»   » 'ಡೈರೆಕ್ಟರ್ಸ್ ಸ್ಪೆಷಲ್' ಡಬ್ಬಾ ಸಿನಿಮಾ ಎಂದ ಅಕುಲ್

'ಡೈರೆಕ್ಟರ್ಸ್ ಸ್ಪೆಷಲ್' ಡಬ್ಬಾ ಸಿನಿಮಾ ಎಂದ ಅಕುಲ್

By: ಉದಯರವಿ
Subscribe to Filmibeat Kannada

ಗುರುಪ್ರಸಾದ್ ಹೇಳಿದ ಒಂದು ಸಣ್ಣ ಕಥೆ ತಾಯಿಮಗನ ಕುರಿತಾದದ್ದು. ಅದು ಈ ರೀತಿ ಇದೆ. ತಾಯಿ ತೀರಿಕೊಂಡಾಗ ಮಗ ಆಕೆಯನ್ನು ಮಣ್ಣು ಮಾಡದೆ ಶೋಕೇಸ್ ನಲ್ಲಿಡುತ್ತಾನೆ. ಕಾರಣ ತನ್ನ ಪ್ರೀತಿಯ ತಾಯಿಯನ್ನು ಹೂಳಲು ಸುಡಲು ಇಷ್ಟವಾಗದೆ ಆ ರೀತಿ ಮಾಡಿರುತ್ತಾನೆ. ಅದು ಹಾಗೆಯೇ ಮೂರು ವರ್ಷ ಕಳೆಯುತ್ತದೆ. ಒಂದು ದಿನ ಏನೋ ಬರೆದುಕೊಂಡು ಕೂತಿದ್ದ ಮಗನಿಗೆ ಶಾಕಿಂಗ್ ಘಟನೆ ನಡೆಯುತ್ತದೆ.

ಶೋಕೇಸ್ ನಿಂದ ತಾಯಿ ಎದ್ದು ಬರುತ್ತಾರೆ. ಸೀದಾ ಹಿತ್ತಲಕಡೆ ಹೋಗಿ ತನ್ನ ಗಂಡನ ಗೋರಿಯ ಮೇಲೆ ಮಲಗುತ್ತಾಳೆ. ಮಲಗುವುದಕ್ಕೂ ಮುನ್ನ ಮಗನ ಕಡೆ ಒಮ್ಮೆ ನೋಡಿ ಛೀ ಇಷ್ಟು ವರ್ಷದಿಂದ ನನ್ನ ಗಂಡನಿಂದ ನೀನು ದೂರ ಮಾಡಿದೆ ಎಂದು ಬೈಯುತ್ತಾಳೆ. ಇದನ್ನು ನೋಡಿದ ಮಗ ರಕ್ತಕಾರಿಕೊಂಡು ಸತ್ತು ಹೋಗುತ್ತಾನೆ ಎಂದು ಹೇಳಿ ಕಥೆ ಮುಗಿಸಿದರು. [ಡೈರೆಕ್ಟರ್ಸ್ ಸ್ಪೆಷಲ್ ಚಿತ್ರ ವಿಮರ್ಶೆ]

ಇನ್ನೊಂದು ಕಡೆ ಅಕುಲ್ ಬಾಲಾಜಿ ಮಾತನಾಡುತ್ತಾ, ಈ ಜಗತ್ತಿನಲ್ಲಿ ಎಲ್ಲ ವರ್ಗದ ಪ್ರೇಕ್ಷಕರನ್ನೂ ಮೆಚ್ಚಿಸುವ ಚಿತ್ರವನ್ನು ಮಾಡುವ ನಿರ್ದೇಶಕ ಯಾರೂ ಇಲ್ಲ. ಒಂದು ವೇಳೆ ಆ ರೀತಿ ಚಿತ್ರ ಬಂದರೆ ಅಲ್ಲಿಗೆ ಎಂಡ್ ಎಂದರ್ಥ ಎಂದರು. ನಿಮ್ಮ ಚಿತ್ರಗಳಲ್ಲೂ ಅಷ್ಟೇ ಸ್ವಲ್ಪ ಲ್ಯಾಗಿಂಗ್ ಇರುತ್ತದೆ. ನೀವೂ ಒಬ್ಬ ಸಂಪೂರ್ಣ ನಿರ್ದೇಶಕ ಎಂದು ಹೇಳಲು ಸಾಧ್ಯವಿಲ್ಲ ಎಂದರು ಅಕುಲ್ ಬಾಲಾಜಿ ಕಾಲೆಳೆದರು.

ಗುರು ಮತ್ತು ಅಕುಲ್ ನಡುವೆ ತಿಕ್ಕಾಟ

ಮೂವತ್ತಾರನೇ ದಿನ ಬೆಳಗ್ಗೆ 10ಕ್ಕೆ "ಬನ್ನಿ ನನ್ನ ಗೆಳೆಯರ ನನ್ನ ಗೆಳತಿಯರೇ ..." ಹಾಡಿನ ಮೂಲಕ ಆರಂಭವಾಯಿತು. ಗುರುಗಳೇ ನಿಮ್ಮ ಇಗೋವನ್ನು ತಿಂದುಬಿಡು. ಇಲ್ಲದಿದ್ದರೆ ಕಷ್ಟ ಎಂದು ಅಕುಲ್ ಸಲಹೆ ನೀಡಿದರು. ನೀವು ತುಂಬಾ ಹಸಿದಿರುತ್ತೀರಾ ಆಗ ನಿಮಗೆ ಕೆಟ್ಟ ಅಡುಗೆ ಕೊಡ್ತೀನಿ ನೀವು ತಿಂತೀರಾ ಎಂದು ಕೇಳಿದ್ದಕ್ಕೆ, ಗುರು ಪ್ರಸಾದ್ ಕಕ್ಕ ಕೊಟ್ರರೆ ನಾನು ತಿನ್ನಲ್ಲ ಎಂದು ಹೇಳಿ ಎದ್ದು ಹೋದರು.

ಡೈರೆಕ್ಟರ್ಸ್ ಸ್ಪೆಷಲ್ ಸಿನಿಮಾ ಡಬ್ಬಾ

ನಿಮ್ಮ 'ಡೈರೆಕ್ಟರ್ಸ್ ಸ್ಪೆಷಲ್' ಸೂಪರ್ ಹಿಟ್ ಆಗಬೇಕಿತ್ತು, ಅದ್ಯಾಕೆ ಡಬ್ಬಾ ಆಯಿತು. ಒಂದು ವೇಳೆ ನೀವು ಅತ್ಯುತ್ತಮ ಡೈರೆಕ್ಟರ್ ಆಗಿದ್ದರೆ ಡೈರೆಕ್ಟರ್ಸ್ ಸ್ಪೆಷಲ್ ಹಿಟ್ ಆಗಬೇಕಿತ್ತು. ಯಾಕೆ ಫ್ಲಾಪ್ ಆಯಿತು ಎಂದು ಗುರುಗಳನ್ನು ಕೆಣಕಿದರು ಅಕುಲ್ ಬಾಲಾಜಿ.

ಜಗ್ಗೇಶ್ ರಿಂದಲೇ ನಿಮ್ಮ ಸಿನಿಮಾ ಗೆದ್ದದ್ದು

ಎದ್ದೇಳು ಮಂಜುನಾಥ, ಮಠ ಹಿಟ್ ಆಗಿದ್ದೇ ಜಗ್ಗೇಶ್ ಅವರಿಂದ ನಿಮ್ಮಿಂದ ಅಲ್ಲ ಎಂದರು ಅಕುಲ್. ಇದರಿಂದ ಗುರು ಪ್ರಸಾದ್ ಸಹ ಸ್ವಲ್ಪ ಗಲಿಬಿಲಿಗೊಂಡಂತೆ ಕಂಡುಬಂದರು. ಹೊಸಬರನ್ನು ಹಾಕಿಕೊಂಡು ಚಿತ್ರವನ್ನು ಹಿಟ್ ಮಾಡಿ ನೋಡೋಣ. ಆಗ ನಾನು ಒಪ್ಪುತ್ತೇನೆ ಗುರು ಪ್ರಸಾದ್ ಬೆಸ್ಟ್ ಡೈರೆಕ್ಟರ್ ಎಂದು ಸವಾಲು ಎಸೆದರು. ಈ ಸವಾಲನ್ನು ಅವರು ಗಂಭೀರವಾಗಿ ಪರಿಗಣಿಸಲಿಲ್ಲ.

ಗೌರವ ಕಳೆದುಕೊಳ್ಳುತ್ತಿದ್ದೀರಾ ಗುರುಗಳೇ

ಈ ಕಾರ್ಯಕ್ರಮಕ್ಕೆ ಬಂದು ನೀವು ನಿಮ್ಮ ಗೌರವನ್ನು ಕಳೆದುಕೊಳ್ಳುತ್ತಿದ್ದೀರಾ, ಜನರಿಗೆ ಗುರು ಪ್ರಸಾದ್ ಎಂದರೆ ಒಳ್ಳೆಯ ಗೌರವ ಇದೆ. ಅದನ್ನು ದಯವಿಟ್ಟು ಇಲ್ಲಿ ಕಳೆದುಕೊಳ್ಳಬೇಡಿ ಎಂದು ಎಚ್ಚರಿಸಿದರು. ಒಬ್ಬ ಗೆಳೆಯನಾಗಿ ನಾನು ಸಲಹೆ ಕೊಡುತ್ತಿದ್ದೇನೆ ಎಂದರು.

ಅಕುಲ್ ಕಡೆಗೆ ಬೆರಳು ತೋರಿಸಿದ ಗುರು

ಇದಕ್ಕೆ ಸ್ವಲ್ಪ ಗರಂ ಆದಂತೆ ಕಂಡ ಗುರು ಅವರು, ಅಕುಲ್ ಕಡೆ ಬೆರಳು ಮಾಡಿ ಹುಷಾರ್ ಎಂಬಂತೆ ತೋರಿಸಿದರು. ಇದಕ್ಕೆ ಪ್ರತ್ಯುತ್ತರವಾಗಿ ಅಕುಲ್, ನೀವು ಒಂದು ಬೆರಳು ತೋರಿಸಿದರೆ ನಾನು ಎರಡು ಬೆರಳು ತೋರಿಸುತ್ತೇನೆ. ಒಂದು ಮಾತು ಬೈದರೆ ನಾನು ನಾಲ್ಕು ಮಾತು ಬೈಯುತ್ತೇನೆ. ನೀನೇನು ಬಿಗ್ ಬಾಸ್ ಅಲ್ಲ. ಗುರು ಪ್ರಸಾದ್. ನಾನು ಅಕುಲ್ ಬಾಲಾಜಿ ಅಷ್ಟೇ ಎಂದರು. ಗೌರವ ಕೊಡುವುದನ್ನು ಮೊದಲು ಕಲಿಯಿರಿ ಎಂದರು.

ವೈಲ್ಡ್ ಕಾರ್ಡ್ ಮೂಲಕ ಹರ್ಷಿಕಾ ಎಂಟ್ರಿ

ದಮ್ಮಯ್ಯ ಎಂದರೂ ಅವರ ಜೊತೆಗೆ ಇನ್ನು ಮಾತನಾಡಲ್ಲ ಎಂದರು ಅಕುಲ್ ಬಾಲಾಜಿ ಉಳಿದ ಸದಸ್ಯರ ಜೊತೆ ಹೇಳಿದರು. ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಮನೆಗೆ ಹರ್ಷಿಕಾ ಪೂಣಚ್ಚ ಅಡಿಯಿಟ್ಟು ಎಲ್ಲರನ್ನೂ ಚಕಿತಗೊಳಿಸಿದರು.

ಮನೆಯಲ್ಲಿ ಉಳಿದುಕೊಳ್ಳಲು ಇನ್ನೊಂದು ಚಾನ್ಸ್

ಬಂದ ತಕ್ಷಣವೇ ಅವರಿಗೆ ಕೊಟ್ಟ ಕೆಲಸ, ಈ ಬಾರಿ ನಾಲ್ಕು ಮಂದಿಯನ್ನು ನಾಮಿನೇಟ್ ಮಾಡಬೇಕಾಯಿತು. ಮನೆಯಲ್ಲಿ ಉಳಿದುಕೊಳ್ಳಲು ಇನ್ನೊಂದು ಚಾನ್ಸ್ ಕೊಡುತ್ತಿರುವುದಾಗಿ ಬಿಗ್ ಬಾಸ್ ಹರ್ಷಿಕಾ ಹೇಳಿದರು.

ಸೃಜನ್ ಮೇಲೆ ಸೇಡು ತೀರಿಸಿಕೊಂಡ ಹರ್ಷಿಕಾ

ಹರ್ಷಿಕಾ ಅವರ ಪುನರಾಗಮನವನ್ನು ಎಲ್ಲರೂ ಸ್ವಾಗತಿಸಿದರು. ವಿಶೇಷ ಅಧಿಕಾರವನ್ನು ನೀಡಿದರು. ನಾಲ್ಕು ಸದಸ್ಯರ ಹೆಸರನ್ನು ಹೆಸರಿಸಬೇಕು ಎಂದಾಗ.
ಮೊದಲ ಹೆಸರೇ ಸೃಜನ್ ಎಂದರು. ಬಳಿಕ ಅನುಪಮಾ ಎಂದರು. ಇವರಿಬ್ಬರೂ ತನಗೆ ಬೆನ್ನಿಗೆ ಚೂರಿ ಹಾಕಿದ್ದಕ್ಕೆ ಎಂದರು. ಬಳಿಕ ಶ್ವೇತಾ ಹಾಗೂ ಮಯೂರ್ ಹೆಸರನ್ನು ಹೇಳಿದರು. ಪ್ರೀತಿಯಿಂದ ಇವರಿಬ್ಬರ ಹೆಸರನ್ನು ಸೂಚಿಸುತ್ತಿದ್ದೇನೆ ಎಂದರು.

ಹರ್ಷಿಕಾ, ಗುರು ಕಾರಣ ಮನೆಯಲ್ಲಿ ತಳಮಳ

ಗುರುಪ್ರಸಾದ್ ಹಾಗೂ ಹರ್ಷಿಕಾ ಎಂಟ್ರಿ ಮೂಲಕ ಮನೆಯಲ್ಲಿ ಶುರುವಾಗಿದೆ ತಳಮಳ. ಹರ್ಷಿಕಾ ಮನೆಗೆ ಎಂಟ್ರಿಕೊಟ್ಟವರೇ ಸೃಜನ್ ಲೋಕೇಶ್ ಮೇಲಿನ ಸೇಡನ್ನು ತೀರಿಸಿಕೊಂಡರು. ಈ ವಾರ ಮನೆಯಿಂದ ಹೊರಹೋಗಲು ನಾಮಿನೇಟ್ ಆದ ಸದಸ್ಯರು ಮಯೂರ್, ಶ್ವೇತಾ ಮತ್ತು ಅನುಪಮಾ, ಈ ಮೂರು ಮಂದಿ ಮಾತ್ರ.

English summary
The conflict between Guru Prasad and Akul Balaji continues in Bigg Boss Kannada 2 show. These two inmates are looks like rivals in the house. Day 35th and 36th highlights.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada