»   » ಬಿಗ್ ಬಾಸ್ ಮನೆಯಿಂದ ಅನುಶ್ರೀಗೆ ಗೇಟ್ ಪಾಸ್

ಬಿಗ್ ಬಾಸ್ ಮನೆಯಿಂದ ಅನುಶ್ರೀಗೆ ಗೇಟ್ ಪಾಸ್

Posted By:
Subscribe to Filmibeat Kannada

ಈಟಿವಿ ಕನ್ನಡ ವಾಹಿನಿಯ ರಿಯಾಲಿಟಿ ಶೋ 'ಬಿಗ್ ಬಾಸ್'ನ ಪ್ರಬಲ ಸ್ಪರ್ಧಿಯಾಗಿದ್ದ ಟಿವಿ ನಿರೂಪಕಿ ಅನುಶ್ರೀ ಅವರು ಮನೆಯಿಂದ ಹೊರಬಿದ್ದಿದ್ದಾರೆ. ಈ ಬಾರಿ ನಾಲ್ಕು ಮಂದಿ ನಾಮಿನೇಟ್ ಆಗಿದ್ದರು. ಬಹುಶಃ ನಿಕಿತಾ ಅವರು ಮನೆಯಿಂದ ಹೊರಬೀಳಬಹುದೇನೋ ಎಂದು ಭಾವಿಸಿದ್ದರು.

ಅನುಶ್ರೀ ಅವರೇ ನಿಮಗೆ ಐದು ನಿಮಿಷ ಟೈಮಿದೆ. ಅಷ್ಟರಲ್ಲಿ ನೀವು ಸೂಟ್ ಕೇಸ್ ರೆಡಿ ಮಾಡಿಕೊಂಡು ಹೊರಗೆ ಬನ್ನಿ ಎಂದು ಸುದೀಪ್ ಹೇಳುವವರೆಗೂ ಯಾರಿಗೂ ನಂಬಲಿಕ್ಕೇ ಆಗಲಿಲ್ಲ. ಕ್ಷಣಕಾಲ ಸುದೀಪ್ ಇನ್ನೇನಾದರೂ ಗಿಮ್ಮಿಕ್ ಮಾಡಲಿದ್ದಾರೆಯೇ ಎಂಬ ಸಣ್ಣ ಗುಮಾನಿಯೂ ಕಾಡುತ್ತಿತ್ತು.

Anushree

ಅರುಣ್ ಸಾಗರ್ ಅವರೇ ಯು ಆರ್ ಸೇಫ್ ಎಂದ ಬಳಿಕಷ್ಟೇ ಅನುಶ್ರೀ ಮನೆಯಿಂದ ಹೊರಬಿದ್ದಿದ್ದಾರೆಂದು ಕ್ಲಿಯರ್ ಆಯ್ತು. ಎಲ್ಲ ಟಾಸ್ಕ್ ಗಳಲ್ಲೂ ಭಾಗವಹಿಸಿ, ಯಾರೊಂದಿಗೂ ಜಗಳವಾಡದೆ ಮನೆಯಲ್ಲಿ ಎಲ್ಲರ ಪ್ರೀತಿಗೆ ಪಾತ್ರವಾಗಿದ್ದರು ಅನುಶ್ರೀ.

ಕಳೆದ ಎಂಟು ವರ್ಷಗಳಿಂದ ಕಿರುತೆರೆಯಲ್ಲಿ ನಿರೂಪಕಿಯಾಗಿ ಗುರುತಿಸಿಕೊಂಡಿರುವ ಅವರು ಎಪ್ಪತ್ತು ದಿನಗಳ ಕಾಲ ಬಿಗ್ ಬಾಸ್ ಮನೆಯಲ್ಲಿ ಕಳೆದು ಕಿರುತೆರೆ ವಾಹಿನಿ ವೀಕ್ಷಕರಿಗೆ ಇನ್ನಷ್ಟು ಹತ್ತಿರವಾಗಿದ್ದರು. ವೋಟಿಂಗ್ ನಲ್ಲಿ ವೀಕ್ಷಕರು ಅವರ ಕೈಹಿಡಿಯಲಿಲ್ಲ.

ಸೂಕ್ತ ಜೋಡಿಯ ಹುಡುಕಾಟದಲ್ಲಿರುವ ಅನುಶ್ರೀ ಅವರು ಬೋಲ್ಡ್ ನೇಚರ್ ಗೆ ಹೆಸರಾಗಿದ್ದಾರೆ. ಐಪಿಎಲ್ ಪಾರ್ಟಿಗಳಲ್ಲಿ ಕ್ರಿಸ್ ಗೇಲ್ ಜೊತೆ ಹೆಚ್ಚಾಗಿ ಕಾಣಿಸಿಕೊಂಡು ಎಲ್ಲರ ಕಣ್ಣು ಕುಕ್ಕುವಂತೆ ಮಾಡಿದ್ದರು ಅನುಶ್ರೀ. (ಒನ್ಇಂಡಿಯಾ ಕನ್ನಡ)

English summary
Etv Kannada reality show Bigg Boss's one of the tough competitor Anushree, a popular VJ evicted from the house. She has spent in the house more than 70 days. Finally she got out from the show.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada