For Quick Alerts
  ALLOW NOTIFICATIONS  
  For Daily Alerts

  ಆದಮ್ ಪಾಶಾಗೆ ಅವಮಾನ: 'ತಕಧಿಮಿತ' ಡ್ಯಾನ್ಸ್ ರಿಯಾಲಿಟಿ ಶೋದಿಂದ ವಾಕ್ ಔಟ್.!

  |
  ಅಕುಲ್ ಬಾಲಾಜಿ ವಿರುದ್ಧ ದೂರು ನೀಡಲು ಮುಂದಾದ ಆದಂ ಪಾಷಾ | FILMIBEAT KANNADA

  'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದಲ್ಲಿ ಕರ್ನಾಟಕದ ವೀಕ್ಷಕರ ಗಮನ ಸೆಳೆದ ಸ್ಪರ್ಧಿ ಆದಮ್ ಪಾಶಾ. ಯಾಕಂದ್ರೆ, 'ಬಿಗ್ ಬಾಸ್' ಕನ್ನಡ ಇತಿಹಾಸದಲ್ಲಿ ದೊಡ್ಮನೆ ಸೇರಿದ ಮೊದಲ LGBTQIA ಸಮುದಾಯದವರು ಈ ಆದಮ್ ಪಾಶಾ.

  ತಮ್ಮ ವ್ಯಕ್ತಿತ್ವ, ತಾವು ಎದುರಿಸಿದ ಕಷ್ಟಗಳು, ಅವಮಾನವನ್ನೆಲ್ಲ 'ಬಿಗ್ ಬಾಸ್' ಮನೆಯಲ್ಲಿ ಹೊರಹಾಕಿ ವೀಕ್ಷಕರ ಮನ ಗೆದ್ದಿದ್ದರೂ, ಹೆಚ್ಚು ವಾರಗಳ ಕಾಲ 'ಒಂಟಿ ಮನೆ'ಯಲ್ಲಿ ಇರಲು ಆದಮ್ ಪಾಶಾ ಯಶಸ್ವಿ ಆಗಲಿಲ್ಲ.

  'ಬಿಗ್ ಬಾಸ್ ಕನ್ನಡ-6' ಮುಗಿದ್ಮೇಲೆ ಆದಮ್ ಪಾಶಾ ಕಾಣಿಸಿಕೊಂಡಿದ್ದು 'ತಕಧಿಮಿತ' ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ. ಸಾಲ್ಸಾ ಸೇರಿದಂತೆ ಹಲವು ನೃತ್ಯ ಪ್ರಕಾರಗಳನ್ನು ಕರಗತ ಮಾಡಿಕೊಂಡಿರುವ ಆದಮ್ ಪಾಶಾಗೆ 'ತಕಧಿಮಿತ' ವೇದಿಕೆ ಹೇಳಿ ಮಾಡಿಸಿದ್ದು. ಆದ್ರೀಗ ನೋಡಿದರೆ ಮನಸ್ಸಿಗೆ ಬೇಸರ ಮಾಡಿಕೊಂಡು ಅದೇ ಡ್ಯಾನ್ಸ್ ರಿಯಾಲಿಟಿ ಶೋದಿಂದ ಆದಮ್ ಪಾಶಾ ಹೊರ ನಡೆದಿದ್ದಾರೆ.

  ಹಾಗಾದ್ರೆ, ಆದಮ್ ಪಾಶಾ ಮುನಿಸಿಗೆ ಕಾರಣ ಏನು.? 'ತಕಧಿಮಿತ' ವೇದಿಕೆ ಮೇಲೆ ನಡೆದಿದ್ದೇನು.? ಎಲ್ಲದರ ಸಂಪೂರ್ಣ ಮಾಹಿತಿ ಫೋಟೋ ಸ್ಲೈಡ್ ಗಳಲ್ಲಿ ಓದಿರಿ...

  'ತಕಧಿಮಿತ' ಶೋದಿಂದ ಆದಮ್ ಪಾಶಾ ವಾಕ್ ಔಟ್.!

  'ತಕಧಿಮಿತ' ಶೋದಿಂದ ಆದಮ್ ಪಾಶಾ ವಾಕ್ ಔಟ್.!

  ಕಲರ್ಸ್ ಕನ್ನಡ ವಾಹಿನಿಯಲ್ಲಿ ಎರಡು ವಾರಗಳ ಹಿಂದೆಯಷ್ಟೇ ಶುರುವಾದ ಕಾರ್ಯಕ್ರಮ 'ತಕಧಿಮಿತ' ಡ್ಯಾನ್ಸ್ ರಿಯಾಲಿಟಿ ಶೋ. ಎರಡು ವಾರಗಳಲ್ಲೇ ಈ ಶೋ ವಿವಾದಕ್ಕೀಡಾಗಿದೆ. ಈ ಕಾರ್ಯಕ್ರಮದ ವೇದಿಕೆ ಮೇಲೆ ನಡೆದ ಕೆಲ ಘಟನೆಗಳಿಂದ ಮನನೊಂದು ಆದಮ್ ಪಾಶಾ ವಾಕ್ ಔಟ್ ಆಗಿದ್ದಾರೆ.

  ಆಡಮ್ ನ ಔಟ್ ಮಾಡಿದ 'ಬಿಗ್ ಬಾಸ್'ಗೆ ಡೌನ್ ಡೌನ್ ಎಂದ ವೀಕ್ಷಕರು.!

  ದೂರು ಕೊಡಲು ಮುಂದಾಗಿರುವ ಆದಮ್ ಪಾಶಾ.!

  ದೂರು ಕೊಡಲು ಮುಂದಾಗಿರುವ ಆದಮ್ ಪಾಶಾ.!

  'ತಕಧಿಮಿತ' ಡ್ಯಾನ್ಸ್ ರಿಯಾಲಿಟಿ ಶೋದ ನಿರೂಪಕ ಅಕುಲ್ ಬಾಲಾಜಿ ಮತ್ತು ನಿರ್ದೇಶಕಿ ಶ್ರದ್ಧಾ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ಕೊಡಲು ಆದಮ್ ಪಾಶಾ ಮುಂದಾಗಿದ್ದಾರೆ.

  "ತಂದೆ-ತಾಯಿ ನನ್ನನ್ನು ದೂರ ಮಾಡಿದರು" - ಆಡಂ ಪಾಶಾ

  ಆದಮ್ ಪಾಶಾ ಬೇಸರಕ್ಕೆ ಕಾರಣವೇನು.?

  ಆದಮ್ ಪಾಶಾ ಬೇಸರಕ್ಕೆ ಕಾರಣವೇನು.?

  'ತಕಧಿಮಿತ' ವೇದಿಕೆ ಮೇಲೆ ಆದಮ್ ಪಾಶಾಗೆ ನಿರೂಪಕ ಅಕುಲ್ ಬಾಲಾಜಿಯಿಂದ ಅವಮಾನ ಆಗಿದ್ಯಂತೆ. ಸ್ತ್ರೀಲಿಂಗ, ಪುಲ್ಲಿಂಗ ಅಂತೆಲ್ಲಾ ಆದಮ್ ಪಾಶಾ ಬಗ್ಗೆ ಅಕುಲ್ ಬಾಲಾಜಿ ಕೀಳಾಗಿ ಮಾತನಾಡಿದ್ದರಂತೆ. ಇದರಿಂದ ಬೇಸರಗೊಂಡ ಆದಮ್ ಪಾಶಾ ಪೊಲೀಸ್ ಠಾಣೆಯಲ್ಲಿ ದೂರು ಕೊಡಲು ನಿರ್ಧರಿಸಿದ್ದಾರೆ.

  ಶ್ರದ್ಧಾ ಮೇಲೆ ಯಾಕೆ ಕೋಪ.?

  ಶ್ರದ್ಧಾ ಮೇಲೆ ಯಾಕೆ ಕೋಪ.?

  ಆದಮ್ ಪಾಶಾಗೆ 'ತಕಧಿಮಿತ' ಡೈರೆಕ್ಟರ್ ಶ್ರದ್ಧಾ ಧಮ್ಕಿ ಹಾಕಿದ್ದಾರಂತೆ. ''ಜನ ವೋಟ್ ಮಾಡಿದರೂ, ನಿಮ್ಮನ್ನ ಎಲಿಮಿನೇಟ್ ಮಾಡುತ್ತೇನೆ'' ಅಂತ ಆದಮ್ ಪಾಶಾಗೆ ಶ್ರದ್ಧಾ ಹೇಳಿದ್ದರಂತೆ. ಹೀಗಾಗಿ, ಇದು ರಿಯಾಲಿಟಿ ಶೋ ಅಲ್ಲ ಎಂದು ಕಾರ್ಯಕ್ರಮದಿಂದ ಆದಮ್ ಪಾಶಾ ವಾಕ್ ಔಟ್ ಆಗಿದ್ದಾರೆ.

  ಆದಮ್ ಪಾಶಾ ಸಂದರ್ಶನ

  ಆದಮ್ ಪಾಶಾ ಸಂದರ್ಶನ

  ಈ ವಿವಾದದ ಕುರಿತು ಫಿಲ್ಮಿಬೀಟ್ ಕನ್ನಡ ಜೊತೆಗೆ ಆದಮ್ ಪಾಶಾ ಮಾತನ್ನಾಡಿದ್ದಾರೆ. ಆ ಲೇಖನದ ಲಿಂಕ್ ಇಲ್ಲಿದೆ, ಕ್ಲಿಕ್ ಮಾಡಿ ಓದಿರಿ...

  'ತಕಧಿಮಿತ' ಶೋನಲ್ಲಿ ನಡೆದಿದ್ದೇನು: ಆದಮ್ ಪಾಶಾ ಎಕ್ಸ್ ಕ್ಲೂಸಿವ್ ಸಂದರ್ಶನ

  English summary
  Bigg Boss Kannada 6 Contestant Adam Pasha walks out of 'Takadhimita' dance reality show.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X