»   » 'ಮಜಾ ಟಾಕೀಸ್' ಸೆಟ್ ನಲ್ಲಿ ನಟ ಸೃಜನ್ ಹೇಗಿರ್ತಾರೆ.?

'ಮಜಾ ಟಾಕೀಸ್' ಸೆಟ್ ನಲ್ಲಿ ನಟ ಸೃಜನ್ ಹೇಗಿರ್ತಾರೆ.?

Posted By:
Subscribe to Filmibeat Kannada

'ಸ್ಮಾಲ್ ಸ್ಕ್ರೀನ್ ನ ಬಿಗ್ ಸ್ಟಾರ್' ಹಾಗೂ 'ಟಾಕಿಂಗ್ ಸ್ಟಾರ್' ಅಂತ ನಟ ಸೃಜನ್ ಲೋಕೇಶ್ ಜನಪ್ರಿಯತೆ ಪಡೆದಿರುವುದೇ 'ಮಜಾ ಟಾಕೀಸ್' ಕಾರ್ಯಕ್ರಮದಿಂದ.

ಲೋಕೇಶ್ ಪ್ರೊಡಕ್ಷನ್ಸ್ ಸಂಸ್ಥೆಯ ಅಡಿ ಮೂಡಿ ಬರುತ್ತಿರುವ 'ಮಜಾ ಟಾಕೀಸ್' ಕಾರ್ಯಕ್ರಮಕ್ಕೆ ಸೃಜನ್ ಲೋಕೇಶ್ ಸಾರಥಿ.

ನೆಗೆಟಿವ್ ಕಾಮೆಂಟ್ಸ್ ನೋಡಿ 'ಮಜಾ ಟಾಕೀಸ್' ಬಿಡಲು ಮುಂದಾಗಿದ್ದ ವರಲಕ್ಷ್ಮಿ!

Aparna and Mandya Ramesh speaks about Srujan Lokesh

'ಎ ಡೇ ವಿಥೌಟ್ ಲಾಫ್ಟರ್, ಈಸ್ ಎ ಡೇ ವೇಸ್ಟೆಡ್' ಅಂತ ಹೇಳ್ತಾ 'ನಗಿಸುವುದೇ ನಮ್ಮ ಧರ್ಮ' ಎಂಬುದನ್ನು ನಂಬಿರುವ ಸೃಜನ್ ಲೋಕೇಶ್ 'ಮಜಾ ಟಾಕೀಸ್' ಕಾರ್ಯಕ್ರಮದ ಮೂಲಕ ಕನ್ನಡಿಗರಿಗೆ ನಗುವಿನ ಟಾನಿಕ್ ನೀಡುತ್ತಿದ್ದಾರೆ.

'ಮಜಾ ಟಾಕೀಸ್' ಕಾರ್ಯಕ್ರಮದಲ್ಲಿ ಹಾಸ್ಯ ತುಂಬಿರುವ ಸೃಜನ್ ಲೋಕೇಶ್ ಒನ್ ಲೈನ್ ಪಂಚ್ ಗಳು ಸಿಕ್ಕಾಪಟ್ಟೆ ಫೇಮಸ್ ಆಗಿವೆ. ಕ್ಯಾಮರಾ ಆನ್ ಆಗಿದ್ದಾಗ, ಕಾರ್ಯಕ್ರಮದಲ್ಲಿ ಸದಾ ನಗುನಗುತ್ತಾ, ಲವಲವಿಕೆಯಿಂದ ಮಾತನಾಡುವ ಸೃಜನ್ ಲೋಕೇಶ್, ಕ್ಯಾಮರಾ ಆನ್ ಆಗುವ ಮುನ್ನ/ಕ್ಯಾಮರಾ ಆಫ್ ಆದ್ಮೇಲೆ 'ಮಜಾ ಟಾಕೀಸ್' ಸೆಟ್ ನಲ್ಲಿ ಹೇಗಿರ್ತಾರೆ.?

ಕಲರ್ಸ್ ಸೂಪರ್ ವಾಹಿನಿಯ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ ಅಕುಲ್ ಬಾಲಾಜಿ ಕೇಳಿದ ಈ ಪ್ರಶ್ನೆಗೆ 'ಮಜಾ ಟಾಕೀಸ್' ಕಾರ್ಯಕ್ರಮದ ಒನ್ ಅಂಡ್ ಒನ್ಲಿ ವರಲಕ್ಷ್ಮಿ (ಅಪರ್ಣ) ಹಾಗೂ ಮುದ್ದೇಶ (ಮಂಡ್ಯ ರಮೇಶ್) ಉತ್ತರಿಸಿದ್ದಾರೆ.

Aparna and Mandya Ramesh speaks about Srujan Lokesh

''ಸೃಜನ್ ತುಂಬಾ ಟೆನ್ಷನ್ ನಲ್ಲಿ ಇರ್ತಾರೆ. ಆದ್ರೆ ತೋರಿಸಿಕೊಳ್ಳುವುದಿಲ್ಲ. ತುಂಬಾ ಲವಲವಿಕೆಯಿಂದ ಎಲ್ಲರ ಜೊತೆ ಮಾತನಾಡುತ್ತಾರೆ, ಆದರೆ ಒಳಗೆ ಅವರಿಗೆ ಟೆನ್ಷನ್ ಇರುತ್ತೆ'' ಅಂತ ಅಪರ್ಣ ಹಾಗೂ ಮಂಡ್ಯ ರಮೇಶ್ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

'ಮಜಾ ಟಾಕೀಸ್' ಕಾರ್ಯಕ್ರಮ ಸದ್ಯ ಕೊನೆಗೆ ಹಂತ ತಲುಪಿದ್ದು, ಗ್ರ್ಯಾಂಡ್ ಫಿನಾಲೆ ಸಂಚಿಕೆ ಸದ್ಯದಲ್ಲಿಯೇ ಪ್ರಸಾರ ಆಗಲಿದೆ.

English summary
Kannada Actress Aparna and Mandya Ramesh speaks about Srujan Lokesh.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada