»   » 'ಬಿಗ್ ಬಾಸ್' ಸ್ಪರ್ಧಿ ಆಶಿತಾ ನಡೆ ಅವರ ತಂದೆಯ ಕೋಪಕ್ಕೆ ಕಾರಣವಾಗಿತ್ತು!

'ಬಿಗ್ ಬಾಸ್' ಸ್ಪರ್ಧಿ ಆಶಿತಾ ನಡೆ ಅವರ ತಂದೆಯ ಕೋಪಕ್ಕೆ ಕಾರಣವಾಗಿತ್ತು!

Posted By:
Subscribe to Filmibeat Kannada
ಬಿಗ್ ಬಾಸ್ ಕನ್ನಡ ಸೀಸನ್ 5 : ಆಶಿತಾ ಚಂದ್ರಪ್ಪ ಮತ್ತು ತಮ್ಮ ತಂದೆಯ ನಡುವೆ ಸಂಘರ್ಷ

ಈ ಬಾರಿ 'ಬಿಗ್ ಬಾಸ್' ಸ್ಪರ್ಧಿಗಳ ಪೈಕಿ ಆಶಿತಾ ಚಂದ್ರಪ್ಪ ಕೂಡ ಒಬ್ಬರು. ಸಿಂಪಲ್ ಸುಂದರಿಯಾಗಿರುವ ಆಶಿತಾ 'ಬಿಗ್ ಬಾಸ್' ಮನೆಯಲ್ಲಿ ತಾವಾಯ್ತು.. ತಮ್ಮ ಪಾಡಾಯ್ತು.. ಅಂತ ಎಲ್ಲರ ಜೊತೆ ನಗು ನಗುತ್ತಾ ಇದ್ದಾರೆ.

ಶ್ರೀಮಂತ ಕುಟುಂಬದಿಂದ ಬಂದಿರುವ ಆಶಿತಾ ಚಂದ್ರಪ್ಪ ಜೀವನದಲ್ಲಿ ಸಾಕಷ್ಟು ನೋವು ಅನುಭವಿಸಿದ್ದಾರೆ. ತಂದೆಯ ಸಹಾಯ ಇಲ್ಲದೆ ಒಬ್ಬರೇ ಕಿರುತೆರೆ ರಂಗಕ್ಕೆ ಕಾಲಿಟ್ಟು ಇಂದು ತಕ್ಕಮಟ್ಟಿಗೆ ಗುರುತಿಸಿಕೊಂಡಿದ್ದಾರೆ.

ಅಂದಹಾಗೆ, 'ಬಿಗ್ ಬಾಸ್'ನಲ್ಲಿ ಸ್ಫರ್ಧಿ ಆಶಿತಾ ಚಂದ್ರಪ್ಪ ಅವರ ವೈಯಕ್ತಿಕ ಜೀವನದ ಬಗ್ಗೆ ಒಂದಷ್ಟು ವಿಷಯಗಳು ಇಲ್ಲಿದೆ ಓದಿ...

ಮೊದಲ ಧಾರಾವಾಹಿ

ಆಶಿತಾ ಚಂದ್ರಪ್ಪ ಅವರು ಮೊದಲು 'ಜೊತೆ ಜೊತೆಯಲಿ' ಎಂಬ ಧಾರಾವಾಹಿಯಲ್ಲಿ ಟೀಚರ್ ಆಗಿ ನಟನೆ ಮಾಡಿದ್ದರು. ಮೊದಲ ಸೀರಿಯಲ್ ನಲ್ಲಿಯೇ ತಮ್ಮ ಪಾತ್ರಕ್ಕೆ ಅವರಿಗೆ ಒಳ್ಳೆಯ ಹೆಸರು ಸಿಕ್ಕಿತು.

'ನೀಲಿ' ಧಾರಾವಾಹಿಯಲ್ಲಿ ನಟನೆ

'ಜೊತೆ ಜೊತೆಯಲಿ' ನಂತರ ಉದಯ ಟಿವಿಯ 'ಸುಂದರಿ' ಧಾರಾವಾಹಿಯಲ್ಲಿ ಐಎಎಸ್ ಅಧಿಕಾರಿ ಪಾತ್ರದಲ್ಲಿ ನಟಿಸಿದ್ದ ಆಶಿತಾ ಸದ್ಯ ಸ್ಟಾರ್ ಸುವರ್ಣ ವಾಹಿನಿಯ 'ನೀಲಿ' ಸೀರಿಯಲ್ ನಲ್ಲಿ ನಾಯಕಿ ಆಗಿದ್ದಾರೆ.

ಬಂಗಾರದ ಪಂಜರ

ಇಂತಿಪ್ಪ ಆಶಿತಾ ಮನಸ್ಸಿನಲ್ಲಿ ತುಂಬ ನೋವು ಕೂಡ ಇದೆ. ಶ್ರೀಮಂತ ಕುಟುಂಬದಲ್ಲಿ ಬೆಳೆದ ಅವರನ್ನು ತಂದೆ ಅತಿಯಾದ ಮುದ್ದಿನಿಂದ ಬೆಳೆಸಿದರು. ಆದರೆ, ಬರುಬರುತ್ತಾ ಅದು ಆಶಿತಾ ಪಾಲಿಗೆ ಬಂಗಾರದ ಪಂಜರದಂತೆ ಆಯಿತು.

'ಬಿಗ್ ಬಾಸ್'ನಲ್ಲಿ ನನಗೆ ಅನ್ಯಾಯ ಆಗಿದೆ ಎಂದ ಸುಮಾ ರಾಜ್ ಕುಮಾರ್.!

ತಂದೆ ಜೊತೆ ಭಿನ್ನಾಭಿಪ್ರಾಯ

ಮಗಳು ಓದಿದ ನಂತರ ಒಳ್ಳೆಯ ಮನೆಗೆ ಸೊಸೆ ಆಗಿ ಹೋಗಬೇಕು ಎಂಬುದು ತಂದೆ ಆಸೆ ಆಗಿತ್ತು. ಆದರೆ ಆಶಿತಾ ಸಿನಿಮಾ, ಸೀರಿಯಲ್ ನಲ್ಲಿ ನಟಿಸುವ ಕನಸು ಹೊಂದಿದ್ದರು. ಇದೇ ವಿಷಯಕ್ಕೆ ಅಪ್ಪ ಮಗಳ ನಡುವೆ ಭಿನ್ನಾಭಿಪ್ರಾಯ ಬಂತು.

ಈ ವಾರ 'ಬಿಗ್ ಬಾಸ್' ಮನೆಯ ಅರ್ಧದಷ್ಟು ಸದಸ್ಯರು ನಾಮಿನೇಟ್.!

ದೊಡ್ಡ ಕಿರಿಕ್ ಆಯ್ತು

ತಂದೆ ಸಹಾಯ ಇಲ್ಲದೆ ಆಶಿತಾ ಧಾರಾವಾಹಿಯಲ್ಲಿ ನಟನೆ ಶುರು ಮಾಡಿದರು. ಆದರೆ ತಮ್ಮ ಮೊದಲ ಧಾರಾವಾಹಿಯಲ್ಲಿ ಕಿರಿಕ್ ಆಗಿ ಅದರಿಂದ ದೂರ ನಡೆದರು.

'ಅಕ್ಕ' ಅನುಪಮಾ ಮೇಲೆ ರಿಯಾಝ್ ಗೆ ಕೆಂಡದಷ್ಟು ಕೋಪ.! ಯಾಕೆ.?

ಅಪ್ಪನ ಮೆಚ್ಚಿಸಬೇಕು

ಸದ್ಯ ಬಿಗ್ ಬಾಸ್ ಮೆಟ್ಟಿಲು ಏರಿರುವ ಆಶಿತಾ ಏನೇ ಜಗಳ ಇದ್ದರೂ ತಮ್ಮ ತಂದೆಯಿಂದ ಭೇಷ್ ಎನಿಸಿಕೊಳ್ಳುವ ಕೆಲಸ ಮಾಡಬೇಕು ಎನ್ನುವ ಹಾದಿಯಲ್ಲಿ ಸಾಗುತ್ತಿದ್ದಾರೆ.

ಎರಡನೇ ವಾರ 'ಬಿಗ್ ಬಾಸ್' ಮನೆಯ ಕ್ಯಾಪ್ಟನ್ ಆದ ಶ್ರುತಿ ಪ್ರಕಾಶ್

ಮುಂದಿನ ಗುರಿ

ಧಾರಾವಾಹಿಯ ಮೂಲಕ ಎಲ್ಲರ ಗಮನ ಸೆಳೆದಿರುವ ಆಶಿತಾ ಸಿನಿಮಾದಲ್ಲಿ ಒಂದು ಒಳ್ಳೆಯ ಅವಕಾಶಕ್ಕಾಗಿ ಕಾಯುತ್ತಿದ್ದಾರೆ.

English summary
Who is Ashita Chandrappa.? Read the article to know more details about Bigg Boss Kannada 5 contestant Ashita Chandrappa and her background.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X