»   » ಗುರುಕಿರಣ್ ಹಾಡುಗಳನ್ನು ಕೇಳಲು ಸಿಡಿ ಅಂಗಡಿ ಮುಂದೆ ಕ್ಯೂನಲ್ಲಿ ನಿಲ್ತಿದ್ರಂತೆ ಅರ್ಜುನ್ ಜನ್ಯ

ಗುರುಕಿರಣ್ ಹಾಡುಗಳನ್ನು ಕೇಳಲು ಸಿಡಿ ಅಂಗಡಿ ಮುಂದೆ ಕ್ಯೂನಲ್ಲಿ ನಿಲ್ತಿದ್ರಂತೆ ಅರ್ಜುನ್ ಜನ್ಯ

Posted By:
Subscribe to Filmibeat Kannada

ಕನ್ನಡ ಚಿತ್ರರಂಗದ ಸದ್ಯ ಲೀಡಿಂಗ್ ಸಂಗೀತ ನಿರ್ದೇಶಕರ ಪೈಕಿ ಅರ್ಜುನ್ ಜನ್ಯ ಕೂಡ ಒಬ್ಬರು. 'ಬಿರುಗಾಳಿ', 'ಕೆಂಪೇಗೌಡ', 'ಲಕ್ಕಿ', 'ಮಾಣಿಕ್ಯ', 'ಅಧ್ಯಕ್ಷ' 'ಮುಕುಂದ ಮುರಾರಿ', 'ಹೆಬ್ಬುಲಿ' ಸೇರಿದಂತೆ ಅನೇಕ ಯಶಸ್ವಿ ಸಿನಿಮಾಗಳಿಗೆ ಉತ್ತಮ ಸಂಗೀತ ನೀಡಿರುವ ಅರ್ಜುನ್ ಜನ್ಯ ಒಂದ್ಕಾಲದಲ್ಲಿ ಗುರುಕಿರಣ್ ಹಾಡುಗಳನ್ನು ಕೇಳಲು ಸಿಡಿ ಅಂಗಡಿ ಮುಂದೆ ಕ್ಯೂನಲ್ಲಿ ನಿಲ್ತಿದ್ರು ಅನ್ನೋದು ನಿಮಗೆ ಗೊತ್ತಾ.?

ಹೌದು, ಗುರುಕಿರಣ್ ರವರ ಅಭಿಮಾನಿಯಾಗಿದ್ದ ಅರ್ಜುನ್ ಜನ್ಯ, ಅಂಗಡಿಯಲ್ಲಿ ಗುರುಕಿರಣ್ ರವರ ಹಾಡುಗಳ ಸಿಡಿ ಕೊಂಡು ಕೇಳುತ್ತಿದ್ದರಂತೆ.

Arjun Janya speaks about Gurukiran in Super Talk Time

ಅನುಶ್ರೀ ಬಗ್ಗೆ ಕೇಳಿದಾಗ ಅಂಜಿಕೆ-ಅಳುಕಿಲ್ಲದೆ ಉತ್ತರ ಕೊಟ್ಟ ಅರ್ಜುನ್ ಜನ್ಯ.!

ಅಷ್ಟಕ್ಕೂ, ಇದನ್ನೆಲ್ಲ ಅರ್ಜುನ್ ಜನ್ಯ ಬಾಯ್ಬಿಟ್ಟಿದ್ದು 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ. ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ ಗುರುಕಿರಣ್ ಜೊತೆಗೆ ಆಗಮಿಸಿದ ಅರ್ಜುನ್ ಜನ್ಯ ತಮ್ಮ ಅಂದಿನ ದಿನಗಳನ್ನ ನೆನಪಿಸಿಕೊಂಡಿದ್ದು ಹೀಗೆ - ''ಗುರುಕಿರಣ್ ಪಕ್ಕ ಕೂರುವುದೇ ಹೆಮ್ಮೆ. ಯಾಕಂದ್ರೆ ಇವರನ್ನ ನೋಡಿಕೊಂಡೆ ನಾವೆಲ್ಲ ಬೆಳೆದಿದ್ದು. ಇವರ ಮ್ಯೂಸಿಕ್ ಕೇಳಲು, ಸಿಡಿ ಅಂಗಡಿ ಮುಂದೆ ಕ್ಯೂ ನಲ್ಲಿ ನಿಂತು ತೆಗೆದುಕೊಂಡಿದ್ದು ನೆನಪಿದೆ ನಂಗೆ''.

ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶನದ 'ಎ' ಚಿತ್ರದ ಮೂಲಕ ಸಂಗೀತ ನಿರ್ದೇಶಕರಾದ ಗುರುಕಿರಣ್ ಕನ್ನಡ ಚಿತ್ರರಂಗಕ್ಕೆ ಅನೇಕ ಹಿಟ್ ನಂಬರ್ಸ್ ಕೊಟ್ಟಿದ್ದಾರೆ.

English summary
Music Director Arjun Janya speaks about Gurukiran in Colors Super Channel's popular show Super Talk Time.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada