»   » ಮುಂದಿನ ವಾರ ನಿಮ್ಮನೆಗೆ ಬರ್ತಿದ್ದಾರೆ ಅನು ಪ್ರಭಾಕರ್ - ರಘು ಮುಖರ್ಜಿ ದಂಪತಿ

ಮುಂದಿನ ವಾರ ನಿಮ್ಮನೆಗೆ ಬರ್ತಿದ್ದಾರೆ ಅನು ಪ್ರಭಾಕರ್ - ರಘು ಮುಖರ್ಜಿ ದಂಪತಿ

Posted By:
Subscribe to Filmibeat Kannada

ನಟಿ ಅನು ಪ್ರಭಾಕರ್ ಮತ್ತು ನಟ ರಘು ಮುಖರ್ಜಿ ದಂಪತಿ ಮುಂದಿನ ವಾರ ನಿಮ್ಮ ಮನೆಗೆ ಬರಲಿದ್ದಾರೆ. ಅರ್ಥಾತ್, ಕಿರುತೆರೆಯ ಜನಪ್ರಿಯ ಕಾರ್ಯಕ್ರಮ 'ಸೂಪರ್ ಟಾಕ್ ಟೈಂ' ನಲ್ಲಿ ಸ್ಟಾರ್ ದಂಪತಿ ಅತಿಥಿ ಆಗಿದ್ದಾರೆ.

ಈಗಾಗಲೇ ಅನು ಪ್ರಭಾಕರ್ - ರಘು ಮುಖರ್ಜಿ ಸಂಚಿಕೆಯ ಶೂಟಿಂಗ್ ಮುಗಿದಿದೆ. ಸದ್ಯ ಇಬ್ಬರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಹಿಂದೆ ಪ್ರಜ್ವಲ್ ದೇವರಾಜ್ ಮತ್ತು ಸಿಹಿ ಕಹಿ ಚಂದ್ರು ದಂಪತಿ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಈಗ ಅನು ಪ್ರಭಾಕರ್ - ರಘು ಮುಖರ್ಜಿ 'ಸೂಪರ್ ಟಾಕ್ ಟೈಂ' ನಲ್ಲಿ ಕಾಣಿಸಿಕೊಂಡಿದ್ದು, ಇದೇ ಗುರುವಾರ ಅಥವಾ ಶುಕ್ರವಾರ ಈ ಸಂಚಿಕೆ ಪ್ರಸಾರವಾಗಲಿದೆ.

ಅನು ಪ್ರಭಾಕರ್-ರಘು ಮುಖರ್ಜಿ 'ಎರಡನೇ' ವಿವಾಹ ಮಹೋತ್ಸವ

Anu Prabhakar and Raghu Mukherjee in Super talk time

ಅಂದಹಾಗೆ, ರಘು ಮುಖರ್ಜಿ ಮತ್ತು ನಟಿ ಅನು ಪ್ರಭಾಕರ್ ಅವರು ಕಳೆದ ವರ್ಷ ಕುಟುಂಬದವರ ಸಮ್ಮುಖದಲ್ಲಿ ಬೆಂಗಳೂರಿನಲ್ಲಿ ಸಪ್ತಪದಿ ತುಳಿದಿದ್ದರು. ನಟಿ ಅನು ಪ್ರಭಾಕರ್ ಅವರಿಗೆ ಇದು ಎರಡನೇ ಮದುವೆಯಾದರೆ, ನಟ ರಘು ಮುಖರ್ಜಿ ಅವರಿಗೆ ಇದು ಮೂರನೇ ಮದುವೆ ಆಗಿತ್ತು.

English summary
Anu Prabhakar and Raghu Mukherjee takes part in Colors Super Channel's popular show 'Super talk time'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada