twitter
    For Quick Alerts
    ALLOW NOTIFICATIONS  
    For Daily Alerts

    'ಸರಿಗಮಪ 14'ನಲ್ಲಿ ಮೆಡಲ್ ಪಡೆದ ಮಕ್ಕಳ ಹಿಂದಿನ ಕಷ್ಟ ಕೇಳಿ!

    By Naveen
    |

    Recommended Video

    ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ 14ರ ಮಕ್ಕಳ ಹಿಂದಿದೆ ನೋವಿನ ಕಥೆಗಳು | Filmibeat Kannada

    ರಿಯಾಲಿಟಿ ಶೋ ಗಳನ್ನು ಜನರಿಗೆ ತುಂಬ ಹತ್ತಿರವಾಗುವಂತೆ ಮಾಡುವ ಕನ್ನಡದ ಪ್ರಮುಖ ವಾಹಿನಿ ಅಂದರೆ 'ಜೀ ಕನ್ನಡ'. ಈ ವಾಹಿನಿಯಲ್ಲಿ ಈಗ ಮತ್ತೆ 'ಸರಿಗಮಪ' ಕಾರ್ಯಕ್ರಮ ಶುರು ಆಗಿದೆ. ಕಳೆದ ಶನಿವಾರದಿಂದ ಕಾರ್ಯಕ್ರಮ ಪ್ರಸಾರ ಆಗುತ್ತಿದೆ.

    ಈ ಬಾರಿಯ 'ಸರಿಗಮಪ 14' ಕಾರ್ಯಕ್ರಮದ ದೊಡ್ಡ ಹೈಲೆಟ್ ಮಕ್ಕಳು. ಮೆಗಾ ಆಡಿಷನ್ ನಲ್ಲಿಯೇ ಈ ಮಕ್ಕಳು ಎಲ್ಲರ ಗಮನ ಸೆಳೆದಿದ್ದಾರೆ. ಅದರಲ್ಲಿಯೂ ಕೆಲವು ಮಕ್ಕಳು ಈ ವಯಸ್ಸಿನಲ್ಲಿಯೇ ಕಷ್ಟ ಪಟ್ಟು ವೇದಿಕೆ ಏರಿದ್ದಾರೆ. ಎಲ್ಲೋ ಹಳ್ಳಿಯಲ್ಲಿ ಬೆಳೆದು ಸಂಗೀತ ಕಲಿಯದೆ ಇದ್ದರು ಕೆಲ ಮಕ್ಕಳು ಕಾರ್ಯಕ್ರಮ ಮೂರು ತೀರ್ಪುಗಾರರ ಮನಸ್ಸು ಗೆದ್ದಿದ್ದಾರೆ.

    ಅಂದಹಾಗೆ, ಜೀ ಕನ್ನಡ ವಾಹಿನಿಯ 'ಸರಿಗಮಪ 14' ಕಾರ್ಯಕ್ರಮದ ಮೆಗಾ ಆಡಿಷನ್ ನಲ್ಲಿ ಮೆಡಲ್ ಪಡೆದ ಈ ಮಕ್ಕಳ ಬಗ್ಗೆ ಒಂದಷ್ಟು ವಿವರ ಮುಂದಿದೆ ಓದಿ...

    ಆಯ್ಕೆ ಆದ ಮಕ್ಕಳು

    ಆಯ್ಕೆ ಆದ ಮಕ್ಕಳು

    ಕಾರ್ಯಕ್ರಮದ ಮೆಗಾ ಆಡಿಷನ್ ನಲ್ಲಿ ಸದ್ಯ 9 ಮಕ್ಕಳು ಆಯ್ಕೆ ಆಗಿದ್ದಾರೆ. ವಿಶ್ವಪ್ರಸಾದ್, ಹರ್ಷಿತಾ, ಅಭಿಜಿತ್, ಕೀರ್ತನಾ, ತೇಜಸ್, ತನುಶ್ರೀ, ಸೃಜನ್, ಕ್ಷಿತಿ ಕೆ ರೈ, ಲಕ್ಷ್ಮಿ ಆಯ್ಕೆ ಆದ ಮಕ್ಕಳಾಗಿದ್ದಾರೆ.

    15 ಮಕ್ಕಳು ಇರುತ್ತಾರೆ

    15 ಮಕ್ಕಳು ಇರುತ್ತಾರೆ

    ಕಾರ್ಯಕ್ರಮದಲ್ಲಿ ಒಟ್ಟು 15 ಮಕ್ಕಳು ಇರಲಿದ್ದು, ಅದರಲ್ಲಿ 9 ಮಕ್ಕಳು ಈ ಆಯ್ಕೆ ಆಗಿದ್ದಾರೆ. ಉಳಿದ 6 ಸ್ಪರ್ಧಿಗಳ ಆಯ್ಕೆ ಪ್ರಕ್ರಿಯೆ ಮುಂದಿನ ವಾರ ನಡೆಯಲಿದೆ.

    ಮಂಡ್ಯದ ಹುಡುಗನ ಕಣ್ಣೀರ ಕಥೆ

    ಮಂಡ್ಯದ ಹುಡುಗನ ಕಣ್ಣೀರ ಕಥೆ

    ಆಯ್ಕೆ ಆದ ಮಕ್ಕಳ ಪೈಕಿ ಪ್ರಮುಖವಾಗಿ ಇಬ್ಬರು ಮಕ್ಕಳು ಅನೇಕರಿಗೆ ಇಷ್ಟ ಆದರು. ಅದರಲ್ಲಿ ಮಂಡ್ಯದ ಬಡ ಹುಡುಗ ಸೃಜನ್ ಕೂಡ ಒಬ್ಬ. ಈ ಹುಡುಗ ಕಾರ್ಯಕ್ರಮದಲ್ಲಿ ಹಾಡುವುದಕ್ಕಾಗಿ ತಾನು ಸಾಕಿದ ಕರುವನ್ನೇ ಮಾರಿದ್ದಾನೆ.

    ಕರು ಮಾರಿ 'ಸರಿಗಮಪ' ಬಂದ

    ಕರು ಮಾರಿ 'ಸರಿಗಮಪ' ಬಂದ

    ಸೃಜನ್ ಅವರ ತಂದೆ ರೈತರಾಗಿದ್ದು, ಅವರ ಕುಟುಂಬ ದೊಡ್ಡ ಸಮಸ್ಯೆಯಲ್ಲಿ ಇದೆ. 'ಸರಿಗಪಮ 'ಕಾರ್ಯಕ್ರಮಕ್ಕೆ ಬರಲು ಸಹ ಸೃಜನ್ ತಂದೆಯ ಬಳಿ ದುಡ್ಡು ಇರಲಿಲ್ಲ. ಆಗ ಸೃಜನ್ ಸಾಕಿದ ಗೌರಿ ಎಂಬ ಕರು ವನ್ನು ಮಾರಿ ಅದರಿಂದ ಬಂದ ದುಡ್ಡಿನಿಂದ ಬಟ್ಟೆ, ಶೂ ಕೊಂಡು ಬೆಂಗಳೂರಿಗೆ 'ಸರಿಗಪಮ' ಕಾರ್ಯಕ್ರಮಕ್ಕಾಗಿ ಬಂದಿದ್ದಾರೆ.

    ಸಾಕಿದ ಕರು ಮಾರಿ 'ಸರಿಗಮಪ' ವೇದಿಕೆ ಏರಿದ ಮಂಡ್ಯದ ಬಡ ಹುಡುಗ!ಸಾಕಿದ ಕರು ಮಾರಿ 'ಸರಿಗಮಪ' ವೇದಿಕೆ ಏರಿದ ಮಂಡ್ಯದ ಬಡ ಹುಡುಗ!

    ಕೂಲಿ ಕೆಲಸ ಮಾಡುವವರ ಮಗಳು ಲಕ್ಷ್ಮಿ

    ಕೂಲಿ ಕೆಲಸ ಮಾಡುವವರ ಮಗಳು ಲಕ್ಷ್ಮಿ

    9ನೇ ತರಗತಿ ಓದುತ್ತಿರುವ ಲಕ್ಷ್ಮಿ, ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ಗೋಡಿಗೇರಿ. ಇವರ ಅಪ್ಪ ಮತ್ತು ಅಮ್ಮ ಕೂಲಿ ಕೆಲಸ ಮಾಡುತ್ತಾರೆ. ಅಂದ್ಹಾಗೆ, ಲಕ್ಷ್ಮಿ ಇದುವರೆಗೂ ಯಾವುದೇ ಸಂಗೀತ ಅಭ್ಯಾಸ ಮಾಡಿಲ್ಲ. ಯಾವುದೇ ತರಗತಿಗೂ ಹೋಗಿಲ್ಲ. ಮೊಬೈಲ್ ನಲ್ಲೇ ಹಾಡಿ ಕೇಳಿ, ಹಾಡುವ ಅಭ್ಯಾಸ ಮಾಡಿಕೊಂಡಿದ್ದಾರೆ.

    ಹೆಜ್ಜೆ ಹಾಕಿದ ಹಂಸಲೇಖ

    ಹೆಜ್ಜೆ ಹಾಕಿದ ಹಂಸಲೇಖ

    ಕಾರ್ಯಕ್ರಮದಲ್ಲಿ ಲಕ್ಷ್ಮಿ ಹಾಡು ಕೇಳಿ ಸ್ವತಃ ಹಂಸಲೇಖ ಎದ್ದು ಬಂದು ಹಾಡಿಗೆ ಹೆಜ್ಜೆ ಹಾಕಿದರು. ಜನಪದ ಗೀತೆಯ ಮೂಲಕ ಆಡಿಷನ್ ಕೊಟ್ಟ ಲಕ್ಷ್ಮಿ, ತ್ರಿವಳಿ ಜಡ್ಜ್ ಗಳನ್ನ ಮೂಕವಿಸ್ಮಿತರನ್ನಾಗಿಸಿದರು.

    ತೀರ್ಪುಗಾರರನ್ನ ಮೂಕವಿಸ್ಮಿತಗೊಳಿಸಿದ 'ಲಕ್ಷ್ಮಿ' ಬದುಕಿನ ರೋಚಕ ಕಥೆತೀರ್ಪುಗಾರರನ್ನ ಮೂಕವಿಸ್ಮಿತಗೊಳಿಸಿದ 'ಲಕ್ಷ್ಮಿ' ಬದುಕಿನ ರೋಚಕ ಕಥೆ

    ಬೆಳಗಾವಿಯ ವಿಶ್ವಪ್ರಸಾದ್

    ಬೆಳಗಾವಿಯ ವಿಶ್ವಪ್ರಸಾದ್

    ಬೆಳಗಾವಿಯ ಎಂಬ ಹುಡುಗ ಕೂಡ ಮೆಗಾ ಆಡಿಷನ್ ನಲ್ಲಿ ಸೆಲೆಕ್ಟ್ ಆಗಿದ್ದಾರೆ. ತಮ್ಮ ಊರಿನಲ್ಲಿ ಸಂಗೀತ ಶಾಲೆ ಇಲ್ಲದೆ ಈ ಹುಡುಗ 40 ಕಿಲೋ ಮೀಟರ್ ಪ್ರಯಾಣ ಮಾಡಿ ಸಂಗೀತ ಕಲಿಯುತ್ತಿದ್ದಾನೆ.

    English summary
    All about 'Sarigamapa Season 14' contestants., Zee Kannada channel's popular show 'Sarigamapa Season 14' started from last Saturday. (December 9).
    Wednesday, December 13, 2017, 15:25
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X