»   » ಬಹುತೇಕ ಸೀರಿಯಸ್ ಸ್ಪರ್ಧಿಗಳು ತಮಾಷೆನೇ ಅಲ್ಲ!

ಬಹುತೇಕ ಸೀರಿಯಸ್ ಸ್ಪರ್ಧಿಗಳು ತಮಾಷೆನೇ ಅಲ್ಲ!

Posted By:
Subscribe to Filmibeat Kannada

ಈ ಬಾರಿ 'ಬಿಗ್ ಬಾಸ್ ಸೀಸನ್ 2'ನಲ್ಲಿ ಯಾರೆಲ್ಲಾ ಇರುತ್ತಾರೆ ಎಂಬ ಕಾತುರ, ಕುತೂಹಲಕ್ಕೆ ಭಾನುವಾರ (ಜೂ.29) ರಾತ್ರಿ 8ಕ್ಕೆ ತೆರೆಬಿದ್ದಿದೆ. ಈ ಬಾರಿ ಯಾರೆಲ್ಲಾ ಭಾಗವಹಿಸುತ್ತಾರೆ ಎಂಬ ಊಹಾಪೋಹಗಳಿಗೂ ಉತ್ತರ ಸಿಕ್ಕಿದೆ. ಈ ಬಾರಿ ಮನೆಯಲ್ಲಿ ಬಹುತೇಕ ಸೀರಿಯಸ್ ಸ್ಪರ್ಧಿಗಳಿರುವುದು "ಇದು ತಮಾಷೆನೇ ಅಲ್ಲ" ಎಂಬ ಟ್ಯಾಗ್ ಲೈನ್ ಅನ್ವರ್ಥಕವಾಗಿದೆ.

ಸ್ವಾಮಿ ನಿತ್ಯಾನಂದ ಭಾಗವಹಿಸುತ್ತಾರೆ ಎಂಬ ಸುದ್ದಿ ಇತ್ತು. ಆದರೆ ಈ ಬಾರಿ ಸ್ಪರ್ಧೆಯಲ್ಲಿ ಯಾವ ಸ್ವಾಮೀಜಿಯೂ ಇಲ್ಲದಿರುವುದು ವಿಶೇಷ. ಈ ಬಾರಿ ಬಿಗ್ ಬಾಸ್ ಮನೆಯಲ್ಲಿರುವ ಬಹುತೇಕ ಸ್ಪರ್ಧಿಗಳು ಬಹಳ ಸಾಪ್ಟ್ ಮನೋಭಾವವರು ಎಂಬಂತಿದೆ. ದಿನಗಳು ಸರಿದಂತೆ ಏನಾಗುತ್ತದೋ ನೋಡಬೇಕು. [ಬಿಗ್ ಬಾಸ್ 2 ಆರಂಭ: ಶೋನಲ್ಲಿರುವ 14 ಸ್ಪರ್ಧಿಗಳು]

ಮೊದಲ ಸೀನ್ ನಲ್ಲಿದ್ದಷ್ಟು ಕಿರಿಕಿರಿ, ಪಿರಿಪಿರಿ ಸ್ಪರ್ಧಿಗಳು ಈ ಬಾರಿ ಅಷ್ಟಾಗಿ ಕಾಣುತ್ತಿಲ್ಲ. ಈ ಬಾರಿಯ ಸ್ಪರ್ಧಿಗಳನ್ನು ನೋಡುತ್ತಿದ್ದರೆ ಒಬ್ಬರಿಗಿಂತಲೂ ಒಬ್ಬರು ಸ್ಟ್ರಾಂಗ್ ಅನ್ನಿಸುವಂತಿದೆ. ಅದರಲ್ಲೂ ಸೃಜನ್ ಲೋಕೇಶ್, ಅಕುಲ್ ಬಾಲಾಜಿ, ದೀಪಿಕಾ ಕಾಮಯ್ಯ, ನೀತೂ, ಹಾಸ್ಯನಟ ಲಯೇಂದ್ರ (ಸಾಧುಕೋಕಿಲ ಅಣ್ಣ), ಶ್ವೇತಾ ಚೆಂಗಪ್ಪ, ಆರ್ ಜೆ ರೋಹಿತ್ ಮುಂತಾದವರು ಮೊದಲ ದಿನವೇ ಗಮನಸೆಳೆದರು.

ಇರುವ ಸ್ಪರ್ಧಿಗಳಲ್ಲಿ ಸಖತ್ ಬೋಲ್ಡ್ ಅನಿತಾ ಭಟ್

ಇರುವ ಸ್ಪರ್ಧಿಗಳಲ್ಲಿ ಸಖತ್ ಬೋಲ್ಡ್ ಎಂದರೆ ಅನಿತಾ ಭಟ್. ತಮ್ಮ ಪರಿಚಯ ಮಾಡಿಕೊಂಡ ಅವರು, ಈಗಲೂ ಅಷ್ಟೇ ನಾನು ಚಿಟಿಕೆ ಹೊಡೆದರೆ ನಮ್ಮ ಮನೆಯ ಮುಂದೆ ಹುಡುಗರು ಸಾಲುಸಾಲಾಗಿ ನಿಲ್ತಾರೆ ಎಂದರು. ಅವರ ಮನೆ ಮುಂದೆ ಕ್ಯೂ ಯಾಕೆ ನಿಲ್ತಾರೆ ಎಂಬುದನ್ನು ಅವರೂ ಹೇಳಲಿಲ್ಲ, ಯಾರೂ ಕೇಳಲೂ ಇಲ್ಲ.

ಮನರಂಜನೆ ಗ್ಯಾರಂಟೀನಾ? ತಮಾಷೆ ಅಲ್ಲ ತಾನೆ

ಇನ್ನು ಇರುವ ಸ್ಪರ್ಧಿಗಳಲ್ಲಿ ಜಾಲಿ ಬಾಯ್ ಸಂತೋಷ್ (ನೂರು ಜನ್ಮಕು ಖ್ಯಾತಿ) ಇದ್ದಾರೆ. ಹುಡುಗಿಯರ ಜೊತೆ ಅಲೆದಾಟ ಬಹಳ ಆಯ್ತು. ಅವರಿಗೆ ಮೂಗುದಾರ ಹಾಕಲೇಬೇಕು ಎಂದು ಸುದೀಪ್ ಹೇಳಿರುವುದು ಮುಂದೆ ಇನ್ನಷ್ಟು ಮನರಂಜನೆ ಗ್ಯಾರಂಟಿಯಾಗಿ ಸಿಗಲಿದೆ ಎಂಬ ನಿರೀಕ್ಷೆ ಹುಟ್ಟಿಸಿದ್ದಾರೆ.

ಸುಮಾರು ಮೂರುವರೆ ಗಂಟೆಗಳ ಶೋ

ಭಾನುವಾರ ರಾತ್ರಿ 8ಕ್ಕೆ ಆರಂಭವಾದ ಬಿಗ್ ಬಾಸ್ ಕಾರ್ಯಕ್ರಮ ಸುಮಾರು ಮೂರುವರೆ ಗಂಟೆಗಳ ಕಾಲ ಕೊನೆಸಾಗಿತು. ಪ್ರತಿಯೊಬ್ಬ ಸ್ಪರ್ಧಿಯನ್ನೂ ವಿಶೇಷವಾಗಿ ಬರಮಾಡಿಕೊಂಡು ಬಿಗ್ ಬಾಸ್ ಮನೆಗೆ ಕಳುಹಿಸಲಾಯಿತು.

ಎಲ್ಲರ ಕುತೂಹಲದ ಕಣ್ಣು ಶಕೀಲಾ ಮೇಲೆ

ಈ ಬಾರಿಯ ಸ್ಪರ್ಧಿಗಳಲ್ಲಿ ಎಲ್ಲರಿಗಿಂತಲೂ ಹೆಚ್ಚಾಗಿ ಕುತೂಹಲದ ಕಣ್ಣು ನೆಟ್ಟಿರುವುದು 800ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿ ಒಂದು ಕಾಲದಲ್ಲಿ ತಮ್ಮ ಮೋಹಕ ಮೈಮಾಟಕ್ಕೆ ಹೆಸರಾಗಿದ್ದ ಹಿರಿಯ ತಾರೆ ಶಕೀಲಾ. "ಇಲ್ಲಿಗೆ ಬರುವವರೆಗೂ ನಾನು ಸೆಲೆಬ್ರಿಟಿ ಅಂದುಕೊಂಡಿರಲಿಲ್ಲ. ಬಿಗ್ ಬಾಸ್ ಗೆ ಬಂದಿರುವುದಕ್ಕೆ ಸಂತಸವಾಗುತ್ತಿದೆ" ಎಂದರು.

ಮನೆಯಲ್ಲಿ ತಂಗಿರುವ 14 ಸ್ಪರ್ಧಿಗಳು ಸ್ವಾಮಿ

ಈ ಬಾರಿ ಬಿಗ್ ಬಾಸ್ ಮನೆಯಲ್ಲಿರುವ ಹದಿನಾಲ್ಕು ಸ್ಪರ್ಧಿಗಳು ಅಕುಲ್ ಬಾಲಾಜಿ, ಸೃಜನ್ ಲೋಕೇಶ್, ಅನುಪಮಾ ಭಟ್, ಮಯೂರ್ ಪಟೇಲ್, ನೀತೂ, ಅನಿತಾ ಭಟ್, ಲಯೇಂದ್ರ, ಹರ್ಷಿಕಾ ಪೂಣಚ್ಚ, ದೀಪಿಕಾ ಕಾಮಯ್ಯ, ಆರ್ ಜೆ ರೋಹಿತ್, ಶ್ವೇತಾ ಚೆಂಗಪ್ಪ, ಸಂತೋಷ್, ಶಕೀಲಾ ಮತ್ತು ಆದಿ ಲೋಕೇಶ್.

English summary
'Bigg Boss Kannada 2' launched grand style on 29th Sunday at 8 pm. Nearly 3 and a half hours the show reveals all 14 contestants names. This time it appears like almost contestants are serious minded.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada