For Quick Alerts
  ALLOW NOTIFICATIONS  
  For Daily Alerts

  ಅನಿರುದ್ದ್ ಬ್ಯಾನ್ ವಿವಾದ ಸುಖಾಂತ್ಯ: ಆರೂರು ಜಗದೀಶ್ ಹೆಗಲ ಮೇಲೆ ಕೈ ಹಾಕಿ ಭಾವುಕರಾದ ನಟ!

  |

  ಅನಿರುದ್ಧ್ ಹಾಗೂ 'ಜೊತೆಜೊತೆಯಲಿ' ಧಾರಾವಾಹಿಯ ನಿರ್ಮಾಪಕ ಆರೂರು ಜಗದೀಶ್ ನಡುವಿನ ವಿವಾದಕ್ಕೆ ಇಂದು (ಡಿಸೆಂಬರ್ 10) ತೆರೆಬಿದ್ದಿದೆ. ಟಿವಿ ಅಸೋಸಿಯೇಷನ್ ಮುಂದಾಳತ್ವದಲ್ಲಿ ಅನಿರುದ್ಧ್ ವಿರುದ್ಧ ಅಸಹಕಾರದ ವಿಚಾರವನ್ನು ಕೈ ಬಿಡಲಾಗಿದೆ.

  ಅನಿರುದ್ಧ್ ಹೊಸ ಧಾರಾವಾಹಿ 'ಸೂರ್ಯವಂಶ'ದಲ್ಲಿ ನಟಿಸುತ್ತಾರೆ ಎಂದಾಗಲೇ ಕಿರುತೆರೆ ನಿರ್ಮಾಪಕರು ಎಸ್ ನಾರಾಯಣ್‌ ಜೊತೆ ಮಾತುಕತೆ ನಡೆಸಿದ್ದರು. ಅನಿರುದ್ಧ್ ಅವರನ್ನು ಧಾರಾವಾಹಿಯಲ್ಲಿ ಹಾಕಿಕೊಳ್ಳದಂತೆ ಮನವಿ ಮಾಡಿಕೊಂಡಿದ್ದರು. ಆ ಬಳಿಕ ಅನಿರುದ್ಧ್ ಫಿಲ್ಮ್ ಚೇಂಬರ್ ಮೆಟ್ಟಿಲೇರಿದ್ದರು.

  ಈಗ ಟಿವಿ ಅಸೋಸಿಯೇಷನ್ ಪದಾಧಿಕಾರಿಗಳ ಮುಂದಾಳತ್ವದಲ್ಲಿ ಅನಿರುದ್ಧ್ ಹಾಗೂ ಆರೂರು ಜಗದೀಶ್ ನಡುವಿನ ವಿವಾದವನ್ನು ಬಗೆಹರಿಸಿದ್ದಾರೆ. ಹಾಗೇ ಕಿರುತೆರೆ ನಿರ್ಮಾಪಕರು ಅನಿರುದ್ಧ್ ಜೊತೆಗಿನ ಎರಡು ವರ್ಷ ಕೆಲಸ ಮಾಡುವುದಿಲ್ಲ ಎನ್ನುವ ನಿರ್ಧಾರವೂ ಸುಖ್ಯಾಂತ ಕಂಡಿದೆ. ಸಂಧಾನ ಸಭೆಯ ಬಳಿಕ ಆರೂರು ಜಗದೀಶ್ ಹಾಗೂ ಅನಿರುದ್ಧ್ ಇಬ್ಬರೂ ಒಟ್ಟಿಗೆ ಬಂದು ಮಾಧ್ಯಮಗಳಿಗೆ ಹೇಳಿಕೆ ಕೊಟ್ಟಿದ್ದಾರೆ.

  " ನಮ್ಮದು ದಾಖಲೆ ಸೃಷ್ಟಿ ಮಾಡಿರುವಂತಹ ಧಾರಾವಾಹಿ. ಈ ಧಾರಾವಾಹಿಗೆ ಹೀಗೆ ಆಗಬಾರದಿತ್ತು. ಎನೋ ಆಯ್ತು. ಆದರೆ ಮೂರುವರೆ ವರ್ಷ ಇವರೊಂದಿಗೆ ಕೆಲಸ ಮಾಡಿದ್ದೇನೆ ನಾನು. ಈ ಸಂಬಂಧಕ್ಕೆ ಈತರ ಬಿರುಕು ಬೀಳಬಾರದಿತ್ತು. ಏನೋ ಕಾರಣಗಳಿಂದ ಆ ತರ ಆಯ್ತು. ದುರಂತ ಅದು. ಅಭಿಮಾನಿಗಳಿಗೆ ನಾನು ಕ್ಷಮೆಯನ್ನು ಕೇಳುತ್ತೇನೆ. ಜೀ ವಾಹಿನಿಗೆ ಓಳ್ಳೆಯದಾಗಲಿ. ಜೊತೆ ಜೊತೆಯಲಿ ಧಾರಾವಾಹಿಯನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಹೊಸ ಧಾರಾವಾಹಿ ಮಾಡುತ್ತಿದ್ದಾರೆ. ಅವರಿಗೆ ಒಳ್ಳೆಯದಾಗಲಿ" ಎಂದು ಅನಿರುದ್ಧ್ ಹೇಳಿದ್ದಾರೆ.

  "ಮೂರು ನಾಲ್ಕು ತಿಂಗಳ ಹಿಂದೆ ಸಾಕಷ್ಟು ಘಟನೆಗಳು ನಡೆದಿದೆ. ಇವತ್ತು ಹಿರಿಯರು ಕೂತು ಬಗೆಹರಿಸಿದ್ದಾರೆ. ಹಾಗೇ ಅನಿರುದ್ಧ್ ಸರ್‌ಗೂ ಒಳ್ಳೆಯದಾಗಲಿ. ಅವರ ಮುಂದಿನ ಫಿಲ್ಮ್ ಹಾಗೂ ಸೀರಿಯಲ್ ಎಲ್ಲದಕ್ಕೂ ಒಳ್ಳೆಯದಾಗಲಿ. ಎಲ್ಲಾ ಘಟನೆಗಳನ್ನು ಮರೆತು. ಇಡೀ ಚಿತ್ರರಂಗ ಶಿಸ್ತಿನಿಂದ ಹೋದರೆ ಒಳ್ಳೆಯದು." ಎಂದು ಆರೂರು ಜಗದೀಶ್ ಹೇಳಿದ್ದಾರೆ.

  English summary
  Anirudh and Aroor Jagadish Controversy Solved Sooryavamsha Serial Will Take Off, Know More.
  Saturday, December 10, 2022, 20:42
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X