»   » ಕನ್ನಡ ಕಿರುತೆರೆಯಲ್ಲಿ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ!

ಕನ್ನಡ ಕಿರುತೆರೆಯಲ್ಲಿ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ!

Posted By:
Subscribe to Filmibeat Kannada

ಸುವರ್ಣ ವಾಹಿನಿಯ 'ಡ್ಯಾನ್ಸ್ ಡ್ಯಾನ್ಸ್' ಶೋನ ಮೊದಲ ಅತಿಥಿಯಾಗಿ ಭಾಗವಹಿಸಿದ ಕ್ರೇಜಿ ಸ್ಟಾರ್ ರವಿಚಂದ್ರನ್ ವೇದಿಕೆ ಮೇಲೆ ಕ್ರೇಜಿ ಲೋಕವನ್ನೇ ಸೃಷ್ಟಿ ಮಾಡಿದ್ದು ನಿಮಗೆ ಗೊತ್ತಿದೆ.

ಇನ್ನೂ ಕಳೆದ ಸಂಚಿಕೆಯಲ್ಲಿ ನಟಿ ಖುಷ್ಬು ಕೂಡ ಭಾಗವಹಿಸಿ 'ಡ್ಯಾನ್ಸ್ ಡ್ಯಾನ್ಸ್' ಕಾರ್ಯಕ್ರಮಕ್ಕೆ ಹೊಸ ಮೆರಗು ನೀಡಿದ್ರು. ಈ ವಾರದ ಸಂಚಿಕೆಯ ವಿಶೇಷ ಅತಿಥಿ ಕುಡ್ಲದ ಕುವರಿ, ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ. [ಡ್ಯಾನ್ಸ್ ಶೋನ ಮಧ್ಯದಲ್ಲೇ ಖುಷ್ಬೂ ಎದ್ದು ಹೋಗಿದ್ದು ಯಾಕೆ]

ಫಿಲ್ಮ್ ಫೇರ್ ಅವಾರ್ಡ್ ಸೇರಿದಂತೆ ಅನೇಕ ಪ್ರಶಸ್ತಿಗಳನ್ನ ಮುಡಿಗೇರಿಸಿಕೊಂಡಿರುವ ನಟಿ ಶಿಲ್ಪಾ ಶೆಟ್ಟಿ 'ಡ್ಯಾನ್ಸ್ ಡ್ಯಾನ್ಸ್' ಕಾರ್ಯಕ್ರಮದಲ್ಲಿ ಕಳೆದ ಸಂಭ್ರಮದ ಕ್ಷಣಗಳು ಇಲ್ಲಿವೆ. ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ ಮಾಡಿ....

ಪಲ್ಲಕ್ಕಿ ಮುಖಾಂತರ ವೇದಿಕೆಗೆ ಆಗಮನ

ನಟಿ ಶಿಲ್ಪಾ ಶೆಟ್ಟಿ ರಾಣಿಯ ಹಾಗೆ ಪಲ್ಲಕ್ಕಿ ಮುಖಾಂತರ ವೇದಿಕೆಗೆ ಎಂಟ್ರಿಕೊಟ್ಟರು. 'ಡ್ಯಾನ್ಸ್ ಡ್ಯಾನ್ಸ್' ಕಾರ್ಯಕ್ರಮದ ಎಲ್ಲಾ ಸ್ಪರ್ಧಿಗಳು ಶಿಲ್ಪಾ ಶೆಟ್ಟಿಗೆ ಪುಷ್ಟ ವೃಷ್ಟಿ ಮಾಡಿದರು. [100 ಅಡಿ ಎತ್ತರದ ವೇದಿಕೆಯಲ್ಲಿ 'ಡ್ಯಾನ್ಸ್ ಡ್ಯಾನ್ಸ್' ಶೋ]

ಅಕುಲ್ ಜೊತೆ ಶಿಲ್ಪಾ ಸ್ಟೆಪ್

'ಡ್ಯಾನ್ಸ್ ಡ್ಯಾನ್ಸ್' ಕಾರ್ಯಕ್ರಮದ ನಿರೂಪಕ ಅಕುಲ್ ಬಾಲಾಜಿ ಜೊತೆ ಶಿಲ್ಪಾ ಶೆಟ್ಟಿ ಸೂಪರ್ ಸ್ಟೆಪ್ ಹಾಕಿದರು.

ಸ್ಪರ್ಧಿಗಳಿಗೆ ವಿಶೇಷ ಟಾಸ್ಕ್

ತಾವು ಸ್ವತಃ ದುಡಿದು ತಂದ ಹಣದಿಂದ ನಟಿ ಶಿಲ್ಪಾ ಶೆಟ್ಟಿಗೆ ಉಡುಗೊರೆ ಖರೀದಿಸುವ ವಿಶೇಷ ಟಾಸ್ಕ್ ನ ಸ್ಪರ್ಧಿಗಳಿಗೆ ನೀಡಲಾಗಿತ್ತು. ಅದರ ತುಣುಕುಗಳನ್ನ ನೋಡಿ ನಟಿ ಶಿಲ್ಪಾ ಶೆಟ್ಟಿ ಪ್ರಶಂಸೆ ವ್ಯಕ್ತ ಪಡಿಸಿದರು.

ಶಿಲ್ಪಾ ಶೆಟ್ಟಿಗೆ ಬಂದ ಉಡುಗೊರೆ

ಸ್ಪರ್ಧಿ ಅಭಿಶೇಕ್ ಬಾಗಿನದ ರೂಪದಲ್ಲಿ ಸೀರೆ, ಹಣ್ಣು, ತಾಂಬೂಲವನ್ನು ಶಿಲ್ಪಾ ಶೆಟ್ಟಿ ಅವರಿಗೆ ನೀಡಿದರು. ಶ್ರವಂತ್ ಮತ್ತು ಶ್ರಾವ್ಯ ಸಂಪಾದಿಸಿದ ಹಣ ಶಿಲ್ಪಾ ಶೆಟ್ಟಿ ಮುಖಾಂತರ ಎನ್.ಜಿ.ಓಗೆ ನೀಡಲಾಯ್ತು. ಮಂಗಳೂರು ಮಲ್ಲಿಗೆ ಹಾಗೂ ಶಿಲ್ಪಾ ಅವರ ಮಗನ ಭಾವಚಿತ್ರವನ್ನೂ ಉಡುಗೊರೆಯಾಗಿ ಪಡೆದ ಶಿಲ್ಪಾ ಶೆಟ್ಟಿ ಫುಲ್ ಖುಷ್ ಆದರು.

ಬೆಲ್ಲಿ ಡ್ಯಾನ್ಸ್

ಶಿಲ್ಪಾ ಶೆಟ್ಟಿ ಮತ್ತು ಲಾಸ್ಯ 'ಡ್ಯಾನ್ಸ್ ಡ್ಯಾನ್ಸ್' ಶೋನಲ್ಲಿ ಬೆಲ್ಲಿ ಡ್ಯಾನ್ಸ್ ಮಾಡಿ ಎಲ್ಲರನ್ನ ರಂಜಿಸಿದ್ದಾರೆ.

ಕಾರ್ಯಕ್ರಮ ಪ್ರಸಾರ ಯಾವಾಗ?

'ಡ್ಯಾನ್ಸ್ ಡ್ಯಾನ್ಸ್' ಶಿಲ್ಪಾ ಶೆಟ್ಟಿ ವಿಶೇಷ ಇದೇ ಸೋಮವಾರ (15-02-2016) ಸುವರ್ಣ ವಾಹಿನಿಯಲ್ಲಿ ರಾತ್ರಿ 7.30ಕ್ಕೆ ಪ್ರಸಾರವಾಗಲಿದೆ.

English summary
Actress Shilpa Shetty has taken part in Kannada Entertainment Channel Suvarna's popular show 'Dance Dance' as special guest. The show will telecast on Monday, February 15th 7.30 pm.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada