»   » ಔಟ್ ಆದ್ಮೇಲೆ ಈಗೆಲ್ಲಿದ್ದಾರೆ ನಿಮ್ಮೆಲ್ಲರ ಅಚ್ಚುಮೆಚ್ಚಿನ ಹುಚ್ಚ ವೆಂಕಟ್?

ಔಟ್ ಆದ್ಮೇಲೆ ಈಗೆಲ್ಲಿದ್ದಾರೆ ನಿಮ್ಮೆಲ್ಲರ ಅಚ್ಚುಮೆಚ್ಚಿನ ಹುಚ್ಚ ವೆಂಕಟ್?

Posted By:
Subscribe to Filmibeat Kannada

ಕಡೆಗೂ 'ಬಿಗ್ ಬಾಸ್' ಮನೆಯಲ್ಲಿ ಆಗಬಾರದ್ದು ಆಗೇ ಹೋಯ್ತು. ಹುಚ್ಚ ವೆಂಕಟ್ ಹುಚ್ಚಾಟ ಏನಿದ್ರೂ ಬಾಯ್ಮಾತಿಗೆ ಮಾತ್ರ ಸೀಮಿತ ಅಂತ ಅಂದುಕೊಂಡವ್ರಿಗೆ ಯೂಟ್ಯೂಬ್ ಸ್ಟಾರ್ 'ಬಿಗ್' ಶಾಕ್ ನೀಡೇಬಿಟ್ರು.

ಗಾಯಕ ರವಿ ಮುರೂರು ರವರಿಗೆ ಥಳಿಸಿ ಹುಚ್ಚ ವೆಂಕಟ್ 'ಬಿಗ್ ಬಾಸ್-3' ಕಾರ್ಯಕ್ರಮದಿಂದ ಹೊರಬಿದ್ದಿದ್ದಾರೆ. ಬೌನ್ಸರ್ ಗಳ ಸಹಾಯದಿಂದ ಹುಚ್ಚ ವೆಂಕಟ್ ರನ್ನ 'ಬಿಗ್ ಬಾಸ್' ಮನೆಯಿಂದ ಹೊರಹಾಕಲಾಗಿದೆ. ['ಬಿಗ್ ಬಾಸ್' ಮನೆಯಿಂದ ಹುಚ್ಚ ವೆಂಕಟ್ 'ಕಿಕ್'ಔಟ್ ಆಗಿದ್ಯಾಕೆ?]

huccha-venkat

'ಬಿಗ್ ಬಾಸ್-3' ಕಾರ್ಯಕ್ರಮದಿಂದ ಹೊರಬಿದ್ದ ಮೇಲೆ ಹುಚ್ಚ ವೆಂಕಟ್ ಈಗೆಲ್ಲಿದ್ದಾರೆ ಅನ್ನುವ ಪ್ರಶ್ನೆ ಅವರ ಅಭಿಮಾನಿಗಳಲ್ಲಿ ಕಾಡ್ತಿದೆ. 'ಬಿಗ್ ಬಾಸ್' ಮನೆಯಿಂದ ಆಚೆ ಬಂದರೂ, ಹುಚ್ಚ ವೆಂಕಟ್ ಬಿಡದಿ ಬಳಿಯ ಇನ್ನೋವೇಟಿವ್ ಫಿಲ್ಮ್ ಸಿಟಿಯಿಂದ ಹೊರಬಂದಿಲ್ಲ.

ಹುಚ್ಚ ವೆಂಕಟ್ ರನ್ನ ರಿಸೀವ್ ಮಾಡಿಕೊಳ್ಳೋಕೆ ಅವರ ಕುಟುಂಬ ಸದಸ್ಯರು ಅಲ್ಲಿಗೆ ತೆರಳಿಲ್ಲ. ಇಂದಿರಾನಗರದ ಮನೆಗೆ ಹುಚ್ಚ ವೆಂಕಟ್ ಇನ್ನೂ ಕಾಲಿಟ್ಟಿಲ್ಲ. ಹಾಗಾದ್ರೆ, ಅವರು ಎಲ್ಲಿದ್ದಾರೆ, ಏನ್ ಮಾಡ್ತಿದ್ದಾರೆ? ಈ ಪ್ರಶ್ನೆಗೆ ಯಾರೂ ಉತ್ತರ ಕೊಡುತ್ತಿಲ್ಲ. [ಟಿ.ಆರ್.ಪಿ ಕಿಂಗ್ ಹುಚ್ಚ ವೆಂಕಟ್ ವಿರುದ್ಧ ಗುಡುಗಿದ ಕಿಚ್ಚ ಸುದೀಪ್.!]

ಹುಚ್ಚ ವೆಂಕಟ್ ಫೋನ್ ಇನ್ನೂ ಆನ್ ಆಗಿಲ್ಲ. ಮೂಲಗಳ ಪ್ರಕಾರ, ಇವತ್ತಿನ 'ಸೂಪರ್ ಸಂಡೆ ವಿತ್ ಸುದೀಪ್' ಕಾರ್ಯಕ್ರಮದಲ್ಲಿ ಹುಚ್ಚ ವೆಂಕಟ್ ಭಾಗಿಯಾಗಿಲ್ಲ. ಭಾಗವಹಿಸುವ ಇಚ್ಛೆಯೂ ಅವರಿಗಿಲ್ಲವಂತೆ. ಅಂದ್ಮೇಲೆ ಇವತ್ತಿನ 'ಬಿಗ್ ಬಾಸ್' ಎಪಿಸೋಡ್ ವಿಶೇಷ ಏನು? ನಮಗಂತೂ ಗೊತ್ತಿಲ್ಲ.

ವರದಿಗಳ ಪ್ರಕಾರ, ಕಿಚ್ಚ ಸುದೀಪ್ ಮಧ್ಯಸ್ತಿಕೆಯಲ್ಲಿ 'ಬಿಗ್ ಬಾಸ್' ಮನೆಗೆ ವಾಪಸ್ ತೆರಳುವ ಬಗ್ಗೆ ಹುಚ್ಚ ವೆಂಕಟ್ ಮನವೊಲಿಸುವ ಕಾರ್ಯ ನಡೆದಿದೆ. ಆದ್ರೆ, ಕಲರ್ಸ್ ಕನ್ನಡ ವಾಹಿನಿ ಬಿಜಿನೆಸ್ ಹೆಡ್ ಮತ್ತು 'ಬಿಗ್ ಬಾಸ್-3' ಕಾರ್ಯಕ್ರಮ ನಿರ್ದೇಶಕ ಪರಮೇಶ್ವರ ಗುಂಡ್ಕಲ್ ಹೇಳುವ ಪ್ರಕಾರ ಹುಚ್ಚ ವೆಂಕಟ್ ಪಾಲಿಗೆ 'ಬಿಗ್ ಬಾಸ್' ಮನೆ ಬಾಗಿಲು ಮುಚ್ಚಿದೆ. [ಬಿಗ್ ಬಾಸ್ ಮನೆಗೆ ಹುಚ್ಚ ವೆಂಕಟ್ ರೀ ಎಂಟ್ರಿ ಡೌಟ್]

ಹಾಗಿದ್ಮೇಲೆ ಇಷ್ಟೊತ್ತಿಗೆ ಹುಚ್ಚ ವೆಂಕಟ್ ಹೊರಗೆ ಬರಬೇಕಿತ್ತು. ಆದ್ರೆ, ಅಭಿಮಾನಿಗಳಿಗೆ ಅವರ ದರ್ಶನ ಇನ್ನೂ ಆಗಿಲ್ಲ. ಮುಂದೇನಾಗುತ್ತೋ, ಕಾದು ನೋಡುವುದಷ್ಟೇ ಎಲ್ಲರಿಗೂ ಇರುವ ಆಪ್ಷನ್.!

English summary
YouTube Star Huccha Venkat is evicted from Bigg Boss Kannada 3 for beating up Singer Ravi Muroor. After Eviction Huccha Venkat has not returned to his home. Where is he now?
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada