For Quick Alerts
  ALLOW NOTIFICATIONS  
  For Daily Alerts

  ಮಗನ ಹೆಸರು ಟ್ಯಾಟೂ ಹಾಕಿಸಿಕೊಂಡ ಶ್ವೇತಾ ಚೆಂಗಪ್ಪಾ!

  By Priya Dore
  |

  ಸುಮಾರು 20 ವರ್ಷಗಳಿಂದ ಬಣ್ಣದ ಲೋಕದಲ್ಲಿರುವ ನಟಿ ಕಮ್ ನಿರೂಪಕಿ ಶ್ವೇತಾ ಚೆಂಗಪ್ಪ ಅವರು ಕಿರುತೆರೆಗೆ ಎಂಟ್ರಿ ಕೊಟ್ಟಾಗ ಹೇಗಿದ್ದರೋ ಇಂದಿಗೂ ಹಾಗೆಯೇ ಕಾಣುತ್ತಾರೆ. ಸಣ್ಣ ಪುಟ್ಟ ಬದಲಾವಣೆ ಬಿಟ್ಟರೆ, ಶ್ವೇತಾ ಅವರ ಸೌಂದರ್ಯ ಇನ್ನೂ ಹಾಗೆಯೇ ಇದೆ.

  ಶ್ವೇತಾ ಚೆಂಗಪ್ಪ ಕಿರುತೆರೆಯಿಂದ ಬ್ರೇಕ್ ಪಡೆದಿದ್ದರು. ಇದೀಗ ಮತ್ತೆ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದಾರೆ. ಮಗುವಾದ ಮೇಲೆ ಜೀ ಕನ್ನಡದಲ್ಲಿ ಜೋಡಿ ನಂ.1 ಕಾರ್ಯಕ್ರಮವನ್ನು ನಡೆಸಿಕೊಂಡ ಬರುತ್ತಿದ್ದಾರೆ. ಸೆಕೆಂಡ್ ಇನ್ನಿಂಗ್ಸ್ ಪ್ರಾರಂಭಿಸಿದಾಗಿನಿಂದಲೂ ಶ್ವೇತಾ ಚೆಂಗಪ್ಪ ಫುಲ್ ಆಕ್ಟೀವ್ ಆಗಿದ್ದಾರೆ.

  ವಿಶ್ವಾಸ್ ದೇಸಾಯಿ ಪಾತ್ರದಲ್ಲಿ ಹರೀಶ್ ರಾಜ್! ಹಾಗಿದ್ದರೆ ಆರ್ಯವರ್ಧನ್ ಯಾರು?ವಿಶ್ವಾಸ್ ದೇಸಾಯಿ ಪಾತ್ರದಲ್ಲಿ ಹರೀಶ್ ರಾಜ್! ಹಾಗಿದ್ದರೆ ಆರ್ಯವರ್ಧನ್ ಯಾರು?

  ಸದಾ ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ಶ್ವೇತಾ ಅವರು, ಇತ್ತೀಚೆಗೆ ಸ್ಟೈಲಿಶ್ ಲುಕ್‌ಗೆ ಫೇಮಸ್ ಆಗಿದ್ದಾರೆ. ತರಹೇವಾರಿ ಲುಕ್‌ನಲ್ಲಿ ಅಭಿಮಾನಿಗಳ ಎದುರಿಗೆ ಕಾಣಿಸಿಕೊಳ್ಳುತ್ತಿದ್ದು, ಕೊಂಚ ಹಾಟ್ ಆಗಿಯೂ ಕಾಣುತ್ತಾರೆ.

  ಜಿಯಾನ್ ಹೆಸರು ಅಚ್ಚೆ ಹಾಕಿಸಿಕೊಂಡ ಶ್ವೇತಾ!

  ಜಿಯಾನ್ ಹೆಸರು ಅಚ್ಚೆ ಹಾಕಿಸಿಕೊಂಡ ಶ್ವೇತಾ!

  ಶ್ವೇತಾ ಇದೀಗ ತಮ್ಮ ಮಗನ ಹೆಸರನ್ನು ಅಚ್ಚೆ ಹಾಕಿಸಿಕೊಂಡಿದ್ದಾರೆ. ಮಗ ಜಿಯಾನ್ ಎಂದರೆ ಶ್ವೇತಾ ಅವರಿಗೆ ತುಂಬಾ ಇಷ್ಟ. ಶೂಟಿಂಗ್ ಸಂದರ್ಭದಲ್ಲಿ ಮಗನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಾರೆ. ಇತ್ತೀಚೆಗಷ್ಟೇ ಮಗನ ಜೊತೆಗೆ ಯಶೋಧಾ ಹಾಗೂ ಕೃಷ್ಣನ ಅವತಾರದಲ್ಲಿ ಕಾಣಿಸಿಕೊಂಡಿದ್ದರು. ಶ್ರೀಕೃಷ್ಣ ಜನ್ಮಾಷ್ಟಮಿ ಹಿನ್ನೆಲೆ ಫೋಟೋ ಶೂಟ್ ಮಾಡಿಸಿದ್ದರು. ಇದೀಗ ಮಗನ ಹೆಸರು ಜಿಯಾನ್ ಎಂದು ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಇದರ ವೀಡಿಯೋವನ್ನು ಇನ್ ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

  ಸಿನಿಮಾದಲ್ಲಿ ಕಮ್‌ಬ್ಯಾಕ್!

  ಸಿನಿಮಾದಲ್ಲಿ ಕಮ್‌ಬ್ಯಾಕ್!

  ಇದೀಗಷ್ಟೇ ಕಿರುತೆರೆಯಲ್ಲಿ ಸೆಕೆಂಡ್ ಇನ್ನಿಂಗ್ಸ್ ಪ್ರಾರಂಭಿಸಿರುವ ಶ್ವೇತಾ ಚೆಂಗಪ್ಪ ನಿರೂಪಣೆಗೆ ಉತ್ತಮವಾದ ರೆಸ್ಪಾನ್ಸ್ ಬರುತ್ತಿವೆ. ಇದೀಗ 10 ವರ್ಷದ ಬಳಿಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದ್ದಾರೆ. ಹ್ಯಾಟ್ರಿಕ್ ಹೀರೋ 125ನೇ ಸಿನಿಮಾದಲ್ಲಿ ಶ್ವೇತಾ ಚೆಂಗಪ್ಪಾ ನಟಿಸುತ್ತಿದ್ದಾರೆ. ಈ ಚಿತ್ರದ ಮೂಲಕ ಮತ್ತೆ ಸ್ಯಾಂಡಲ್‌ವುಡ್ ಗೆ ಎಂಟ್ರಿ ಕೊಡುತ್ತಿದ್ದಾರೆ. ಶಿವಣ್ಣ ಅವರ ವೇದ ಚಿತ್ರದಲ್ಲಿ ಶ್ವೇತಾ ಅವರು ನಟಿಸಿದ್ದಾರೆ.

  ಜೋಡಿ ನಂ.1 ನಿರೂಪಣೆ!

  ಜೋಡಿ ನಂ.1 ನಿರೂಪಣೆ!

  ಕಿರುತೆರೆಯ ಮೂಲಕ ಸಾಕಷ್ಟು ಹೆಸರು ಮಾಡಿರುವ ಶ್ವೇತಾ ಚೆಂಗಪ್ಪ ಸದ್ಯ ಜೋಡಿ ನಂ.1 ಕಾರ್ಯಕ್ರಮದಲ್ಲಿ ಬ್ಯುಸಿ ಇದ್ದಾರೆ. ದಂಪತಿಗಳ ರಿಯಾಲಿಟಿ ಶೋ ಅನ್ನು ನಿರೂಪಣೆ ಮಾಡುತ್ತಿದ್ದಾರೆ. ಇದರಲ್ಲಿ ಪ್ರತೀ ವಾರವೂ ಡಿಫರೆಂಟ್ ಲುಕ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಶ್ವೇತಾ ಅವರ ನಿರೂಪಣೆಯನ್ನು ಜನ ಮೆಚ್ಚಿಕೊಂಡಿದ್ದಾರೆ. ಶ್ವೇತಾ ಅವರ ಅಭಿಮಾನಿಗಳ ಸಂಕ್ಯೆ ಈಗ ಡಬಲ್ ಆಗಿದೆ. ಆಗಾಗ ಡಿಫರೆಂಟ್ ಲುಕ್ ನಲ್ಲಿ ಫೋಟೋಶೂಟ್ ಮಾಡಿಸುತ್ತಿರುವ ಶ್ವೇತಾ ಅವರು, ತುಂಬಾ ಯಂಗ್ ಆಂಡ್ ಹಾಟ್ ಆಗಿ ಕಾಣಿಸುತ್ತಿದ್ದಾರೆ.

  ಕಿರುತೆರೆಯಲ್ಲಿ ಶ್ವೇತಾ ಹೆಸರುವಾಸಿ!

  ಕಿರುತೆರೆಯಲ್ಲಿ ಶ್ವೇತಾ ಹೆಸರುವಾಸಿ!

  ಸುಮತಿ, ಕಾದಂಬರಿ, ಅರುಂಧತಿ ಧಾರಾವಾಹಿಗಳ ಮೂಲಕ ಶ್ವೇತಾ ಚೆಂಗಪ್ಪ ಅವರು ಮನೆ ಮಾತಾದರು. ಶ್ವೇತಾ ಚೆಂಗಪ್ಪ ಅವರು ಬಿಗ್ ಬಾಸ್ ಸೀಸನ್- 2ರಲ್ಲೂ ಭಾಗವಹಿಸಿದ್ದರು. ಡ್ಯಾನ್ಸ್ ಜೂನಿಯರ್ಸ್ ಡ್ಯಾನ್ಸ್, ಯಾರಿಗುಂಟು ಯಾರಿಗಿಲ್ಲ, ಡ್ಯಾನ್ಸಿಂಗ್ ಸ್ಟಾರ್, ಸೂಪರ್ ಮಿನಿಟ್, ಡೀ ಡ್ಯಾನ್ಸ್ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಹೋಸ್ಟ್ ಮಾಡಿದ್ದಾರೆ. ಕಿರುತೆರೆಗೆ ಮಾತ್ರ ಸೀಮಿತವಾಗಿರದ ಶ್ವೇತಾ ಚೆಂಗಪ್ಪ ಅವರು, ಸಿನಿಮಾಗಳಲ್ಲೂ ನಟಿಸಿದ್ದಾರೆ. ದೊಡ್ಡ ದೊಡ್ಡ ಸ್ಟಾರ್ ನಟರ ಜೊತೆಗೆ ತೆರೆ ಹಂಚಿಕೊಂಡಿದ್ದು, ಅಕ್ಕ, ತಂಗಿ, ಸ್ನೇಹಿತೆ ಪಾತ್ರಗಳಲ್ಲಿ ನಟಿಸಿದ್ದಾರೆ. ಕೃಷ್ಣನ್ ಮ್ಯಾರೇಜ್ ಸ್ಟೋರಿ, ಗನ್ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ತಮ್ಮದೇ ರೀತಿಯಲ್ಲಿ ಶ್ವೇತಾ ಚೆಂಗಪ್ಪ ಅವರು ಅಭಿಮಾನಿಗಳನ್ನು ಗಳಿಸಿದ್ದಾರೆ.

  English summary
  Anchor Shwetha Chengappa Put tatoo Of Her Son Name Jiyaan ayyappa, ಶ್ವೇತಾ ಚೆಂಗಪ್ಪಾ ಮಗನ ಅಚ್ಛೆ ಹೆಸರು ಹಾಕಿಸಿಕೊಂ

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X