»   » ಅ.6ರಂದು ಎಲ್ಲಾ ಭಾಷೆಯ ಕೇಬಲ್ ಟಿವಿ ಬಂದ್

ಅ.6ರಂದು ಎಲ್ಲಾ ಭಾಷೆಯ ಕೇಬಲ್ ಟಿವಿ ಬಂದ್

Posted By:
Subscribe to Filmibeat Kannada
Kannada tv channels bandh
ಕಾವೇರಿ ನದಿ ಪ್ರಾಧಿಕಾರ ನೀಡಿರುವ ಕರ್ನಾಟಕ ವಿರೋಧಿ ತೀರ್ಪನ್ನು ಪುನರ್ ಪರಿಶೀಲಿಸುವಂತೆ ಆಗ್ರಹಿಸಿ ಕನ್ನಡ ಪರ ಸಂಘಟನೆಗಳು ಅಕ್ಟೋಬರ್ 6ರಂದು ಕರ್ನಾಟಕ ಬಂದ್ ಗೆ ಕರೆನೀಡಿರುವುದು ಗೊತ್ತೇ ಇದೆ. ಈ ಬಂದ್ ಗೆ ಕರ್ನಾಟಕ ಕೇಬಲ್ ಟಿವಿ ಅಸೋಸಿಯೇಷನ್ ಸಹ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ.

ಈ ಸಂಬಂಧ ಅಸೋಸಿಯೇಷನ್ ಅಧ್ಯಕ್ಷ ಪ್ಯಾಟ್ರಿಕ್ ರಾಜು ಮಾತನಾಡುತ್ತಾ, ಕರ್ನಾಟಕ ಬಂದ್ ಗೆ ಕೇಬಲ್ ಟಿವಿ ಅಸೋಸಿಯೇಷನ್ ಕೂಡ ಕೈಜೋಡಿಸಿದ್ದು ಅ.6ರಂದು ಎಲ್ಲಾ ಮನರಂಜನಾ ಚಾನಲ್ ಗಳು ಬಂದ್ ಆಗಲಿವೆ ಎಂದಿದ್ದಾರೆ.

ಆದರೆ ಕರ್ನಾಟಕ ಬಂದ್ ದಿನ ಸುದ್ದಿ ಚಾನಲ್ ಗಳು ಮಾತ್ರ ಇರುತ್ತವೆ. ಒಂದು ದಿನದ ಮಟ್ಟಿಗೆ ಕನ್ನಡ, ತಮಿಳು, ತೆಲುಗು, ಮಲಯಾಳಂ, ಇಂಗ್ಲಿಷ್, ಹಿಂದಿ ಸೇರಿದಂತೆ ಕೇಬಲ್ ಟಿವಿ ಅಸೋಸಿಯೇಷನ್ ನಡಿ ಬರುವ ಯಾವುದೇ ಮನರಂಜನಾ ಚಾನಲ್ ಅಂದು ಪ್ರಸಾರವಾಗಲ್ಲ.

ಕೇಬಲ್ ಟಿವಿ ಅಸೋಸಿಯೇಷನ್ ಅವರ ಈ ನಿರ್ಧಾರದಿಂದ ಮನರಂಜನಾ ಚಾನಲ್ ಗಳ ಟಿಆರ್ ಪಿ ರೇಟಿಂಗ್ ಗೂ ಹೊಡೆತಬೀಳಲಿದೆ. ಅ.6ರಂದು ಬೆಳಗ್ಗೆ 6ರಿಂದ ಸಂಜೆ 6ರತನಕ ಮನರಂಜನಾ ಚಾನಲ್ ಗಳನ್ನು ಬಂದ್ ಮಾಡುತ್ತಿರುವುದಾಗಿ ಪ್ಯಾಟ್ರಿಕ್ ರಾಜು ತಿಳಿಸಿದ್ದಾರೆ.

ಕರ್ನಾಟಕ ಬಂದ್ ದಿನ ಕೇಬಲ್ ಟಿವಿ ಚಾನಲ್ ಗಳೇನೋ ಇರುವುದಿಲ್ಲ ಆದರೆ ಡಿಟಿಎಚ್ ಸೇವೆ ಪಡೆದಿರುವ ಗ್ರಾಹಕರಿಗೆ ಮಾತ್ರ ಯಾವುದೇ ಬಿಸಿ ಮುಟ್ಟುವುದಿಲ್ಲ. ಅವರು ನಿರಾತಂಕವಾಗಿ ತಮಗಿಷ್ಟ ಬಂದ ಚಾನಲ್ ಗಳನ್ನು ವೀಕ್ಷಿಸಬಹುದಾಗಿದೆ. (ಒನ್ಇಂಡಿಯಾ ಕನ್ನಡ)

English summary
Karnataka Cabel TV Association joins hands to protest against Karnataka bandh on October 6 to protest against the release of Cauvery waters to Tamil Nadu. The association to shut down all entertainment channels (except news channels) 6 AM to 6 PM Saturday 6 Oct said the association president Patric Raju.
Please Wait while comments are loading...