For Quick Alerts
  ALLOW NOTIFICATIONS  
  For Daily Alerts

  ಯಾರೀ 'ಕಂಗ್ಲೀಷ್ ಕುವರಿ' ನಿವೇದಿತಾ ಗೌಡ.? ನಿಜ ಬದುಕಿನ ಅನಾವರಣ

  By Harshitha
  |

  ನಿನ್ನೆ ಸಂಜೆ ವರೆಗೂ ನಿವೇದಿತಾ ಗೌಡ ಅಂದ್ರೆ ಯಾರು ಅನ್ನೋದೇ ಕನ್ನಡಿಗರಿಗೆ ಗೊತ್ತಿರಲಿಲ್ಲ. ಅದ್ಯಾವಾಗ, ತಿಳಿ ಕೆಂಪು ಬಣ್ಣದ ಲಾಂಗ್ ಫ್ರಾಕ್ ಧರಿಸಿ, 'ಬಿಗ್ ಬಾಸ್' ವೇದಿಕೆ ಮೇಲೆ 'ಬಾರ್ಬಿ ಡಾಲ್'ನಂತೆ ನಿವೇದಿತಾ ಗೌಡ ಕಾಲಿಟ್ಟರೋ... ಸೋಷಿಯಲ್ ಮೀಡಿಯಾದಲ್ಲಿ ಹೊಸ ಸಂಚಲನ ಶುರು ಆಯ್ತು.

  'ಇವರು'ಗಳೇ ನೋಡಿ 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದ 17 ಸ್ಪರ್ಧಿಗಳು.!

  ಕನ್ನಡವನ್ನ ಆಂಗ್ಲ ಭಾಷೆಯಂತೆ ಮಾತನಾಡುವ, ಮಾತು ಮಾತಿಗೂ ವೈಯ್ಯಾರದಿಂದ ನುಲಿಯುವ ನಿವೇದಿತಾ ಗೌಡ 'ಬಿಗ್ ಬಾಸ್' ಮನೆಗೆ ಎಂಟ್ರಿಕೊಟ್ಟ ಕ್ಷಣವೇ ಟ್ರೋಲ್ ಪೇಜ್ ಗಳಿಗೆ ಆಹಾರವಾಗಿದ್ದಾರೆ.

  ಮೊದಲ ದಿನವೇ ಟ್ರೋಲಿಗರಿಂದ 'TRP' ಗಳಿಸಿದ 'ಬಿಗ್ ಬಾಸ್' ನಿವೇದಿತಾ ಗೌಡ

  ಕಳೆದ ಆವೃತ್ತಿಯ 'ಸಂಜನಾ ತಂಗಿ' ಅಂತಲೇ ಟ್ರೋಲ್ ಆಗುತ್ತಿರುವ ಈ ನಿವೇದಿತಾ ಗೌಡ ಯಾರು.? ಆಕೆಯ ಹಿನ್ನಲೆ ಏನು ಅನ್ನೋದರ ಕಂಪ್ಲೀಟ್ ಕಹಾನಿ ಇಲ್ಲಿದೆ. ಓದಿರಿ...

  ಮೈಸೂರಿನ ಹುಡುಗಿ

  ಮೈಸೂರಿನ ಹುಡುಗಿ

  ಉಡುಗೆ ಹಾಗೂ 'ಕಂಗ್ಲೀಷ್' ಮಾತಿನ ಶೈಲಿಯಿಂದ 'ಬಿಗ್ ಬಾಸ್' ಮನೆಯಲ್ಲಿ 'ಬಾರ್ಬಿ ಡಾಲ್' ಅಂತಲೇ ಎಲ್ಲರಿಂದ ಕರೆಯಿಸಿಕೊಳ್ಳುತ್ತಿರುವ ನಿವೇದಿತಾ ಗೌಡ ಮೈಸೂರಿನ ಹುಡುಗಿ.

  ವಯಸ್ಸು ಎಷ್ಟು.?

  ವಯಸ್ಸು ಎಷ್ಟು.?

  ಮೈಸೂರಿನಲ್ಲಿಯೇ ಹುಟ್ಟಿ-ಬೆಳೆದ ನಿವೇದಿತಾ ಗೌಡ ರವರಿಗಿನ್ನೂ ಹದಿನೆಂಟು ವರ್ಷ. ಸದ್ಯ ಮಹಾಜನ್ ಫಸ್ಟ್ ಗ್ರೇಡ್ ಕಾಲೇಜ್ ನಲ್ಲಿ ಎರಡನೇ ವರ್ಷದ ಬಿಸಿಎ ವ್ಯಾಸಂಗ ಮಾಡುತ್ತಿದ್ದಾರೆ ನಿವೇದಿತಾ ಗೌಡ.

  ಅತಿ ಕಿರಿಯ ಸ್ಪರ್ಧಿ

  ಅತಿ ಕಿರಿಯ ಸ್ಪರ್ಧಿ

  'ಬಿಗ್ ಬಾಸ್' ಕನ್ನಡ ಇತಿಹಾಸದಲ್ಲಿಯೇ ನಿವೇದಿತಾ ಗೌಡ ಅತಿ ಕಿರಿಯ ಸ್ಪರ್ಧಿ. 18 ವರ್ಷ ವಯಸ್ಸಿಗೆ 'ಬಿಗ್ ಬಾಸ್' ಸ್ಪರ್ಧಿಯಾಗಿದ್ದಾರೆ ಈ ನಿವೇದಿತಾ.

  ಅನುಕೂಲಸ್ಥ ಕುಟುಂಬದ ಹುಡುಗಿ ನಿವೇದಿತಾ

  ಅನುಕೂಲಸ್ಥ ಕುಟುಂಬದ ಹುಡುಗಿ ನಿವೇದಿತಾ

  ಬಾಬಾ ಅಟಾಮಿಕ್ ರಿಸರ್ಚ್ ಸೆಂಟರ್ ನಲ್ಲಿ ನಿವೇದಿತಾ ಗೌಡ ತಂದೆ ರಮೇಶ್ ಕೆಲಸ ನಿರ್ವಹಿಸುತ್ತಿದ್ದಾರೆ. ನಿವೇದಿತಾ ತಾಯಿ ಗೃಹಿಣಿ. ಇನ್ನೂ ನಿವೇದಿತಾಗೆ ಓರ್ವ ಕಿರಿಯ ಸಹೋದರ ಇದ್ದಾನೆ.

  ಯಾರೂ ನಂಬಲಿಲ್ಲ.!

  ಯಾರೂ ನಂಬಲಿಲ್ಲ.!

  ''ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮಕ್ಕೆ ಸೆಲೆಕ್ಟ್ ಆಗಿದ್ದೇನೆ'' ಎಂದು ನಿವೇದಿತಾ ಹೇಳಿದಾಗ ಆಕೆಯ ತಂದೆ-ತಾಯಿ ನಂಬಲಿಲ್ಲವಂತೆ. ಮಗಳು ಸುಳ್ಳು ಹೇಳುತ್ತಿದ್ದಾಳೆ ಎಂದುಕೊಂಡಿದ್ದರಂತೆ. ಆದ್ರೆ, ಕಿರಿಯ ಸಹೋದರ ಮಾತ್ರ ನಿವೇದಿತಾ ಇಲ್ಲ ಅಂದ್ರೆ ನೆಮ್ಮದಿ ಆಗಿರಬಹುದು ಅಂತ ಖುಷಿ ಪಟ್ಟನಂತೆ.

  ನಿವೇದಿತಾಗೆ ಖುಷಿಯೋ ಖುಷಿ

  ನಿವೇದಿತಾಗೆ ಖುಷಿಯೋ ಖುಷಿ

  'ಬಿಗ್ ಬಾಸ್' ಸ್ಪರ್ಧಿ ಆಗಿರುವುದಕ್ಕೆ ನಿವೇದಿತಾಗೆ ಸಿಕ್ಕಾಪಟ್ಟೆ ಖುಷಿ ಇದೆ.

  ಯಾವ ಕೆಲಸ ಕೂಡ ಬರಲ್ಲ.!

  ಯಾವ ಕೆಲಸ ಕೂಡ ಬರಲ್ಲ.!

  ಹತ್ತತ್ತು ನಿಮಿಷಕ್ಕೂ ಬಟ್ಟೆ ಬದಲಾಯಿಸುವ ನಿವೇದಿತಾ ಗೌಡಗೆ ಯಾವುದೇ ಕೆಲಸ ಬರಲ್ಲ. ಅಡುಗೆ ಮಾಡಲು ಗೊತ್ತಿಲ್ಲ. ಪಾತ್ರೆ ತೊಳೆಯುವುದಕ್ಕೂ ಬರಲ್ಲ. ಹೀಗಿದ್ದರೂ, ಎಲ್ಲವನ್ನೂ ಕಲೆಯುತ್ತೇನೆ ಎಂಬ ಆತ್ಮವಿಶ್ವಾಸದಿಂದ ನಿವೇದಿತಾ 'ಬಿಗ್ ಬಾಸ್' ಮನೆಯೊಳಗೆ ಕಾಲಿಟ್ಟಿದ್ದಾರೆ.

  ಎಕ್ಸಾಂ ಬಿಟ್ಟು ಬಂದಿದ್ದಾರೆ.!

  ಎಕ್ಸಾಂ ಬಿಟ್ಟು ಬಂದಿದ್ದಾರೆ.!

  ಬಿಸಿಎ ಸೆಮಿಸ್ಟರ್ ಎಕ್ಸಾಂ ಇದ್ದರೂ, ಅದನ್ನ ಬಿಟ್ಟು 'ಬಿಗ್ ಬಾಸ್' ಮನೆಗೆ ಬಂದಿದ್ದಾರೆ ನಿವೇದಿತಾ. ಮುಂದಿನ ಸೆಮಿಸ್ಟರ್ ನಲ್ಲಿ ಎಕ್ಸಾಂ ಬರೆಯುವೆ ಎಂದು ತಂದೆ-ತಾಯಿಯನ್ನ ನಿವೇದಿತಾ ಒಪ್ಪಿಸಿದ್ದಾರೆ. ಹಾಗೇ, ಅವರ ಕಾಲೇಜ್ ಪ್ರಿನ್ಸಿಪಾಲ್ ಕೂಡ ಅದಕ್ಕೆ ಪರ್ಮಿಷನ್ ಕೊಟ್ಟಿದ್ದಾರಂತೆ.

  ಡಬ್ ಸ್ಮ್ಯಾಶ್ ರಾಜಕುಮಾರಿ

  ಡಬ್ ಸ್ಮ್ಯಾಶ್ ರಾಜಕುಮಾರಿ

  ತುಂಬಾ ಬೋರ್ ಆದಾಗ, ತುಂಬಾ ಖುಷಿಯಾದಾಗ ಡಬ್ ಸ್ಮ್ಯಾಶ್ ಮಾಡ್ತಾರಂತೆ ನಿವೇದಿತಾ ಗೌಡ. ಲೆಕ್ಕವಿಲ್ಲದಷ್ಟು ಡಬ್ ಸ್ಮ್ಯಾಶ್ ಮಾಡಿರುವ ನಿವೇದಿತಾ ಸುದೀಪ್ ರವರ 'ಕೆಂಪೇಗೌಡ', 'ವೀರ ಮದಕರಿ', 'ಬಚ್ಚನ್' ಚಿತ್ರಗಳ ದೃಶ್ಯವನ್ನೂ ಡಬ್ ಸ್ಮ್ಯಾಶ್ ಮಾಡಿದ್ದಾರೆ.

  ಕಂಗ್ಲೀಷ್ ಕುವರಿ

  ಕಂಗ್ಲೀಷ್ ಕುವರಿ

  ಅಚ್ಚ ಕನ್ನಡವನ್ನ ಇಂಗ್ಲೀಷ್ ಸ್ಟೈಲ್ ನಲ್ಲಿ ಡಬ್ ಮಾಡಿ ಮಾತನಾಡುವುದರಲ್ಲಿ ನಿವೇದಿತಾ ಎತ್ತಿದ ಕೈ. ಹಾಡುವುದು ಮತ್ತು ಡ್ಯಾನ್ಸ್ ಮಾಡುವುದು ನಿವೇದಿತಾ ರವರ ಹಾಬೀಸ್.

  ನಿವೇದಿತಾ ಕನ್ನಡ ಯಾಕೆ ಹಾಗೆ.?

  ನಿವೇದಿತಾ ಕನ್ನಡ ಯಾಕೆ ಹಾಗೆ.?

  ನಿವೇದಿತಾ ಓದಿದ್ದು ಅಟಾಮಿಕ್ ಎನರ್ಜಿ ಸೆಂಟರ್ ಸ್ಕೂಲ್ ನಲ್ಲಂತೆ. ಅಲ್ಲಿ ಆಕೆಗೆ ಕನ್ನಡ ಭಾಷೆ ಹೇಳಿಕೊಡದ ಕಾರಣ ಆಕೆಯ ಕನ್ನಡ 'ಕಂಗ್ಲೀಷ್' ಆಗಿದೆ. ''ಮನೆಯಲ್ಲಿ ಕನ್ನಡ, ಸ್ಕೂಲ್ ನಲ್ಲಿ ಇಂಗ್ಲೀಷ್ ಎರಡೂ ಮಿಕ್ಸ್ ಆಗಿ ಹೀಗೆ ಮಾತನಾಡುತ್ತಾಳೆ'' ಅಂತಾರೆ ನಿವೇದಿತಾ ತಾಯಿ.

  'ಬಿಗ್ ಬಾಸ್' ಮನೆಯಲ್ಲಿ ಹೇಗಿರ್ತಾರೆ.?

  'ಬಿಗ್ ಬಾಸ್' ಮನೆಯಲ್ಲಿ ಹೇಗಿರ್ತಾರೆ.?

  40 ಕೆಜಿ ತೂಗುವ ನಿವೇದಿತಾ, ''ಗಾಸಿಪ್ ಮಾಡಲ್ಲ, ಯಾರಿಗೂ ನೋವು ಮಾಡಲ್ಲ. ಯಾರಿಗೂ ಬೇಸರ ಮಾಡದಂತೆ ಟ್ರೈ ಮಾಡುವೆ. ಯಾರ ಜೊತೆಗೂ ಕೋಪ ಮಾಡಿಕೊಳ್ಳಲ್ಲ. ಎಲ್ಲರ ಜೊತೆಗೆ ಫ್ರೆಂಡ್ಲಿ ಆಗಿರೋಕೆ ಟ್ರೈ ಮಾಡ್ತೀನಿ'' ಎನ್ನುತ್ತಾ 'ಬಿಗ್ ಬಾಸ್' ಮನೆಗೆ ಬಲಗಾಲಿಟ್ಟು ಎಂಟ್ರಿಕೊಟ್ಟಿದ್ದಾರೆ. ನೋಡೋಣ, ಎಷ್ಟು ದಿನ ನಿವೇದಿತಾ 'ಬಿಗ್ ಬಾಸ್' ಮನೆಯಲ್ಲಿ ಇರಲು ಸಫಲ ಆಗ್ತಾರೆ ಅಂತ.!

  English summary
  Niveditha Gowda, Bigg Boss Kannada 5 Contestant hails from Mysuru. Read the article to know more about Niveditha Gowda and her background.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X