For Quick Alerts
  ALLOW NOTIFICATIONS  
  For Daily Alerts

  ಕಿರುತೆರೆಯ ಸುವರ್ಣ ಲೀಗಿಗೆ ತಾರೆಯರ ದಂಡು

  |
  ಮನೆಯಲ್ಲಿರುವವರಿಗೆ ಸದಾ ಸಂಗಾತಿಯಂತಾದ ಟಿವಿಲೋಕಕ್ಕೆ ಪರದೆಯ ಮುಂದೆ ಹಾಗೂ ಹಿಂದೆ ಬಿಡುವಿಲ್ಲದೇ ಶ್ರಮಿಸುವ ಸಾಕಷ್ಟು ಕಲಾವಿದರು,ತಂತ್ರಜ್ಞರಿಗೂ ಒಂದಷ್ಟು ಮನೋರಂಜನೆ ಒಡನಾಟ ಅತ್ಯಗತ್ಯ.

  ಅವರೆಲ್ಲರೂ ಒಂದು ದಿನ ಸುವರ್ಣ ಪರಿವಾರದೊಂದಿಗೆ ಆಟ ಆಡಿ ನಕ್ಕು ನಲಿಯಲಿ ಎಂಬ ಉದ್ದೇಶದಿಂದ ಕಿರುತೆರೆಯಲ್ಲೇ ಪ್ರಪ್ರಥಮ ಬಾರಿಗೆ ಸುವರ್ಣ ವಾಹಿನಿ ಹೊತ್ತು ತರುತ್ತಿರುವ ನೂತನ ಕಾರ್ಯಕ್ರಮ "ಸುವರ್ಣ ಕ್ರಿಕೆಟ್ ಲೀಗ್".

  ಸುವರ್ಣ ಕ್ರಿಕೆಟ್ ಲೀಗಿನಲ್ಲಿ ವಾಹಿನಿಯ ಎಲ್ಲ ಧಾರಾವಾಹಿಗಳ ಕಲಾವಿದರು, ತಾಂತ್ರಿಕ ಬಳಗದವರು ಒಗ್ಗೂಡಿ ಕ್ರಿಕೇಟ್ ಆಡಲಿದ್ದಾರೆ. ಇಲ್ಲಿ ಒಟ್ಟು 10 ತಂಡಗಳು ಭಾಗವಹಿಸುತ್ತಿದ್ದು 3 ಸುತ್ತಿನ 8 ಮ್ಯಾಚ್‍ಗಳಿರುತ್ತವೆ. ಮೊದಲು ಲೀಗ್ ಮ್ಯಾಚ್, ಸೆಮಿ ಫೈನಲ್ ಹಾಗೂ ಫೈನಲ್ ಮ್ಯಾಚ್‍ಗಳಿರುತ್ತವೆ.

  ಸುವರ್ಣ ವಾಹಿನಿಯಲ್ಲಿ ಬರುವ ವಿವಿಧ ಧಾರಾವಾಹಿಗಳಲ್ಲಿ ಭಾಗವಹಿಸಿದ 10 ತಂಡಗಳ ಮಧ್ಯೆ ಪಂದ್ಯಗಳು ನಡೆಯಲಿವೆ.

  ಟೂರ್ನಿಯ ಲೀಗ್ ಮ್ಯಾಚ್ ಕ್ರಮವಾಗಿ ಇದೇ ತಿಂಗಳ 29 ಮತ್ತು 30 ರ ಶನಿವಾರ ಮತ್ತು ಭಾನುವಾರ ಸಂಜೆ 6-00 ಗಂಟೆಗೆ ನಡೆಯಲಿದ್ದು ಸುವರ್ಣ ವಾಹಿನಿ ಪಂದ್ಯವನ್ನು ನೇರ ಪ್ರಸಾರ ಮಾಡಲಿದೆ.

  ಸುವರ್ಣ ಕ್ರಿಕೆಟ್ ಲೀಗ್‍ ಟೂರ್ನಿಯನ್ನು ಕನ್ನಡ ಚಲನಚಿತ್ರ ತಾರೆ ಕಿಚ್ಚ ಸುದೀಪ್ ಉದ್ಘಾಟಿಸಲಿದ್ದು, ರವಿಶಂಕರ್, ನೀತು, ಅಜಯ್ ರಾವ್, ಅಮೂಲ್ಯ, ನಟ ಮತ್ತು ನಿರ್ದೇಶಕ ಪ್ರೇಮ್, ನವೀನ್‍ಕೃಷ್ಣ, ಕೋಮಲ', ಪ್ರೇಮ್ ಮತ್ತು ಮೇಘನ ಗಾಂವ್ಕರ್ ಹಾಗೂ ಕನ್ನಡ ಚಿತ್ರರಂಗದ ಇತರ ನಿರ್ಮಾಪಕ , ನಿರ್ದೇಶಕರುಗಳು ಆಗಮಿಸಿ ಭಾಗವಹಿಸುವ 10 ತಂಡಗಳಿಗೆ ರಾಯಭಾರಿಗಳಾಗಿ ತಮ್ಮ ತಮ್ಮ ತಂಡಗಳನ್ನು ಪ್ರೋತ್ಸಾಹಿಸಲಿದ್ದಾರೆ.

  ಬೈದವೇ, ಒನ್ ಇಂಡಿಯಾ ಸಂಸ್ಥೆ ತಮ್ಮ ಉದ್ಯೋಗಿಗಳಿಗಾಗಿ 'ಒನ್ ಇಂಡಿಯಾ ಚಾಂಪಿಯನ್ ಕ್ರಿಕೆಟ್ ಲೀಗ್' ಟೂರ್ನಿಯನ್ನು ಗುರುವಾರ (ಡಿ 27) ಜಯನಗರ ಐದನೇ ಬ್ಲಾಕಿನಲ್ಲಿರುವ ಚಂದ್ರಗುಪ್ತ ಮೌರ್ಯ ಮೈದಾನದಲ್ಲಿ ಬೆಳಗ್ಗೆ 7 ಗಂಟೆಯಿಂದ ಆಯೋಜಿಸಿದೆ. ನೀವು ಬರಬೇಕು. ಪ್ರವೇಶ ಉಚಿತ !

  English summary
  Kannada TV Suvarna entertainment channel announce star studded cricket match. The league matches will start from 29 th December 2012.
  Wednesday, December 26, 2012, 13:09
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X