»   » ನಟಿ ಅನುಪಮಾ ಗೌಡ 'ಬಿಗ್ ಬಾಸ್' ಮನೆಯ ಡ್ರಾಮಾ ಕ್ವೀನ್ ಅಂತೆ.!

ನಟಿ ಅನುಪಮಾ ಗೌಡ 'ಬಿಗ್ ಬಾಸ್' ಮನೆಯ ಡ್ರಾಮಾ ಕ್ವೀನ್ ಅಂತೆ.!

Posted By:
Subscribe to Filmibeat Kannada

ಪ್ರತಿ ಬಾರಿಯಂತೆ ಈ ಬಾರಿಯ 'ಬಿಗ್ ಬಾಸ್' ಕಾರ್ಯಕ್ರಮದಲ್ಲಿ 'ಡ್ರಾಮಾ ಕ್ವೀನ್' ಯಾರು..? ಎಂಬ ಪ್ರಶ್ನೆಗೆ ಸ್ವತಃ ವೀಕ್ಷಕರೇ ಉತ್ತರ ಕೊಟ್ಟಿದ್ದಾರೆ.

ನಿಮ್ಮ 'ಫಿಲ್ಮಿಬೀಟ್ ಕನ್ನಡ' ಈ ಬಾರಿಯ 'ಬಿಗ್ ಬಾಸ್' ಕಾರ್ಯಕ್ರಮದಲ್ಲಿ 'ಡ್ರಾಮಾ ಕ್ವೀನ್' ಯಾರು..? ಎಂದು ಓದುಗರಿಗೆ ಒಂದು ಪ್ರಶ್ನೆ ಕೇಳಿತ್ತು. ಇದರಲ್ಲಿ ಸಾಕಷ್ಟು ಜನರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಅನುಪಮಾಗೆ 'ಡ್ರಾಮಾ ಕ್ವೀನ್' ಎಂಬ ಪಟ್ಟ ಕೊಟ್ಟಿದ್ದಾರೆ. ಮುಂದೆ ಓದಿರಿ...

'ಫಿಲ್ಮಿಬೀಟ್ ಕನ್ನಡ' ಪೋಲ್

'ಬಿಗ್ ಬಾಸ್' ಸ್ಪರ್ಧಿಗಳಾದ ಅನುಪಮಾ, ಆಶಿತಾ, ಕೃಷಿ, ನಿವೇದಿತಾ, ಶ್ರುತಿ, ತೇಜಸ್ವಿನಿ ಇವರಲ್ಲಿ 'ಡ್ರಾಮಾ ಕ್ವೀನ್' ಯಾರು ಎಂದು ಓದುಗರಿಗೆ ನಿಮ್ಮ 'ಫಿಲ್ಮಿಬೀಟ್ ಕನ್ನಡ' ಪೋಲ್ ಏರ್ಪಡಿಸಿತ್ತು.

ಡ್ರಾಮಾ ಕ್ವೀನ್ ಆದ ಅನುಪಮಾ

ಇದರಲ್ಲಿ 52% ಜನರು ಅನುಪಮಾ ಅವರೇ 'ಬಿಗ್ ಬಾಸ್'ನ ಡ್ರಾಮಾ ಕ್ವೀನ್ ಎಂದು ಹೇಳಿದ್ದಾರೆ.

25 ದಿನದ 'ಬಿಗ್ ಬಾಸ್'ನಲ್ಲಿ ಲವ್, ಕಿಸ್, ಕಿತ್ತಾಟ ಏನೆಲ್ಲಾ ಆಗೋಯ್ತು.!

ಸಾಮಾಜಿಕ ಜಾಲತಾಣಗಳಲ್ಲಿ

ಇದೇ ರೀತಿ ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಅನುಪಮ ಬಗ್ಗೆ ತುಂಬ ಟ್ರೋಲ್ ಆಗುತ್ತಿದೆ. ಸೀರಿಯಲ್ ರೀತಿಯೇ 'ಬಿಗ್ ಬಾಸ್'ನಲ್ಲಿಯೂ ಅಳುವುದನ್ನು ನೋಡಿ ಜನಕ್ಕೆ ಸಾಕಾಗಿದೆ.

ಸಿಡುಕುವ, ನಾಟಕ ಆಡುವ ಅನುಪಮಾ ಗೌಡ ಈ ವಾರ ಔಟ್ ಆಗ್ಬೇಕ್ ಅಷ್ಟೆ.!

ನಿವೇದಿತಾ ಗೌಡ ಮತ್ತು ಆಶಿತಾಗೆ 2ನೇ ಸ್ಥಾನ

ಅನುಪಮಾ ಬಿಟ್ಟರೆ ನಿವೇದಿತಾ ಗೌಡ ಮತ್ತು ಆಶಿತಾ ಹೆಚ್ಚು ಡ್ರಾಮಾ ಮಾಡುತ್ತಾರಂತೆ. ಆಶಿತಾ ಮತ್ತು ನಿವೇದಿತಾ ಇಬ್ಬರಿಗೆ ತಲಾ 17% ಜನರು ಡ್ರಾಮಾ ಕ್ವೀನ್ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಹಳೇ ಬಾಯ್ ಫ್ರೆಂಡ್ ಗೆ ಖಡಕ್ ವಾರ್ನಿಂಗ್ ಕೊಟ್ಟ ಅನುಪಮಾ ಗೌಡ.!

ಉಳಿದವರ ಕಥೆ

ಉಳಿದಂತೆ ತೇಜಸ್ವಿನಿಗೆ 5%, ಕೃಷಿಗೆ 4%, ಮತ್ತು ಶ್ರುತಿ ಪ್ರಕಾಶ್ ಅವರಿಗೆ 3% ಜನ ಡ್ರಾಮಾ ಕ್ವೀನ್ ಎಂದಿದ್ದಾರೆ.

English summary
Anupama Gowda becomes 'Bigg Boss Kannada 5' Drama Queen in FilmiBeat Kannada poll.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X