»   » 'ಅಗ್ನಿಸಾಕ್ಷಿ' ಸಿದ್ಧಾರ್ಥ್-ಸನ್ನಿಧಿ ಬಗ್ಗೆ ಹರಿದಾಡಿದ ಗಾಳಿ ಸುದ್ದಿ ನಿಜವೇ.?

'ಅಗ್ನಿಸಾಕ್ಷಿ' ಸಿದ್ಧಾರ್ಥ್-ಸನ್ನಿಧಿ ಬಗ್ಗೆ ಹರಿದಾಡಿದ ಗಾಳಿ ಸುದ್ದಿ ನಿಜವೇ.?

Posted By:
Subscribe to Filmibeat Kannada

ಕಲರ್ಸ್ ಕನ್ನಡ ವಾಹಿನಿಯ ಜನಪ್ರಿಯ 'ಅಗ್ನಿಸಾಕ್ಷಿ' ಧಾರಾವಾಹಿಯ ಜೋಡಿ ಸಿದ್ಧಾರ್ಥ್ ಹಾಗೂ ಸನ್ನಿಧಿ ಬರೀ ಕ್ಯಾಮರಾ ಮುಂದೆ ಮಾತ್ರ ಅಲ್ಲ, ನಿಜ ಜೀವನದಲ್ಲಿಯೂ 'ಜೋಡಿ'... ಇಬ್ಬರೂ ಲವ್ ಮಾಡುತ್ತಿದ್ದಾರೆ... ಮದುವೆ ಆಗಲಿದ್ದಾರೆ ಎಂಬೆಲ್ಲ ಮಾತುಗಳು ಕೇಳಿಬಂದಿದ್ದವು.

ಈ ಗಾಸಿಪ್ ಸ್ವತಃ ಸನ್ನಿಧಿ (ವೈಷ್ಣವಿ) ಹಾಗೂ ಸಿದ್ದಾರ್ಥ್ (ವಿಜಯ್ ಸೂರ್ಯ) ಕಿವಿಗೂ ಬಿದ್ದಿದೆ. ಇದೇ ಕಾರಣಕ್ಕೆ ಕಲರ್ಸ್ ಸೂಪರ್ ವಾಹಿನಿಯ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ ಎಲ್ಲ ಗುಸುಗುಸುಗಳಿಗೆ ಬ್ರೇಕ್ ಹಾಕಿದ್ದಾರೆ ನಟಿ ವೈಷ್ಣವಿ. ಮುಂದೆ ಓದಿರಿ....

ಲವರ್ಸ್ ಅಲ್ಲ.!

''ನಾವಿಬ್ಬರೂ ಒಳ್ಳೆಯ ಗೆಳೆಯರು. ನಮ್ಮಿಬ್ಬರ ಮಧ್ಯೆ ಗೆಳೆತನ ಬಿಟ್ಟರೆ ಬೇರೇನೂ ಇಲ್ಲ'' ಎಂದು ಸೂಪರ್ ಟಾಕ್ ಟೈಮ್ ಕಾರ್ಯಕ್ರಮದಲ್ಲಿ ಸ್ಪಷ್ಟ ಪಡಿಸಿದ್ದಾರೆ ನಟಿ ವೈಷ್ಣವಿ.

ರೂಮರ್ಸ್ ಸುಳ್ಳು

''ವಿಜಯ್ ಸೂರ್ಯ ನನಗೆ ತುಂಬಾ ಒಳ್ಳೆಯ ಫ್ರೆಂಡ್. ಆ ತರಹ ರೂಮರ್ಸ್ ಎಲ್ಲ ಸುಳ್ಳು. ನಾವಿಬ್ಬರು ಒಳ್ಳೆಯ ಫ್ರೆಂಡ್ಸ್ ಆಗಿರುವುದರಿಂದಲೇ ಆ ತರಹ ಕೆಮಿಸ್ಟ್ರಿ ಕಾಣುತ್ತಿದೆ'' ಎನ್ನುತ್ತಾರೆ ನಟಿ ವೈಷ್ಣವಿ.

ನಿರೀಕ್ಷೆ ಇರಬಹುದು

''ಗಾಳಿಸುದ್ದಿ ಹೇಗೆ ಬಂತು ಅನ್ನೋದೇ ನನಗೆ ಸರಿಯಾಗಿ ಗೊತ್ತಿಲ್ಲ. ಸೀರಿಯಲ್ ನಲ್ಲಿ ಮೂರು ಬಾರಿ ಮದುವೆ ಆಗಿದ್ದೀವಿ. ಬಹುಶಃ ಅದೇ ಕಾರಣಕ್ಕೆ ಅದೇ ತರಹ ನಿಜ ಜೀವನದಲ್ಲೂ ಮದುವೆ ಆಗಬಹುದು ಎಂಬ ನಿರೀಕ್ಷೆ ಇರಬಹುದು. ಆದ್ರೆ, ಅದೆಲ್ಲವೂ ಸುಳ್ಳು'' - ವೈಷ್ಣವಿ, ನಟಿ

ಯಾರೂ ನಂಬಬೇಡಿ

''ಮದುವೆ ಸ್ವರ್ಗದಲ್ಲಿ ಆಗುವುದು ಅಂತಾರೆ. ಅದನ್ನ ನಾನು ನಂಬಿದ್ದೇನೆ. ನನ್ನ ಹಾಗೂ ವಿಜಯ್ ಸೂರ್ಯ ಮಧ್ಯೆ ಏನೂ ಇಲ್ಲ. ಇಂತಹ ಗಾಳಿ ಸುದ್ದಿಗಳನ್ನ ಯಾರೂ ನಂಬಬೇಡಿ'' ಎಂದು ಕೇಳಿಕೊಂಡಿದ್ದಾರೆ ನಟಿ ವೈಷ್ಣವಿ.

English summary
'Agnisakshi' Vaishnavi speaks about her relationship with Vijay Surya in Colors Super Channel's popular show 'Super Talk Time'
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada