For Quick Alerts
  ALLOW NOTIFICATIONS  
  For Daily Alerts

  ದರ್ಶನ್ - ಪುನೀತ್ ರಾಜ್ ಕುಮಾರ್ ನಡುವೆ TRP ಚಾಲೆಂಜ್ !

  By Naveen
  |

  ಡಿ ಬಾಸ್ ದರ್ಶನ್ ಮತ್ತು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಇಬ್ಬರು ಕನ್ನಡದ ಸ್ಟಾರ್ ನಟರು. ಅದಕ್ಕೂ ಹೆಚ್ಚಾಗಿ ಇವರಿಬ್ಬರು ಒಳ್ಳೆಯ ಗೆಳೆಯರು. ಆದರೆ ಈ ಇಬ್ಬರು ನಟರ ನಡುವೆ ಈಗ TRP ಚಾಲೆಂಜ್ ಶುರುವಾಗಿದೆ.

  ದರ್ಶನ್ ಮತ್ತು ಪುನೀತ್ ರಾಜ್ ಕುಮಾರ್ ಅಭಿನಯದ ಸಿನಿಮಾಗಳ ನಡುವೆ ಈ ಪೈಪೋಟಿ ನಡೆಯುತ್ತಿದೆ. ಒಂದು ಕಡೆ ದರ್ಶನ್ ಅವರ 'ಕುರುಕ್ಷೇತ್ರ' ಸಿನಿಮಾದ ಬಿಡುಗಡೆಯ ದಿನಾಂಕ ಇನ್ನು ನಿಗದಿ ಆಗಿಲ್ಲ. ಇನ್ನೊಂದು ಕಡೆ ಪುನೀತ್ ರಾಜ್ ಕುಮಾರ್ ಹೊಸ ಸಿನಿಮಾದ ಚಿತ್ರೀಕರಣ ಇನ್ನೂ ಶುರುವಾಗಿಲ್ಲ. ಸೋ, ದರ್ಶನ್ ಮತ್ತು ಪುನೀತ್ ನಡುವೆ ಪೈಪೋಟಿ ಹೇಗೆ ನಡೆಯುತ್ತದೆ ಎಂಬ ಲೆಕ್ಕಾಚಾರ ನಿಮ್ಮದಾಗಿರಬಹುದು. ಆದರೆ ಈಗ ನಿಜಕ್ಕೂ ಈ ಇಬ್ಬರ ನಟರ ನಡುವೆ ಪೈಪೋಟಿ ನಡೆಯುತ್ತದೆ. ಆದರೆ ಅದು ಹಿರಿತೆರೆಯಲ್ಲಿ ಅಲ್ಲ ಕಿರುತೆರೆಯಲ್ಲಿ. ಮುಂದೆ ಓದಿ...

  'ತಾರಕ್' ಸಿನಿಮಾ

  'ತಾರಕ್' ಸಿನಿಮಾ

  ದರ್ಶನ್ ಅಭಿನಯದ 'ತಾರಕ್' ಸಿನಿಮಾ ಈಗ ಟಿವಿಯಲ್ಲಿ ಪ್ರಸಾರ ಆಗುತ್ತಿದೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಇದೇ ಭಾನುವಾರ ಯುಗಾದಿ ಹಬ್ಬದ ವಿಶೇಷವಾಗಿ ಈ ಸಿನಿಮಾ ಪ್ರಸಾರ ಆಗಲಿದೆ.

  'ಅಂಜನೀಪುತ್ರ' ಚಿತ್ರ

  'ಅಂಜನೀಪುತ್ರ' ಚಿತ್ರ

  ವಿಶೇಷ ಅಂದರೆ ಪುನೀತ್ ರಾಜ್ ಕುಮಾರ್ ಅವರ 'ಅಂಜನೀಪುತ್ರ' ಸಿನಿಮಾ ಕೂಡ ಅದೇ ದಿನ ಪ್ರಸಾರ ಆಗುತ್ತಿದೆ. ಯುಗಾದಿ ಹಬ್ಬಕ್ಕೆ ಉದಯ ಟಿವಿಯಲ್ಲಿ ಪುನೀತ್ ಸಿನಿಮಾ ಸಂಜೆ ಆರು ಗಂಟೆಗೆ ಪ್ರಸಾರ ಆಗುತ್ತಿದೆ.

  ಟಿ ಆರ್ ಪಿ ಚಾಲೆಂಜ್

  ಟಿ ಆರ್ ಪಿ ಚಾಲೆಂಜ್

  ಕನ್ನಡದ ಸ್ಟಾರ್ ನಟರಾದ ದರ್ಶನ್ ಮತ್ತು ಪುನೀತ್ ಅವರ ಸಿನಿಮಾಗಳು ಒಂದೇ ದಿನ ಕಿರುತೆರೆಯಲ್ಲಿ ಪ್ರಸಾರ ಆಗುತ್ತಿದ್ದು, ಸಾಮಾನ್ಯವಾಗಿಯೇ ಟಿ ಆರ್ ಪಿ ಚಾಲೆಂಜ್ ಶುರುವಾಗಿದೆ. ಯಾವ ಸಿನಿಮಾಗೆ ಹೆಚ್ಚು ಟಿ ಆರ್ ಪಿ ಸಿಗುತ್ತದೆ ಎನ್ನುವ ಪ್ರಶ್ನೆ ಹುಟ್ಟಿಕೊಂಡಿದೆ.

  'ದೊಡ್ಮನೆ ಹುಡ್ಗ' ನಂಬರ್ 1

  'ದೊಡ್ಮನೆ ಹುಡ್ಗ' ನಂಬರ್ 1

  ಇಲ್ಲಿಯವರೆಗೆ ಕನ್ನಡ ಕಿರುತೆರೆಯಲ್ಲಿ 'ದೊಡ್ಮೆನೆ ಹುಡ್ಗ' ಸಿನಿಮಾ ಅತಿ ಹೆಚ್ಚು ಟಿ ಆರ್ ಪಿ ಪಡೆದ ಸಿನಿಮಾಗಿ ರೆಕಾರ್ಡ್ ಸೃಷ್ಟಿ ಮಾಡಿದೆ.

  ಪ್ರಮುಖ ಸಿನಿಮಾಗಳು

  ಪ್ರಮುಖ ಸಿನಿಮಾಗಳು

  'ಕಿರಿಕ್ ಪಾರ್ಟಿ', 'ಚಕ್ರವರ್ತಿ', 'ರಾಜಕುಮಾರ', 'ಮಾಸ್ಟರ್ ಪೀಸ್' ಸಿನಿಮಾಗಳು ಕಿರುತೆರೆಯಲ್ಲಿ ಅತಿ ಹೆಚ್ಚು ಟಿ ಆರ್ ಪಿ ಪಡೆದ ಪ್ರಮುಖ ಸಿನಿಮಾಗಳಾಗಿವೆ.

  English summary
  Kannada actor Puneeth Rajkumar's 'Anjaniputra' and Darshan's 'Tarak' movie to premier in television on march 18th.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X