For Quick Alerts
  ALLOW NOTIFICATIONS  
  For Daily Alerts

  'ಅಗ್ನಿಸಾಕ್ಷಿ'ಯ ಸೂರ್ಯ- ಸನ್ನಿಧಿ ಒಟ್ಟಿಗೆ ಬಣ್ಣ ಹಚ್ಚಲಿದ್ದಾರೆ:ಯಾವ ಕಥೆಗಾಗಿ ಗೊತ್ತಾ?

  |

  'ಅಗ್ನಿ ಸಾಕ್ಷಿ' ಅಂದಾಕ್ಷಣ ಮೊದಲು ನೆನಪಾಗುವುದೇ ಸನ್ನಿಧಿ ಮತ್ತು ಸೂರ್ಯ. ಅಗ್ನಿ ಸಾಕ್ಷಿ ಕಿರುತೆರೆಯಲ್ಲಿ ದೊಡ್ಡ ಯಶಸ್ಸು ಕಂಡ ಧಾರಾವಾಹಿ. ಈ ಧಾರಾವಾಹಿಯಲ್ಲಿ ಬಂದ ಸೂರ್ಯ ಸನ್ನಿಧಿ ಪಾತ್ರಗಳು ಕೂಡ ಅಷ್ಟೇ ಯಶಸ್ವಿ ಆಗಿವೆ. ಆ ಧಾರಾವಾಹಿ ಮುಗಿದು ವರ್ಷಗಳೇ ಉರುಳಿವೆ. ಈಗ ಮತ್ತೆ ಸನ್ನಿಧಿ ಸೂರ್ಯನ ಹೆಸರು ಒಟ್ಟಿಗೆ ಹೇಳಿ ಬರುತ್ತಿದೆ.

  'ಅಗ್ನಿ ಸಾಕ್ಷಿ'ಯ ವಿಜಯ್ ಸೂರ್ಯ ಮತ್ತು ವೈಷ್ಣವಿ ಈಗ ಮತ್ತೆ ಒಂದಾಗುತ್ತಿದ್ದಾರೆ. ಕಿರುತೆರೆಯಲ್ಲಿ ಈ ಜೋಡಿ ಮತ್ತೇ ಮೋಡಿ ಮಾಡಲು ತಯಾರಾಗುತ್ತಿದೆ.

  ಅಗ್ನಿ ಸಾಕ್ಷಿ ಮೂಲಕ ಈ ಜೋಡಿ ಮನೆ ಮಾತಾಗಿತ್ತು. ಧಾರಾವಾಹಿ ಪ್ರಸಾರ ಆಗುತ್ತಿದ್ದಾಗ, ಎಲ್ಲಿ ನೋಡಿದರು ಇವರ ಬಗ್ಗೆಯೇ ಚರ್ಚೆ ನಡೆಯುತ್ತಿತ್ತು. ಮನೆ ಮನೆಯಲ್ಲೂ ಸೂರ್ಯ-ಸನ್ನಿಧಿ ಸ್ಥಾನ ಪಡೆದುಕೊಂಡಿದ್ದರು.

  ಹೊಸ ಧಾರಾವಾಹಿಯಲ್ಲಿ ವಿಜಯ್ ಸೂರ್ಯ ಮತ್ತು ವೈಷ್ಣವಿ!

  ಹೊಸ ಧಾರಾವಾಹಿಯಲ್ಲಿ ವಿಜಯ್ ಸೂರ್ಯ ಮತ್ತು ವೈಷ್ಣವಿ!

  ಈಗ ಹೊಸ ವಿಚಾರ ಅಂದರೆ ಜೀ ಕನ್ನಡದಲ್ಲಿ ಹೊಸ ಧಾರಾವಾಹಿ ಒಂದು ಸೆಟ್ಟೇರುತ್ತಲಿದೆ. ಈ ಧಾರಾವಾಹಿಯಲ್ಲಿ ಅಗ್ನಿಸಾಕ್ಷಿ ಜೋಡಿ ಒಂದಾಗುತ್ತದೆ ಎನ್ನು ಸುದ್ದಿ ಬಂದಿದೆ. ಕರ್ಣ ಎನ್ನುವ ಹೆಸರಿನಲ್ಲಿ ಬರುತ್ತಿರುವ ಧಾರಾವಾಹಿಯಲ್ಲಿ ಈ ಜೋಡಿ ಒಟ್ಟಿಗೆ ಬರಲಿದೆ. ಶೀಘ್ರದಲ್ಲೇ ಕರ್ಣ ಧಾರಾವಾಹಿ ಪ್ರಸಾರ ಆಗಲಿದ್ದು, ಹೆಚ್ಚಿನ ಮಾಹಿತಿ ಹೊರ ಬೀಳಲಿದೆ. ಧಾರವಾಹಿಯ ನಾಯಕನಾಗಿ ವಿಜಯ್ ಸೂರ್ಯ, ನಾಯಕಿ ಆಗಿ ವೈಷ್ಣವಿ ಅಭಿನಯಿಸಲಿದ್ದಾರೆ.

  ಕರ್ಣನ ರೂಪದಲ್ಲಿ ನಟ ವಿಜಯ್ ​ಸೂರ್ಯ!

  ಕರ್ಣನ ರೂಪದಲ್ಲಿ ನಟ ವಿಜಯ್ ​ಸೂರ್ಯ!

  ಕರ್ಣ ಎನ್ನುವ ಹೆಸರು ಧಾರಾವಾಹಿಗೆ ಇದೆ. ಹಾಗಾಗಿ ಈ ಧಾರಾವಾಹಿಯಲ್ಲಿ ಕರ್ಣನಾಗಿ ವಿಜಯ್ ಸೂರ್ಯ ಕಾಣಿಸಿಕೊಳ್ಳಲಿದ್ದಾರೆ. ಇನ್ನು 'ಅಗ್ನಿ ಸಾಕ್ಷಿ' ಧಾರಾವಾಹಿಯ ಮೂಲಕ ಮನೆ ಮಾತಾಗಿದ್ದ ವಿಜಯ್​ ಸೂರ್ಯ ನಾಯಕ ನಟನಾಗಿ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಕಿರುತೆರೆ ಬಿಟ್ಟು ಬೆಳ್ಳಿತೆರೆಗೆ ವಿಜಯ್​ ಸೂರ್ಯ ಹೋಗಿದ್ದರು. ಇದೀಗ ಮತ್ತೆ ಕಿರುತೆರೆಗೆ ಕಮ್​ ಬ್ಯಾಕ್​ ಮಾಡಲಿದ್ದಾರೆ. ಈ ನಡುವೆ ವಿಜಯ್ ಸೂರ್ಯ ಅವರಿಗೆ 'ಅಗ್ನಿ ಸಾಕ್ಷಿ' ಕೊಟ್ಟಷ್ಟು ಯಶಸ್ಸು ಮತ್ಯಾವ ಶೋ, ಧಾರಾವಾಹಿ, ಸಿನಿಮಾ ಕೊಟ್ಟಿಲ್ಲ. ಈಗ ಮತ್ತೇ ಕಿರುತೆರೆಯಲ್ಲೇ ವಿಜಯ್ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

  'ಅಗ್ನಿ ಸಾಕ್ಷಿ' ಸನ್ನಿಧಿ ಕರ್ಣನಿಗೆ ಜೋಡಿ ಆಗ್ತಾರ?

  'ಅಗ್ನಿ ಸಾಕ್ಷಿ' ಸನ್ನಿಧಿ ಕರ್ಣನಿಗೆ ಜೋಡಿ ಆಗ್ತಾರ?

  ಕರ್ಣನಾಗಿ ವಿಜಯ್ ಸೂರ್ಯ ಕಾಣಿಸಿಕೊಳ್ಳಲಿದ್ದಾರೆ. ಆದರೆ ನಾಯಕಿಯ ಪಾತ್ರಕ್ಕೆ ವೈಷ್ಣವಿ ಇನ್ನು ಗ್ರೀನ್ ಸಿಗ್ನಲ್ ಕೊಟ್ಟಿಲ್ಲ. ಸದ್ಯ ಈ ಬಗ್ಗೆ ವೈಷ್ಣವಿ ಅವರೊಂದಿಗೆ ಧಾರಾವಾಹಿ ತಂಡ ಮಾತುಕತೆ ನಡೆಸಿದೆಯಂತೆ. ಅವರು ಓಕೆ ಎನ್ನುವುದೊಂದೆ ಬಾಕಿ. ಬಿಗ್​ ಬಾಸ್​ ಮನೆಯಿಂದ ಹೊರಗಡೆ ಬಂದ ಬಳಿಕ ವೈಷ್ಣವಿಗೆ ಸಿನಿಮಾ ಆಫರ್​​ಗಳು ಬಂದಿದೆಯಂತೆ. ಹಾಗಾಗಿ ಡೇಟ್ ಹೊಂದಾಣಿಕೆ ಮಾಡಿಕೊಂಡು ಕರ್ಣ ತಂಡವನ್ನು ಸೇರುವ ಸಾಧ್ಯತೆ ಇದೆ.

  'ಅಗ್ನಿ ಸಾಕ್ಷಿ'ಯಿಂದ ಕರುನಾಡ ಜನರಿಗೆ ಹತ್ತಿರ ಆಗಿದ್ದ ಜೋಡಿ!

  'ಅಗ್ನಿ ಸಾಕ್ಷಿ'ಯಿಂದ ಕರುನಾಡ ಜನರಿಗೆ ಹತ್ತಿರ ಆಗಿದ್ದ ಜೋಡಿ!

  ಅಗ್ನಿಸಾಕ್ಷಿ ಸೀರಿಯಲ್​ ಮೂಲಕ ಈ ಜೋಡಿ ಬಹಳ ದೊಡ್ಡ​ ಹೆಸರು ಮಾಡಿತ್ತು. ಪುಟ್ಟ ಮಕ್ಕಳಿಂದ ಹಿಡಿದು ವೃದ್ಧರು ಕೂಡ ಈ ಧಾರಾವಾಹಿಯ ಮಿಸ್‌ ಮಾಡದೇ ನೋಡುತ್ತಿದ್ದರು. ವಿಜಯ್​ ಸೂರ್ಯ ಹಾಗೂ ವೈಷ್ಣವಿ ಎಲ್ಲರ ಮನಸ್ಸನ್ನು ಗೆದ್ದಿದ್ದರು. ಆರು ವರ್ಷಗಳಿಗೂ ಅಧಿಕ ಕಾಲ ಈ ಧಾರಾವಾಹಿ ಪ್ರಸಾರ ಆಗಿತ್ತು. ಇದೀಗ ಮತ್ತೆ ಕಿರುತೆರೆಗೆ ಇಬ್ಬರು ಕಮ್​ ಬ್ಯಾಕ್​ ಮಾಡುವ ಸಾಧ್ಯತೆ ಹೆಚ್ಚಾಗಿತ್ತು, ಕುತೂಹಲ ಮೂಡಿಸಿದೆ.

  English summary
  Agnisakshi serial pair Vijay Surya and Vaishnavi coming together for new serial, know more

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X