ಮೊದಲ ದಿನವೇ ಬಿಗ್ ಬಾಸ್ ಮನೆಯಲ್ಲಿ ಕಣ್ಣೀರು ಹಾಕಿದ ಶುಭಾ ಪೂಂಜಾ
ಬಿಗ್ ಬಾಸ್ ಮನೆಯಲ್ಲಿ ಕಣ್ಣೀರು ಸಾಮಾನ್ಯ. ಆದರೆ, ಮೊದಲ ದಿನವೇ ನಟಿ ಶುಭಾ ಪೂಂಜಾ ಕಣ್ಣೀರು ಹಾಕಿದ್ದು ಚರ್ಚೆಯ ವಿಷಯವಾಗಿದೆ. ಬಿಗ್ ಬಾಸ್ ಎಂಟನೇ ಆವೃತ್ತಿಯ ಮೊದಲ ವಾರದ ಕ್ಯಾಪ್ಟನ್ ಯಾರಾಗಬೇಕು ಎಂದು ನಿರ್ಧರಿಸಲು ಬಿಗ್ ಬಾಸ್ ಟಾಸ್ಕ್ ನೀಡಿದ್ದರು. ಬ್ರೋ ಗೌಡ ಮನೆಯ ನಾಯಕನಾಗಿ ಆಯ್ಕೆಯಾದರು.
ನಾಲ್ಕು ತಂಡಗಳಾಗಿ ಆಯ್ಕೆ ಮಾಡಿ ಟಾಸ್ಕ್ ನೀಡಲಾಗಿತ್ತು. ಈ ಪೈಕಿ ಒಂದು ತಂಡ ಸೋಲು ಕಂಡಿತ್ತು. ಸೋತ ತಂಡದಲ್ಲಿ ನಟಿ ಶುಭಾ ಪೂಂಜಾ ಕಣ್ಣೀರು ಹಾಕಿದ ಘಟನೆ ನಡೆಯಿತು. ಉದ್ದೇಶದಿಂದ ಮಾಡದ ತಪ್ಪಿಗೆ ಪಶ್ಚತ್ತಾಪ ಎಂದುಕೊಂಡು ಶುಭ ಅತ್ತರು. ಅಷ್ಟಕ್ಕೂ, ಶುಭ ಪೂಂಜಾ ಕಣ್ಣೀರು ಹಾಕಿದ್ದು ಏಕೆ? ಮುಂದೆ ಓದಿ...

ಸೋತ ಶುಭಾ ಪೂಂಜಾ ತಂಡ
ಟಾಸ್ಕ್ ಸೋತ ತಂಡದಲ್ಲಿ ನಟಿ ಶುಭಾ ಪೂಂಜಾ, ನಿಧಿ ಸುಬ್ಬಯ್ಯ, ಟಿಕ್ ಟಾಕ್ ಹುಡುಗಿ ಧನುಶ್ರೀ ಹಾಗೂ ನಿರ್ಮಲಾ ಸತ್ಯ ಇದ್ದರು. ಈ ನಾಲ್ವರ ಪೈಕಿ ಒಬ್ಬ ಕಳಪೆ ಸ್ಪರ್ಧಿಯನ್ನು ಒಮ್ಮತದಿಂದ ಆಯ್ಕೆ ಮಾಡಿ ಎಂದು ಬಿಗ್ ಬಾಸ್ ನಾಲ್ಕು ಜನರ ತಂಡಕ್ಕೆ ಸೂಚಿಸಿತು. ನಾಲ್ವರಲ್ಲಿ ಯಾರು ಕಳಪೆ ಎಂದು ನಿರ್ಧರಿಸಲು ಒಮ್ಮತಕ್ಕೆ ಬಾರದ ತಂಡ ಸಂಕಷ್ಟಕ್ಕೆ ಸಿಲುಕಿತ್ತು.

ನಿರ್ಮಲಾ ಸ್ವ-ಇಚ್ಛೆಯಿಂದ ಒಪ್ಪಿಗೆ
ನಾಲ್ಕು ಜನರಲ್ಲಿ ಕಳಪೆ ಸ್ಪರ್ಧಿ ಯಾರೆಂದು ನಿರ್ಧರಿಸಲು ಒಮ್ಮತಕ್ಕೆ ಬಾರದ ತಂಡ, ಕೊನೆಗೂ ನಿರ್ಮಲಾ ಸತ್ಯ ಅವರು ''ನಾನೇ ಕಳಪೆ'' ಎಂದು ತೀರ್ಮಾನಿಸಿದರು. ಉಳಿದ ಸದಸ್ಯರು ಒಪ್ಪಲಿಲ್ಲ. ಆಮೇಲೆ ನಾಮಿನೇಟ್ ಏನಾದರೂ ಇದ್ದರೆ ನಾಲ್ಕು ಜನರು ಇರಲಿ, ಶಿಕ್ಷೆ ಇದ್ದರೆ ನಿರ್ಮಲಾ ಮಾತ್ರ ಅನುಭವಿಸುತ್ತಾರೆ ಎಂದು ಬಿಗ್‌ಬಾಸ್ ಮುಂದೆ ಹೇಳಿದರು. ಆದರೆ, ಬಿಗ್ ಬಾಸ್ ಟ್ವಿಸ್ಟ್ ಕೊಟ್ಟರು.

ಡೈರೆಕ್ಟ್ ನಾಮಿನೇಟ್
ನಿರ್ಮಲಾ ಸತ್ಯ ಅವರನ್ನು ಕಳಪೆ ಎಂದು ಘೋಷಿಸಿದ ಬಿಗ್ ಬಾಸ್ ನೇರವಾಗಿ ನಾಮಿನೇಟ್ ಮಾಡಿದರು. ಇದು ಉಳಿದ ಸದಸ್ಯರಿಗೆ ಆಘಾತ ತಂದಿತು. ನಿರ್ಮಲಾ ಅವರಿಗೆ ಲಗ್ಗೇಜ್ ಪ್ಯಾಕ್ ಮಾಡಲು ಬಿಗ್ ಬಾಸ್ ಸೂಚಿಸಿದರು. ಇದನ್ನು ಕಂಡ ನಟಿ ಶುಭಾ ಪೂಂಜಾ ಕಣ್ಣೀರು ಹಾಕಿದರು. ನಾಮಿನೇಟ್ ಆಗ್ತಾರೆ ಎಂದು ತಿಳಿಯದೇ ತಪ್ಪು ಮಾಡಿದ್ವಿ ಎಂಬ ಪಶ್ಚತ್ತಾಪದಿಂದ ಕಣ್ಣೀರು ಸುರಿಸಿದರು.

ನಾಮಿನೇಟ್ ಆಗ್ತಾರೆ ಅಂತ ಗೊತ್ತಿರಲಿಲ್ಲ
ಅಂದ್ಹಾಗೆ, ನಿರ್ಮಲಾ ಸತ್ಯ ಅವರನ್ನು ಡೈರೆಕ್ಟ್ ಆಗಿ ನಾಮಿನೇಟ್ ಆಗ್ತಾರೆ ಅಂತ ಶುಭ ಪೂಂಜಾ ಹಾಗೂ ತಂಡಕ್ಕೆ ಗೊತ್ತಿರಲಿಲ್ಲ. ಹಾಗಾಗಿ, ನಮ್ಮಿಂದ ನಿರ್ಮಲಾ ನಾಮಿನೇಟ್ ಆಗುವ ರೀತಿ ಆಯ್ತಲ್ವಾ, ಬಿಗ್ ಬಾಸ್ ನಾಲ್ಕು ಜನರನ್ನು ನಾಮಿನೇಟ್ ಮಾಡಿ ಎಂದು ಶುಭಾ ವಿನಂತಿಸಿದರು. ಆದರೆ, ಬಿಗ್ ಬಾಸ್ ನಿರ್ಮಲಾ ಅವರನ್ನು ನಾಮಿನೇಟ್ ಮಾಡಿದರು.


Click it and Unblock the Notifications











