»   » 'ಅಗ್ನಿಸಾಕ್ಷಿ' ಮಾಯಗೆ ಒಲಿದು ಬಂತು ಸಿನಿಮಾ ಅವಕಾಶ!

'ಅಗ್ನಿಸಾಕ್ಷಿ' ಮಾಯಗೆ ಒಲಿದು ಬಂತು ಸಿನಿಮಾ ಅವಕಾಶ!

Posted By:
Subscribe to Filmibeat Kannada

ಕಿರುತೆರೆಯ ಜನಪ್ರಿಯ ಧಾರಾವಾಹಿ 'ಅಗ್ನಿಸಾಕ್ಷಿ'ಯ ಅನೇಕ ಪಾತ್ರಗಳು ವೀಕ್ಷಕರ ಮನ ಗೆದ್ದಿದೆ. ಅದರಲ್ಲಿ ಒಂದು ಪಾತ್ರವಾದ ಮಾಯ ರೋಲ್ ನಲ್ಲಿ ನಟಿ ಇಶಿತಾ ವರ್ಷಾ ಕಾಣಿಸಿಕೊಂಡಿದ್ದರು. ಈಗ ಅವರಿಗೆ ಸಿನಿಮಾ ಅವಕಾಶ ಬಂದಿದೆ.

'ಸ್ವಾರ್ಥರತ್ನ' ಎಂಬ ಹೊಸ ಸಿನಿಮಾದ ಮೂಲಕ ಇಶಿತಾ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ತಮ್ಮ ಮೊದಲ ಸಿನಿಮಾದಲ್ಲಿಯೇ ಟಾಮ್ ಬಾಯ್ ರೋಲ್ ನಲ್ಲಿ ನಟಿಸಲಿದ್ದಾರಂತೆ. ಟಾಮ್ ಬಾಯ್ ಅಂದರೆ ಇದು ಗಂಡುಬೀರಿ ಪಾತ್ರವಲ್ಲ. ಸುಂದರವಾಗಿ ಕಾಣಿಸಿಕೊಳ್ಳಲು ಇಷ್ಟ ಇಲ್ಲದ ಹುಡುಗಿ ಹುಡುಗರ ರೀತಿ ಡ್ರೆಸ್ ಮಾಡಿಕೊಳ್ಳುತ್ತಿರುತ್ತಾಳೆ ಆ ಹುಡುಗಿ ಪಾತ್ರವನ್ನು ಇಶಿತಾ ನಿರ್ವಹಿಸಲಿದ್ದಾರೆ.

ಚಿತ್ರದಲ್ಲಿ ಇಶಿತಾ ಟಾಮ್ ಬಾಯ್ ಆಗಿದ್ದು, ಹುಡುಗರ ರೀತಿ ನಡೆಯುವುದನ್ನು ಅಭ್ಯಾಸ ಮಾಡಿಕೊಳ್ಳಲು ಸುದೀಪ್, ಪುನೀತ್ ಅವರ ಸಿನಿಮಾಗಳನ್ನು ನೋಡಿ ಅವರ ವಾಕಿಂಗ್ ಸ್ಟೈಲ್ ಅನ್ನು ಗಮನಿಸುತ್ತಿದ್ದಾರಂತೆ.

Agnisakshi actress Ishitha Varsha playing lead role in Swartha Rathna movie

'ಸ್ವಾರ್ಥರತ್ನ' ಸಿನಿಮಾ ಸಿನಿಮಾಗೆ ಇಬ್ಬರು ನಾಯಕಿಯರಿದ್ದು, ಚಿತ್ರದ ಎರಡನೇ ನಾಯಕಿಯಾಗಿ ಸ್ನೇಹ ಸಿಂಗ್ ಕಾಣಿಸಿಕೊಳ್ಳುತ್ತಿದ್ದಾರೆ. ಆದರ್ಶ್ ಚಿತ್ರದ ನಾಯಕರಾಗಿದ್ದು, ಅಶ್ವಿನ್ ನಿರ್ದೇಶನ ಮಾಡಿದ್ದಾರೆ. ಇದೊಂದು ಕಾಮಿಡಿ ಸಿನಿಮಾವಾಗಿದ್ದು, ಸಾಧು ಕೋಕಿಲ ಮತ್ತು ರಮೇಶ್ ಭಟ್ ಚಿತ್ರದಲ್ಲಿದ್ದಾರೆ.

English summary
Agnisakshi kannada serial actress Ishitha Varsha playing the lead role in 'Swartha Rathna' kannada movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada