For Quick Alerts
  ALLOW NOTIFICATIONS  
  For Daily Alerts

  ಸಂಭಾವನೆ ತಾರತಮ್ಯದ ಬಗ್ಗೆ ಮಾತನಾಡಿದ ಶೃತಿ ಹರಿಹರನ್

  By Naveen
  |
  ಸಂಭಾವನೆ ತಾರತಮ್ಯದ ಬಗ್ಗೆ ಮಾತನಾಡಿದ ಶೃತಿ ಹರಿಹರನ್ | Filmibeat Kannada

  ಕನ್ನಡ ಸೇರಿದಂತೆ ಎಲ್ಲ ಚಿತ್ರರಂಗದಲ್ಲಿ ನಟ ಮತ್ತ ನಟಿಯರ ನಡುವೆ ಸಂಭಾವನೆ ತಾರತಮ್ಯ ಇದೆ. ಇದನ್ನು ಬಾಲಿವುಡ್ ನಲ್ಲಿ ಅನೇಕ ನಟಿಯರು ವಿರೋಧಿಸಿದ್ದಾರೆ. ಕನ್ನಡಕ್ಕೆ ಬಂದರೆ ನಟಿ ಅಂದ್ರಿತಾ ರೇ ಹಾಗೂ ರಮ್ಯಾ ಈ ಬಗ್ಗೆ ಮೊದಲು ಧ್ವನಿ ಎತ್ತಿದ್ದರು. ಆದರೆ ಈಗ ಇದಕ್ಕೆ ಶೃತಿ ಹರಿಹರನ್ ಕೂಡ ಸೇರಿದ್ದಾರೆ.

  ಸಂಭಾವನೆಯಲ್ಲೂ ತಾರತಮ್ಯವೇಕೆ; ರಮ್ಯಾ ಪ್ರಶ್ನೆ ಸಂಭಾವನೆಯಲ್ಲೂ ತಾರತಮ್ಯವೇಕೆ; ರಮ್ಯಾ ಪ್ರಶ್ನೆ

  ಕನ್ನಡದ ನಟರಿಗೆ ಮತ್ತು ನಟಿಯರಿಗೆ ನೀಡುವ ಸಂಭಾವನೆಯಲ್ಲಿ ಅಜಗಜಾಂತರ ವ್ಯತ್ಯಾಸ ಇದೆ. ಸ್ಟಾರ್ ನಟರಿಗೆ ಕೊಡುವ ಅರ್ಧ ಸಂಭಾವನೆಯನ್ನು ಸಹ ನಟಿಯರಿಗೆ ನೀಡುವುದಿಲ್ಲ. ಆ ಬಗ್ಗೆ ಸದ್ಯ ಶೃತಿ ಹರಿಹರನ್ ಇತ್ತೀಚಿಗಷ್ಟೆ ನಡೆದ 'ನಂ 1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ. ಕಾರ್ಯಕ್ರಮದಲ್ಲಿ ಶಿವರಾಜ್ ಕುಮಾರ್ ''ನೀವು ಇಂಡಸ್ಟ್ರಿಯಲ್ಲಿ ಇರುವ ಯಾವ ಒಂದು ವಿಷಯವನ್ನು ಬದಲಾಯಿಸುತ್ತೀರಾ ಎಂದರು. ಆಗ ಶೃತಿ ಸಂಭಾವನೆ ತಾರತಮ್ಯದ ಬಗ್ಗೆ ಮಾತನಾಡಿದ್ದಾರೆ.

  ''ಸಂಭಾವನೆ ಎನ್ನುವುದು ಕಥೆಯಲ್ಲಿ ಒಂದು ಪಾತ್ರಕ್ಕೆ ಇರುವ ಪ್ರಾಮುಖ್ಯತೆ ಮೇಲೆ ನಿರ್ಧಾರ ಆಗಬೇಕು. ಆ ವಿಚಾರದಲ್ಲಿ ನನಗೆ ಬದಲಾವಣೆ ಆಗಬೇಕು ಎನಿಸುತ್ತದೆ.'' ಎಂದು ಶೃತಿ ಹೇಳಿದರು. ಈ ವೇಳೆ ನಟಿ ಶ್ರದ್ಧಾ ಶ್ರೀನಾಥ್ ಸಹ ಜೊತೆಗಿದ್ದರು. ಶೃತಿ ಹರಿಹರನ್ ಇದುವರೆಗೆ ಮಾಡಿರುವ ಬಹುತೇಕ ಸಿನಿಮಾಗಳಲ್ಲಿ ಅವರ ಪಾತ್ರ ತುಂಬ ಪ್ರಾಮುಖ್ಯತೆ ಇದೆ. ಹೀಗಿರುವಾಗ ಗಂಡು - ಹೆಣ್ಣು, ನಟ - ನಟಿ ಎನ್ನುವುದನ್ನು ಬಿಟ್ಟು ಪಾತ್ರಕ್ಕೆ ಬೆಲೆ ಕೊಟ್ಟು ಸಂಭಾವನೆಯನ್ನು ನಿರ್ಧಾರ ಮಾಡಬೇಕು ಎನ್ನುವುದು ಶೃತಿ ಅಭಿಪ್ರಾಯ.

  English summary
  Actress Sruthi Hariharan spoke about remuneration discrimination in movie industry

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X