Just In
Don't Miss!
- News
ಮುಂದಿನ ಎರಡು ದಿನಗಳಲ್ಲಿ ಶಾಲಾ ಶುಲ್ಕ ನಿಗದಿ:ಸುರೇಶ್ ಕುಮಾರ್
- Lifestyle
"ಗುರುವಾರದ ರಾಶಿಫಲ: ಮೇಷ-ಮೀನದವರೆಗಿನ ದಿನ ಭವಿಷ್ಯ"
- Sports
ಐಎಸ್ಎಲ್: ಬೆಂಗಳೂರಿಗೆ ಸೋಲಿನ ಆಘಾತ ನೀಡಿದ ಕೇರಳ ಬ್ಲಾಸ್ಟರ್ಸ್
- Education
WAPCOS Recruitment 2021: 11 ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Finance
ಇಪ್ಪತ್ತು ದಿನದಲ್ಲಿ 47 ಪರ್ಸೆಂಟ್ ನಷ್ಟು ಏರಿಕೆ ಕಂಡ ಟಾಟಾ ಮೋಟಾರ್ಸ್ ಷೇರು
- Automobiles
ಡ್ಯುಯಲ್ ಟೋನ್ ಬಣ್ಣದ ಆಯ್ಕೆಯೊಂದಿಗೆ ರೋಡ್ ಟೆಸ್ಟಿಂಗ್ ನಡೆಸಿದ ಸಿಟ್ರನ್ ಸಿ5 ಏರ್ಕ್ರಾಸ್ ಕಾರು
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಮೊದಲ ದಿನವೇ ನಾಮಿನೇಟ್ ಆದ 'ಸೇಲ್ಸ್ ಮ್ಯಾನ್' ದಿವಾಕರ್ ಬದುಕಿನ ಕಥೆ-ವ್ಯಥೆ
'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದ ಮೊದಲ ವಾರದ ನಾಮಿನೇಷನ್ ಪ್ರಕ್ರಿಯೆಯಲ್ಲಿ ಅತಿ ಹೆಚ್ಚು ಮತಗಳನ್ನು ಪಡೆದು 'ಬಿಗ್ ಬಾಸ್' ಮನೆಯಿಂದ ಹೊರ ಹೋಗಲು ನಾಮಿನೇಟ್ ಆಗಿರುವವರು ದಿವಾಕರ್.!
'ಬಿಗ್ ಬಾಸ್' ಮನೆಯಲ್ಲಿ ಮೊದಲ ದಿನವೇ 'ಜನಸಾಮಾನ್ಯರು' ಟಾರ್ಗೆಟ್.!
'ದೊಡ್ಮನೆ'ಯೊಳಗೆ 'ಜನಸಾಮಾನ್ಯ'ನಾಗಿ ಎಂಟ್ರಿಕೊಟ್ಟ ದಿವಾಕರ್, 'ಔಟ್ ಆಫ್ ದಿ ಬಾಕ್ಸ್', 'ಎಲ್ಲರೊಂದಿಗೆ ಬೆರೆಯುತ್ತಿಲ್ಲ' ಎಂಬ ಕಾರಣ ನೀಡಿ ಕೆಲವರು ದಿವಾಕರ್ ರನ್ನ ನಾಮಿನೇಟ್ ಮಾಡಿದ್ದಾರೆ.
'ಇವರು'ಗಳೇ ನೋಡಿ 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದ 17 ಸ್ಪರ್ಧಿಗಳು.!
ಅಷ್ಟಕ್ಕೂ, ಈ ದಿವಾಕರ್ ಯಾರು.? ಎಲ್ಲಿಯವರು.? ಅವರ ಹಿನ್ನಲೆ ಏನು ಎಂಬುದನ್ನ ತಿಳಿಯುವ ಕುತೂಹಲ ಇದ್ದರೆ, ಫೋಟೋ ಸ್ಲೈಡ್ ಗಳತ್ತ ಗಮನಹರಿಸಿ...

ಸೇಲ್ಸ್ ಮ್ಯಾನ್ ದಿವಾಕರ್
ಟಿಪ್ ಟಾಪ್ ಆಗಿ ರೆಡಿಯಾಗಿ, ಹೆಗಲಿಗೆ ಒಂದು ಬ್ಯಾಗ್ ನೇತು ಹಾಕಿಕೊಂಡು, ಊರೂರು ಸುತ್ತುವ 'ಸೇಲ್ಸ್ ಮ್ಯಾನ್' ಕೆಲಸ ಮಾಡುವವರು ದಿವಾಕರ್.
ಯಾರೀ 'ಕಂಗ್ಲೀಷ್ ಕುವರಿ' ನಿವೇದಿತಾ ಗೌಡ.? ನಿಜ ಬದುಕಿನ ಅನಾವರಣ

ಒಂಬತ್ತು ವರ್ಷಗಳಿಂದ ಸೇಲ್ಸ್ ಮ್ಯಾನ್ ವೃತ್ತಿ
ಒಂಬತ್ತು ವರ್ಷಗಳಿಂದ ಸೇಲ್ಸ್ ಮ್ಯಾನ್ ಕೆಲಸ ಮಾಡುತ್ತಿರುವ ದಿವಾಕರ್, ಕಾಲು ನೋವು, ಬೆನ್ನು ನೋವು, ಸೊಂಟ ನೋವು... ಶರೀರದಲ್ಲಿ ಯಾವುದೇ ಮೂಳೆ ನೋವು ಇದ್ದರೂ... ನೆಗಡಿ, ಶೀತ, ಕಫ, ಕೆಮ್ಮು ಬಂದರೂ, ಅದನ್ನ ಶಮನ ಮಾಡುವ ಆಯುರ್ವೇದಿಕ್ ಪ್ರಾಡೆಕ್ಟ್ ಒಂದನ್ನ ಮಾರಾಟ ಮಾಡುತ್ತಾ ಬಂದಿದ್ದಾರೆ.
'ಪ್ರಥಮ್ ತಂಗಿ' ಎಂದು ಟ್ರೋಲ್ ಆಗುತ್ತಿರುವ 'ಮಾಸ್' ಮೇಘ ಯಾರು.?

ದಿವಾಕರ್ ಮಾಡದ ಕೆಲಸ ಇಲ್ಲ
ಹಾಗ್ನೋಡಿದರೆ, ಇಲ್ಲಿಯವರೆಗೂ ದಿವಾಕರ್ ಮಾಡದ ಕೆಲಸ ಇಲ್ಲ. ಜೀವನ ನಡೆಸಲು ಏನೇನು ಕೆಲಸ ಮಾಡಬೇಕೋ, ಎಲ್ಲಾ ಕೆಲಸವನ್ನೂ ಮಾಡಿದ್ದಾರೆ. ಎಮ್ಮೆ ಮೇಯಿಸಿದ್ದಾರೆ, ಹೋಟೆಲ್ ನಲ್ಲಿ ಕೆಲಸ ಮಾಡಿದ್ದಾರೆ, ಕೂಲಿ ಹಾಗೂ ಗಾರೆ ಕೆಲಸವನ್ನೂ ಮಾಡಿರುವ ದಿವಾಕರ್ ಹೊಟ್ಟೆ ಹಸಿವಾದಾಗ ಭಿಕ್ಷೆ ಕೂಡ ಬೇಡಿದ್ದಾರಂತೆ.
'ಬಿಗ್ ಬಾಸ್' ಮನೆಗೆ ತೆರಳಿದ ನಟಿ ಅನುಪಮಾ ಗೌಡ ಕಣ್ಣೀರಿನ ಕಥೆ ಇದು!

ಎರಡನೇ ಕ್ಲಾಸ್ ಓದಿರುವ ದಿವಾಕರ್
ನರಸೀಪುರದಲ್ಲಿ ಹುಟ್ಟಿ ಮಡಿಕೇರಿಯಲ್ಲಿ ಬೆಳೆದ ದಿವಾಕರ್ ಗೆ ಮದುವೆ ಆಗಿ ಮಗು ಇದೆ. ಎರಡನೇ ಕ್ಲಾಸ್ ವರೆಗೂ ಓದಿರುವ ದಿವಾಕರ್ ಗೆ ಕನ್ನಡ, ತೆಲುಗು, ತಮಿಳು ಭಾಷೆ ಮಾತನಾಡಲು ಬರುತ್ತದೆ.

ಸೇಫ್ ಆಗುತ್ತಾರಾ ದಿವಾಕರ್.?
ಯಾವುದೇ ಪ್ಲಾನ್ನಿಂಗ್ ಇಲ್ಲದೆ, 'ಬಿಗ್ ಬಾಸ್' ಮನೆಯೊಳಗೆ ಕಾಲಿಟ್ಟ ಮೊದಲ ವಾರವೇ ಟಾರ್ಗೆಟ್ ಆಗಿರುವ ದಿವಾಕರ್, ಎಲಿಮಿನೇಷನ್ ನಿಂದ ಸೇಫ್ ಆಗ್ತಾರಾ.? ನೋಡೋಣ.