»   » 'ಖಾಲಿ ಕ್ವಾಟ್ರು ಬಾಟ್ಲು...' ಸುತ್ತ ಅರ್ಜುನ್ ಜನ್ಯ ಮಾತು ಕತೆ

'ಖಾಲಿ ಕ್ವಾಟ್ರು ಬಾಟ್ಲು...' ಸುತ್ತ ಅರ್ಜುನ್ ಜನ್ಯ ಮಾತು ಕತೆ

Posted By:
Subscribe to Filmibeat Kannada

ಸಂಗೀತ ನಿರ್ದೇಶಕ ಅರ್ಜುನ್ ಜನ್ಯಗೆ ಖ್ಯಾತಿ ಕೀರ್ತಿ ತಂದುಕೊಟ್ಟ ಅನೇಕ ಹಾಡುಗಳ ಪೈಕಿ 'ವಿಕ್ಟರಿ' ಚಿತ್ರದ 'ಖಾಲಿ ಕ್ವಾಟ್ರು ಬಾಟ್ಲಿಯಂಗೆ ಲೈಫು...' ಕೂಡ ಒಂದು. ಹಾಗ್ನೋಡಿದ್ರೆ, ಅರ್ಜುನ್ ಜನ್ಯ ಅಪಾರ ಜನಪ್ರಿಯತೆಗೆ ಪಾತ್ರವಾಗಿದ್ದೇ 'ಖಾಲಿ ಕ್ವಾಟ್ರು...' ಹಾಡಿನ ಮೂಲಕ.

ಒಂದ್ಕಡೆ ಯೋಗರಾಜ್ ಭಟ್ರ ಸಾಹಿತ್ಯ, ಇನ್ನೊಂದ್ಕಡೆ ವಿಜಯ್ ಪ್ರಕಾಶ್ ಗಾಯನ, ಮತ್ತೊಂದ್ಕಡೆ ಅರ್ಜುನ್ ಜನ್ಯ ಸಂಗೀತ... ಈ ಮೂರು ಅದ್ಭುತಗಳು ಒಂದಾದ ಫಲಿತಾಂಶವೇ 'ಖಾಲಿ ಕ್ವಾಟ್ರು ಬಾಟ್ಲಿಯಂಗೆ ಲೈಫು...'

Arjun Janya speaks about Khali Quarter bottle song in Super Talk Time

ಖಾಲಿ ಕ್ವಾರ್ಟರ್ ನಲ್ಲಿ ನನ್ನ ಪಾಲೇನು ಇಲ್ಲ, ಶರಣ್!

ಕುಡುಕರ ಸುಪ್ರಭಾತ ಆಗಿದ್ದ 'ಖಾಲಿ ಕ್ವಾಟ್ರು ಬಾಟ್ಲಿಯಂಗೆ ಲೈಫು...' ಹಾಡಿನ ಮೇಕಿಂಗ್ ಬಗ್ಗೆ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಕಲರ್ಸ್ ಸೂಪರ್ ವಾಹಿನಿಯ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ ಹಂಚಿಕೊಂಡರು.

ಬಾರನ್ನು ತವರು ಎಂದ ಏಕೈಕ ಸಾಹಿತಿ ಯೋಗರಾಜ್ ಭಟ್

''ಖಾಲಿ ಕ್ವಾಟ್ರು ಬಾಟ್ಲಿಯಂಗೆ ಲೈಫು...' ಹಾಡು ಮಾಡುವಾಗ ತುಂಬಾ ಪ್ರೆಶರ್ ಇತ್ತು. ಡ್ರಿಂಕ್ಸ್ ಸಾಂಗ್ ಹಿಟ್ ಆಗಲೇಬೇಕು. ಅದು ಫ್ಲಾಪ್ ಆಗುವ ಹಾಗೇ ಇಲ್ಲ ಅನ್ನೋ ರೇಂಜಲ್ಲಿ ನಮ್ಮೆಲ್ಲರ ಮೈಂಡ್ ಸೆಟ್ ಇತ್ತು. ನಾನು ಯಾವತ್ತೂ ಯಾವ ಪ್ರೆಶರ್ ಕೂಡ ತೆಗೆದುಕೊಳ್ಳುವುದಿಲ್ಲ. ಆ ಸಮಯಕ್ಕೆ ಏನು ಹೊಳೆಯುತ್ತೆ, ಅದನ್ನ ಮಾಡುತ್ತೇನೆ. 'ಖಾಲಿ ಕ್ವಾಟ್ರು...' ಸಾಂಗ್ ಮಾಡಿದ್ದು ಹದಿನೈದು ನಿಮಿಷದಲ್ಲಿ''

''ಇವತ್ತು ನನ್ನ ಶೋಗಳಲ್ಲಿ ಆ ಹಾಡನ್ನ ಹಾಡುತ್ತೇನೆ. ಆ ಹಾಡಿಗೋಸ್ಕರ ಜನ ಕಾಯುತ್ತಾರೆ. ಅದಕ್ಕೆ ಶೋ ಕೊನೆಗೆ ಆ ಹಾಡನ್ನು ಹಾಡುತ್ತೇನೆ. ದೇವರ ಆಶೀರ್ವಾದ'' ಎಂದಿದ್ದಾರೆ ಅರ್ಜುನ್ ಜನ್ಯ.

English summary
Music Director Arjun Janya speaks about 'Khali Quarter bottle' song in Colors Super Channel's popular show Super Talk Time.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X