For Quick Alerts
  ALLOW NOTIFICATIONS  
  For Daily Alerts

  'ಅಂಜನಿಪುತ್ರ' ಆಡಿಯೋ ರಿಲೀಸ್ ಇದೇ ಶನಿವಾರ ನಿಮ್ಮ ಉದಯ ಟಿವಿಯಲ್ಲಿ

  By Harshitha
  |

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ 'ಅಂಜನಿಪುತ್ರ' ಚಿತ್ರದ ಆಡಿಯೋ ಬಿಡುಗಡೆ ಸಮಾರಂಭ ಕೆಲವೇ ದಿನಗಳ ಹಿಂದೆಯಷ್ಟೇ ಅದ್ಧೂರಿಯಾಗಿ ನಡೆದಿತ್ತು. ಇದೀಗ ಅದೇ ಕಾರ್ಯಕ್ರಮ ನಿಮ್ಮ ಉದಯ ಟಿವಿಯಲ್ಲಿ ಪ್ರಸಾರ ಆಗಲಿದೆ.

  ವಿಡಿಯೋ : ಬಂದೇ ಬಿಡ್ತು ಅಪ್ಪು 'ಅಂಜನೀಪುತ್ರ' ಹಾಡುಗಳುವಿಡಿಯೋ : ಬಂದೇ ಬಿಡ್ತು ಅಪ್ಪು 'ಅಂಜನೀಪುತ್ರ' ಹಾಡುಗಳು

  ಪುನೀತ್ ರಾಜ್ ಕುಮಾರ್ ಅವರ 'ಪಿ.ಆರ್.ಕೆ ಆಡಿಯೋ' ಮೂಲಕ ಬಿಡುಗಡೆ ಆದ 'ಅಂಜನಿಪುತ್ರ' ಹಾಡುಗಳು ಸದ್ಯ ಎಲ್ಲೆಡೆ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಗ್ರ್ಯಾಂಡ್ ಆಗಿ ನೆರವೇರಿದ 'ಅಂಜನಿಪುತ್ರ' ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮವನ್ನ ಇದೇ ಶನಿವಾರ ಸಂಜೆ 5 ಗಂಟೆಗೆ ಉದಯ ವಾಹಿನಿ ಮೂಲಕ ಕಣ್ತುಂಬಿಕೊಳ್ಳಿ... ಅದಕ್ಕೂ ಮುನ್ನ 'ಅಂಜನಿಪುತ್ರ' ಆಡಿಯೋ ಲಾಂಚ್ ಸುತ್ತ ಒಂದು ಸುತ್ತು ನೋಡ್ಕೊಂಡ್ ಬರೋಣ ಬನ್ನಿ...

  ದೀಪ ಬೆಳಗಿಸಿದ ಪತ್ನಿ

  ದೀಪ ಬೆಳಗಿಸಿದ ಪತ್ನಿ

  ಪುನೀತ್ ರಾಜ್ ಕುಮಾರ್ ಪತ್ನಿ ಅಶ್ವಿನಿ ದೀಪ ಬೆಳಗಿಸುವ ಮೂಲಕ 'ಅಂಜನಿಪುತ್ರ' ಆಡಿಯೋ ಬಿಡುಗಡೆ ಸಮಾರಂಭಕ್ಕೆ ಚಾಲನೆ ನೀಡಿದ್ದರು.

  ವಿಡಿಯೋ : ಹನುಮಂತನ ಭಕ್ತನಾದ 'ಅಂಜನೀಪುತ್ರ' ಪುನೀತ್ ವಿಡಿಯೋ : ಹನುಮಂತನ ಭಕ್ತನಾದ 'ಅಂಜನೀಪುತ್ರ' ಪುನೀತ್

  ಸಹೋದರ ಶಿವಣ್ಣ ಸಾಥ್

  ಸಹೋದರ ಶಿವಣ್ಣ ಸಾಥ್

  'ಅಂಜನಿಪುತ್ರ' ಆಡಿಯೋ ಲಾಂಚ್ ಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕೂಡ ಸಾಕ್ಷಿ ಆಗಿದ್ದರು.

  ದಿಗ್ಗಜರ ಸಮಾಗಮ

  ದಿಗ್ಗಜರ ಸಮಾಗಮ

  'ಅಂಜನಿಪುತ್ರ' ಆಡಿಯೋ ಬಿಡುಗಡೆ ಸಮಾರಂಭಕ್ಕೆ ಹಿರಿಯ ನಿರ್ದೇಶಕ ಭಗವಾನ್, ರಾಘವೇಂದ್ರ ರಾಜ್ ಕುಮಾರ್, ಸಾರಾ ಗೋವಿಂದು, ಕೆ.ಮಂಜು ಸೇರಿದಂತೆ ಚಿತ್ರರಂಗದ ಗಣ್ಯರು ಹಾಜರಿದ್ದರು.

  ಅಪ್ಪು ಗಾಯನ

  ಅಪ್ಪು ಗಾಯನ

  ಹಿರಿಯ ಸಂಗೀತ ನಿರ್ದೇಶಕ ರಾಜನ್ ನಾಗೇಂದ್ರ ಸಂಯೋಜಿಸಿದ ಡಾ.ರಾಜ್ ಕುಮಾರ್ ಅಭಿನಯದ ಸೂಪರ್ ಹಿಟ್ ಹಾಡುಗಳನ್ನು ಪುನೀತ್ ರಾಜ್ ಕುಮಾರ್ ಹಾಡಿ ಎಲ್ಲರನ್ನೂ ರಂಜಿಸಿದ್ದರು.

  ಡ್ಯಾನ್ಸ್ ಪರ್ಫಾಮೆನ್ಸ್

  ಡ್ಯಾನ್ಸ್ ಪರ್ಫಾಮೆನ್ಸ್

  ಸಖತ್ ಸ್ಟುಡಿಯೋ ಹಾಗೂ ಸ್ಟೆಮ್ ಡ್ಯಾನ್ಸ್ ಟ್ರೂಪ್ ಅವರಿಂದ ರಾಜ್ ಕುಮಾರ್ ರವರ ಹಿಟ್ ಹಾಡುಗಳಿಗೆ ಡ್ಯಾನ್ಸ್ ಪರ್ಫಾಮೆನ್ಸ್ ನೀಡಲಾಯ್ತು.

  ದಿಗ್ಗಜರಿಗೆ ಸನ್ಮಾನ

  ದಿಗ್ಗಜರಿಗೆ ಸನ್ಮಾನ

  ಇದೇ ಸಮಾರಂಭದಲ್ಲಿ ಹಿರಿಯ ನಿರ್ದೇಶಕ ಭಗವಾನ್ ಹಾಗೂ ಹಿರಿಯ ಸಂಗೀತ ನಿರ್ದೇಶಕ ನಾಗೇಂದ್ರ ಅವರನ್ನ ಸನ್ಮಾನಿಸಲಾಯ್ತು.

  ಕಾರ್ಯಕ್ರಮ ಪ್ರಸಾರ ಯಾವಾಗ.?

  ಕಾರ್ಯಕ್ರಮ ಪ್ರಸಾರ ಯಾವಾಗ.?

  'ಅಂಜನಿಪುತ್ರ' ಚಿತ್ರದ ಅದ್ಧೂರಿ ಆಡಿಯೋ ಬಿಡುಗಡೆ ಸಮಾರಂಭ ನಿಮ್ಮ ಉದಯ ಟಿವಿಯಲ್ಲಿ ಇದೇ ಶನಿವಾರ ಸಂಜೆ 5 ಗಂಟೆಗೆ ಪ್ರಸಾರ ಆಗಲಿದೆ.

  ಅಂಜನಿಪುತ್ರ ಕುರಿತು

  ಅಂಜನಿಪುತ್ರ ಕುರಿತು

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ ಹರ್ಷ ನಿರ್ದೇಶನದ ಸಿನಿಮಾ 'ಅಂಜನಿಪುತ್ರ'. ಇದೇ ಚಿತ್ರದ ಪ್ರಮುಖ ಹಾಡೊಂದಕ್ಕೆ ಹರಿಪ್ರಿಯಾ ಹೆಜ್ಜೆ ಹಾಕಿದ್ದಾರೆ. ರಮ್ಯಾ ಕೃಷ್ಣನ್, ರವಿಶಂಕರ್, ಚಿಕ್ಕಣ್ಣ, ಸಾಧು ಕೋಕಿಲ ಸೇರಿದಂತೆ ಹಲವರು ಚಿತ್ರದ ತಾರಾಗಣದಲ್ಲಿ ಇದ್ದಾರೆ. ಚಿತ್ರಕ್ಕೆ ಎಂ.ಎನ್.ಕುಮಾರ್ ಬಂಡವಾಳ ಹಾಕಿದ್ದಾರೆ.

  English summary
  'Anjani Putra' audio release special to telecast in Udaya TV on December 16th at 5pm
  Thursday, December 14, 2017, 17:15
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X