»   » ವೈಷ್ಣವಿ ಬಯಕೆಯನ್ನ ಈಡೇರಿಸುತ್ತಾರಾ 'ಅಭಿನಯ ಚಕ್ರವರ್ತಿ' ಸುದೀಪ್.?

ವೈಷ್ಣವಿ ಬಯಕೆಯನ್ನ ಈಡೇರಿಸುತ್ತಾರಾ 'ಅಭಿನಯ ಚಕ್ರವರ್ತಿ' ಸುದೀಪ್.?

Posted By:
Subscribe to Filmibeat Kannada

'ಅಗ್ನಿಸಾಕ್ಷಿ' ಧಾರಾವಾಹಿಯಿಂದ ಕರುನಾಡ ಮನೆಮನಗಳಲ್ಲಿ ಖ್ಯಾತಿ ಗಳಿಸಿರುವ ಸನ್ನಿಧಿ (ವೈಷ್ಣವಿ) ಸ್ಯಾಂಡಲ್ ವುಡ್ ಗೂ ಪದಾರ್ಪಣೆ ಮಾಡಿ ಎರಡು ಚಿತ್ರಗಳಲ್ಲಿ ಆಭಿನಯಿಸಿದ್ದಾರೆ.

ಇಂತಿಪ್ಪ ವೈಷ್ಣವಿಗೆ ಒಂದು ಆಸೆ ಇದೆ. ಕಿಚ್ಚ ಸುದೀಪ್ ಜೊತೆ ನಟಿಸುವ ಬಯಕೆಯನ್ನ ಕಲರ್ಸ್ ಸೂಪರ್ ವಾಹಿನಿಯ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ ಹೊರಹಾಕಿದ್ದಾರೆ ನಟಿ ವೈಷ್ಣವಿ.

'Agnisakshi' Vaishnavi express her desire to work with Kiccha Sudeep

ಕಲರ್ಸ್ ಸೂಪರ್ ವಾಹಿನಿಯ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ ಭಾಗವಹಿಸಿದ ನಟಿ ವೈಷ್ಣವಿ ಗೆ ನಿರೂಪಕ ಅಕುಲ್ ಬಾಲಾಜಿ, 'Rapid Fire' ರೌಂಡ್ ನಲ್ಲಿ, ''ಇವರ ಜೊತೆಗೆ ಹೀರೋಯಿನ್ ಆಗಿ ಆಕ್ಟ್ ಮಾಡುವ ಚಾನ್ಸ್ ಸಿಕ್ಕರೆ, ಯಾರನ್ನ ಆಯ್ಕೆ ಮಾಡಿಕೊಳ್ಳುತ್ತೀರಾ'' ಎಂದು ''ದರ್ಶನ್, ಸುದೀಪ್, ಗಣೇಶ್, ಯಶ್'' ಎಂಬ ಆಯ್ಕೆಗಳನ್ನ ಮುಂದಿಟ್ಟರು.

ಆಗ ಹಿಂದು ಮುಂದು ನೋಡದ ವೈಷ್ಣವಿ, ''ಸುದೀಪ್'' ಹೆಸರನ್ನ ಹೇಳಿದರು. ಸುದೀಪ್ ರವರ ಸ್ಟೈಲ್, ಆಟಿಟ್ಯೂಡ್ ಅಂದ್ರೆ ವೈಷ್ಣವಿಗೆ ಸಖತ್ ಇಷ್ಟವಂತೆ.

ಕನ್ನಡ ಪ್ರತಿಭೆಗಳಿಗೆ ಮಣೆ ಹಾಕುವ ಸುದೀಪ್, ವೈಷ್ಣವಿ ಆಸೆಯನ್ನ ಈಡೇರಿಸುತ್ತಾರಾ ನೋಡೋಣ...

English summary
'Agnisakshi' Vaishnavi expresses her desire to share screen space with Kiccha Sudeep.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada