»   » 'ಬಿಗ್ ಬಾಸ್' ವೇದಿಕೆ ಮೇಲೆ ಚಮಕ್ ಕೊಟ್ಟ ಚಂದ್ರು ಸಿಹಿಯೋ.? ಕಹಿಯೋ.?

'ಬಿಗ್ ಬಾಸ್' ವೇದಿಕೆ ಮೇಲೆ ಚಮಕ್ ಕೊಟ್ಟ ಚಂದ್ರು ಸಿಹಿಯೋ.? ಕಹಿಯೋ.?

Posted By:
Subscribe to Filmibeat Kannada

ಬಿಗ್ ಬಾಸ್ ಕನ್ನಡ-5' ಗ್ರ್ಯಾಂಡ್ ಓಪನ್ನಿಂಗ್ ನಲ್ಲಿ, ''ಕಲರ್ಸ್ ಕನ್ನಡದ ಡ್ಯಾನ್ಸಿಂಗ್ ಸ್ಟಾರ್ ನ ಒಳಗೆ ಕಳುಹಿಸುವ ಟೈಮ್ ಬಂದಿದೆ. ಹಿತವಾದ ನಗು, ಅಪ್ಪ-ಅಮ್ಮನ ಮುದ್ದಾದ ಮಗು, '1/4 ಕೆಜಿ ಪ್ರೀತಿ'ಯನ್ನ ಊರು ತುಂಬಾ ಹಂಚಲು ಬರುತ್ತಿದ್ದಾರೆ ನಮ್ಮ ಮುಂದಿನ ಸ್ಪರ್ಧಿ'' ಅಂತ ಕಿಚ್ಚ ಸುದೀಪ್ ಹೇಳಿದಾಗ ಹಿತಾ ಚಂದ್ರಶೇಖರ್ 'ಬಿಗ್ ಬಾಸ್' ಸ್ಪರ್ಧಿ ಅಂತ ಎಲ್ಲರೂ ಊಹಿಸಿದರು. ಅದಕ್ಕೆ ತಕ್ಕ ಹಾಗೆ ಹಿತಾ ಚಂದ್ರಶೇಖರ್ ಕೂಡ ವೇದಿಕೆ ಮೇಲೆ ಡ್ಯಾನ್ಸ್ ಪರ್ಫಾಮೆನ್ಸ್ ನೀಡಿದರು. ಆದ್ರೆ, 'ಬಿಗ್ ಬಾಸ್' ಮನೆ ಒಳಗೆ ಕಾಲಿಟ್ಟಿದ್ದು ಮಾತ್ರ ಹಿತಾ ತಂದೆ 'ಸಿಹಿ ಕಹಿ ಚಂದ್ರು'.!

'ಇವರು'ಗಳೇ ನೋಡಿ 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದ 17 ಸ್ಪರ್ಧಿಗಳು.!

''ಮಗಳನ್ನು ಬಿಟ್ಟು ಇಡೀ ಕುಟುಂಬ ಇರಲ್ಲ, ಮಗಳ ಬದಲು ನಾನೇ ಒಳಗೆ ಹೋಗ್ತೀನಿ'' ಅಂತ ಹೇಳಿ 'ಬಿಗ್ ಬಾಸ್' ವೇದಿಕೆ ಮೇಲೆ ಚಮಕ್ ಕೊಟ್ಟ ಸಿಹಿ ಕಹಿ ಚಂದ್ರು ಸದ್ಯ 'ಬಿಗ್ ಬಾಸ್ ಕನ್ನಡ-5' ಸ್ಪರ್ಧಿ.

ನಟನಾಗಿ, ಧಾರಾವಾಹಿಗಳ ನಿರ್ದೇಶಕನಾಗಿ ಜನಪ್ರಿಯತೆ ಗಳಿಸಿರುವ ಸಿಹಿ ಕಹಿ ಚಂದ್ರು ರವರ ಕಿರು ಪರಿಚಯ ಇಲ್ಲಿದೆ, ಓದಿರಿ...

ಸಿಹಿ ಕಹಿ ಚಂದ್ರು ಹಿನ್ನಲೆ

ಅಶ್ವತ್ಥ ನಾರಾಯಣ ರಾವ್ ಹಾಗೂ ಮೀನಾಕ್ಷಿ ದಂಪತಿಯ ಪುತ್ರ ಚಂದ್ರಶೇಖರ್. 1961 ರಲ್ಲಿ ಹುಟ್ಟಿದ ಚಂದ್ರಶೇಖರ್ ರವರಿಗೆ ಚಿಕ್ಕವಯಸ್ಸಿನಿಂದಲೂ ನಾಟಕ, ನಟನೆ ಬಗ್ಗೆ ಆಕರ್ಷಣೆ ಇತ್ತು. ಅದರಂತೆಯೇ ಕನ್ನಡ ಚಿತ್ರರಂಗಕ್ಕೆ ಚಂದ್ರಶೇಖರ್ ಪದಾರ್ಪಣೆ ಮಾಡಿದರು.

'ಬಿಗ್ ಬಾಸ್' ಮನೆಯೊಳಗೆ ಕಾಲಿಟ್ಟ ದಯಾಳ್ ಪದ್ಮನಾಭನ್ ಕಿರು ಪರಿಚಯ

'ಸಿಹಿ ಕಹಿ' ಸೀರಿಯಲ್

ಕಿರುತೆರೆಯ ಧಾರಾವಾಹಿಗಳಲ್ಲಿ ನಟಿಸುತ್ತಿದ್ದ ಚಂದ್ರಶೇಖರ್, ಅಂದಿನ ಕಾಲಕ್ಕೆ ಅತಿ ಹೆಚ್ಚು ಟಿ.ಆರ್.ಪಿ ಹೊಂದಿದ್ದ ದೂರದರ್ಶನದ 'ಸಿಹಿ ಕಹಿ' ಸೀರಿಯಲ್ ನ ಪ್ರಮುಖ ಪಾತ್ರಧಾರಿ. ಈ ಸೀರಿಯಲ್ ನಿಂದಲೇ ಚಂದ್ರಶೇಖರ್ ರವರಿಗೆ 'ಸಿಹಿ ಕಹಿ ಚಂದ್ರು' ಎಂಬ ಹೆಸರು ಬಂತು.

ವಿಷ್ಣುವರ್ಧನ್ ಮಗಳಾಗಿದ್ದ ತೇಜಸ್ವಿನಿ ಪ್ರಕಾಶ್ ಈಗ 'ಬಿಗ್ ಬಾಸ್' ಮೆಟ್ಟಿಲೇರಿದ್ದಾರೆ!

'ಸಿಹಿ ಕಹಿ' ಕುಟುಂಬ

'ಸಿಹಿ ಕಹಿ' ಧಾರಾವಾಹಿಯಲ್ಲೇ ನಟಿಸುತ್ತಿದ್ದ ಗೀತಾ ಹಾಗೂ ಚಂದ್ರು ಪ್ರೀತಿಸಿ ಮದುವೆ ಆದರು. ಸಿಹಿ ಕಹಿ ಚಂದ್ರು ಹಾಗೂ ಸಿಹಿ ಕಹಿ ಗೀತಾ ದಂಪತಿಗೆ ಹಿತಾ ಮತ್ತು ಖುಷಿ ಎಂಬ ಇಬ್ಬರು ಹೆಣ್ಮಕ್ಕಳಿದ್ದಾರೆ.

ಹಾಸ್ಯ ನಟ

'ಗೋಲ್ ಮಾಲ್ ರಾಧಾ ಕೃಷ್ಣ', 'ಸ್ಪರ್ಶ', 'ಬೊಂಬಾಟ್ ಹೆಂಡ್ತಿ', 'ಗೌರಿ ಗಣೇಶ', 'ಗಣೇಶನ ಮದುವೆ' ಸೇರಿದಂತೆ ಹಲವು ಕನ್ನಡ ಸಿನಿಮಾಗಳಲ್ಲಿ ಹಾಸ್ಯ ಕಲಾವಿದನಾಗಿ, ಪೋಷಕ ಪಾತ್ರಧಾರಿಯಾಗಿ ನಟಿಸಿದ ಖ್ಯಾತಿ ಸಿಹಿ ಕಹಿ ಚಂದ್ರುರವರದ್ದು.

ಜನಪ್ರಿಯ ಧಾರಾವಾಹಿಗಳ ನಿರ್ದೇಶಕ

ಕಿರುತೆರೆಯಲ್ಲಿಯೇ ಅತಿ ಹೆಚ್ಚು ಜನಪ್ರಿಯತೆ ಗಳಿಸಿದ 'ಪಾಪಾ ಪಾಂಡು' ಹಾಗೂ 'ಸಿಲ್ಲಿ ಲಲ್ಲಿ' ಧಾರಾವಾಹಿಗಳ ನಿರ್ದೇಶಕ ಕೂಡ ಇದೇ 'ಸಿಹಿ ಕಹಿ ಚಂದ್ರು'.

ಖ್ಯಾತಿ ತಂದುಕೊಟ್ಟ ಬೊಂಬಾಟ್ ಭೋಜನ

ಇವೆಲ್ಲದರ ಜೊತೆಗೆ ರುಚಿಕರವಾದ ಅಡುಗೆ ಮಾಡುವುದರಲ್ಲಿಯೂ ಸಿಹಿ ಕಹಿ ಚಂದ್ರು ಫೇಮಸ್ಸು. ಅದಕ್ಕೆ ಸಾಕ್ಷಿ 'ಬೊಂಬಾಟ್ ಭೋಜನ' ಕಾರ್ಯಕ್ರಮ.

ನಾನ್ ವೆಜ್ ಅಡುಗೆ ಮಾಡಲ್ಲ

ಸದ್ಯ ಸಿಹಿ ಕಹಿ ಚಂದ್ರು 'ಬಿಗ್ ಬಾಸ್' ಮನೆ ಪ್ರವೇಶ ಮಾಡಿದ್ದಾರೆ. ಯಾವುದೇ ಕಾರಣಕ್ಕೂ ಮಾಂಸಾಹಾರ ತಿನ್ನಲ್ಲ, ನಾನ್ ವೆಜ್ ಅಡುಗೆ ಕೂಡ ಮಾಡಲ್ಲ, ಕೂಗಾಡುವುದಿಲ್ಲ, ಇನ್ನೊಬ್ಬರ ಬಗ್ಗೆ ಸುಳ್ಳು ಹೇಳಲ್ಲ ಎನ್ನುತ್ತಾ 'ಬಿಗ್ ಬಾಸ್' ಮನೆಯೊಳಗೆ ಹೋಗಿರುವ ಸಿಹಿ ಕಹಿ ಚಂದ್ರು ಜರ್ನಿ ಸಿಹಿಯಾಗಿರುತ್ತೋ, ಕಹಿಯಾಗಿರುತ್ತೋ... ನೋಡೋಣ.

English summary
Who is Sihi Kahi Chandru.? Read the article to know more about Bigg Boss Kannada 5 Contestant Sihi Kahi Chandru and his background.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada