»   » ಅಭಿಮಾನಿಗಳ ಕೃಪೆ ಇದ್ದರೆ ಸುರಸುಂದರಿ ಶ್ರುತಿ ಪ್ರಕಾಶ್ 'ಬಿಗ್ ಬಾಸ್' ಗೆಲ್ಲಬಹುದು.!

ಅಭಿಮಾನಿಗಳ ಕೃಪೆ ಇದ್ದರೆ ಸುರಸುಂದರಿ ಶ್ರುತಿ ಪ್ರಕಾಶ್ 'ಬಿಗ್ ಬಾಸ್' ಗೆಲ್ಲಬಹುದು.!

Posted By:
Subscribe to Filmibeat Kannada

ಹಾಗ್ನೋಡಿದ್ರೆ, 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮಕ್ಕೆ ಶ್ರುತಿ ಪ್ರಕಾಶ್ ಎಂಟ್ರಿಕೊಟ್ಟಿದ್ದು ಸೆಲೆಬ್ರಿಟಿ ಸ್ಪರ್ಧಿಯಾಗಿ. ಆದ್ರೆ, ಕನ್ನಡಿಗರಿಗೆ ಮಾತ್ರ ಶ್ರುತಿ ಪ್ರಕಾಶ್ ಪರಿಚಯ ಇರಲಿಲ್ಲ. ಯಾಕಂದ್ರೆ, ಕನ್ನಡ ಬಾರದ ಕನ್ನಡತಿ ಶ್ರುತಿ ಪ್ರಕಾಶ್ ಕರ್ನಾಟಕಕ್ಕಿಂತ ಹೆಚ್ಚಾಗಿ ಮುಂಬೈನಲ್ಲಿ ಜನಪ್ರಿಯ.

'ಇಶ್ಕ್ ಅನ್ ಪ್ಲಗ್ಡ್' ಹಾಗೂ 'ಸಾಥ್ ನಿಭಾನಾ ಸಾಥಿಯಾ' ಧಾರಾವಾಹಿಗಳಲ್ಲಿ ಅಭಿನಯಿಸಿದ್ದ ಶ್ರುತಿ ಪ್ರಕಾಶ್ ಅಲ್ಲಿನ ವೀಕ್ಷಕರಿಗೆ ಚಿರಪರಿಚಿತ. ಬೆಳಗಾವಿಯಲ್ಲಿ ಹುಟ್ಟಿ ಬೆಳೆದ ಶ್ರುತಿ ಪ್ರಕಾಶ್ ಕರ್ನಾಟಕದಲ್ಲಿ ಖ್ಯಾತಿ ಪಡೆದಿದ್ದು 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದ ಮೂಲಕ.

'ಬಿಗ್ ಬಾಸ್' ಮನೆಯೊಳಗೆ ಕಾಲಿಡುತ್ತಿದ್ದಂತೆಯೇ, ಶ್ರುತಿ ಪ್ರಕಾಶ್ ಗೆ ಕರ್ನಾಟಕದಲ್ಲೂ ಅಭಿಮಾನಿಗಳು ಹುಟ್ಟಿಕೊಂಡರು. ದಿನಗಳು ಕಳೆಯುತ್ತಿದ್ದಂತೆಯೇ ಶ್ರುತಿ ಪ್ರಕಾಶ್ ಅಭಿಮಾನಿ ಬಳಗ ಹೆಚ್ಚಾಗುತ್ತಾ ಹೋಯ್ತು. ಅಭಿಮಾನಿಗಳ ಕೃಪಾ ಕಟಾಕ್ಷದಿಂದಲೇ ಶ್ರುತಿ ಪ್ರಕಾಶ್ ಇಂದು ಫೈನಲಿಸ್ಟ್ ಆಗಿದ್ದಾರೆ. ಇದೇ ಅಭಿಮಾನಿಗಳು ಮನಸ್ಸು ಮಾಡಿದರೆ ಶ್ರುತಿ ಪ್ರಕಾಶ್ 'ಬಿಗ್ ಬಾಸ್' ಗೆಲ್ಲಬಹುದು. ಆದ್ರೆ, ಅದಕ್ಕೂ ಮುನ್ನ 'ಬಿಗ್ ಬಾಸ್' ಮನೆಯೊಳಗಿನ ಶ್ರುತಿ ಪ್ರಕಾಶ್ ಜರ್ನಿ ಕುರಿತು ಸಣ್ಣ ರೌಂಡಪ್ ಇಲ್ಲಿದೆ. ಓದಿರಿ...

ಸೆಲೆಬ್ರಿಟಿ ಸ್ಪರ್ಧಿ

'ಬಿಗ್ ಬಾಸ್' ಮನೆಯೊಳಗೆ ಶ್ರುತಿ ಪ್ರಕಾಶ್ ಎಂಟ್ರಿ ಕೊಟ್ಟಿದ್ದು ಸೆಲೆಬ್ರಿಟಿ ಸ್ಪರ್ಧಿಯಾಗಿ.

ಅಂತೂ ಇಂತೂ ಶ್ರುತಿ ಪ್ರಕಾಶ್ ಆಸೆ ಈಡೇರಿತು.!

ಹೊಂದಾಣಿಕೆ ಸಮಸ್ಯೆ

ಬೆಳಗಾವಿ ಮೂಲದವರಾಗಿದ್ದರೂ, ಕನ್ನಡವನ್ನ ಸರಾಗವಾಗಿ ಮಾತನಾಡಲು ಶ್ರುತಿ ಪ್ರಕಾಶ್ ಗೆ ಬರಲ್ಲ. ಹೀಗಾಗಿ, ಮೊದಮೊದಲು ಶ್ರುತಿಗೆ ಭಾಷೆ ಹೊಂದಾಣಿಕೆ ಸಮಸ್ಯೆ ಎದುರಾಯ್ತು.

ಅನುಪಮಾ ಫ್ರೆಂಡ್ ಆಗಿದ್ದಕ್ಕೆ ಮನಸ್ಸು ಬದಲಾಯಿಸಿದ್ರಂತೆ ಶ್ರುತಿ ಪ್ರಕಾಶ್.!

ಅಚ್ಚರಿ ಮೂಡಿಸಿದ ಶ್ರುತಿ ಪ್ರಕಾಶ್

ಕೆಲವು ದೈಹಿಕ ಚಟುವಟಿಕೆಗಳಲ್ಲಿ ಶ್ರುತಿ ಪ್ರಕಾಶ್ ಅತ್ಯುತ್ತಮ ಪರ್ಫಾಮೆನ್ಸ್ ನೀಡಿದರು. ಇದೇ ಕಾರಣಕ್ಕೆ ಶ್ರುತಿ ಪ್ರಕಾಶ್ ಬಹುಬೇಗ ಕ್ಯಾಪ್ಟನ್ ಆಗಿದ್ದು.!

ವಿವಾದದ ಕೇಂದ್ರ ಬಿಂದು

ಶ್ರುತಿ ಪ್ರಕಾಶ್ ಕ್ಯಾಪ್ಟನ್ ಆಗಿದ್ದಾಗ ದಿವಾಕರ್ ಗೆ ಕಳಪೆ ಬೋರ್ಡ್ ನೀಡಿದರು. ಕಳಪೆ ಬೋರ್ಡ್ ಧರಿಸಲು ದಿವಾಕರ್ ತಯಾರಿರಲಿಲ್ಲ. ತಮ್ಮ ನಿರ್ಧಾರ ಬದಲಿಸಲು ಶ್ರುತಿ ಪ್ರಕಾಶ್ ರೆಡಿ ಇರಲಿಲ್ಲ. ಇದರಿಂದ 'ಬಿಗ್ ಬಾಸ್' ಮನೆಯಲ್ಲಿ ದೊಡ್ಡ ರಾದ್ಧಾಂತವೇ ನಡೆದು ಹೋಯ್ತು. ಬಳಿಕ ಇಬ್ಬರಿಗೂ 'ಬಿಗ್ ಬಾಸ್' ಶಿಕ್ಷೆ ನೀಡಿದರು.

'ಕಳಪೆ' ಜಗಳ: ಶ್ರುತಿ-ದಿವಾಕರ್ ಇಬ್ಬರಿಗೂ ಸಂಕಷ್ಟ ತಂದಿಟ್ಟ ಬಿಗ್ ಬಾಸ್ ಶಿಕ್ಷೆ.!

ಜೆಕೆಗೆ ಹೆಚ್ಚು ಆತ್ಮೀಯ

'ಬಿಗ್ ಬಾಸ್' ಮನೆಯೊಳಗೆ ಶ್ರುತಿ ಪ್ರಕಾಶ್ ಹೆಚ್ಚು ಕಾಲ ಕಳೆದಿದ್ದು ಜಯರಾಂ ಕಾರ್ತಿಕ್ ಜೊತೆಗೆ. ಸದಾ ಜೆಕೆ ಜೊತೆಗೆ ಇರುವ ಶ್ರುತಿ ಪ್ರಕಾಶ್ ಕಾಲೆಳೆಯುತ್ತಿರುತ್ತಾರೆ ಸುದೀಪ್.

ಲವ್ ಟ್ರೈಯಾಂಗಲ್.!

ಶ್ರುತಿ ಪ್ರಕಾಶ್ ಕಂಡ್ರೆ ಚಂದನ್ ಶೆಟ್ಟಿಗೆ ಇಷ್ಟ. ಇತ್ತ ಶ್ರುತಿ ಪ್ರಕಾಶ್ ಗೆ ಜೆಕೆ ಕಂಡ್ರೆ ಇಷ್ಟ. ಹೀಗಾಗಿ ಕೆಲವು ದಿನಗಳ ಕಾಲ 'ಬಿಗ್ ಬಾಸ್' ಮನೆಯೊಳಗೆ ಟ್ರೈಯಾಂಗಲ್ ಲವ್ ಸ್ಟೋರಿ ನಡೆದಿತ್ತು.

ಶ್ರುತಿ ಪ್ರಕಾಶ್ ಗೆ ಲವ್ ಪ್ರಪೋಸ್ ಮಾಡಿದ ಚಂದನ್ ಶೆಟ್ಟಿ.!

ಕನ್ನಡ ಕಲಿಯುತ್ತಿರುವ ಶ್ರುತಿ

'ಬಿಗ್ ಬಾಸ್' ಮನೆಯೊಳಗೆ ಹೋದ್ಮೇಲೆ, ಶ್ರುತಿ ಪ್ರಕಾಶ್ ಕನ್ನಡ ಕಲಿತಿದ್ದಾರೆ. ಕನ್ನಡ ಹಾಡುಗಳನ್ನ ಕಲಿತು ಹಾಡಿದ್ದಾರೆ.

ಗಾಸಿಪ್ ಮಾಡಿಲ್ಲ.!

ಗಾಸಿಪ್ ಮಾಡದ, ಡಬಲ್ ಗೇಮ್ ಆಡದ ಶ್ರುತಿ ಪ್ರಕಾಶ್ ಕಂಡ್ರೆ ವೀಕ್ಷಕರಿಗೆ ಸಿಕ್ಕಾಪಟ್ಟೆ ಪ್ರೀತಿ.

ಶ್ರುತಿ ಪ್ರಕಾಶ್ ಗೆಲ್ಲಬಹುದಾ.?

ಭಾಷೆ ಸಮಸ್ಯೆ ಇದ್ದರೂ, ಅನಿಸಿದ್ದನ್ನ ನೇರವಾಗಿ ಹೇಳುವ ಶ್ರುತಿ ಪ್ರಕಾಶ್ ಇದೀಗ ಟಾಪ್ 5 ಹಂತಕ್ಕೆ ಬಂದಿದ್ದಾರೆ. ಇಲ್ಲಿಯವರೆಗೂ ಅವರನ್ನ ಕರೆದುಕೊಂಡು ಬಂದಿರುವ ಅಭಿಮಾನಿಗಳು ಈಗ ಮನಸ್ಸು ಮಾಡಿದರೆ ಶ್ರುತಿ ಪ್ರಕಾಶ್ ರನ್ನ ಗೆಲ್ಲಿಸಬಹುದು.

English summary
Shruti Prakash is a Finalist in Bigg Boss Kannada 5 reality show. Will Shruti Prakash manage to win #BBK5 trophy.? Lets wait and Watch.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X