಿ ಬರೆದಿರುತ್ತಾರೆ. ಆದರೆ ಸೆಲೆಬ್ರಿಟಿಗಳು ದಯವಿಟ್ಟು ಸತ್ಯ ಹೇಳಬೇಕು. ಜನರನ್ನು ದಿಕ್ಕು ತಪ್ಪಿಸಬಾರದು. ಕಠಿಣವಾದರೂ ಸಹ ಸತ್ಯ ಹೇಳಿ ಜನರನ್ನು ಜಾಗೃತಗೊಳಿಸಬೇಕು ಎಂದಿದ್ದಾರೆ ಶಾಲಿನಿ.

  English summary
  Shalini tested corona positive last week. She said Coronavirus gave heavy problem to her body and mind.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X