For Quick Alerts
  ALLOW NOTIFICATIONS  
  For Daily Alerts

  ನಿಹಾಲ್ ಹಾಡು ಕೇಳಿ ಕ್ಷಣದಲ್ಲೇ ಅವಕಾಶ ಕೊಟ್ಟ ಅರ್ಜುನ್ ಜನ್ಯ

  |

  ಜೀ-ಕನ್ನಡದಲ್ಲಿ ಪ್ರಸಾವಾಗುತ್ತಿರುವ 'ಸರಿಗಮಪ-15' ಕಾರ್ಯಕ್ರಮದಲ್ಲಿ ಗಾಯಕರೊಬ್ಬರಿಗೆ ಅರ್ಜುನ್ ಜನ್ಯ ಅವಕಾಶ ಕೊಟ್ಟಿದ್ದಾರೆ. ನಿಹಾಲ್ ಎಂಬ ಗಾಯಕನಿಗೆ ತಮ್ಮ ಆಲ್ಬಂನಲ್ಲಿ ಹಾಡುವ ಆಫರ್ ನೀಡಿದ್ದಾರೆ.

  ಈ ವಾರ ಪ್ರಸಾರವಾದ ಕಾರ್ಯಕ್ರಮದಲ್ಲಿ ನಿಹಾಲ್ ಭಜರಂಗಿ ಚಿತ್ರದ ''ಜಿಯಾ ತೇರಿ ಜಿಯಾ ತೇರಿ'' ಹಾಡನ್ನ ಹಾಡಿದ್ರು. ಈ ಹಾಡು ಕೇಳಿದ ಅರ್ಜುನ್ ಜನ್ಯ ಮೂಕವಿಸ್ಮಿತರಾದರು.

  ಈ ಹಾಡನ್ನ ಹಾಡಿದ್ದಕ್ಕಾಗಿ ನಿಹಾಲ್ ಗೆ ಯಾವುದೇ ಕಾಮೆಂಟ್ ಮಾಡಿಲ್ಲ. ಬದಲಾಗಿ, ತನ್ನ ಸ್ಟುಡಿಯೋಗೆ ಬಂದು ಒಂದು ಹಾಡಿದೆ, ಅದನ್ನ ಹಾಡು ಎಂದು ಹೇಳಿದರು.

  ಈ ಮೂಲಕ ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಿರಬೇಕಾದರೇ ನಿಹಾಲ್ ಸಿನಿಮಾವೊಂದಕ್ಕೆ ಹಾಡುವ ಚಾನ್ಸ್ ಪಡೆದುಕೊಂಡಿದ್ದಾರೆ. ಈ ರೀತಿ ಅವಕಾಶ ಸಿಗುವುದು ಬಹಳ ಅಪರೂಪ. ಈ ಅಪರೂಪದಲ್ಲಿ ನಿಹಾಲ್ ಸೇರ್ಪಡೆಯಾಗಿದ್ದಾರೆ.

  ಆದ್ರೆ, ಅರ್ಜುನ್ ಜನ್ಯ ಕಂಪೋಸ್ ಮಾಡಿರುವ ಯಾವ ಹಾಡಿಗೆ, ಅದು ಯಾವ ಸಿನಿಮಾದಲ್ಲಿ ಇರಲಿದೆ ಎಂಬುದು ಸದ್ಯಕ್ಕೆ ಬಹಿರಂಗವಾಗಿಲ್ಲ. ಆ ಹಾಡು ಬಂದಮೇಲೆ ನಿಹಾಲ್ ಧ್ವನಿಯಲ್ಲಿ ಆ ಹಾಡಿನಲ್ಲಿ ಕೇಳಬಹುದು. ಸದ್ಯ, ನಿಹಾಲ್ ತೌರೋ ಮೂಡುಬಿದಿರೆಯ​ ಮಹಾವೀರ ಕಾಲೇಜಿನ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಯಾಗಿದ್ದಾರೆ.

  English summary
  Kannada music director arjun janya gave chance to saregamapa contestant nihal.
  Tuesday, December 11, 2018, 17:34
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X